ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
1. ಮೈಸೂರು ಸಂಸ್ಥಾನ ಕಮಿಷನರ್ ಆಳ್ವಿಕೆಗೆ ಒಳಪಟ್ಟ ಅವಧಿ – 1831-1881
2. ಮೈಸೂರಿನ ಪ್ರಥಮ ಕಮಿಷನರ್ – ಕರ್ನಲ್ ಬ್ರಿಕ್ಸ್
3. ಕರ್ನಲ್ ಬ್ರಿಕ್ಸ ಜೊತೆಗಿದ್ದ ಜೂನಿಯರ್ ಕಮಿಷನರ್ – ಲುಸಿಂಗ್ಟನ್
4. 1834 ರಲ್ಲಿ ಮೈಸೂರಿನ ಕಮಿಷನರಾಗಿ ಬಂದವರು – ಮಾರ್ಕ್ ಕಬ್ಬನ್
5. ಮೈಸೂರಿನ ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದ ಕಮಿಷನರ್ – ಮಾರ್ಕ್ ಕಬ್ಬನ್
6. ಹಠಾರ್ ಕಚೇರಿಯನ್ನು ರದ್ದುಗೊಳಿಸಿದ ಕಮಿಷನರ್ – ಮಾರ್ಕ್ ಕಬ್ಬನ್
7. ಮೈಸೂರಿನ ಆಡಳಿತ ವಿಭಾಗಗಳ ಸಂಖ್ಯೆಯನ್ನು 6ರಿಂದ 4 ಕ್ಕೆ ಇಳಿಸಿದ ಕಬ್ಬನ್ ಮೈಸೂರಿನ ಆಡಳಿತ ವಿಭಾಗಗಳ ಸಂಖ್ಯೆಯನ್ನು4ಕ್ಕೆ ಇಳಿಸಲು ಮುಖ್ಯಕಾರಣ – ಆಡಳಿತ ವೆಚ್ಚ ಕಡಿಮೆ ಮಾಡುವುದು
8. ಮಾರ್ ಕಬ್ಬನ್ನು ಕಾಲದಲ್ಲಿದ್ದ 4 ಆಡಳಿತ ವಿಭಾಗಗಳು – ಬೆಂಗಳೂರು, ಅಷ್ಟಗ್ರಾಮ, ಚಿತ್ರದುರ್ಗ, ನಗರ
9. ಮೈಸೂರು ಸಂಸ್ಥಾನದಲ್ಲಿ ರೆಸಿಡೆಂಟ್ ಹುದ್ದೆ ರದ್ದು ಮಾಡಿದ ವರ್ಷ – 1843
10. ಮೈಸೂರು ಸಂಸ್ಥಾನದಲ್ಲಿ ಒಂದು ಪ್ರತ್ಯೇಕ ನ್ಯಾಯಂಗ ಕಮಿಷನರ್ ಅನ್ನು ನೇಮಿಷದ ಕಮಿಷನರ್ – ಮಾರ್ಕ್ ಕಬ್ಬನ್( ಲಾರ್ಡ್ ಡಾಲ್ ಹೌಸಿ ಸಲಹೆ ನೀಡಿದರು)
11. ಲೋಕೋಪಯೋಗಿ ಇಲಾಖೆಯನ್ನು ಸ್ಥಾಪಿಸಿದ ಮೈಸೂರಿನ ಕಮಿಷನರ್ – ಮಾರ್ಕ್ ಕಬ್ಬನ್
12. ಪ್ರಥಮ ರೈಲು ಮಾರ್ಗ ಹಾಕಲು ಕಾರಣರಾದ ಮೈಸೂರಿನ ಕಮಿಷನರ್ – ಮಾರ್ಕ್ ಕಬ್ಬನ್
13. ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗ – ಬೆಂಗಳೂರು to ಜೋಲಾರ್ ಪೇಟೆ(1859)
14. ಮೈಸೂರು ಸಂಸ್ಥಾನದ ಆದಾಯವನ್ನು 68 ಲಕ್ಷದಿಂದ 84 ಲಕ್ಷಕ್ಕೆ ಹೆಚ್ಚಿಸಿದ ಕಮಿಷನರ್ – ಮಾರ್ಕ್ ಕಬ್ಬನ್
15. ಮೈಸೂರು ಸಂಸ್ಥಾನದಲ್ಲಿ ಭೂ ಕಂದಾಯ ವಸೂಲಿಗೆ ರೈತವಾರಿ ಪದ್ಧತಿಯನ್ನು ಜಾರಿಗೆ ತಂದ ಕಮಿಷನರ್ – ಮಾರ್ಕ್ ಕಬ್ಬನ್
16. ಕಂದಾಯ ಆಡಳಿತ ನಿರ್ವಹಣೆಯಲ್ಲಿ ಮಾರ್ಕ್ ಕಬ್ಬನಿಗೆ ನೆರವಾದ ದಕ್ಷ ಅಧಿಕಾರಿ – ವೆಂಕಟರಾವ್
17. ಮೈಸೂರು ಸಂಸ್ಥಾನದಲ್ಲಿ ಅಂಕಿಅಂಶ ಇಲಾಖೆಯನ್ನು ತೆರೆದ ಕಮಿಷನರ್ – ಮಾರ್ಕ್ ಕಬ್ಬನ್
18. ಅರಣ್ಯ ಇಲಾಖೆಯನ್ನು ಸ್ಥಾಪಿಸಿದ ಮೈಸೂರಿನ ಕಮಿಷನರ್ – ಮಾರ್ಕ್ಸ್ ಕಬ್ಬನ್
19. ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಥಾಪಿಸಿದ ಮೈಸೂರಿನ ಕಮಿಷನರ್ – ಮಾರ್ಕ್ ಕಬ್ಬನ್
20. 1840 ರಲ್ಲಿ ಪ್ರಥಮ ಬಾರಿಗೆ ಮುದ್ರಣಾಲಯವನ್ನು ಸ್ಥಾಪಿಸಿದ ಮೈಸೂರಿನ ಕಮಿಷನರ್ – ಮಾರ್ಕ್ಸ್ ಕಬ್ಬನ್
21. ಪರಿವರ್ತನೆಯ ಕಾಲ ಎಂದು ಮೈಸೂರಿನ ಇತಿಹಾಸದಲ್ಲಿ ಹೆಸರಾದ ಕಾ – ಮಾರ್ಕ್ ಕಬ್ಬನ್ ನ ಕಾಲ
22. ಮಾರ್ಕ್ ಕಬ್ಬನ್ ಅನಂತರ ಮೈಸೂರಿನ ಕಮಿಷನರ್ ಆದವರು – ಲೂಯಿ ಬೆಂಥಾಮ್ ಬೌರಿಂಗ್(1861-1870)
23. ಮೈಸೂರು ಸಂಸ್ಥಾನದ ಆಡಳಿತ ವಿಭಾಗಗಳ ಸಂಖ್ಯೆಯನ್ನು “ನಾಲ್ಕರಿಂದ ಮೂರಕ್ಕೆ” ಇಳಿಸಿದ ಕಮಿಷನರ್ – ಬೌರಿಂಗ್
24. ಬೌರಿಂಗ್ ಮೂರು ಆಡಳಿತ ವಿಭಾಗಗಳು – ಅಷ್ಟಗ್ರಾಮ, ನಂದಿ ದುರ್ಗ. ಹೈದರ್ ನಗರ
25. ಮೈಸೂರು ಸಂಸ್ಥಾನದಲ್ಲಿ ಹೈಕೋರ್ಟನ್ನು ಸ್ಥಾಪಿಸಿದ ಕಮಿಷನರ್ – ಬೌರಿಂಗ್
26. ಬೌರಿಂಗ್ ಅವರು ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪಿಸಿದ ವರ್ಷ – 1864
27. ಮೈಸೂರಿನಲ್ಲಿ ಪ್ರಥಮಬಾರಿಗೆ “ಇಂಡಿಯನ್ ಪಿನಲ್ ಕೋಡ್ ಮತ್ತು ಕೋಡ್ ಆಫ್ ಕ್ರಿಮಿನಲ್ procedure” ಗಳನ್ನು ಜಾರಿಗೆ ತಂದ ಕಮಿಷನರ್ – ಬೌರಿಂಗ್ (1862 ರಲ್ಲಿ ಜಾರಿಗೆ ತಂದನು)
28. ಮೈಸೂರು ಸಂಸ್ಥಾನದಲ್ಲಿCommissioner for Settlement ನ್ನು ನೇಮಿಷದ ಕಮಿಷನರ್ – ಬೌರಿಂಗ್
29. ಮೈಸೂರಿನಲ್ಲಿ Registration Act ಜಾರಿಗೆತಂದ ಕಮಿಷನರ್ – ಬೌರಿಂಗ್
30. ಮೈಸೂರು ಸಂಸ್ಥಾನದಲ್ಲಿ ಬಜೆಟ್ ಅನ್ನು ಜಾರಿಗೆ ತಂದ ಕಮಿಷನರ್ – ಬೌರಿಂಗ್
31. ಪೊಲೀಸ್ ಇಲಾಖೆಯಲ್ಲಿ, D.I.G. I.G.P .S.P ಹುದ್ದೆಗಳನ್ನು ಸೃಷ್ಟಿಸಿದ ಮೈಸೂರಿನ ಕಮಿಷನರ್ – ಬೌರಿಂಗ್
32. ಕಂದಾಚಾರಿ ಪೊಲೀಸ್ ವ್ಯವಸ್ಥೆಯನ್ನು ರದ್ದುಪಡಿಸಿದ ಮೈಸೂರಿನ ಕಮಿಷನರ್ – ಬೌಲಿಂಗ್
33. ಮೈಸೂರಿನಲ್ಲಿ ಪೊಲೀಸ್ ಕಾಯ್ದೆ ಜಾರಿಗೊಳಿಸಿದ ಕಮಿಷನರ್ – ಬೌರಿಂಗ್(1861)
34. ಬೆಂಗಳೂರಿನಲ್ಲಿ ಕೇಂದ್ರ ಸೆರೆಮನೆಯನ್ನು ತೆರೆದ ಕಮಿಷನರ್ – ಬೌರಿಂಗ್
35. ಪೊಲೀಸರಿಗೆ ಸಮವಸ್ತ್ರ ನೀಡುವ ವ್ಯವಸ್ಥೆ ಜಾರಿಗೊಳಿಸಿದ ಮೈಸೂರಿನ ಕಮಿಷನರ್ – ಬೌರಿಂಗ್
36. ಬೌರಿಂಗ್ ಕೇಂದ್ರ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿದ ವರ್ಷ – 1861
37. ಬೆಂಗಳೂರಿನಲ್ಲಿ ಹಠಾರ್ ಕಚೇರಿ (ಹೈಕೋರ್ಟ್ ಬಿಲ್ಡಿಂಗ್) ಅನ್ನು ನಿರ್ಮಿಸಿದ ಕಮಿಷನರ್ – ಬೌರಿಂಗ್
38. ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜನ್ನು ಆರಂಭಿಸಿದ ಕಮಿಷನರ್ – ಬೌರಿಂಗ್
39. ಬೆಂಗಳೂರು ಮ್ಯೂಸಿಯo ಆರಂಭಿಸಿದ ಕಮಿಷನರ್ – ಬೌರಿಂಗ್
40. ಸರ್ಕಾರಿ ಮುದ್ರಣಾಲಯವನ್ನು ಸ್ಥಾಪಿಸಿದ ಕಮಿಷನರ್ – ಬೌರಿಂಗ್
41. ಬೌರಿಂಗ್ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದ ವರ್ಷ – 1870
42. ಮೈಸೂರಿನ ಕೊನೆಯ ಕಮಿಷನರ್ – ಜೆಡಿ ಗೋರ್ಡನ್