Latest UpdatesGK

ಗೋಕಾಕ ಚಳುವಳಿ

Share With Friends

✦ 1980ರ ದಶಕವು ಕನ್ನಡ ಭಾಷೆಯ ಅಸ್ತಿತ್ವಕ್ಕೆ ನಡೆದ ಹೋರಾಟದ ಕಾಲ. 1982 ರಲ್ಲಿ ಗೋಕಾಕ ವರದಿಯ ಅನುಷ್ಠಾನಕ್ಕಾಗಿ ಒಂದು ನಿರ್ಣಾಯಕ ಚಾರಿತ್ರಿಕ ಹೋರಾಟ ಪ್ರಾರಂಭವಾಯಿತು. ಇಡೀ ಕನ್ನಡ ಸಮುದಾಯ ಅಭೂತಪೂರ್ವ ರೀತಿಯಲ್ಲಿ ಈ ಹೋರಾಟವನ್ನು ನಡೆಸಿತು.

✦ ಕರ್ನಾಟಕದಲ್ಲಿದ್ದ ಭಾಷಾ ಅಲ್ಪಸಂಖ್ಯಾತರು ಕನ್ನಡವನ್ನು ಕಡ್ಡಾಯವಾಗಿ ಕಲಿಯದೆ ಅವರ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುತ್ತೇವೆಂಬ ಹಟಕ್ಕೆ ಬಿದ್ದರು. ಅಂದಿನ ಮುಖ್ಯಮಂತ್ರಿಗಳಾದ ಆರ್ ಗುಂಡುರಾಯರು ಉಡುಪಿಗೆ ಹೋಗಿದ್ದ ಸಂಧರ್ಭದಲ್ಲಿ ಅಲ್ಲಿಯ ಮಠಾಧಿಪತಿಗಳು ಸಂಸ್ಕøತಕ್ಕೆ ಪ್ರಾಶಸ್ತ್ಯ ಕೊಡಬೇಕೆಂದು ಒತ್ತಾಯಿಸಿದರು.

✦ ಇದರ ಪರಿಣಾಮವಾಗಿ ಶಿಕ್ಷಣ ಯಾವ ಮಾಧ್ಯಮದಲ್ಲಿ ಇರಬೇಕು ಎನ್ನುವ ಪ್ರಶ್ನೆಯನ್ನು ಬಿಟ್ಟು ಶಿಕ್ಷಣದಲ್ಲಿ ಭಾಷೆಗಳ ಸ್ಥಾನಗಳು ಹೇಗಿರಬೇಕೆಂದು ನಿರ್ಧರಿಸಲು ಒಂದು ಸಮಿತಿ ರಚನೆಯಾಯಿತು. ಡಾ. ವಿನಾಯಕ ಕೃಷ್ಣ ಗೋಕಾಕರ ಅಧ್ಯಕ್ಷತೆಯಲ್ಲಿ ಭಾಷಾ ಸಮಿತಿ ರಚನೆಯಾಯಿತು. ಈ ಸಮಿತಿಯು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಮತ್ತು ಕಡ್ಡಾಯ ಮಾಡಬೇಕೆಂದು ಶಿಫಾರಸು ಮಾಡಿತು.

✦ ಈ ಸಮಿತಿಯು ತ್ರಿಭಾಷಾ ಸೂತ್ರಕ್ಕೆ 350 ಅಂಕಗಳನ್ನು ನಿಗದಿಪಡಿಸಿತು. ತ್ರಿಭಾಷಾ ಪರಿಕ್ಷೇಯಲ್ಲಿ ಕನ್ನಡವು 150 ಅಂಕಗಳ ಪ್ರಥಮ ಭಾಷೆ ಆಗಿರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿತು. ಗೊಕಾರ್ ವರದಿಯನ್ನು ಅಂದಿನ ಸರಕಾರ ಒಪ್ಪಲಿಲ್ಲ. ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕದಾದ್ಯಂತ ಬೃಹತ್ ಆಂದೋಲನ ನಡೆಯಿತು.

✦ ಕುವೆಂಪು, ಪಾಟೀಲ ಪುಟ್ಟಪ್ಪ ಮುಂತಾದ ಹಿರಿಯ ಸಾಹಿತಿಗಳು ಈ ಹೋರಾಟಕ್ಕೆ ಬೆಂಬಲವನ್ನು ನೀಡಿದರು. ಅತಿ ದೊಡ್ಡ ಸ್ವರೂಪದಲ್ಲಿ ನಡೆದ ಚಳುವಳಿಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿತು. ವರದಿಯಲ್ಲಿ ಉಲೆಖಿಸಿದ ಪ್ರಕಾರ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನಗಳ ಜೊತೆಗೆ ಮೊದಲ ಭಾಷೆಯ ಸ್ಥಾನವನ್ನು ಕೊಡಲಾಯಿತು.

✦ ಗೋಕಾಕ ಚಳುವಳಿಯ ಪ್ರಮುಖ ಘೋಷಣೆಗಳೆಂದರೆ- ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ, ಏನೇ ಬರಲಿ ಕನ್ನಡ ಇರಲಿ, ಗೋಕಾಕ್ ವರದಿ ಜಾರಿಗೆ ಬರಲಿ, ಕರ್ನಾಟಕದಲ್ಲಿ ಕನ್ನಡದ ಉಸಿರು ತುಂಬಲಿ, ಮುಂತಾದವು.

ಅಸಾಮಾನ್ಯ ವಿಜ್ಞಾನಿ ಸ್ಟೀಫನ್ ಹಾಕಿಂಗ್ , ಅವರ ಸಾಧನೆಗಳೇನು ಗೊತ್ತೇ..?

Leave a Reply

Your email address will not be published. Required fields are marked *

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs