ಪ್ರಮುಖ ಭೌಗೋಳಿಕ ಅನ್ವೇಷಕರು
ಅನ್ವೇಷಣೆಯು ಮಾಹಿತಿ ಅಥವಾ ಸಂಪನ್ಮೂಲಗಳ ಶೋಧನೆಯ ಉದ್ದೇಶಕ್ಕಾಗಿ ಹುಡುಕುವ ಕ್ರಿಯೆ. ಅನ್ವೇಷಣೆಯು ಮಾನವರನ್ನು ಒಳಗೊಂಡಂತೆ, ಎಲ್ಲ ಪ್ರಾಣಿ ಪ್ರಜಾತಿಗಳಲ್ಲಿ ಸಂಭವಿಸುತ್ತದೆ. ಮಾನವ ಇತಿಹಾಸದಲ್ಲಿ, ಅದರ ಅತ್ಯಂತ ನಾಟಕೀಯ ಏರಿಕೆ ಶೋಧನಾ ಯುಗದ ಅವಧಿಯಲ್ಲಿ ಐರೋಪ್ಯ ಅನ್ವೇಷಕರು ವಿವಿಧ ಕಾರಣಗಳಿಗಾಗಿ ಸಮುದ್ರಯಾನ ಮಾಡಿ ಉಳಿದ ಜಗತ್ತಿನ ಬಹುಭಾಗ ನಕ್ಷೆ ತಯಾರಿಸಿದಾಗ ಆಯಿತು. ಆಗಿನಿಂದ, ಬಹುತೇಕವಾಗಿ ಮಾಹಿತಿ ಶೋಧನೆಯ ಗುರಿಹೊಂದಿದ ಶೋಧನಾ ಯುಗದ ನಂತರದ ಪ್ರಮುಖ ಅನ್ವೇಷಣೆಗಳು ಆಗಿವೆ.
# ಮಾನವ ಅನ್ವೇಷಣೆಯ ಗಮನಾರ್ಹ ಅವಧಿಗಳು :
ಫ಼ೀನೀಷಿಯನ್ನರು (ಕ್ರಿ.ಪೂ. 1550– ಕ್ರಿ.ಪೂ. 300) ಮೆಡಿಟರೇನಿಯನ್ ಸಮುದ್ರ ಮತ್ತು ಏಷ್ಯಾ ಮೈನರ್‍ನಾದ್ಯಂತ ವ್ಯಾಪಾರ ನಡೆಸಿದರು. ಆದರೆ ಅವರ ಅನೇಕ ಮಾರ್ಗಗಳು ಇಂದಿಗೂ ಅಜ್ಞಾತವಾಗಿವೆ. ಕೆಲವು ಫ಼ೀನೀಷಿಯನ್ ಹಸ್ತಕೃತಿಗಳಲ್ಲಿ ತವರದ ಉಪಸ್ಥಿತಿಯು ಅವರು ಬ್ರಿಟನ್‍ಗೆ ಪ್ರಯಾಣಿಸಿರಬಹುದು ಎಂದು ಸೂಚಿಸುತ್ತದೆ.
ಸಹಾರಾ ಮರುಭೂಮಿಯನ್ನು ದಾಟಲು ರೋಮನ್ನರು ಅನ್ವೇಷಣೆಗಳನ್ನು ವ್ಯವಸ್ಥೆಗೊಳಿಸಿದರು. ಈ ಎಲ್ಲ ಅನ್ವೇಷಣೆಗಳನ್ನು ಸೈನ್ಯದಳಗಳು ಬೆಂಬಲಿಸಿದವು ಮತ್ತು ಮುಖ್ಯವಾಗಿ ವಾಣಿಜ್ಯ ಉದ್ದೇಶಗಳನ್ನು ಹೊಂದಿದ್ದವು. ಒಂಟೆಯನ್ನು ಬಳಸಿ ಸಾಗಾಟಕ್ಕಾಗಿ ಚಿನ್ನ ತರುವುದು ಅನ್ವೇಷಣೆಗಳ ಮುಖ್ಯ ಕಾರಣಗಳಲ್ಲಿ ಒಂದಾಗಿತ್ತು. ಆಫ಼್ರಿಕಾದ ಪಶ್ಚಿಮ ಮತ್ತು ಪೂರ್ವ ತಟಗಳ ಹತ್ತಿರದ ಅನ್ವೇಷಣೆಗಳನ್ನು ರೋಮನ್ ಹಡಗುಗಳು ಬೆಂಬಲಿಸಿದವು ಮತ್ತು ನೌಕಾ ವಾಣಿಜ್ಯಕ್ಕೆ ಆಳವಾಗಿ ಸಂಬಂಧಿಸಿದ್ದವು. ರೋಮನ್ನರು ಉತ್ತರ ಯೂರೋಪ್‍ನಲ್ಲೂ, ಮತ್ತು ಏಷ್ಯಾದ ಚೀನಾದ ವರೆಗೆ, ಹಲವಾರು ಅನ್ವೇಷಣೆಗಳನ್ನು ವ್ಯವಸ್ಥೆಗೊಳಿಸಿದರು.
ಶೋಧನಾ ಯುಗವು (ಅನ್ವೇಷಣಾ ಯುಗವೆಂದೂ ಪರಿಚಿತವಾಗಿದೆ) ಮಾನವ ಇತಿಹಾಸದಲ್ಲಿ ಭೌಗೋಳಿಕ ಅನ್ವೇಷಣೆಯ ಅತ್ಯಂತ ಮುಖ್ಯ ಅವಧಿಗಳಲ್ಲಿ ಒಂದು. ಅದು 15ನೇ ಶತಮಾನದ ಮುಂಚಿನಲ್ಲಿ ಆರಂಭವಾಯಿತು ಮತ್ತು 17ನೇ ಶತಮಾನದವೆರೆಗೆ ಇತ್ತು. ಆ ಅವಧಿಯಲ್ಲಿ, ಐರೋಪ್ಯರು ಅಮೇರಿಕಾ, ಆಫ಼್ರಿಕಾ, ಏಷ್ಯಾ ಮತ್ತು ಓಷ್ಯಾನಿಯಾದ ವಿಶಾಲ ಪ್ರದೇಶಗಳನ್ನು ಶೋಧಿಸಿದರು ಮತ್ತು/ಅಥವಾ ಅನ್ವೇಷಿಸಿದರು.
# ಇಲ್ಲಿದೆ ಪ್ರಮುಖ ಅನ್ವೇಷಕರ ಸಂಕ್ಷಿಪ್ತ ಮಾಹಿತಿ
# ಮಾರ್ಕೊಪೊಲೋ : ಜನನ – ಕ್ರಿ.ಶ.1254 / ಮರಣ – ಕ್ರಿ.ಶ. 1324
ದೇಶ – ವೆನಿಷಿಯಾ,ಇಟಲಿ
ವೃತ್ತಿ – ಮುತ್ತು ರತ್ನ ವ್ಯಾಪಾರಿ
ಪ್ರಮುಖ ಕೃತಿ- ಮಾರ್ಕೊಪೊಲೋ ದಿ ವೆನಿಸ್
ಮಾರ್ಕೊಪೋಲೊ ಮುತ್ತು ರತ್ನಗಳ ವ್ಯಾಪಾರಕ್ಕೆಂದು ಚೀನಾಕೆ ಹೋದನು. ಅಲ್ಲಿನ ದೊರೆ ಕುಬ್ಲಾಯ್ ಖಾನನ ಆಸ್ಥಾನದಲ್ಲಿ ಸೇವೆಗೆ ಸೇರಿಕೊಂಡನು.ನಂತರ ಜಪಾನ ಹಾಗೂ ಭಾರತಕೆ ಭೇಟಿ ನೀಡಿ ಅಪಾರ ಸಂಪತ್ತಿನೊಂದಿಗೆ ತಾಯ್ನಾಡಿಗೆ ತೆರಳಿದ.ತನ್ನ ಅನುಭವಗಳನ್ನು ಮಾರ್ಕೊಪೊಲೊ ದಿ ವೆನಿಸ್ ಎಂಬ ಗ್ರಂಥದಲ್ಲಿ ದಾಖಲಿಸಿದನು.ಈ ಅನುಭವಗಳೆ ಮುಂದಿನ ಸಮುದ್ರಯಾನಿಗಳಿಗೆ ಸ್ಪೂರ್ತಿ ನೀಡಿದವು.
# ಹೇನ್ರಿ ನ್ಯಾವಿಗೇಟರ್ : ಜನನ- ಕ್ರಿ.ಶ.1394 / ಜನ್ಮಸ್ಥಳ- ಪೋರ್ಚುಗಲ್
ವೃತ್ತಿ- ರಾಜ
ಈತ ನಾವಿಕನಲ್ಲದಿದ್ದರೂ ಲಿಸ್ಟನ್ ನಲ್ಲಿ ನಾವಿಕ ತರಬೇತಿ ಶಾಲೆಯನ್ನು ತೆರೆದನು.ಅಲ್ಲಿಗೆ ನಕ್ಷೆ ತಯಾರಕರು,ಭೌಗೊಳಿಕ ತಜ್ಞರು,ನಾವಿಕರನ್ನು ಆಹ್ವಾನಿಸಿದನು.ಆಫ್ರಿಕ ಬಳಸಿ ಪೂರ್ವಕ್ಕೆ ಹೋದಲ್ಲಿ ಭಾರತ ಮತ್ತು ಚೀನಾ ಗಳಿಗೆ ಭೇಟಿ ನೀಡಬಹುದು ಎಂದು ನಂಬಿದ್ದನು.ಅದಕ್ಕಾಗಿಯೆ ಕ್ಯಾರವಲ್ ಎಂಬ ಬಲಿಷ್ಠ ಹಡಗು ನಿರ್ಮಿಸಿ ಅದರಲ್ಲಿ ವರ್ತಕರು.ಯೋಧರು,ಧರ್ಮಪ್ರಚಾಕರನ್ನು ಕಳುಹಿಸಿದ.ಅವರು ಪಶ್ಚಿಮ ಆಫ್ರಿಕಾದ ಗಿನಿಯಾ ತೀರ,ಮೆಡಿರಾ ಮತ್ತು ಅಜೊರೆಸ್ ದ್ವೀಪಗಳನ್ನು ಶೋಧಿಸಿದರು.ಮತ್ತೊಂದು ಶಿಷ್ಯರ ತಂಡ ಕೇಫ ಆಫ ಗುಡ್ ಹೋಪ್ ಸಂಶೋಧಿಸಿತು.
# ವಾಸ್ಕೋಡಿಗಾಮ : ಜನನ- ಕ್ರಿ.ಶ.1469 / ಮರಣ- ಕ್ರಿ.ಶ.1525
ಜನ್ಮಸ್ಥಳ- ಲಿಸ್ಟನ್
ವೃತ್ತಿ- ನಾವಿಕ
ಭಾರತವನ್ನು ಸಂಶೋಧಿಸಬೇಕೆಂದು ಹಂಬಲದಿಂದ ನಾಲ್ಕು ಹಡಗುಗಳೊಂದಿಗೆ ಪೊರ್ಚುಗಲ್ ನಿಂದ ಪ್ರಯಾಣ ಬೆಳೆಸಿದನು.ವಾಸ್ಕೊಡಿಗಾಮ ಆಫ್ರಿಕಾದ ಪಶ್ಚಿಮ ಕರಾವಳಿ ಯಲ್ಲಿ ಸಂಚರಿಸಿ ಕೇಫ ಆಫ ಗುಡ್ ಹೋಪ್ ತಲುಪಿದ.ಅಲ್ಲಿಂದ ಮುಂದೆ ಜಾಂಜೀಬಾರ್ ಮೂಲಕ ಹಾಯ್ದು 1498 ನೆ ಮೇ 17 ರಂದು ಭಾರತವನ್ನು ಸಂಶೋಧಿಸಿದನು.
# ಕೆಬ್ರಾಲ್ : ಜನನ – ಕ್ರಿ.ಶ.1467 / ಮರಣ- ಕ್ರಿ.ಶ.1520
ಜನ್ಮಸ್ಥಳ – ಪೋರ್ಚುಗಲ್
ವೃತ್ತಿ – ಸಮುದ್ರಯಾನಿ ಮತ್ತು ಅನ್ವೇಷಕ
ಈತನು ದಕ್ಷಿಣ ಅಮೇರಿಕವನ್ನು ಕ್ರಿ.ಶ.1500 ರಲ್ಲಿ ಶೋಧಿಸಿದನು.ಈತ ಬ್ರೆಜಿಲ್ ನ್ನು ಪೋರ್ಚುಗೀಸರಿಗೆ ಸೇರಿದ ದೇಶವೆಂದು ಘೋಷಿಸಿದನು.ಈತನು ಭೌತಶಾಸ್ತ್ರ, ರೇಖಾಗಣಿತ,ಗಣಿತ,ಕಾರ್ಟೊಗ್ರಾಫಿ ಮತ್ತು ಅಸ್ಟ್ರೋನಾಮಿ ಬಲ್ಲವನಾಗಿದ್ದನು.ಎಪ್ರೀಲ್ 23 ಕ್ರಿ.ಶ.1500 ರಂದು ಬ್ರೆಜಿಲ್ ಕಡಲ ತೀರದಲ್ಲಿ ಬಂದಿಳಿದನು.
# ಕ್ರಿಸ್ಟೋಫರ್ ಕೋಲಂಬಸ್ : ಜನನ- ಕ್ರಿ.ಶ.1446 / ಮರಣ- ಕ್ರಿ.ಶ.1506
ಜನ್ಮಸ್ಥಳ – ಜಿನೀವಾ ಇಟಲಿ
ವೃತ್ತಿ – ಅನ್ವೇಷಕ
ಭಾರತಕ್ಕೆ ಹೊಸ ಮಾರ್ಗವನ್ನು ಕಂಡುಹಿಡಿಯಬೇಕೆಂಬ ಹಂಬಲದಿಂದ ತನ್ನ ಸಹಚರರೊಂದಿಗೆ 1492 ನೆ ಅಗಷ್ಟ 23 ರಂದು ಅಟ್ಲಾಂಟಿಕ್ ಸಾಗರದ ಪಶ್ಚಿಮಾಭಿಮುಖವಾಗಿ ಪ್ರಯಾಣ ಬೆಳೆಸಿದ.ಆದರೆ ಈತ ತಲುಪಿದ್ದು ವೆಸ್ಟ ಇಂಡೀಸ್ ದ್ವೀಪಗಳನ್ನು ನಂತರ ಅಮೆರಿಕ, ಕೆರೆಬಿಯನ್ ದ್ವೀಪಗಳು,ವೆನೆಜುವೆಲಾ, ಜಮೈಕಾ,ಟ್ರಿನಿಡಾಡ್,ನಿಕರಾಗುವಾ,ಕೊಸ್ಟರಿಕಾ,ಹೊಂಡುರಾಸ್,ಕ್ಯುಬಾ ಮತ್ತು ಹೈಟಿ ದ್ವೀಪಗಳನ್ನು ಶೋಧಿಸಿದ.
# ಬಲ್ ಬೋವಾ : ಜನನ- ಕ್ರಿ.ಶ.1475 / ಮರಣ- ಕ್ರಿ.ಶ.1519
ಜನ್ಮಸ್ಥಳ- ಬಡಾಜೋಝ ಸ್ಪೇನ್
ವೃತ್ತಿ – ಸಮುದ್ರಯಾನಿ
ಈತ ಒಬ್ಬ ಸೈನಿಕ ಮತ್ತು ನಾವಿಕ.ಈತ ಪನಾಮಾದ ಇಸ್ತಮಸ್ ನ್ನು ತಲುಪಿ ಮುಂದೆ ಸಾಗಿ 1513 ರಲ್ಲಿ ಪೆಸಿಫಿಕ್ ಸಾಗರವನ್ನು ಶೋಧಿಸಿದನು.ಫೆಸಿಫಿಕ್ ತಲುಪಿದ ಪ್ರಥಮ ಯುರೋಪಿಯನ್ ಎಂಬ ಕೀರ್ತಿ ಪಡೆದನು.ಈತ ಕ್ರಿ.ಶ.1500 ರಲ್ಲಿ ಹೊಸ ವಿಶ್ವದೆಡೆಗೆ ಪಯಣಿಸಿದ.ಸಾಂತಾ ಮರಿಯಾ ಲಾ ಆಂಟಿಗು ವಾ ಡಲ್ ಡೆರಿಯನ್ ವಸಾಹತನ್ನು 1510 ರಲ್ಲಿ ಅನ್ವೇಷಿಸಿದ.ಅಮೆರಿಕದ ನೆಲದಲ್ಲಿ ವಸಾಹತನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ ಎಂಬ ಖ್ಯಾತಿ ಪಡೆದ.
# ಅಮೆರಿಗೊ ವೆಸ್ಪುಸಿ : ಜನನ- ಕ್ರಿ.ಶ.1451 / ಮರಣ – ಕ್ರಿ.ಶ.1512
ಜನ್ಮಸ್ಥಳ- ಫ್ಲಾರೆನ್ಸ ಇಟಲಿ
ವೃತ್ತಿ – ಅನ್ವೇಷಕ
ಈತ ಇಟಲಿಯ ಫ್ಲಾರೆನ್ಸ್ ನಗರದವನು.ಈತ ಕೊಲಂಬಸ್ ಕಂಡು ಹಿಡಿದ ಹೊಸ ನಾಡನ್ನು ಅಮೆರಿಕ ಎಂದು ಕರೆದನು.ಈತ ದಕ್ಷಿಣ ಅಮೆರಿಕದ ಪೂರ್ವ ಕರಾವಳಿ, ಓರಿನೋಕೊ ನದಿ,ಪ್ಲೇಟ್ ನದಿ ಮತ್ತು ಮೊರಾಕಿಬೋ ಸರೋವರದವರೆಗಿನ ಪ್ರದೇಶಗಳನ್ನು ಸಂಶೋಧಿಸಿದನು.ಅಮೆರಿಕದ ಭೂಗೋಳವನ್ನು ಪೂರ್ಣವಾಗಿ ಪರಿಚಯಿಸಿದ್ದರಿಂದ ಅದನ್ನು ಇವನ ಹೆಸರಿನ ಮೇಲೆ ಅಮೆರಿಕ ಎಂದು ಕರೆಯಲಾಯಿತು.
# ಫರ್ಡಿನೆಂಡ್ ಮೆಗಲನ್ : ಜನನ – ಕ್ರಿ.ಶ.1480 / ಮರಣ – ಕ್ರಿ.ಶ. 1521
ಜನ್ಮಸ್ಥಳ – ಪೋರ್ಚುಗಲ್
ವೃತ್ತಿ – ಅನ್ವೇಷಣೆ
ಈತ ಸ್ಪೇನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ.ಅಲ್ಲಿನ ರಾಜವಂಶದ ಚಾರ್ಲ್ಸನ ಸಹಾಯದೊಂದಿಗೆ ಹೊಸ ಅನ್ವೇಷಣೆಯಲ್ಲಿ ತೊಡಗಿದ. ಕ್ಯಾಡಿಜ್ ನಿಂದ ಪ್ರಯಾಣ ಹೊರಟ ಈತ ಅಟ್ಲಾಂಟಿಕ್ ಸಾಗರದ ಮೂಲಕ ದಕ್ಷಿಣ ಅಮೇರಿಕದ ಪೂರ್ವ ಕರಾವಳಿ ದಾಟಿ ಶಾಂತಸಾಗರ ತಲುಪಿದ.ಅಲ್ಲಿಂದ ಫಿಲಿಫೈನ್ಸ ದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಮೂಲನಿವಾಸಿಗಳಿಂದ ಹತನಾದ.ಬದುಕುಳಿದ ಇತನ 18 ಸಹಚರರು ಈಸ್ಟ ಇಂಡೀಸ್ ,ಇಂಡೋನೇಷ್ಯಾ. ಬೋರ್ನಿಯಾ,ಹಿಂದೂ ಮಹಾಸಾಗರ,ಕೇಫ ಆಫ ಗುಡ್ ಹೋಪ್ ಭೂಶಿರ ದಾಟಿ ಪುನಃ ಸ್ಪೇನ್ ತಲುಪಿದರು.ಕಾರಣ ವಿಶ್ವವನ್ನು ಮೊದಲ ಬಾರಿಗೆ ಪ್ರದಕ್ಷಿಣೆ ಹಾಕಿದ ಕೀರ್ತಿ ಪಡೆಯುವ ಜೊತೆಗೆ ಭೂಮಿ ಗೋಳವಾಗಿದೆ ಎಂಬುವುದನ್ನು ಮನವರಿಕೆ ಮಾಡಿಕೊಟ್ಟರು.