ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
# ಶಾಸನಗಳು :
ಶಾಸನಗಳು [ಎಂದರೆ ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದುವುಗಳ ಮೇಲಿನ ಬರಹ. ಶಾಸನ ಎಂಬ ಸಂಸ್ಕೃತ ಪದಕ್ಕೆ ಆಜ್ಞೆ (ರಾಜಾಜ್ಞೆ) ಎಂದುದು ಮೂಲಾರ್ಥ. ಶಾಸ್ ಧಾತುವಿನಿಂದ ಬಂದದ್ದು ಶಾಸನ. ಶಾಸ್ ಎಂದರೆ- ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ. ಮೂಲತಃ ಶಾಸನ ಎಂಬುದು ದಾನ ಸಂಬಂಧವಾದ ರಾಜಾಜ್ಞೆ. ಒಟ್ಟಿನಲ್ಲಿ ಶಾಸನವೆಂದರೆ ಗಟ್ಟಿಯಾದ ಅಥವಾ ಶಾಶ್ವತವಾದ ಯಾವುದೇ ಬಗೆಯ ದಾಖಲೆಗಳು.
ಶಾಸನಗಳೇ ಕರ್ನಾಟಕದ ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶ. ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು. ಚಿಕ್ಕಮಗಳೂರು ಜಿಲ್ಲೆಯಲ್ಲಿ 950 ಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ 350 ಹೊಯ್ಸಳ ಅರಸರ ಕಾಲದವು ಎನ್ನಲಾಗಿದೆ .ಭಾರತದಲ್ಲಿ ತಮಿಳುನಾಡನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯ ಶಾಸನಗಳು ಕರ್ನಾಟಕದಲ್ಲಿ ದೊರೆಯುತ್ತವೆ.
# ಶಾಸನಗಳ ಅಧ್ಯಯನ :
➤ಕನ್ನಿಂಗ್ಹ್ಯಾಮ್ – ಕ್ರಿ.ಶ.1871-1885ರ ಅವಧಿಯಲ್ಲಿ ಅಶೋಕನ ಶಾಸನಗಳ ಸಂಪುಟಗಳನ್ನು ಹೊರತಂದ ಮೊದಲ ಶಾಸನಶಾಸ್ತ್ರಕಾರ
➤ಕರ್ನಲ್ಮೆಕೆಂಜೆ – ಕ್ರಿ.ಶ.1807ರಲ್ಲಿ ಏಷ್ಯಾಟಿಕ್ ರೀಸರ್ಚಸ್ ಪತ್ರಿಕೆಯ 9ನೇ ಸಂಪುಟದಲ್ಲಿ ಶ್ರವಣಬೆಳಗೊಳಕ್ಕೆ ಸಂಬಂಧಿಸಿದ ಬುಕ್ಕರಾಯನ ಧರ್ಮ ಶಾಸನವನ್ನು ಪ್ರಕಟಿಸಿದ್ದಾನೆ.
➤ಬಿ.ಎಲ್.ರೈಸ್ – 16ವರ್ಷಗಳ ಕಾಲ ಪ್ರತಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿ, ಶಾಸನಗಳನ್ನು ಸಂಗ್ರಹಿಸಿ 12 ಸಂಪುಟಗಳಲ್ಲಿ ಅವುಗಳನ್ನು ಪ್ರಕಟಿಸಿದರು. ಇವರು ಪ್ರಕಟಿಸಿದ ಒಟ್ಟು ಶಾಸನಗಳ ಸಂಖ್ಯೆ-8,869.ರೈಸ್ ಮತ್ತು ಫ್ಲೀಟ್ ರನ್ನು ಶಾಸನ ಅಧ್ಯಯನ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದು ಕರೆಯುತ್ತಾರೆ.
➤ಫ್ಲೀಟ್ – ಕ್ರಿ.ಶ.1878ರಲ್ಲಿ ‘ಪ್ರಾಚೀನ ಗುಪ್ತ ರಾಜರು ಮತ್ತು ಅವರ ಉತ್ತರಾಧಿಕಾರಿಗಳ ಶಾಸನಗಳು’ ಎಂಬ ಮಹತ್ವ್ತದ ಕೃತಿಯನ್ನು ಪ್ರಕಟಿಸಿದ್ದಾರೆ. ಇವರು ಭಾರತೀಯ ಶಾಸನಶಾಸ್ತ್ರದ ಪಿತಾಮಹ ಎನಿಸಿದ್ದಾರೆ.
➤ ಆರ್.ನರಸಿಂಹಾಚಾರ್- ಪ್ರಾಚೀನ ಶಿಲ್ಪಗಳ ಬಗ್ಗೆ ಸಂಶೋಧನಾತ್ಮಕ ಟಿಪ್ಪಣಿ ಬರೆದಿದ್ದಾರೆ. ವಾಸ್ತು ಶಿಲ್ಪ, ಶಾಸನ ಮತ್ತು ನಾಣ್ಯಗಳನ್ನು ಕುರಿತು ಅನೇಕ ಸಂಶೋಧನೆ ನಡೆಸಿದ್ದರೆ.
* ಎಂ.ಎಚ್.ಕೃಷ್ಣ – ಪ್ರಸಿದ್ಧ ಪುರಾತತ್ವ್ತ ತಜ್ಞರು. ಇವರ ನಿರ್ದೇಶಕತ್ವದಲ್ಲಿ ನೂರಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದವು.’ಹಿಂದೂ ದೇಶದ ಚರಿತ್ರೆ’, ‘ಕನ್ನಡ ನಾಡಿನ ಚರಿತ್ರೆ’ ಹಾಗೂ ‘ಅಜಂತಾ ಮತ್ತು ಎಲ್ಲೋರ’ಇವರ ಪ್ರಮುಖ ಕೃತಿಗಳು.
* ಕುಂದಣಗಾರರು 1939ರಲ್ಲಿ `Inseripti- ns in N- rthern Karnataka and K- lhapur state’ ಪುಸ್ತಕ ಪ್ರಕಟಿಸಿದರು
* ಚಿದಾನಂದ ಮೂರ್ತಿಯವರು 1966ರಲ್ಲಿ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಸಂಶೋಧನ ಕೃತಿಯನ್ನು ಬರೆದರು.
* ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ : ಹರಿಷೇಣ
* ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ : ಅಲಹಾ ಬಾದ್ ಸ್ತಂಭ ಶಾಸನ
* ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ : ಕೌಸಂಬಿ
* ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ : ಫೀರೋಜ್ ಷಾ ತುಘಲಕ್
* ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ : ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
* ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು : ಮಿರತ್ ಶಾಸನ ಹಾಗೂ ತೋಪ್ರ ಶಾಸನ
* ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ : ಕಂದಾಹಾರ್
* ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ : ರುದ್ರದಾಮನ್
* ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು : ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
* ತೆಲುಗಿನ ಪ್ರಥಮ ಶಾಸನ : ಕಲಿಮಲ್ಲ ಶಾಸನ
* ತಮಿಳಿನ ಪ್ರಥಮ ಶಾಸನ : ಮಾಂಗುಳಂ ಶಾಸನ
* ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ : ಅಶೋಕ
* ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ : ಬ್ರಾಹ್ಮಿ ಹಾಗೂ ಖರೋಷಠಿ
* ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ : 13 ನೇ ಶಿಲಾ ಶಾಸನ
* ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು : 1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
* ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ : ಮಸ್ಕಿ ಶಾಸನ
* ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ : ಕೊಪ್ಪಳ
* ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ • ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
* ನಿಟ್ಟೂರಿನ ಶಾಸನದ ರಚನಾಕಾರ : ಉಪಗುಪ್ತ
* ನಿಟ್ಟೂರಿನ ಶಾಸನದ ಲಿಪಿಕಾರ : ಚಡಪ
* ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ : 1950 ರಲ್ಲಿ
* ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ : ದೇವನಾಗರಿ
* ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ : ಬಬ್ರುಶಾಸನ
* ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ : ಶಕರ ಪ್ರಸಿದ್ದ ಅರಸ ರುದ್ರಧಮನ
* ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ : ಸಂಜಾನ್ ದತ್ತಿ ಶಾಸನ
* ದಂತಿದುರ್ಗ: ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
* ಒಂದನೇ ಕೃಷ್ಣ : ಭಾಂಡ್ಕ ಮತ್ತು ತಾಳೇಗಾಂ ಶಾಸನ
* ಧೃವ : ಜೆಟ್ಟಾಯಿ ಶಾಸನ
* ಅಮೋಘವರ್ಷ : ಸಂಜನ ತಾಮ್ರ ಶಾಸನ
* ಬಾದಾಮಿ ಶಾಸನದ ಕರ್ತೃ : 1 ನೇ ಪುಲಿಕೇಶಿ
* ಮಹಾಕೂಟ ಸ್ತಂಭ ಶಾಸನದ ಕರ್ತೃ : ಮಂಗಳೇಶ
* ಮಹಾಕೂಟ ಸ್ತಂಭ ಶಾಸನ : ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
ರವಿ ಕೀರ್ತೀ : ಐಹೋಳೆ ಶಾಸನ
* ಐಹೋಳೆ ಶಾಸನ : ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
* ಚಂದ್ರವಳ್ಳಿ ಶಾಸನದ ಕರ್ತೃ : ಮಯೂರವರ್ಮ (ಚಿತ್ರದುರ್ಗ)
* ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ.
* ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ
* ಕನ್ನಡದ ಮೊಟ್ಟ ಮೊದಲ ಶಾಸನ : ಹಲ್ಮಿಡಿ ಶಾಸನ.
* ಹಲ್ಮಿಡಿ ಶಾಸನ ಇಲ್ಲಿ ಇರುವುದು : ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
* ಹಲ್ಮಿಡಿ ಶಾಸನದ ಕರ್ತೃ : ಕಾಕುಸ್ಥವರ್ಮ .
* ತಾಳಗುಂದ ಶಾಸನದ ಕರ್ತೃ : ಕವಿ ಕುಬ್ಜ
* ತಾಳಗುಂದ ಶಾಸನವನ್ನು ಬರೆಯಿಸಿದವರು : ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
* ಮಹಿಪವೊಲು ತಾಮ್ರ ಶಾಸನದ ಕರ್ತೃ : ಶಿವಸ್ಕಂದ ವರ್ಮ .
* ವಾಯಲೂರು ಸ್ತಂಭ ಶಾಸನದ ಕರ್ತೃ : ರಾಜ ಸಿಂಹ .
* ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ : 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
* ನಾನಾ ಘಾಟ್ ಶಾಸನದ ಕರ್ತೃ : ನಾಗನೀಕ .
* ಗುಹಾಂತರ ನಾಸಿಕ್ ಶಾಸನದ ಕರ್ತೃ : ಗೌತಮೀ ಬಾಲಾಶ್ರೀ
* ವೆಳ್ವಕುಡಿ ತಾಮ್ರ ಶಾಸನದ ಕರ್ತೃ : ಪರಾಂತಕ ಚೋಳ.