Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (01-12-2020)

Share With Friends

1. 2020ರಲ್ಲಿ ಕೇಂಬ್ರಿಡ್ಜ್ ನಿಘಂಟಿನಲ್ಲಿ ಹೆಚ್ಚು ಹುಡುಕಿದ ಪದಗಳ ಪ್ರಕಾರ 2020ರ ವರ್ಷದ ಪದ ಎಂದು ಯಾವ ಪದವನ್ನು ಹೆಸರಿಸಲಾಗಿದೆ..?
1) Pandemic
2) Corona
3) Vaccine
4) Quarantine
5) None of the above

2. ಚೀನಾವು ಯಾವ ನದಿಯ ಕೆಳಭಾಗದಲ್ಲಿ ಮೊದಲ ಡೌನ್‌ಸ್ಟ್ರೀಮ್ ಅಣೆಕಟ್ಟನ್ನು ನಿರ್ಮಿಸಲು ಮುಂದಾಗಿದೆ..?
1) ಸಿಂಧೂ
2) ಗಂಗಾ
3) ಬ್ರಹ್ಮಪುತ್ರ
4) ಸಟ್ಲೆಜ್

3. ಡಿಪಿಐಐಟಿ (ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ) ಪ್ರಕಾರ 2020 ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದಲ್ಲಿ ಹೆಚ್ಚು ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ಈಕ್ವಿಟಿ ಒಳಹರಿವು ಹೊಂದಿರುವ ದೇಶ ಯಾವುದು?
1) ಯುಎಸ್ಎ (ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ)
2) ಸಿಂಗಾಪುರ
3) ಮಾರಿಷಸ್
4) ಜಪಾನ್

4. ಭಾರತದಲ್ಲಿ 2020-21ರಲ್ಲಿ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (British Academy of Film and Television Arts-BAFTA) ಬ್ರೇಕ್ ಥ್ರೂ ಉಪಕ್ರಮದ ರಾಯಭಾರಿಯಾಗಿ ನೇಮಕಗೊಂಡವರು ಯಾರು? ( ಈ ಉಪಕ್ರಮವನ್ನು ನೆಟ್‌ಫ್ಲಿಕ್ಸ್ ಬೆಂಬಲಿಸುತ್ತಿದೆ)
1) ರೋಹಿತ್ ಶರ್ಮಾ
2) ಆಯುಷ್ಮಾನ್ ಖುರಾನಾ
3) ಅರ್ಜಿತ್ ಸಿಂಗ್
4) ಎ.ಆರ್.ರೆಹಮಾನ್

5. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಡೇವ್ ಪ್ಲೋಸ್ ಇತ್ತೀಚೆಗೆ ನಿಧನರಾದರು. ಅವರು ಯಾವುದಕ್ಕೆ ಪ್ರಸಿದ್ಧರಾಗಿದ್ದರು..?
1) ಕುಸ್ತಿ
2) ಸ್ಪ್ರಿಂಟಿಂಗ್
3) ಸೈಕ್ಲಿಂಗ್
4) ವೇಟ್‌ಲಿಫ್ಟಿಂಗ್

6. ಶ್ರೀಲಂಕಾ ಆಯೋಜಿಸಿದ್ದ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಡುವಿನ ತ್ರಿಪಕ್ಷೀಯ ಕಡಲ ಭದ್ರತಾ ಸಹಕಾರ ಕುರಿತ 4ನೇ ಎನ್‌ಎಸ್‌ಎ ( ರಾಷ್ಟ್ರೀಯ ಭದ್ರತಾ ಸಲಹೆಗಾರ) ಮಟ್ಟದ ಸಭೆಯಲ್ಲಿ ಭಾರತದಿಂದ ಭಾಗವಹಿಸಿದ ಎನ್‌ಎಸ್‌ಎ ಯಾರು..?
1) ರಾಜನಾಥ್ ಸಿಂಗ್
2) ನರೇಂದ್ರ ಮೋದಿ
3) ಎಸ್ ಜೈಶಂಕರ್
4) ಅಜಿತ್ ದೋವಲ್

7. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಯ ಸಂಸ್ಥೆ” (OECD-Organisation for Economic Co-operation and Development) ದೇಶಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾವಂತ ವಲಸಿಗರನ್ನು ಕಳುಹಿಸುವ ಪಟ್ಟಿಯಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ..?
1) ಚೀನಾ
2) ಕೆನಡಾ
3) ರಷ್ಯಾ
4) ಯುನೈಟೆಡ್ ಸ್ಟೇಟ್ಸ್
5) ಭಾರತ

8. ಖ್ಯಾತ ಫುಟ್ಬಾಲ್ ಆಟಗಾರ ಪಾಪಾ ಬೌಬಾ ಡಯೋಪ್ ಇತ್ತೀಚೆಗೆ ನಿಧನರಾದರು. ಅವರು ಯಾವ ದೇಶಕ್ಕೆ ಸೇರಿದವರು..?
1) ದಕ್ಷಿಣ ಕೊರಿಯಾ
2) ಜಪಾನ್
3) ಸೆನೆಗಲ್
4) ಬ್ರೆಜಿಲ್
5) ಸೆನೆಗಲ್

9. “Cnemaspis avasabinae” ಎಂಬ ಹೊಸ ಜಾತಿಯ ಕುಬ್ಜ ಗೆಕ್ಕೊ ( ಹಲ್ಲಿ ) ಅತ್ಯಂತ ಚಿಕ್ಕ ಭಾರತೀಯ ಗೆಕ್ಕೊನಿಡ್ (Gekkonidae) ಅನ್ನು ಯಾವ ರಾಜ್ಯದ ಪೂರ್ವ ಘಟ್ಟದಲ್ಲಿ ಪತ್ತೆಹಚ್ಚಲಾಗಿದೆ..?
1) ಆಂಧ್ರಪ್ರದೇಶ
2) ತಮಿಳುನಾಡು
3) ಒಡಿಶಾ
4) ಕರ್ನಾಟಕ

10. ______________ ಅಡಿಯಲ್ಲಿ COVID-19 ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತ ಸರ್ಕಾರ ಜೈವಿಕ ತಂತ್ರಜ್ಞಾನ ಇಲಾಖೆಗೆ (Department of Biotechnology-DBT) 900 ಕೋಟಿ ರೂ. ಹಂಚಿಕ ಮಾಡಿದೆ..?
1) ಮಿಷನ್ ಸಮುದ್ರ ಸೇತು
2) ಮಿಷನ್ ಕೋವಿಡ್ ಸುರಕ್ಷ
3) ರಾಷ್ಟ್ರೀಯ ಆರೋಗ್ಯ ಮಿಷನ್
4) ಮಿಷನ್ ಇನ್ನೋವೇಶನ್

11. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿಯೋಜಿಸಲು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಇಂಟರ್ನ್ಯಾಷನಲ್ ಡಿಜಿಟಲ್ ಹೆಲ್ತ್ & ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ಸಹಯೋಗದೊಂದಿಗೆ (I-DAIR) ಯಾವ ರಾಜ್ಯ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿತು?
1) ಹರಿಯಾಣ
2) ಪಂಜಾಬ್
3) ಹಿಮಾಚಲ ಪ್ರದೇಶ
4) ಉತ್ತರ ಪ್ರದೇಶ

# ಉತ್ತರಗಳು ಮತ್ತು ವಿವರಣೆ :
1. 4) Quarantine
2. 3) ಬ್ರಹ್ಮಪುತ್ರ
3. 2) ಸಿಂಗಾಪುರ
4. 4) ಎ.ಆರ್.ರೆಹಮಾನ್
5. 4) ವೇಟ್ಲಿಫ್ಟಿಂಗ್
6. 4) ಅಜಿತ್ ದೋವಲ್

7. 5) ಭಾರತ
ಒಇಸಿಡಿ ರಾಷ್ಟ್ರಗಳಲ್ಲಿ ವಾಸಿಸುವ ಉನ್ನತ ವಿದ್ಯಾವಂತ ವಲಸಿಗರ ಸಾಮಾನ್ಯ ಜನ್ಮ ದೇಶಗಳಲ್ಲಿ ಒಇಸಿಡಿ “ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಯ ಸಂಸ್ಥೆ” ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಒಇಸಿಡಿ ರಾಷ್ಟ್ರಗಳಲ್ಲಿ ಭಾರತದ ಸುಮಾರು 3.2 ಮಿಲಿಯನ್ ಉನ್ನತ ವಿದ್ಯಾವಂತ ವಲಸಿಗರುರಿದ್ದಾರೆ. ( 2015-16ರ ಡೇಟಾ) ಭಾರತಕ್ಕೆ ಸಂಬಂಧಿಸಿದಂತೆ, ಉನ್ನತ ಶಿಕ್ಷಣದ ಸ್ಥಾನಮಾನವನ್ನು ಹೊಂದಿರುವ ವಲಸಿಗರ ವ್ಯಕ್ತಿಗಳ ಪಾಲು 65% ಅಂದರೆ ಉನ್ನತ ಶಿಕ್ಷಣ ಎಂದರೆ ವೃತ್ತಿಪರ ಅಥವಾ ಶೈಕ್ಷಣಿಕ ತರಬೇತಿಯನ್ನು ಪಡೆದಿರುವುದು. ಪಟ್ಟಿಯಲ್ಲಿ 2.25 ಮಿಲಿಯನ್ (48.6% ಉನ್ನತ ಶಿಕ್ಷಣ ವಲಸಿಗರು) ಹೊಂದಿರುವ ಚೀನಾ ಭಾರತದ ನಂತರ ಸ್ಥಾನದಲ್ಲಿದೆ. ಫಿಲಿಪೈನ್ಸ್ – 1.89 ಮಿಲಿಯನ್ ವಲಸಿಗರು.

8. 3) ಸೆನೆಗಲ್

9. 1) ಆಂಧ್ರಪ್ರದೇಶ
ಸಂಶೋಧಕರ ತಂಡವು “ಸಿನೆಮಾಸ್ಪಿಸ್ ಅವಸಾಬಿನೆ” ಎಂಬ ಹೊಸ ಜಾತಿಯ ಕುಬ್ಜ ಹಲ್ಲಿಯನ್ನು ಕಂಡುಹಿಡಿದಿದೆ, ಇದನ್ನು ಪೂರ್ವ ಘಟ್ಟದಿಂದ ಅತ್ಯಂತ ಚಿಕ್ಕ ಭಾರತೀಯ ಗೆಕ್ಕೊನಿಡ್ ಎಂದು ಗುರುತಿಸಲಾಗಿದೆ. ಕ್ನೆಮಾಸ್ಪಿಸ್ ಅವಸಾಬಿನೆ ಪಶ್ಚಿಮ ಘಟ್ಟದ ಹೊರಗೆ ಪತ್ತೆಯಾದ 12 ಪ್ರಭೇದಗಳು ಮತ್ತು ಆಂಧ್ರಪ್ರದೇಶದ ವೆಲಿಕೊಂಡಾ ಶ್ರೇಣಿಯಿಂದ ಬಂದ ಮೊದಲ ಪ್ರಭೇದವಾಗಿದೆ. ಹೊಸ ಪ್ರಭೇದಕ್ಕೆ “ಸಬಿನ್ಸ್ ನೆಲ್ಲೂರು ಡ್ವಾರ್ಫ್ ಗೆಕ್ಕೊ” ಎಂಬ ಸಾಮಾನ್ಯ ಹೆಸರನ್ನು ನೀಡಲಾಗಿದೆ. ಆವಿಷ್ಕಾರದ ಕುರಿತಾದ ಪ್ರಬಂಧ “ಭಾರತದ ಪೂರ್ವ ಘಟ್ಟದಿಂದ ದಕ್ಷಿಣ ಏಷ್ಯಾದ ಕ್ನೆಮಾಸ್ಪಿಸ್ (ಸ್ಕ್ವಾಮಾಟಾ: ಗೆಕ್ಕೊನಿಡೆ)” ಪ್ರಭೇದವನ್ನು ಜೂಟಾಕ್ಸಾದಲ್ಲಿ ಪ್ರಕಟಿಸಲಾಗಿದೆ.

10. 2) ಮಿಷನ್ ಕೋವಿಡ್ ಸುರಕ್ಷ
11. 2) ಪಂಜಾಬ್

ಪ್ರಚಲಿತ ಘಟನೆಗಳ ಕ್ವಿಜ್ (24-11-2020 ರಿಂದ 30-11-2020 ವರೆಗೆ )
ಪ್ರಚಲಿತ ಘಟನೆಗಳ ಕ್ವಿಜ್ (23-11-2020)
ಪ್ರಚಲಿತ ಘಟನೆಗಳ ಕ್ವಿಜ್ (22-11-2020)
ಪ್ರಚಲಿತ ಘಟನೆಗಳ ಕ್ವಿಜ್ (21-11-2020)

 

Leave a Reply

Your email address will not be published. Required fields are marked *

error: Content Copyright protected !!