Current AffairsSpardha Times

40 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ

Share With Friends

ಮಹತ್ವದ ರಷ್ಯಾ ಭೇಟಿಯನ್ನು ಮುಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಆಸ್ಟ್ರಿಯಾಗೆ ಭೇಟಿ ನೀಡಿದ್ದಾರೆ. ಈ ಮೂಲಕ ನಲವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತದ ಪ್ರಧಾನ ಮಂತ್ರಿ ಆಸ್ಟ್ರಿಯಾಗೆ ಭೇಟಿ ನೀಡಿದಂತಾಗಿದೆ. 40 ವರ್ಷಗಳ ಹಿಂದೆ ಅಂದರೆ 1983 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದ್ದರೂ ಹೊರತುಪಡಿಸಿದರೆ ಇದುವರೆಗೂ ಯಾವೊಬ್ಬ ಪ್ರಧಾನಮಂತ್ರಿಗಳು ಆಸ್ಟ್ರಿಯಾಗೆ ಭೇಟಿ ನೀಡಿರಲಿಲ್ಲ.

ಈ ಮೊದಲು 2021ರಲ್ಲಿ, ಗ್ಲಾಸ್ಗೋದಲ್ಲಿ ಪ್ರಧಾನಿ ಮೋದಿ ಅವರು ಈಗ ದೇಶದ ವಿದೇಶಾಂಗ ಸಚಿವರಾಗಿರುವ ಆಗಿನ ಆಸ್ಟ್ರಿಯಾದ ಚಾನ್ಸೆಲರ್‌ ಅಲೆಕ್ಸಾಂಡರ್‌ ಶಾಲೆನ್‌ಬರ್ಗ್‌ ಅವರೊಂದಿಗೆ ಚರ್ಚೆ ನಡೆಸಿದ್ದರು.

ಮೋದಿ ಆಸ್ಟ್ರಿಯಾ ಭೇಟಿ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಮಾರ್ಗಗಳನ್ನು ಮತ್ತು ಅನೇಕ ಭೌಗೋಳಿಕ ರಾಜಕೀಯ ಸವಾಲುಗಳ ಕುರಿತು ನಿಕಟ ಸಹಕಾರವನ್ನು ಕೋರಲಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋದಿ, “ವಿಯೆನ್ನಾಕ್ಕೆ ಬಂದಿಳಿದಿದೆ. ಆಸ್ಟ್ರಿಯಾದ ಈ ಭೇಟಿ ಒಂದು ವಿಶೇಷವಾಗಿದೆ. ನಮ್ಮ ರಾಷ್ಟ್ರಗಳು ಪರಸ್ಪರ ಬದ್ಧತೆ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ. ಚಾನ್ಸೆಲರ್ ಅವರೊಂದಿಗಿನ ಮಾತುಕತೆಗಳು, ಭಾರತೀಯ ಸಮುದಾಯದೊಂದಿಗೆ ಸಂವಾದಗಳು ಸೇರಿದಂತೆ ಆಸ್ಟ್ರಿಯಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಮೋದಿ ಅವರನ್ನು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಇದು 40 ವರ್ಷಗಳ ನಂತರ ಆಸ್ಟ್ರಿಯಾಕ್ಕೆ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ,

ಎಕ್ಸ್‌ ಪೋಸ್ಟ್‌ನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು, “ಉಭಯ ದೇಶಗಳು ಈ ವರ್ಷ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದರಿಂದ, ಈ ಮಹತ್ವದ ಭೇಟಿಯು ಭಾರತ-ಆಸ್ಟ್ರಿಯಾ ಬಾಂಧವ್ಯಕ್ಕೆ ಹೊಸ ವೇಗ ನೀಡುತ್ತದೆ ಎಂದಿದ್ದಾರೆ.

ಮೋದಿ ಅವರು ಆಸ್ಟ್ರಿಯಾ ಗಣರಾಜ್ಯದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಭೇಟಿ ಮಾಡಲಿದ್ದು, ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಆಸ್ಟ್ರಿಯಾಕ್ಕೆ ಭೇಟಿ ನೀಡುವ ಮೊದಲು, ಮೋದಿ ಅವರು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯ ಹಂಚಿಕೆಯ ಮೌಲ್ಯಗಳು ಉಭಯ ದೇಶಗಳು ಸದಾ ನಿಕಟ ಪಾಲುದಾರಿಕೆಯನ್ನು ನಿರ್ಮಿಸುವ ತಳಹದಿಯನ್ನು ರೂಪಿಸುತ್ತವೆ ಎಂದಿದ್ದರು.

Leave a Reply

Your email address will not be published. Required fields are marked *

error: Content Copyright protected !!