ಕರ್ನಾಟಕ ಇತಿಹಾಸ : ಗಂಗರು
ಗಂಗರು ಸುಮಾರು 4ನೇ ಶತಮಾನದಿಂದ 10ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). 8ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು.
ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ. ಗಂಗರ ಮನೆತನದ ಮೊದಲ ಅರಸನಾದ ಕೊಂಗಣಿವರ್ಮ ಮಾಧವನು ಕೋಲಾರವನ್ನು ತನ್ನ ಮೊದಲ ರಾಜಧಾನಿಯಾಗಿ ಮಾಡಿ 20 ವರುಷ ರಾಜ್ಯವನ್ನು ಆಳಿದನು. ಅವರ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಗಂಗಾವತಿ ಎಂದು ಕರೆಯಲಾಗಿದ್ದು ಈಗಿನ ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಹಾಗು ಬೆಂಗಳೂರನ್ನು ಆವರಿಸಿತ್ತು. ಗಂಗರು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕೆಲ ಪ್ರದೇಶಗಳಿಗೆ ರಾಜ್ಯವನ್ನು ವಿಸ್ತರಿಸಿದ್ದರು.
ಹರಿವರ್ಮನು (ಕ್ರಿ.ಶ 390) ತಲಕಾಡನ್ನು ರಾಜಧಾನಿಯಾಗಿ ಮಾಡಿದನು. ಗಂಗರ ಪ್ರಸಿದ್ದ ಅರಸ ದುರ್ವಿನಿತ (555-605) ಸಂಗೀತ, ನೃತ್ಯ, ಆಯುರ್ವೇದ ಮತ್ತು ಆನೆಗಳ ಪಳಗಿಸುವಿಕೆಯಲ್ಲಿ ಪಾರಂಗತನಾಗಿದ್ದನು. ಬುದ್ಧಿವಂತಿಕೆ ಮತ್ತು ಸಮಾನತೆಗೆ ಹೆಸರುವಾಸಿಯಾದ ಯುಧಿಷ್ಠಿರ ಮತ್ತು ಮನು ಚಕ್ರವರ್ತಿಗಳಿಗೆ ಇವರನ್ನು ಹೋಲಿಸಿ ಕಾವ್ಯಗಳನ್ನು ರಚಿಸಿದ್ದಾರೆ. ಇವರಿಗೆ ಅಹೀತ ಅನೀತ, ಧರ್ಮ ಮಹಾರಾಜಾಧಿರಾಜ, ಅವನೀತಸಾರ ಪ್ರಜಾಲಯ, ಕಮಲೋಧರ ಎಂಬ ಬಿರುದುಗಳಿದ್ದವು.
ತಲಕಾಡಿನ ಗಂಗರ ಆಡಳಿತವು ಅರ್ಥಶಾಸ್ತ್ರದ ತತ್ವಗಳಿಂದ ಪ್ರಭಾವಿತವಾಗಿದ್ದು ರಾಜ್ಯವನ್ನು ರಾಷ್ಟ್ರ, ವಿಷಯ (1000 ಹಳ್ಳಿಗಳಿಂದ ಕೂಡಿದ್ದು) ಮತ್ತು ದೇಶ ವಾಗಿ ವಿಂಗಡಿಸಲಾಗಿತ್ತು. 8 ನೆ ಶತಮಾನದಲ್ಲಿ ಸಂಸ್ಕೃತದ “ವಿಷಯ” ಪದವನ್ನು ಕನ್ನಡದ “ನಾಡು” ಪದಕ್ಕೆ ಬದಲಿಸಲಾಯಿತು.ಶಾಸನಗಳು ಪ್ರಮುಖ ಆಡಳಿತ ಅಂಕಿತಗಳಾದ ಸರ್ವಾಧಿಕಾರಿ, ಶ್ರೀಭಂಡಾರಿ, ಸಂಧಿವಿರ್ಗ್ರಹಿ, ಮಹಾಪ್ರಧಾನ ಮತ್ತು ದಂಡನಾಯಕ ಬಗೆಗೆ ಬೆಳಕು ಚೆಲ್ಲುತ್ತವೆ.
ತಲಕಾಡಿನ ಗಂಗರು ಅವರ ಕಾಲದ ಎಲ್ಲ ಪ್ರಮುಖ ಧರ್ಮಗಳಿಗೆ (ಜೈನ ಧರ್ಮ, ಹಿಂದೂ ಪಂಥಗಳಾದ ಶೈವ, ವೈದಿಕ ಬ್ರಾಹ್ಮಣ, ಶೈವ) ಪ್ರೋತ್ಸಾಹ ನೀಡಿದರು. ಜೈನ ಧರ್ಮವು 8 ನೆ ಶತಮಾನದಲ್ಲಿ ರಾಜ ಶಿವಮಾರ-1 ನ ಆಳ್ವಿಕೆಯಲ್ಲಿ ಬಹಳ ಪ್ರಸಿದ್ದಿ ಗಳಿಸಿದ್ದು ರಾಜನು ಅಸಂಖ್ಯಾತ ಜೈನ ಬಸದಿಗಳನ್ನು ಕಟ್ಟಿಸಿರುವುದಕ್ಕೆ ಸಾಕ್ಷಿಯಾಗಿದೆ. ಮಹಾರಾಜ 2ನೇ ಬುಟುಗ ಮತ್ತು ಚಾವುಂಡರಾಯರು ಕಟ್ಟಾ ಜೈನರು ಎಂದೆನ್ನಲು ಅವರು ಕಟ್ಟಿಸಿದ ಗೊಮ್ಮಟೇಶ್ವರ ಏಕಶಿಲೆಯೇ ಸಾಕ್ಷಿ. ಈ ಸಾಮ್ರಾಜ್ಯದ ಆರಂಭಿಕ ಬರಹಗಾರ ರಾಜ ದುರ್ವಿನಿತ ಎಂದು ಕವಿರಾಜಮಾರ್ಗ (ಕ್ರಿ.ಶ 850) ಹೇಳುತ್ತದೆ. ಚಾವುಂಡರಾಯರು ಕನ್ನಡದ ಮಹಾ ಕವಿ “ರನ್ನ” ನನ್ನು ಆರಂಭಿಕ ಸಾಹಿತ್ಯದ ದಿನಗಳಲ್ಲಿ ಪೋಷಿಸಿದರು. ಗಜಾಷ್ಟಕ (ಆನೆಗಳು ಕುರಿತು ನೂರು ಪದ್ಯಗಳು), ಕನ್ನಡದಲ್ಲಿ ಆನೆ ನಿರ್ವಹಣೆಗಳ ಕುರಿತಾದ ಅಪರೂಪದ ಒಂದು ಪುಸ್ತಕವಾಗಿದ್ದು (ರಾಜ ಶಿವಮಾರ -2 ಕ್ರಿ.ಶ 800 ಬರೆದ ಪುಸ್ತಕ ) ಈಗ ಕಳೆದುಹೋಗಿದೆ ಎಂದು ನಂಬಲಾಗಿದೆ.
➤ ಗಂಗರ ಮೂಲ :
ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷ್ವಾಕು ವಂಶದವರೆಂದು
ಕಣ್ವ ಮೂಲದ ಪ್ರಕಾರ ಇವರು ಕಣ್ವ ವಂಶದವರು ಎಂದು
ತಮಿಳು ಮೂಲ – ಇವರು ಮೂಲತಃ “ ಪೆರೂರು ” ಆಗಿದ್ದು ಕೊಯಮತ್ತೂರು ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ.
ಚೋಳರು ಮತ್ತು ಗಂಗರು ಒಂದೇ ಮೂಲದಿಂದ ಬಂದಂತಹ (ಸೂರ್ಯವಂಶ-ಇಕ್ಷ್ವಾಕು ಕುಲ) ದಾಯಾದಿಗಳಾಗಿದ್ದು, ಮೂಲತಃ ಮೈಸೂರು, ಚಾಮರಾಜನಗರ, ಕೊಯಮತ್ತೂರು ಭಾಗಗಳಲ್ಲಿ ಕಂಡುಬರುವ ಕರ್ನಾಟಕ ಕ್ಷಾತ್ರ ಪರಂಪರೆಯ ಕ್ಷತ್ರಿಯ ಸಮುದಾಯದ ಉಪ ಪಂಗಡವಾದ ಸೂರ್ಯವಂಶಿಿ ತೊರೆಯರ್ ಸಮುದಾಯದ ರಕ್ಕಸ ಕುಲದವರು ಎಂಬ ಅಭಿಪ್ರಾಯವಿದೆ. ರಕ್ಕಸ ಗಂಗ ಎಂಂಬುದು ಇವರ ಬಿರುದಾಗಿದೆ.
ಕೊಂಗನಾಡಿನಿಂದ ಬಂದ ಕಾರಣ ಕೊಂಗರು ಎಂಬುದು ಗಂಗರು ಎಂದಾಗಿದೆ ಎಂಬುದಾಗಿಯೂ ಹೇಳಲಾಗುತ್ತದೆ. ಈ ಮನೆತನದ ಮೂಲಪುರುಷನ ಹೆಸರು ಕೊಂಗುಣಿವರ್ಮ ಎಂಬುದು ಗಮನಾರ್ಹ.
ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು – ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .
ಗಂಗಟಿಕರು: ಗಂಗ ಸಾಮ್ರಾಜ್ಯದ ತಿರುಳು ಭಾಗದಲ್ಲಿ ವಾಸಿಸುತ್ತಿದ್ದ, ಬಹುಸಂಖ್ಯಾತ ರೈತಾಪಿ ವರ್ಗ ( ಒಕ್ಕಲಿಗರು). ಎಡ್ಗರ್ ಥರ್ಸ್ಟನ್ ರವರು ತಮ್ಮ “ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು” ಕೃತಿಯಲ್ಲಿ ‘ದಕ್ಷಿಣ ಗಂಗೆ’ ಎಂದು ಹೆಸರಾದ ಕಾವೇರಿ ನದಿಯ ತಟದಲ್ಲಿ ವಾಸಿಸುತ್ತಿದ್ದರಿಂದ ಇವರಿಗೆ ಗಂಗಟಕಾರ ಎಂಬ ಹೆಸರುು ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
➤ ಪ್ರಸಿದ್ಧ ರಾಜರುಗಳು :
1.ದಡಿಗ ಅಥವಾ ಕೊಂಗುಣೀವರ್ಮ, (ಕ್ರಿ.ಶ. 325-350)-ಇವನು ಗಂಗ ವಂಶದ ಸ್ಥಾಪಕ
2. ಮಾಧವ, (ಕ್ರಿ.ಶ. 350-375)
3. ಆರ್ಯವರ್ಮ, (ಕ್ರಿ.ಶ. 375-400)
4. ಮಾಧವ-3, (ಕ್ರಿ.ಶ. 440-469)
5. ಅವಿನೀತ, (ಕ್ರಿ.ಶ. 469-529)
6. ದುರ್ವಿನೀತ, (ಕ್ರಿ.ಶ. 529-579)
7. ಶ್ರೀವಿಕ್ರಮ, (ಕ್ರಿ.ಶ. 629-654)
8. ಭೂವಿಕ್ರಮ, (ಕ್ರಿ.ಶ. 654-679)
9. ಶಿವಮಾರ-1, (ಕ್ರಿ.ಶ. 679-725) 10. ಶ್ರೀಪುರುಷ, (ಕ್ರಿ.ಶ. 725-788)
11. ಸೈಗೊಟ್ಟ ಶಿವಮಾರ, (ಕ್ರಿ.ಶ. 788-816)
12. ರಾಚಮಲ್ಲ, (ಕ್ರಿ.ಶ. 816-843)
13. ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870)
14. ರಾಚಮಲ್ಲ-2, (ಕ್ರಿ.ಶ. 870-919)
15. ಎರೆಗಂಗ
16. ಬೂತುಗ-2, ಕ್ರಿ.ಶ. 936-961)
17. ಮಾರಸಿಂಹ-2, (ಕ್ರಿ.ಶ. 963-974)
18. ರಾಚಮಲ್ಲ-3, (ಕ್ರಿ.ಶ. 974-999) 19. ರಾಚಮಲ್ಲ-4,
# ಪ್ರಮುಖ ರಾಜರುಗಳ ಹಿನ್ನೆಲೆ :
➤ ದಡಿಗ ಅಥವಾ ಕೊಂಗುಣಿ ವರ್ಮ :
ಇವನು ಗಂಗ ವಂಶದ ಸ್ಥಾಪಕ, “ ಕುವಲಾಲ ಅಥವಾ ಕೋಲಾರ ” ಇವನ ರಾಜಧಾನಿ . ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .’ ಈತನ ಗುರುವಿನ ಹೆಸರು – ಸಿಂಹ ನಂದಿ ( ಜೈನಗುರು )
ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ ದುಂಡಲಿ ” ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು .
➤ ಒಂದನೇ ಮಾಧವ :
ದಡಿಗನ ನಂತರ ಅಧಿಕಾರಕ್ಕೆ ಬಂದವನು, ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು ಈತ ರಚಿಸಿದ ಕೃತಿ – “ ದತ್ತ ಸೂತ್ರ ”, ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು.
➤ ಮೂರನೇ ಮಾಧವ :
ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ . ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ , ವಿಜಯ ಕೀರ್ತಿ -ಅವನ ದೀಕ್ಷಾ ಗುರುಗಳಾಗಿದ್ದರು .
➤ ಅವನೀತ :
ಈತ ಮೂರನೇ ಮಾಧವನ ಮಗ, ಈತ ಶಿವನ ಆರಾಧಕನಾಗಿದ್ದನು . ಈತ ಸರ್ವಧರ್ಮ ಸಮನ್ವಯಿಯಾಗಿದ್ದನು, ಇತನನ್ನ ಶಾಸನಗಳು “ ಹರ ಚರಣಾರ ಎಂದ ಪ್ರಣಿಪಾತ ” ಎಂದು ಉಲ್ಲೇಕಿಸಿದೆ.
➤ ದುರ್ವಿನೀತ :
ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ, ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ. ಈತ ವೈಷ್ಣವ ಮತಾವಲಂಬಿಯಾಗಿದ್ದನು. ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು, ಇತ “ಗುಣಾಡ್ಯನ ” “ ವಡ್ಡ ಕಥಾವನ್ನು ” ಪೈಶಾಚಿ ಭಾಷೆಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು, ಆತನ ಗುರು – ಪುಷ್ಯಪಾದ ಅಥವಾ ದೇವಾನಂದೀತನ ಬಿರುದುಗಳು – ಅವನೀತ ಸ್ತರ ಪೂಜಾಲಾಯ . ಅಹೀತ , ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ, ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ .
➤ ಶ್ರೀಪುರಷ :
ದುರ್ವಿನೀತ ನಂತರ ಅಧಿಕಾರಕ್ಕೆ ಬಂದವನು, ಈತ “ ಗಜಶಾಸ್ತ್ರ ” ಎಂಬ ಕೃತಿಯನ್ನ ರಚಿಸಿದರು, ಈತ ರಾಜಧಾನಿಯನ್ನು ಮಾಕುಂದದಿಂದ – ಮಾನ್ಯಪರಕ್ಕೆ ಬದಲಾಯಿಸಿದನು, ಒಂದನೇ ಶಿವಮಾರನಿಗೆ – ದ್ವನಿ ಮಹೇಂದ್ರ ಎಂಬ ಬಿರುದಿತ್ತು, “ತುಂಡಕ ಕದನ ” ದಲ್ಲಿ ಪಲ್ಲವರನ್ನು ಸೋಲಿಸಿದವನು . ಇವನ ಕಾಲದಲ್ಲಿ ಗಂಗರಾಜ್ಯ “ಶ್ರೀರಾಜ್ಯ ” ಎಂದು ಕರೆಸಿಕೊಂಡಿತು . . ರಾಜಕೇಸರಿ , ಪೆರ್ಮಾಡಿ , ಶ್ರೀವಲ್ಲಭ , ಬೀಮಕೋಪ ಈತನ ಬಿರುದುಗಳು.
➤ ಎರಡನೇ ಶಿವಮಾರ :
ಈತನ ಇನ್ನೊಂದು ಹೆಸರು – ಸೈಗೋತ, ಈತನ ಕೃತಿಗಳು – ಗಜಾಷ್ಟಕ, ಸೇತುಬಂಧ ಹಾಗೂ ಶಿವಮಾರ ತರ್ಕ, ಈತ ಶ್ರವಣಬೆಳಗೊಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು, ಈತನ ತಂದೆಯ ಹೆಸರು – ಶ್ರೀಪುರುಷ
➤ ಎರಡನೇ ಬೂತುಗ :
ಈತ “ ತತ್ಕೋಳಂ ಕದನದಲ್ಲಿ ” ಚೋಳರ ರಾಜಾದಿತ್ಯನನ್ನು ಕೊಂದನು .
ಆತನ ಬಿರುದು – ಮಹಾರಾಜಾದಿರಾಜ
➤ ಮಂತ್ರಿ ಚಾವುಂಡರಾಯ :
ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ, ಈತ ಅಜ್ಞಾತಸೇನಾ ಭಟ್ಟಾರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ, ಈತನ ಬಿರುದು – ಸತ್ಯವಿದಿಷ್ಠಿರ, ಈತನ ಕೃತಿಗಳು : ಸಂಸ್ಕೃತದಲ್ಲಿ “ಚರಿತ್ರಾಸಾರ ” ಕನ್ನಡದಲ್ಲಿ ಚಾವುಂಡರಾಯ ಪುರಾಣ ಅಥವಾ ಅಥವಾ “ ತ್ರಿಷಷ್ಠಿ ಲಕ್ಷಣ ಮಹಾಪುರಾಣ ” ಹಾಗೂ ಲೋಕೋಪಾಕರ ( ವಿಶ್ವಕೋಶ ) ಈತನ ಮೊದಲ ಹೆಸರು – ಚಾವುಂಡರಾಜ, ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು – “ರಾಯ ’
ಚಾವುಂಡರಾಯನ ಮಹಾತ್ಸಾದನೆ -‘ ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ, ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ – ರನ್ನ
ಈತ ಗಂಗರ ಅರಸ 2ನೇ ಮಾರಸಿಂಹ ಆಳ್ವಿಕೆಯಲ್ಲಿ – ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ
4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು – ಸಮರ ಪರಶುರಾಮ, ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ ” ಎಂಬ ಬಿರುದು ಪಡೆದ . ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣಸಂಗ ಸಿಂಗ ” ಎಂಬ ಬಿರುದನ್ನು ಪಡೆದ, ಈತನ ಬಿರುದು – ಭುಜ ವಿಕ್ರಮ , ಸಮರ ದುರಂಧರ, ಈತನ ತಾಯಿ – ಕಾಳಲಾದೇವಿ
ಗೊಮ್ಮಟೇಶ್ವರನನ್ನು ಕೆತ್ತನೆಯ ಮೇಲ್ವಿಚಾರಕ ಶಿಲ್ಪಿ – ಅರಿಪ್ಪಾನೇಮಿ, ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು – ಕ್ರಿ.ಶ.981 – 983, ಈತನ ಇನ್ನೊಂದು ಮಹಾನ್ ಕಾರ್ಯ – ಚಾವುಂಡರಾಯ ಬಸದಿಯ ನಿರ್ಮಾಣ
# ನೆನಪಿಡಲೇಬೇಕಾದ ಅಂಶಗಳು :
➤ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
➤ಗಂಗರ ರಾಜ್ಯ ಕೋಲಾರ , ತುಮಕೂರು , ಬೆಂಗಳೂರು , ಮಂಡ್ಯ ಹಾಗೂ ಮೈಸೂರನ್ನ ಒಳಗೊಂಡಿತ್ತು .
➤ಗಂಗರು ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಾಂತರಾಗಿದ್ದರು .
➤“ಕೋಲಾರ ” ಅಥವಾ “ ಕುವಲಾಲ ” ಇವರ ಆರಂಭದ ರಾಜಧಾನಿ
➤ಗಂಗರ ಎರಡನೇ ರಾಜಧಾನಿ “ ತಲಕಾಡು “
➤ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
➤ಗಂಗರಲ್ಲಿ ಪ್ರಸಿದ್ದನಾದ ದೊರೆ “ ಶ್ರೀ ಪುರುಷ”
➤ರಾಚಮಲ್ಲನ ಮಂತ್ರಿಯಾದ “ಚಾವುಂಡ ರಾಯನು ” ಶ್ರವಣ ಬೆಳಗೋಳದಲ್ಲಿ ಕ್ರಿ.ಶ.980 ರಲ್ಲಿ “ಗೊಮ್ಮಟೇಶ್ವರನ ” ಏಕಶಿಲಾ ಮೂರ್ತಿಯನ್ನು ಕೆತ್ತಿಸಿದನು .
➤ಗಂಗ ಮನೆತನವು ಕ್ರಿ.ಶ.1004ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
ಚನ್ನಪಟ್ಟಣ್ಣದ “ ಮಾಕುಂದ ” ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ “ ಮನ್ನೇಯ ” ಇವರ ಿತರ ರಾಜಧಾನಿ .
➤ಗಂಗರನ್ನು “ ತಲಕಾಡಿನ ಗಂಗರು ” ಎಂದು ಪ್ರಸಿದ್ದರಾಗಿದ್ದರು .
➤ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ”
➤ಗಂಗರು ಆಳಿತದ ಪ್ರದೇಶವನ್ನು “ ಗಂಗವಾಡಿ ಅಥವಾ ಗಂಗನಾಡು ” ಎಂದು ಕರೆಯುತ್ತಿದ್ದರು .
➤ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ .
➤ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 – 758 ರವರೆಗೆ ಆಳ್ವಿಕೆ ಮಾಡಿದರು .
➤ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು .
➤ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು .
➤“ತಲಕಾಡು ” ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .
# ಗಂಗರ ಆಶ್ರಯದಲ್ಲಿ ಬರೆಯಲ್ಪಟ್ಟ ಮಹಾ ಕೃತಿಗಳು :
➤ದತ್ತಕ ಸೂತ್ರ – ರಾಜಾ 2ನೇ ಮಾಧವ
➤ಶೂದ್ರಂತ ಹಾಗೂ ಹರಿವಂಶ – ಗುಣವರ್ಮ
➤ಛಂದೋಬುದಿ – 1ನೇ ನಾಗವರ್ಮ
➤ಗಜಾಷ್ಟಕ , ಸೇತುಬಂಧ ,ಶಿವಮಾರ ತರ್ಕ – 2 ನೇ ಶಿವಮಾರ
➤ಚಂದ್ರ ಪ್ರಭಾ ಪುರಾಮ – ವೀರನಂದಿ
➤ಬೃಹತ್ ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದ ಹಾಗೂ ಭಾರವಿಯ ಕಿರತಾರ್ಜುನಿಯ ಕೃತಿಗೆ ಭಾಷ್ಯ – ದುರ್ವೀನಿತ
➤ಗಜಶಾಸ್ತ್ರ – ಶ್ರೀಪುರುಷ