Job AlertSpardha Times

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 540 ಅರಣ್ಯ ರಕ್ಷಕರ ನೇಮಕಾತಿ

Share With Friends

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಒಟ್ಟು 540 (506 ಸರ್ಕಾರವು ಅನುಮತಿಸಿದ ಹುದ್ದೆ +34 ಹಿಂದಿನ ಅಧಿಸೂಚನೆಯಲ್ಲಿನ ಹಿಂಬಾಕಿ ಹುದ್ದೆಗಳು)) ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ಅರಣ್ಯ ರಕ್ಷಕ) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಡಿಸೆಂಬರ್ 01 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಡಿಸೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಅರ್ಹತೆ, ವೇತನ ಶ್ರೇಣಿ, ಇತರೆ ಮಾಹಿತಿ ಈ ಕೆಳಕಂಡಂತಿದೆ.

ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕಾರ ಆರಂಭ ದಿನಾಂಕ : 01-12-2023
ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 30-12-2023

ಶೈಕ್ಷಣಿಕ ವಿದ್ಯಾರ್ಹತೆ :
ಅಧಿಸೂಚನೆಯ ದಿನಾಂಕದೊಳಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಪಾಸ್‌ ಮಾಡಿರಬೇಕು. ಅರ್ಜಿ ಸಲ್ಲಿಕೆ ವೇಳೆ ಆನ್‌ಲೈನ್‌ನಲ್ಲಿ ಅಂಕಪಟ್ಟಿಗಳ ಅಪ್‌ಲೋಡ್‌ ಮಾಡಬೇಕಿರುತ್ತದೆ.

ವಯೋಮಿತಿ :
ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ SC / ST / CAT-1 ಅಭ್ಯರ್ಥಿಗಳಿಗೆ 32 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ.

ಬೆಸ್ಕಾಂನಲ್ಲಿ 400 ವಿವಿಧ ಹುದ್ದೆಗಳ ನೇಮಕಾತಿ

ವೇತನ ಶ್ರೇಣಿ :
ಅರಣ್ಯ ರಕ್ಷಕ ಹುದ್ದೆಗಳಿಗೆ ವೇತನ ಶ್ರೇಣಿ ರೂ.18,600 – 32,600 ವರೆಗೆ ನೀಡಲಾಗುತ್ತದೆ. ಅಲ್ಲದೇ ಪಿಂಚಣಿ ಸೌಲಭ್ಯ, ವಿಶೇಷ ಭತ್ಯೆಗಳನ್ನು ನೀಡಲಾಗುತ್ತದೆ.

ನೇಮಕಾತಿ ಪ್ರಕ್ರಿಯೆ ಹೇಗೆ..?
ಅರಣ್ಯ ರಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದವರ ವಿದ್ಯಾರ್ಹತೆ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಮತ್ತು ವೃತ್ತವಾರು ಹುದ್ದೆಗಳಿಗೆ ಅನುಗುಣವಾಗಿ 1:20 ಅನುಪಾತದಲ್ಲಿ ದೇಹದಾರ್ಢ್ಯತೆ, ದೈಹಿಕ ತಾಳ್ವಿಕೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳಿಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನಿಗದಿಪಡಿಸಿದ ದಿನಾಂಕದಂದು ಈ ಪರೀಕ್ಷೆಗಳಿಗೆ ಪ್ರವೇಶ ಪತ್ರದೊಂದಿಗೆ ಹಾಜರಾಗಬೇಕು. ಈ ಮಾರ್ಗದಲ್ಲಿ ಆಯ್ಕೆ ಪ್ರಕ್ರಿಯೆಗಳು ಇರುತ್ತವೆ.

ಪ್ರಚಲಿತ ಘಟನೆಗಳ ಕ್ವಿಜ್ – 13 ಮತ್ತು 14-12-2023

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://kfdrecruitment.in/

👉 ಅಧಿಸೂಚನೆ : 👆

Leave a Reply

Your email address will not be published. Required fields are marked *

error: Content Copyright protected !!