GKIndian ConstitutionSpardha Times

ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -7

Share With Friends

1) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?
➤1955 ರಲ್ಲಿ.

2) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?
➤ಆಂಧ್ರಪ್ರದೇಶ.

3) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?
➤ ಗುಜರಾತ್ (1960).

4) 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?
➤ಜೂನ್ 2, 2014.

5) ಭಾರತ ದೇಶವು ಯಾವ ಪೌರತ್ವ ಹೊಂದಿದೆ?
➤ಏಕ ಪೌರತ್ವ.

6) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
➤1955, ಡಿಸೆಂಬರ್ 30

7) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
➤1) ಅಮೇರಿಕಾ.2) ಸ್ವಿಟ್ಜರ್ಲ್ಯಾಂಡ್.

8) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ —– ಎನ್ನುವರು.
➤ಸಂಸದೀಯ ಪದ್ದತಿ.

9) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
➤340.

10) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ?
➤62 ವರ್ಷ

11) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
➤ಪಂಜಾಬ್.

12) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
➤12

13) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
➤26 ನವೆಂಬರ್ 1949

14) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
➤ಉತ್ತರಪ್ರದೇಶ.

15) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
➤ರಾಜ್ಯಪಾಲರು.

16) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
➤ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

17) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
➤ಅಟಾರ್ನಿ ಜನರಲ್.

18) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
➤54 ನೇ.

19) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
➤333.

20) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
➤ಚುನಾವಣೆ ಆಯೋಗಕ್ಕೆ.

➤ (ವಾಟ್ಸಾಪ್‌ನಲ್ಲಿ ಅಪ್ಡೇಟ್ ಪಡೆಯಲು 88671 61317 ಮೊಬೈಲ್ ನಂಬರ್ ಗೆ REQUEST ಕಳಿಸಿ)

Leave a Reply

Your email address will not be published. Required fields are marked *

error: Content Copyright protected !!