ಜೀರ್ಣಕ್ರಿಯೆ : ಮಾನವನಲ್ಲಿ ಜೀರ್ಣಾಂಗ ವ್ಯವಸ್ಥೆ
ಜೀವಿಗಳು ಬದುಕುಳಿಯಬೇಕೆಂದರೆ, ಅವುಗಳಲ್ಲಿ ಅನೇಕ ಜೈವಿಕ ಕ್ರಿಯೆಗಳು ನಡೆಯಬೇಕು. ಸಸ್ಯಗಳು ಮತ್ತು ಪ್ರಾಣಿಗಳು ನೋಡಲು ಭಿನ್ನವಾಗಿದ್ದರೂ, ಕೆಲವು ಕೈವಿಕ ಕ್ರಿಯೆಗಳು ಎರಡರಲ್ಲೂ ಸಾಮಾನ್ಯವಾಗಿರುತ್ತದೆ. ಅವುಗಳೆಂದರೆ ಪೋಷಣೆ, ಶ್ವಾಸಕ್ರಿಯೆ, ಬೆಳವಣಿಗೆ, ಚಲನೆ, ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ, ಪ್ರಜನನ ಮತ್ತು ವಿಸರ್ಜನೆ. ಇವುಗಳನ್ನು “ಜೀವಕ್ರಿಯೆಗಳು” ಎನ್ನುತ್ತೇವೆ. ಈ ಜೀವಕ್ರಿಯೆಗಳು ಜೀವಿಗಳನ್ನು ಜೀವಂತವಾಗಿಟ್ಟಿರುತ್ತದೆ.
• ಪ್ರಾಣಿಗಳಲ್ಲಿ ಪೋಷಣೆ
ಪ್ರಾಣಿಗಳು ಆಹಾರ ಪಡೆಯುವ ವಿಧಾನವನ್ನು “ಹೋಲೋಜೋಯಿಕ್(ಪ್ರಾಣಿ ಸಂಪೂರ್ಣ) ಎಂದು ಕರೆಯುತ್ತಾರೆ. ಕಾರಣ ಅವು ಸೇವಿಸಿದ ಘನ ರೂಪದ ಸಾವಯವ ಆಹಾರವನ್ನು ರಕ್ತವು ಹೀರಿಕೊಳ್ಳಬಲ್ಲ ಸೂಕ್ಷ್ಮ ಕನಗಳಾಗಿ ವಿಭಜಿಸಲ್ಪಡುತ್ತವೆ. ಜೀರ್ಣಗ್ರಂಥಿಗಳು ಈ ಕಾರ್ಯವನ್ನು ಮಾಡುತ್ತವೆ.
ಉನ್ನತ ವರ್ಗದ ಪ್ರಾಣಿಗಳಲ್ಲಿ ಪೋಷಣೆಯು ಸೇವನೆ, ಜೀರ್ಣಕ್ರಿಯೆ, ಹೀರಿಕೆ, ಸ್ವಾಂಗೀಕರಣ ಮತ್ತು ವಿಸರ್ಜನೆ ಎಂಬ 5 ಹಂತಗಳನ್ನು ಒಳಗೊಂಡಿರುತ್ತದೆ.
• ಮಾನವನಲ್ಲಿ ಜೀರ್ಣಕ್ರಿಯೆಯು 2 ಹಂತಗಳಲ್ಲಿ ನಡೆಯುತ್ತವೆ.
1. ಯಾಂತ್ರಿಕ ಜೀರ್ಣಕ್ರಿಯೆ – ಆಹಾರದ ದೊಡ್ಡ ಕಣಗಳು ನಾಲಿಗೆ, ಹಲ್ಲು, ಮತ್ತು ಜಠರದ ಬಲಿಷ್ಠ ಸ್ನಾಯುಗಳಿಂದ ಮೃದುವಾದ ಮುದ್ದೆಯಂತೆ ಪರಿವರ್ತಿಸಲ್ಪಡುವುದು.
2. ರಾಸಾಯನಿಕ ಜೀರ್ಣಕ್ರಿಯೆ – ಆಹಾರವು ಕಿಣ್ವಗಳ ಕ್ರಿಯೆಯಿಂದ ಜಲವಿಶ್ಲೇಷಣೆ ಹೊಂದಿ ಅತ್ಯಂತ ಸೂಕ್ಷ್ಮ ಕಣಗಳಾಗುವುದು.
➤ ಮಾನವನಲ್ಲಿ ಜೀರ್ಣಾಂಗ ವ್ಯವಸ್ಥೆ
ಮಾನವನಲ್ಲಿ ಜೀಣಾಂಗವ್ಯೂಹ ಸಂಕೀರ್ಣವಾಗಿದೆ.
ಮಾನವನ ಜೀರ್ಣನಾಳವು ಬಾಯಿಯಿಂದ ಗುದದ್ವಾರದವರೆಗೂ ವಿಸ್ತರಿಸಿದ್ದು, ಜೀರ್ಣನಾಳವು ಬಾಯಿ, ಗಂಟಲು, ಅನ್ನನಾಳ, ಜಠರ, ಸಣ್ಣಕರುಳು ಮತ್ತು ದೊಡ್ಡ ಕರುಳು ಮತ್ತು ಗುದದ್ವಾರಗಳನ್ನು ಒಳಗೊಂಡಿದೆ.
• ಬಾಯಿ
ಬಾಯಿಯಲ್ಲಿರುವ ಆಹಾರವು ಯಾಂತ್ರಿಕವಾಗಿ ಪಚನವಾಗುತ್ತದೆ. ನಾಲಿಗೆ ಹಾಗೂ ಹಲ್ಲಿನ ಸಹಾಯದಿಂದ ಆಹಾರವು ಜಗಿಯಲ್ಪಡುತ್ತದೆ. ಲಾಲಾರಸವು(ಜೊಲ್ಲು) ಆಹಾರವನ್ನು ಮೆದುವಾಗಿಸುತ್ತದೆ. ಈ ಮೆದುವಾದ ಆಹಾರವನ್ನು “ಬೋಲಸ್” ಎನ್ನುತ್ತಾರೆ. ಲಾಲಾರಸದಲ್ಲಿರುವ “ಅಮೈಲೇಸ್ ಕಿಣ್ವವು” ಪಿಷ್ಟವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ.
* ಬಾಯಿಯಲ್ಲಿರುವ ಗ್ರಂಥಿಗಳನ್ನು “ಜೊಲ್ಲು ಗ್ರಂಥಿಗಳು ಅಥವಾ ಲಾಲಾಗ್ರಂಥಿಗಳು” ಎಂದು ಕರೆಯುತ್ತಾರೆ.
* ಲಾಲಾಗ್ರಂಥಿಗಳು ಮೂರು ಜೊತೆ ಇವೆ
ಎ. ಪೆರೋಟಿಡ್ ಗ್ರಂಥಿಗಳು
ಬಿ. ಸಬ್ ಮ್ಯಾಕ್ಸಿಲರಿ ಗ್ರಂಥಿಗಳು
ಸಿ. ಸಬ್ ಲಿಂಗ್ವನಲ್ ಗ್ರಂಥಿಗಳು.
• ನಾಲಿಗೆ
* ನಾಲಿಗೆಯಲ್ಲಿ ರುಚಿಯನ್ನು ಗ್ರಹಿಸುವ ರಚನೆಗಳನ್ನು “ರಸಾಂಕುರಗಳು” ಎನ್ನುವರು.
• ಹಲ್ಲುಗಳು
* ಇದು ‘ಡೆಂಟಿನ್’ ಎಂಬ ಅತಿ ಗಟ್ಟಿಯಾದ ವಸ್ತುವಿನಿಂದ ಆಗಿದೆ. ಇದರ ಮೇಲೆ “ಎನಾಮೆಲ್” ಎಂಬ ಅತ್ಯಂತ ಗಟ್ಟಿಯಾದ ಪದರವಿದೆ.
*ಮಾನವನಲ್ಲಿ 4 ವಿಧವಾದ ಹಲ್ಲುಗಳಿವೆ.
1.ಬಾಚಿ ಹಲ್ಲು- ಆಹಾರವನ್ನು ಕತ್ತರಿಸಲು
2.ಕೋರೆಹಲ್ಲುಗಳು- ಆಹಾರವನ್ನು ಸಿಗಿಯಲು
3.ಮುಂದವಡೆ – ಆಹಾರವನ್ನು ಅರೆಯಲು
4. ಹಿಂದವಡೆ – ಆಹಾರವನ್ನು ಅರೆಯಲು
* ದಂತಸೂತ್ರ – ಬಾಯಿಯಲ್ಲಿ ಹಲ್ಲುಗಳು ಕ್ರಮಬದ್ಧವಾಗಿ ಜೋಡಿಸಲ್ಪಟ್ಟಿರುವುದನ್ನು ‘ದಂತಸೂತ್ರ’ ಎನ್ನುವರು. ಮಾನವನ ದಂತಸೂತ್ರ- 2 1 2 3
*ಆರೋಗ್ಯವಂತ ಮಾನವನ ಬಾಯಿಯಲ್ಲಿರುವ ಒಟ್ಟು ಹಲ್ಲುಗಳು – 32
• ಅನ್ನನಾಳ – ಆಹಾರವನ್ನು ಗಂಟಲಿನಿಂದ ಜಠರಕ್ಕೆ ಸೇರಿಸುವ ನಾಳ. “ಎಪಿಗ್ಲಾಟಿಸ್” ಎಂಬ ಅಂಗಾಂಶವು ‘ಬೋಲಸ್( ಬಾಯಿಯ ಲಾಲಾರಸದಲ್ಲಿ ಮೆದುವಾದ ಆಹಾರ) ಶ್ವಾಸನಾಳವನ್ನು ಪ್ರವೇಶಿಸುವುದನ್ನು ತಡೆಯುತ್ತದೆ.
ಅನ್ನನಾಲದ ಗೋಡೆಯಲ್ಲಿರುವ ಸ್ನಾಯುಗಳ ಸಂಕೋಚನ ಮತ್ತು ವಿಕಸನಗಳಿಂದ “ಪೆರಿಸ್ಟಾಲ್‍ಸಿಸ್” ಉಂಟಾದ ಚಲನೆಗಳು ಬೋಲಸ್‍ನ್ನು ಜಠರಕ್ಕೆ ಸೇರಿಸುತ್ತದೆ.
• ಜಠರ – ಅನ್ನನಾಳದಿಂದ ಆಹಾರವು ಜಠರಕ್ಕೆ ಸೇರುತ್ತದೆ. ಜಠರದಲ್ಲಿರುವ ಆಹಾರವು ಚೆನ್ನಾಗಿ ತಿರುವಿ ದ್ರವರೂಪಕ್ಕೆ ಬರುವಂತೆ “ಜಠರದ ಸ್ನಾಯುಗಳ” ಮಾಡುತ್ತವೆ.
ಜಠರವು ಜಠರರಸವನ್ನು ಸ್ರವಿಸುತ್ತದೆ. ಜಠರ ರಸವು ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಹೈಡ್ರೋಕ್ಲೋರಿಕ್ ಆಮ್ಲವು ಆಹಾರ ಮತ್ತು ನೀರಿನ ಮೂಲಕ ಜಠರವನ್ನು ಪ್ರವೇಶಿಸಬಹುದಾದ ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸುತ್ತದೆ. ಜಠರದಲ್ಲಿ ಪಚನಕ್ಕೆ ಸಹಾಯಕವಾಗಿರುವ “ಪೆಪ್ಸಿನ್ ಮತ್ತು “ರೆನಿನ್” ಎಂಬ ಕಿಣ್ವಗಳೂ ಸ್ರವಿಕೆಯಾಗುತ್ತದೆ. ‘ಪೆಪ್ಸಿನ್’ ಜಠರದಲ್ಲಿ ಪ್ರೋಟಿನನ್ನು ಪೆಪ್ಸೈಡ್‍ಗಳಾಗಿ ಪರಿವರ್ತಿಸುವ ಕಿಣ್ವವಾಗಿದೆ. ‘ರೆನಿನ್’ ಹಾಲಿನಲ್ಲಿ ಕರಗಿರುವ ಪ್ರೋಟಿನ್‍ಗಳನ್ನು ಕರಗಲಾಗದ ಮೊಸರನ್ನಾಗಿಸುತ್ತದೆ. ಈ ಹಂತದಲ್ಲಿ ಜಠರದಲ್ಲಿರುವ ಬೋಲಸ್ ಗಟ್ಟಿ ರೂಪಕ್ಕೆ ಬದಲಾಗುತ್ತದೆ. ಇದನ್ನು “ ಕೈಮ್” ಎಂದು ಕರೆಯುತ್ತಾರೆ.
* ಜಠರದ ನಾಲ್ಕು ಭಾಗಗಳು – ಕಾರ್ಡಿಯಾಕ್, ಫಂಡಸ್, ಬಾಡಿ, ಪೈಲೋರಿಕ್
* ಜಠರ ಮತ್ತು ಸಣ್ಣಕರುಳಿನ ನಡುವಿನ ರಚನೆಯನ್ನು “ಡಿಯೋಡಿನಮ್” ಎಂದು ಹೆಸರು.
* ‘ಡಿಯೋಡಿನಮ್’ ಇದು ಆಹಾರದೊಂದಿಗೆ ಪಿತ್ತರಸ ಮತ್ತು ಮೇದೋಜಿರಕ ರಸ ಬಂದು ಸೇರುವ ಭಾಗವಾಗಿದೆ.
• ಯಕೃತು
* ಯಕೃತ್ತು ಮಾನವನ ಅತ್ಯಂತ ಒಳಅಂಗ.
* ಇದು ವಪೆಯ ಕೆಳಗೆ ಜಠರದ ಬಲಭಾಗದ ಮುಂದೆ ಇದೆ.
* ಯಕೃತ್ತು ತಿಳಿಕಂದು ಬಣ್ಣ ಅಥವಾ ಚಾಕೋಲೇಟ್ ಬಣ್ಣದಿಂದ ಕೂಡಿದೆ.
* ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಕೃತ್ತು.
* ಕತ್ತರಿಸಿದರೂ ಮತ್ತೆ ಬೆಳೆಯುವ ಅಂಗವಾಗಿದೆ.
* ಚಯಾಪಚಯ ಕ್ರಿಯೆಯ ಗಿರಣಿ ಎಂದು ಕರೆಯಲ್ಪಡುವ ಗ್ರಂಥಿಯಾಗಿದೆ.
* ಯಕೃತ್ತಿನ ಮೂಲ ಘಟಕ – ಲಿವರ್ ಲೊಬ್ಯೂಲ್ಸ್
* ವಿಷ ಪದಾರ್ಥಗಳನ್ನು ನಮ್ಮ ರಕ್ತದಿಂದ ಬೇರ್ಪಡಿಸುವ ಅಂಗವಾಗಿದೆ.
* ಇದು ವಯಸ್ಸಾದ,ಶಿಥಿಲಗೊಂಡ ಕೆಂಪುರಕ್ತಕಣ(ಆರ್.ಬಿ.ಸಿ) ಮತ್ತು ಬಿಳಿರಕ್ತಕಣ(ಡಬ್ಲ್ಯೂಬಿಸಿ)ಗಳನ್ನು ನಾಶ ಪಡಿಸುವ ಗ್ರಂಥಿಯಾಗಿದೆ.
* ಕೊಬ್ಬಿನಲ್ಲಿ ಕರಗುವ ವಿಟಮಿನ್‍ಗಳಾದ ಎ.ಡಿ,ಇ, ಮತ್ತು ಕೆ ಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ.
• ಪಿತ್ತಕೋಶ
*ಯಕೃತ್ತಿನ ಒಳಗೆ ಇರುವ ಚಿಕ್ಕ ಅಂಗವೇ “ ಪಿತ್ತಕೋಶ”
* ಪಿತ್ತಕೋಶವು ‘ಪಿತ್ತರ¸’Àವನ್ನು ಸ್ರವಿಸುತ್ತದೆ. ಇದರಲ್ಲಿ ಯಾವುದೇ ಕಿಣ್ವಗಳಿಲ್ಲ. ಆದರೆ ಜೀರ್ಣಕ್ರಿಯೆಯಲ್ಲಿ ಇದು “ಎಮಲ್ಸೀಕರಣವನ್ನು” ಉಂಟುಮಾಡುತ್ತದೆ.
• ಮೆದೋಜಿರಕಾಂಗ
* ಜಠರದ ಕೆಳಭಾಗದಲ್ಲಿ ಕಂಡುಬರುವ ಎಲೆಯಾಕಾರದ ಜೀಣಾಂಗವನ್ನು ‘ಮೆದೋಜೀರಕಾಂಗ’ ಎಂದು ಹೆಸರು.
*ಇದು ನಮ್ಮ ದೇಹದ ಸಂಕೀರ್ಣ ಗ್ರಂಥಿಯಾಗಿದೆ.
* ಇದರಲ್ಲಿ ಎರಡು ಭಾಗಗಳಿವೆ. ನಾಳಭಾಗ ಮತ್ತು ನಿರ್ನಾಳ ಭಾಗ
* ಮೆದೋಜೀರಕಾಂಗದ ನಾಳಭಾಗದಲ್ಲಿ “ಮೆದೋಜೀರಕ ರಸ” ಸ್ರವಿಕೆಯಾಗುತ್ತದೆ. ಇದರಲ್ಲಿ ಎರಡು ಕಿಣ್ವಗಳಿವೆ. ‘ಮೆದೋಜೀರಕ ಅಮೈಲೇಸ್’ ಮತ್ತು ‘ಮೆದೋಜೀರಕ ಲಿಪೇಸ್’.ಮೆದೋಜೀರಕ ಅಮೈಲೆಸ್ ಕಿಣ್ವವು ಆಹಾರದಲ್ಲಿರುವ ಪಿಷ್ಠವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ. ಮೇದೋಜೀರಕ ಲಿಪೇಸ್ ಕಿಣ್ವವು ಸಂಕೀರ್ಣ ಮೇದಸ್ಸನ್ನು ಸರಳ ಮೇದಸ್ಸಾಗಿ ಪರಿವರ್ತಿಸುತ್ತದೆ.
* ಮೆದೋಜೀರಕಾಂಗದಿಂದ ಸ್ರವಿಸಲ್ಪಡುವ ಹಾರ್ಮೋನುಗಳು – ಗ್ಲೂಕಗಾನ್ ಮತ್ತು ಇನ್ಸುಲಿನ್
• ಸಣ್ಣಕರುಳು
* ಸಣ್ಣಕರುಳಿನಲ್ಲಿ ಜಠರದಲ್ಲಿ ಜೀರ್ಣವಾದ ಆಹಾರವನ್ನು ಹೀರಲು ಇರುವ ರಚನೆಗಳನ್ನು “ವಿಲ್ಲೈ” ಎಂದು ಕರೆಯುತ್ತಾರೆ.
* ಸಣ್ಣ ಕರುಳಿನ ಮೂರು ಭಾಗಗಳು ಮತ್ತು ಅವುಗಳ ಉದ್ದ
ಎ. ಡ್ಯುಯೋಡಿನಂ – 25 ಸೆಂ.ಮೀ
ಬಿ. ಜೆಕುನಂ – 2.5 ಮೀ
ಸಿ. ಇಲಿಯಂ – 3.6 ಮೀ
* ಸಣ್ಣ ಕರುಳಿನ ದಪ್ಪ – 1 ಇಂಚು (2.5 ಸೆಂ.ಮೀ)
* ಸಣ್ಣ ಕರುಳು ಮತ್ತು ದೊಡ್ಡ ಕರುಳು ಸೇರುವ ಜಾಗದಲ್ಲಿರುವ ಬೆರಳಿನಂತಹ ರಚನೆಯನ್ನು “ಅಪೆಂಡಿಕ್ಸ್” ಎಂದು ಹೆಸರು.
* ಸಣ್ಣಕರುಳು ಮತ್ತು ದೊಡ್ಡ ಕರುಳುಗಳ ನಡುವಿನ ಕವಾಟ -“ಐಲಿಯೋ ಸೀಕಲ್ ವ್ಯಾಲ್ಟ್”.
• ದೊಡ್ಡಕರುಳು
* ನೀರು ಮತ್ತು ಖನಿಜಾಂಶಗಳು ಜೀಣಾಂಗವ್ಯೂಹದ ಈ ಭಾಗದಲ್ಲಿ ಹೀರಲ್ಪಡುತ್ತವೆ.
* ದೊಡ್ಡ ಕರುಳಿನ ಭಾಗಗಳು – ಸೀಕಂ, ಕೋಲಾನ್, ರೆಕ್ಟಮ್
* ಪಚನವಾಗದ ಆಹಾರವು ದೊಡ್ಡ ಕರುಳನ್ನು ಸೇರುತ್ತದೆ. ಮಲದಲ್ಲಿರುವ ನೀರು ದೊಡ್ಡ ಕರುಳಿನಲ್ಲಿ ಮರುಹೀರಿಕೆಯಾಗಿ, ಗುದದ್ವಾರದ ಮೂಲಕ ಮಲ ವಿಸರ್ಜನೆಯಾಗುತ್ತದೆ.