Current AffairsSpardha Times

ಇಂದಿನ ಪ್ರಚಲಿತ ಘಟನೆಗಳು ( 02-11-2020 )

Share With Friends

# ಚೀನಾದಲ್ಲಿ ಜನಗಣತಿ ಆರಂಭ :
ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾದ ಚೀನಾವು ದಶಕದ ಬೃಹತ್ ಜನಗಣತಿಯನ್ನು ಆರಂಭಿಸಿದೆ. ಎರಡು ತಿಂಗಳುಗಳ ಕಾಲ ನಡೆಯಲಿರುವ ಜನಗಣತಿಯನ್ನು ಸುಮಾರು 70 ಲಕ್ಷ ಸಾಮುದಾಯಿಕ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ನಡೆಸಲಿದ್ದಾರೆ. ಭಾರೀ ಜನದಟ್ಟಣೆಯ ನಗರವಾದ ಶಾಂಘೈನಿಂದ ಹಿಡಿದು, ದುರ್ಗಮವಾದ ಟಿಬೆಟ್ ಪರ್ವತ ಶಿಖರಗಳಲ್ಲಿರುವ ಗ್ರಾಮಗಳವರೆಗೂ ಜನಗಣತಿ ಕಾರ್ಯ ನಡೆಯಲಿದೆ. ತನ್ನ ಜನಸಂಖ್ಯಾ ಬೆಳವಣಿಗೆಯನ್ನು ತಿಳಿದುಕೊಳ್ಳಲು ಚೀನಾವು ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿಯನ್ನು ನಡೆಸುತ್ತಿದೆ. 2010ರಲ್ಲಿ ನಡೆಸಿದ ಜನಗಣತಿಯಲ್ಲಿ ಚೀನಾದ ಮುಖ್ಯಭೂಮಿಯಲ್ಲಿನ ಜನಸಂಖ್ಯೆ 133,97,24,852 ಕೋಟಿ ಯಿತ್ತು. ಇದು 2000ನೇ ಇಸವಿಯಲ್ಲಿದ್ದ ಜನಸಂಖ್ಯೆಗಿಂತ ಶೇ.5.83ರಷ್ಟು ಏರಿಕೆ ಕಂಡುಬಂದಿತ್ತು.ತನ್ನ ಏಕಮಗು ನೀತಿಯಲ್ಲಿ ಸಡಿಲಿಕೆ ಮಾಡಿದ ಕಾರಣದಿಂದಾಗಿ ಚೀನಾದ ಜನಸಂಖ್ಯೆಯಲ್ಲಿ ಮತ್ತೆ ತೀವ್ರ ಏರಿಕೆಯಾಗಿದೆಯೇ ಎಂಬುದರ ಬಗೆಗೂ ಜನಗಣತಿ ಬೆಳಕು ಚೆಲ್ಲಲಿದೆ.

# ಅಂಪೈರಿಂಗ್ ಮಾಡಿ ವಿಶ್ವದಾಖಲೆ ಬರೆದ ಅಲೀಂ ದಾರ್‌ : 
ಜಿಂಬಾಬ್ವೆ ಎದುರಿನ ಭಾನುವಾರದ ದ್ವಿತೀಯ ಏಕದಿನ ಪಂದ್ಯದಲ್ಲಿ, ಐಸಿಸಿ ಉನ್ನತ ಸಮಿತಿಯ ಅಂಪೈರ್‌, ಪಾಕಿಸ್ತಾನ ಅಲೀಂ ದಾರ್‌ ನೂತನ ಮೈಲುಗಲ್ಲು ನೆಟ್ಟರು. ಸರ್ವಾಧಿಕ 210 ಏಕದಿನ ಪಂದ್ಯಗಳಲ್ಲಿ ತೀರ್ಪುಗಾರನಾಗಿ ಕಾಣಿಸಿಕೊಂಡು ಪಾಕಿಸ್ತಾನದ ಅಲೀಂ ದಾರ್ ವಿಶ್ವದಾಖಲೆಗೆ ಪಾತ್ರರಾದರು. ಜಿಂಬಾಬ್ವೆ ಎದುರಿನ ಭಾನುವಾರದ ದ್ವಿತೀಯ ಏಕದಿನ ಪಂದ್ಯದಲ್ಲಿ, ಐಸಿಸಿ ಉನ್ನತ ಸಮಿತಿಯ ಅಂಪೈರ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ದಕ್ಷಿಣ ಆಫ್ರಿಕಾದ ರುಡಿ ಕೋರ್ಟ್‌ಜೆನ್‌ ಅವರ 209 ಪಂದ್ಯಗಳ ದಾಖಲೆಯನ್ನು ಮುರಿದರು. ಪ್ರವಾಸಿ ಶ್ರೀಲಂಕಾ ಎದುರಿನ 2000ದ ಗುಜ್ರನ್‌ವಾಲಾ ಪಂದ್ಯದಲ್ಲಿ ಅಲೀಂ ದಾರ್‌ ಏಕದಿನ ಪಂದ್ಯದಲ್ಲಿ ಅಂಪೈರಿಂಗ್‌ ಆರಂಭಿಸಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲೂ ಅತ್ಯಧಿಕ ಪಂದ್ಯಗಳಲ್ಲಿ ತೀರ್ಪುಗಾರನಾಗಿ ಕರ್ತವ್ಯ ನಿಭಾಯಿಸಿದ ದಾಖಲೆ ಅಲೀಂ ದಾರ್‌ ಹೆಸರಲ್ಲಿದೆ. “ಟೆಸ್ಟ್‌ ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳೆರಡರಲ್ಲೂ ಈ ದಾಖಲೆ ಸ್ಥಾಪಿಸಿರುವುದು ಅವರ ಮಹಾ ಸಾಧನೆ. ಅಲೀಂ ದಾರ್‌ ಸರ್ವಾಧಿಕ 132 ಟೆಸ್ಟ್‌ ಪಂದ್ಯಗಳಲ್ಲಿ ತೀರ್ಪುಗಾರನಾಗಿ ಕಾಣಿಸಿಕೊಂಡಿದ್ದಾರೆ. ವಿಂಡೀಸಿನ ಸ್ಟೀವ್‌ ಬಕ್ನರ್‌ ಅವರ 129 ಪಂದ್ಯಗಳ ದಾಖಲೆಯನ್ನು ದಾರ್‌ ಹಿಂದಿಕ್ಕಿದ್ದಾರೆ.

# ಜಾಗತಿಕ ಹೂಡಿಕೆ ಸಂಸ್ಥೆ ಕಾರ್ಲೈಲ್ ಹಿರಿಯ ಸಲಹೆಗಾರರಾಗಿ ಆದಿತ್ಯ ಪುರಿ ನೇಮಕ :
ಎಚ್ ಡಿಎಫ್ ಸಿ ಬ್ಯಾಂಕ್ ಮಾಜಿ ಮುಖ್ಯಾಧಿಕಾರಿ ಆದಿತ್ಯ ಪುರಿ ಅವರನ್ನು  ಜಾಗತಿಕ ಹೂಡಿಕೆ ಸಂಸ್ಥೆ ಕಾರ್ಲೈಲ್ ಕಂಪೆನಿಯ ಏಷ್ಯಾ ಹಿರಿಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.  ಆದಿತ್ಯ ಪುರಿ ಅವರು 1994ನೇ ಇಸವಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಮೊದಲ ಸಿಇಒ ಆಗಿ ನೇಮಕ ಆಗಿದ್ದರು. ಅವರ 26 ವರ್ಷದ ಅಧಿಕಾರಾವಧಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಮತ್ತು ಮಾರುಕಟ್ಟೆ ಮೌಲ್ಯದ ವಿಚಾರದಲ್ಲಿ ಭಾರತದ ಅತ್ಯಂತ ಮೌಲ್ಯಯುತ ಬ್ಯಾಂಕ್ ಎನಿಸಿಕೊಂಡಿತು. ಅದಕ್ಕೂ ಮುನ್ನ ಆದಿತ್ಯ ಪುರಿ 20 ವರ್ಷಗಳ ಕಾಲ ಸಿಟಿ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಕೊನೆಯದಾಗಿ 1992- 1994ರ ಮಧ್ಯೆ ಮಲೇಷ್ಯಾ ಸಿಟಿ ಬ್ಯಾಂಕ್ ಕಾರ್ಯ ನಿರ್ವಹಣೆಯ ಸಿಇಒ ಆಗಿ ಜವಾಬ್ದಾರಿ ನಿರ್ವಹಿಸಿದ್ದರು.
* ಯಾವುದು ಈ ಕಾರ್ಲೈಲ್ ಕಂಪನಿ..?
ಕಾರ್ಲೈಲ್ ನಿಂದ ಏಷ್ಯಾದ್ಯಂತ (ಜಪಾನ್ ಹೊರತುಪಡಿಸಿ) ಸೆಪ್ಟೆಂಬರ್ 30, 2020ಕ್ಕೆ 4.9 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಾಗಿದೆ. ಎಸ್ ಬಿಐ ಕಾರ್ಡ್, ಎಸ್ ಬಿಐ ಲೈಫ್, ಎಚ್ ಡಿಎಫ್ ಸಿ ಲಿ., ಪಿಎನ್ ಬಿ ಹೌಸಿಂಗ್ ಫೈನಾನ್ಸ್, ರೆಪ್ಕೊ ಹೌಸಿಂಗ್ ಫೈನಾನ್ಸ್, ಐಐಎಫ್ ಎಲ್ ಸೇರಿದಂತೆ ಅನೇಕ ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ. ನಿರ್ವಹಣಾ ತಂಡಗಳ ಜತೆಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವುದರಲ್ಲಿ ಹಾಗೂ ವ್ಯವಹಾರದಲ್ಲಿ ಬದಲಾವಣೆ ತರುವ ಸಾಮರ್ಥ್ಯದಲ್ಲಿ ಕಾರ್ಲೈಲ್ ಹೆಸರುವಾಸಿ.

# ನ್ಯೂಜಿಲೆಂಡ್‌ನಲ್ಲಿ ಸಚಿವೆಯಾದ ಭಾರತದ ಮೊದಲ ಮಹಿಳೆ  : 
ನ್ಯೂಜಿಲೆಂಡ್ ಸರ್ಕಾರದ ಕ್ಯಾಬಿನೆಟ್ ಗೆ ಭಾರತ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದು, ಆ ಮೂಲಕ ನ್ಯೂಜಿಲೆಂಡ್ ಗೆ ಸಚಿವೆಯಾದ ಭಾರತ ಮೂಲದ ಮೊಟ್ಟ ಮೊದಲ ಮಹಿಳೆ ಕೀರ್ತಿಗೆ ಭಾಜನರಾಗಿದ್ದಾರೆ. ಎರ್ನಾಕುಲಂ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರು ಜಸಿಂಡಾ ಅರ್ಡೆರ್ನ್ ಸಚಿವ ಸಂಪುಟಕ್ಕೆ ಆಯ್ಕೆಯಾಗಿದ್ದು, ಆ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 41 ವರ್ಷದ ಪ್ರಿಯಾಂಕಾ ಎರಡನೇ ಬಾರಿಗೆ ಸಂಸದರಾಗಿದ್ದು, ಇದೀಗ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಪ್ರಿಯಾಂಕಾ ಅವರು ಪರವೂರ್ ಮದವನರಂಬು ರಾಮನ್ ರಾಧಾಕೃಷ್ಣನ್ ಮತ್ತು ಉಷಾ ಅವರ ಪುತ್ರಿಯಾಗಿದ್ದು, ಕೇರಳದ ಪರಾವೂರು ಮೂಲವಾಗಿದ್ದರೂ ತಮಿಳುನಾಡಿನ ಚೆನ್ನೈನಲ್ಲಿ ಅವರ ಹೆಚ್ಚಿನ ಸಂಬಂಧಿಕರು ವಾಸವಾಗಿದ್ದಾರೆ. ಪ್ರಿಯಾಂಕಾ ಅವರ ಅವರ ಮುತ್ತಜ್ಜ ಕೇರಳ ರಾಜ್ಯದ ಎಡ ರಾಜಕೀಯದೊಂದಿಗೆ ಸಂಬಂಧ ಹೊಂದಿದ್ದರು, ಅಲ್ಲಿ ಅವರು ಕೇರಳ ರಾಜ್ಯ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಪ್ರಿಯಾಂಕಾ ಅವರು ಹುಟ್ಟಿದ್ದು ಭಾರತದಲ್ಲಿಯೇ ಆದರೂ ಸಿಂಗಪುರದಲ್ಲಿ ಬೆಳೆದಿದ್ದರು. ಮತ್ತು ನಂತರ ನ್ಯೂಜಿಲೆಂಡ್‌ಗೆ ತೆರಳಿ ವೆಲ್ಲಿಂಗ್ಟನ್‌ನ ವಿಕ್ಟೋರಿಯಾ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಬಳಿಕ ಲೇಬರ್ ಪಕ್ಷದ ಮುಖಂಡರಾಗಿ 14 ವರ್ಷಗಳ ಕಾಲ ಪ್ರಿಯಾಂಕಾ ಅವರು ಜನಾಂಗೀಯ ಸಮುದಾಯಗಳ ಮಾಜಿ ಸಚಿವರಾಗಿದ್ದ ಜೆನ್ನಿ ಸೇಲ್ಸಾ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಿಯಾಂಕಾ ಅವರ ಪತಿ, ರಿಚರ್ಡ್ಸನ್ ಐಟಿ ಉದ್ಯೋಗಿಯಾಗಿದ್ದು, ಅವರು ಕ್ರೈಸ್ಟ್ ಚರ್ಚ್‌ಗೆ ಸೇರಿದವರಾಗಿದ್ದಾರೆ. ಸಮುದಾಯ ಮತ್ತು ಸ್ವಯಂಪ್ರೇರಿತ ವಲಯ, ವೈವಿಧ್ಯತೆ, ಸೇರ್ಪಡೆ ಮತ್ತು ಜನಾಂಗೀಯ ಸಮುದಾಯಗಳು, ಯುವಕರು ಮತ್ತು ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಸಹ ಸಚಿವರಾಗಿ ಮೂರು ಪ್ರಮುಖ ಖಾತೆಗಳನ್ನು ಅವರಿಗೆ ವಹಿಸಲಾಗಿದೆ.

Leave a Reply

Your email address will not be published. Required fields are marked *

error: Content Copyright protected !!