Current Affairs Today : ಇಂದಿನ ಪ್ರಚಲಿತ ವಿದ್ಯಮಾನಗಳು (05-03-2025)
Current Affairs Today
*ಏಕದಿನದಲ್ಲಿ ಅತಿ ವೇಗವಾಗಿ 3 ಸಾವಿರ ರನ್ ಪೂರೈಸಿದ ರಾಹುಲ್
ಆಸ್ಟ್ರೇಲಿಯಾ(IND vs AUS) ವಿರುದ್ಧ ಮಂಗಳವಾರ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಸೆಮಿ ಫೈನಲ್ ಪಂದ್ಯದಲ್ಲಿ ಅಜೇಯ 42 ರನ್ ಬಾರಿಸುವ ಮೂಲಕ ಭಾರತ ಗೆಲುವಿನಲ್ಲಿ ಕೊಡುಗೆ ನೀಡಿದ್ದ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಈ ಇನಿಂಗ್ಸ್ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಪೂರೈಸಿದ್ದಾರೆ. ಅತಿ ಕಡಿಮೆ ಇನಿಂಗ್ಸ್‌ನಲ್ಲಿ ಈ ಸಾಧನೆಗೈದ ಮೂರನನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 3 ಸಾವಿರ ರನ್ ಪೂರೈಸಿದ ದಾಖಲೆ ಮಾಜಿ ಆಟಗಾರ ಶಿಖರ್ ಧವನ್ ಹೆಸರಿನಲ್ಲಿದೆ. ಅವರು 72 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನೆಟ್ಟಿದ್ದರು. ದ್ವಿತೀಯ ಸ್ಥಾನ ವಿರಾಟ್ ಕೊಹ್ಲಿ(75 ಇನಿಂಗ್ಸ್). ಮೂರನೇ ಸ್ಥಾನದಲ್ಲಿರುವ ಕೆ.ಎಲ್ ರಾಹುಲ್ 78 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.
* ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್
*ಸ್ವತಃ ಕೈಬರಹದಲ್ಲೇ 100 ಪುಟಗಳ ಬಜೆಟ್ ಪ್ರತಿ ಬರೆದು ಮಂಡನೆ
ಛತ್ತೀಸ್ ಗಢದ ಹಣಕಾಸು ಸಚಿವ ಒ.ಪಿ. ಚೌಧರಿ ಕೈಬರಹದಲ್ಲೇ ಸಿದ್ಧಪಡಿಸಿದ ಬಜೆಟ್ ಮಂಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಸ್ವತಃ ಹಣಕಾಸು ಸಚಿವರೇ ಕೈಬರಹದಲ್ಲಿ ಸಿದ್ಧಪಡಿಸಿದ 100 ಪುಟಗಳ ಬಜೆಟ್ ಪ್ರತಿ ಮಂಡಿಸಿದ್ದಾರೆ. ಬರವಣಿಗೆಯ ಮೂಲ ಸಂಪ್ರದಾಯ ಪಾಲಿಸಿ ಸ್ವಂತಿಕೆಗೆ ಉತ್ತೇಜನ ನೀಡಲಾಗಿದೆ. ಡಿಜಿಟಲ್ ಯುಗದಲ್ಲಿ ಕೈ ಬರಹದ ಬಜೆಟ್ ಪ್ರತಿ ಮಂಡಿಸುವುದು ಮಹತ್ವ ಪಡೆದಿದೆ. ಬಜೆಟ್ ಪ್ರತಿ ಸರ್ಕಾರದ ಅಧಿಕೃತ ದಾಖಲೆಯಾಗಿದೆ. ಒಂದು ಪದ ಅಥವಾ ಸಾಲು ತಪ್ಪಾಗಿದ್ದರೂ ಸ್ಪಷ್ಟತೆಗಾಗಿ ಚೌಧರಿ ಅದನ್ನು ಸಂಪೂರ್ಣ ಹೊಸದಾಗಿ ಬರೆಯುತ್ತಿದ್ದರು. ಬಜೆಟ್ ಪ್ರತಿ ಪೂರ್ಣಗೊಳಿಸಲು ಮೂರು ರಾತ್ರಿ ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಛತ್ತೀಸ್ ಗಢದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಪುಟಗಳ ಬಜೆಟ್ ನ್ನು ಸ್ವತಃ ಹಣಕಾಸು ಸಚಿವರು ಕೈಯಿಂದ ಬರೆದು ಅದನ್ನು ವಿಧಾನಸಭೆಯಲ್ಲಿ ಓದಿದ್ದಾರೆ.
* ಭಾರತದ ಮೊದಲ ಹಸಿರು ಹೈಡ್ರೋಜನ್ ಟ್ರಕ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ
*ರೋಹಿತ್ ಶರ್ಮಾ ವಿಶೇಷ ದಾಖಲೆ
ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಚಾಂಪಿಯನ್ಸ್ ಫೈನಲ್‌ಗೆ ಟೀಂ ಇಂಡಿಯಾ ಪ್ರವೇಶಿಸಿದ್ದು ಭಾರತದ ಪರ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ವಿಶ್ವಕಪ್, ಟಿ20, ಚಾಂಪಿಯನ್ಸ್ ಟ್ರೋಫಿ ಫೈನಲ್‌ವರೆಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರವಾಗಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 264 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಹೊಡೆಯುವ ಮೂಲಕ ಫೈನಲ್ ಪ್ರವೇಶಿಸಿತು.
*ಸಚಿನ್ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದ ಕೊಹ್ಲಿ
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಧಶತಕ ಸಿಡಿಸಿದ (Champions Trophy) ವಿರಾಟ್ ಕೊಹ್ಲಿ (Virat Kohli) ಸಚಿನ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು (World Record) ಮುರಿದಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 74ನೇ ಅರ್ಧಶತಕ ಸಿಡಿಸಿದರೆ ಐಸಿಸಿ ಆಯೋಜಿಸಿದ ಟೂರ್ನಿಯಲ್ಲಿ 24ನೇ ಅರ್ಧಶತಕ ಬಾರಿಸಿದರು. ಈ ಮೂಲಕ ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಖ್ಯಾತಿಗೆ ಸಚಿನ್ (Sachin Tendulkar) ಪಾತ್ರವಾಗಿದ್ದರು. ತೆಂಡೂಲ್ಕರ್ 58 ಇನ್ನಿಂಗ್ಸ್‌ಗಳಿಂದ 23 ಅರ್ಧಶತಕ ಸಿಡಿಸಿದ್ದರು.
ಅತ್ಯುತ್ತಮ ಆಟವಾಡಿದ್ದ ಕೊಹ್ಲಿ ಅವರಿಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೊದಲು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಅಜೇಯ 100 ರನ್ ಹೊಡೆದಿದ್ದಕ್ಕೆ ಕೊಹ್ಲಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿತ್ತು.
ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಟಾಪ್ ಬ್ಯಾಟ್ಸ್‌ಮನ್‌ಗಳು
24 – ವಿರಾಟ್ ಕೊಹ್ಲಿ (53 ಇನ್ನಿಂಗ್ಸ್)
23 – ಸಚಿನ್ ತೆಂಡೂಲ್ಕರ್ (58 ಇನ್ನಿಂಗ್ಸ್)
18 – ರೋಹಿತ್ ಶರ್ಮಾ (42 ಇನ್ನಿಂಗ್ಸ್)
17 – ಕುಮಾರ್ ಸಂಗಕ್ಕಾರ (56 ಇನ್ನಿಂಗ್ಸ್)
16 – ರಿಕಿ ಪಾಂಟಿಂಗ್ (60 ಇನ್ನಿಂಗ್ಸ್)