ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 4
1. ಕಂಪ್ಯೂಟರ್ ಜಾಲಗಳಲ್ಲಿ ಬಳಕೆಯಾಗುವ ವಿಶೇಷ ಯಂತ್ರಾಂಶ:
ಎ. ಅಂತರಮುಖ ಕಾರ್ಡು
ಬಿ. ಗ್ರಾಫಿಕ್ಸ್ ಕಾರ್ಡ್
ಸಿ. ಮಾಡೆಮ್ ಸ್ವೀಕಾರ
ಡಿ. ಸ್ಮರಣೆ ಕಾರ್ಡ್
2. ಮಾಡೆಮ್ಗಳು ಈ ಕಾರ್ಯ ಅಗತ್ಯ…..
ಎ. ದೃಶ್ಯಾವಳಿಗಳ ವೀಕ್ಷಣೆ
ಬಿ. ಬಹುಮಾಧ್ಯಮ ಕಾರ್ಯನಿರ್ವಹಣೆ
ಸಿ. ಕಂಪ್ಯೂಟರ್ ಜಾಲಗಳ ಕಾರ್ಯನಿರ್ವಹಣೆ
ಡಿ. ಅಂತರಜಾಲ ಸಂಪರ್ಕ
3. ಎಲ್.ಸಿ.ಡಿ ಪದಪುಂಜದ ಸಂಪೂರ್ಣ ವಿಸ್ತರಣೆ…
ಎ. ಲಿಕ್ವಿಡ್ ಸಕ್ರ್ಯೂಟ್ ಡಿಸ್ಪ್ಲೇ
ಬಿ. ಲಿಕ್ವಿಡ್ ಕ್ರಿಸ್ಟಲ್ ಡಾಟಾ
ಸಿ. ಲೇಸರ್ ಕ್ರಿಸ್ಟಲ್ ಡಿಸ್ಪ್ಲೇ
ಡಿ. ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ
4. ಎಲ್ಲಾ ವ್ಯವಸ್ಥಾಪನ ಫೈಲುಗಳು, ಪೋಲ್ಡರ್ಗಳು ಮತ್ತು ಬಳಕೆದಾರರು ಸಂರಕ್ಷಿಸಿದ ಫೈಲುಗಳು, ಪೋಲ್ಡರ್ಗಳನ್ನು ಒಳಗೊಂಡಿರುವ ಪೋಲ್ಡರ್ ಯಾವುದು?
ಎ. ಕಂಟ್ರೋಲ್ ಪ್ಯಾನಲ್
ಬಿ. ಮೈ ಡಾಕ್ಯುಮೆಂಟ್ಸ್
ಸಿ. ವಿಂಡೋಸ್ ಎಕ್ಸಪ್ಲೋರರ್
ಡಿ. ರಿಸೈಕಲ್ಬಿನ್
5. ಕಂಪ್ಯೂಟರ್ ಆದೇಶಗಳಲ್ಲಿ ಅಡಿಗೆರೆ ಇರುವ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ?
ಎ. ಹಾಟ್ ಕೀಲಿಗಳು
ಬಿ. ಅಡಿಗೆರೆ ಕೀಲಿಗಳು
ಸಿ. ಶಾರ್ಟ್ಕಟ್ ಕೀಲಿಗಳು
ಡಿ. ಕ್ರಿಯಾ ಕೀಲಿಗಳು
6. ಇದರಲ್ಲಿ ಯಾವುದು ‘ ವರ್ಡ್’ ತಂತ್ರಾಶದಲ್ಲಿ ಪಠ್ಯ ತಿದ್ದಲು ಬಳಸಬಹುದಾದ ಸಲಕರಣೆ ಅಲ್ಲ?
ಎ. ಎಳೆದು ಸೇರಿಸುವುದು
ಬಿ. ಹುಡುಕಿ ಬದಲಾಯಿಸು
ಸಿ. ನಕಲು ಮಾಡಿ, ಅಂಟಿಸುವುದು
ಡಿ. ಚುಕ್ಕಿಗಳನ್ನು ಮತ್ತು ಅಂಕಿಗಳನ್ನು ಸೇರಿಸುವುದು
7. ವರ್ಡ್ ತಂತ್ರಾಶದಲ್ಲಿ ಕಾಗುಣಿತದ ತಪ್ಪುಗಳನ್ನು ಸ್ವಯಂಪ್ರೇರಿತವಾಗಿ ತಿದ್ದುವ ಸಲಕರಣೆ ಯಾವುದು?
ಎ. ಕಾಗುಣಿತ ಮತ್ತು ವ್ಯಾಕರಣ
ಬಿ. ಆಟೋ ಕರೆಕ್ಟ್
ಸಿ. ಆಟೋ ಟೆಕ್ಸ್ಟ್
ಡಿ. ಅನ್ ಡು
8. ದತ್ತಾಂಶದ ಮೌಲ್ಯವನ್ನು ಹೊಂದಿಕೊಂಡು ಕೋಶವೊಂದರ ನೋಟ ಅಥವಾ ವಿನ್ಯಾಸ ಬದಲಾಯಿಸುವುದಕ್ಕೆ ಹೀಗೆ ಕರೆಯಲಾಗುತ್ತದೆ…….
ಎ. ಫಾರ್ಮಾಟ್ ಮಾಡುವುದು
ಬಿ. ಕೋಶ ಫಾರ್ಮಾಟ್ ಮಾಡುವುದು
ಸಿ. ಷರತ್ತುಬದ್ಧ ಫಾರ್ಮಾಟು ಮಾಡುವುದು
ಡಿ. ಷರತ್ತು ರಹಿತ ಫಾರ್ಮಾಟು ಮಾಡುವುದು.
9. ಎಕ್ಸೆಲ್ನಲ್ಲಿ ಫಲನಗಳನ್ನು ಬರೆಯಲು ಬಳಸಬಹುದಾದ ನಿರ್ದಿಷ್ಟ ಫಾರ್ಮಾಟ್ಗಳನ್ನು ಹೀಗೆ ಕರೆಯಲಾಗುತ್ತದೆ………….
ಎ. ಫಲನದ ಸಿಂಟ್ಯಾಕ್ಸ್
ಬಿ. ಫಲನದ ಹೆಸರು
ಸಿ. ಫಲನದ ವಾದಗಳು
ಡಿ. ಫಲನದ ವ್ಯಾಖ್ಯಾನ
10.ಪವರ್ಪಾಯಿಂಟ್ಗೆ ಸಂಬಂಧಿಸಿದಂತೆ ‘ ಕರಪತ್ರಗಳು’ ಎಂದರೆ:
ಎ. ನಿರ್ದಿಷ್ಟ ಸಂಖ್ಯೆಯ ಸ್ಲೈಡ್ಗಳನ್ನು ಜೋಡಿಸಿ ಪರದೆಯ ಮೇಲೆ ವೀಕ್ಷಿಸುವುದು.
ಬಿ. ಪ್ರತಿ ಪುಟದಲ್ಲಿ ನಿರ್ದಿಷ್ಟ ಸಂಖ್ಯೆಯ ಸ್ಲೈಡುಗಳನ್ನು ಜೋಡಿಸಿ ಮುದ್ರಿಸಲಾದ ಹಾಳೆಗಳು
ಸಿ. ಪ್ರಾಜೆಕ್ಟರ್ ಪರದೆಯ ಮೇಲೆ ಪ್ರದರ್ಶಿತಗೊಳ್ಳುವ ಸ್ಲೈಡುಗಳು
ಡಿ. ಇವು ಯಾವುದೂ ಅಲ್ಲ
11. ಆಕ್ಸೆಸ್ನಲ್ಲಿ ಬಳಸಬಹುದಾದ ‘ಮೆಮೋ’ ರೂಪದ ದತ್ತಾಂಶದಲ್ಲಿ ಇರಬಹುದಾದ ಗರಿಷ್ಠ ಅಕ್ಷರಗಳು ಎಷ್ಟು?
ಎ. 65,535
ಬಿ. 255
ಸಿ. 55,535
ಡಿ. ಯಾವುದೇ ಮಿತಿ ಇಲ್ಲ.
12. ಆಕ್ಸೆಸ್ನಲ್ಲಿ ಕೋಷ್ಟಕಗಳನ್ನು ಸೃಷ್ಟಿಸಲು ಯಾವ ವಿಧಾನ ಅನುಸರಿಸಬಹುದು?
ಎ. ಕೋಷ್ಟಕ ವಿಜಾರ್ಡ್ನ ಬಳಕೆ
ಬಿ. ವಿನ್ಯಾಸ ನೋಟದ ಬಳಕೆ
ಸಿ. ನೇರ ದತ್ತಾಂಶ ಭರ್ತಿ ಮೂಲಕ
ಡಿ.ಇವೆಲ್ಲಾ ವಿಧಾನಗಳನ್ನು ಅನುಸರಿಸಬಹುದು
13. ಅಂತರಜಾಲದ ಮೂಲಕ ಮಾಹಿತಿ ವಿನಿಮಯ ಮಾಡಲು ಈ ತತ್ರಾಂಶ ಅಗತ್ಯ….
ಎ. ಪವರ್ಪಾಯಿಂಟ್
ಬಿ. ಎಕ್ಸೆಲ್
ಸಿ. ಟಿಸಿಪಿ/ಐಪಿ
ಡಿ. ಎಂಎಸ್ ಡಾಸ್
14. ವಿಶ್ವವ್ಯಾಪಿ ಜಾಲದ ಪರಿಕಲ್ಪನೆ ಹುಟ್ಟಿದ್ದು ಯಾವ ವರ್ಷ ಮತ್ತು ಎಲ್ಲಿ?
ಎ. 1989, ಜೆನಿವಾದಲ್ಲಿ
ಬಿ. 1969, ಜೆನಿವಾ
ಸಿ. 1999, ಅಮೇರಿಕಾ
ಡಿ. 1989, ಜಪಾನ್
15. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿರುವ ಕಂಪ್ಯೂಟರ್ಗಳಲ್ಲಿರುವ ಮಾಹಿತಿ ದಸ್ತಾವೇಜುಗಳ ಜಾಲಕ್ಕೆ ಈ ಹೆಸರು….
ಎ. ವಿಶ್ವವ್ಯಾಪಿ ಜಾಲ
ಬಿ. ಅಂತರ್ಜಾಲ
ಸಿ. ಜಾಲತಾಣ
ಡಿ. ಜಾಲ ಸರ್ವರ್
[ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 3 ]
# ಉತ್ತರಗಳು :
1. ಎ. ಅಂತರಮುಖ ಕಾರ್ಡು
2. ಸಿ. ಕಂಪ್ಯೂಟರ್ ಜಾಲಗಳ ಕಾರ್ಯನಿರ್ವಹಣೆ
3. ಡಿ. ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ
4. ಸಿ. ವಿಂಡೋಸ್ ಎಕ್ಸಪ್ಲೋರರ್
5. ಎ. ಹಾಟ್ ಕೀಲಿಗಳು
6. ಡಿ. ಚುಕ್ಕಿಗಳನ್ನು ಮತ್ತು ಅಂಕಿಗಳನ್ನು ಸೇರಿಸುವುದು
7. ಬಿ. ಆಟೋ ಕರೆಕ್ಟ್
8. ಸಿ. ಷರತ್ತುಬದ್ಧ ಫಾರ್ಮಾಟು ಮಾಡುವುದು
9. ಎ. ಫಲನದ ಸಿಂಟ್ಯಾಕ್ಸ್
10. ಬಿ. ಪ್ರತಿ ಪುಟದಲ್ಲಿ ನಿರ್ದಿಷ್ಟ ಸಂಖ್ಯೆಯ ಸ್ಲೈಡುಗಳನ್ನು ಜೋಡಿಸಿ ಮುದ್ರಿಸಲಾದ ಹಾಳೆಗಳು
11. ಎ. 65,535
12. ಡಿ.ಇವೆಲ್ಲಾ ವಿಧಾನಗಳನ್ನು ಅನುಸರಿಸಬಹುದು
13. ಸಿ. ಟಿಸಿಪಿ/ಐಪಿ
14. ಎ. 1989, ಜೆನಿವಾದಲ್ಲಿ
15. ಎ. ವಿಶ್ವವ್ಯಾಪಿ ಜಾಲ