ಜವಾಹರಲಾಲ್ ನೆಹರು ಅವರ ಬಾಲ್ಯ ಮತ್ತು ಶಿಕ್ಷಣ ಹೇಗಿತ್ತು..?
ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 – 27 ಮೇ 1964)((ನವೆಂಬರ್ ೧೪, ೧೮೮೯ – ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು.
1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ . ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು (“ಅಂಕಲ್ ನೆಹರು”) ಎಂದು ಪ್ರಸಿದ್ಧರಾಗಿದ್ದರು.
# ಜನನ ಮತ್ತು ಕುಟುಂಬದ ಹಿನ್ನೆಲೆ :
ಜವಾಹರಲಾಲ್ ನೆಹರು ಬ್ರಿಟಿಷ್ ಭಾರತದ ಅಲಹಾಬಾದಿನಲ್ಲಿ 14 ನವೆಂಬರ್ 1889 ರಂದು ಜನಿಸಿದರು. ಅವರ ತಂದೆ ಮೋತಿಲಾಲ್ ನೆಹರೂ (1861-1931), ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಸ್ವ-ನಿರ್ಮಿತ ಶ್ರೀಮಂತ ವಕೀಲರು, 1919 ಮತ್ತು 1928 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ತಾಯಿ, ಸ್ವರೂಪ್ರಣಿ ಥುಸು (1868) -1938), ಲಾಹೋರಿನಲ್ಲಿ ನೆಲೆಗೊಂಡಿದ್ದ ಪ್ರಸಿದ್ಧ ಕಾಶ್ಮೀರಿ ಬ್ರಾಹ್ಮಣ ಕುಟುಂಬದಿಂದ ಬಂದವರು, ಮೋತಿಲಾಲ್ ಅವರ ಎರಡನೆಯ ಪತ್ನಿಯಾಗಿದ್ದರು, ಮೊದಲ ಪತ್ನಿ ಮೊದಲ ಮಗುವಿನ ಜನನ ಸಮಯದದಲ್ಲಿ ಮರಣ ಹೊಂದಿದ್ದರು.
ಜವಾಹರ್’ಲಾಲ್ ಮೂವರು ಮಕ್ಕಳಲ್ಲಿ ಹಿರಿಯರಾಗಿದ್ದರು, ಉಳಿದ ಇಬ್ಬರು ಬಾಲಕಿಯರು.ಹಿರಿಯ ಮಗಳು, ವಿಜಯ ಲಕ್ಷ್ಮಿ ನಂತರ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಮೊದಲ ಮಹಿಳಾ ಅಧ್ಯಕ್ಷರಾದರು. ಕಿರಿಯ ಸಹೋದರಿ ಕೃಷ್ಣ ಹತೀಶಿಂಗ್ ಅವರು ಪ್ರಸಿದ್ಧ ಬರಹಗಾರರಾದರು ಮತ್ತು ಆಕೆಯು ತನ್ನ ಸಹೋದರನ ಮೇಲೆ ಹಲವಾರು ಪುಸ್ತಕಗಳನ್ನು ರಚಿಸಿದರು.
ನೆಹರೂ ಅವರ ಬಾಲ್ಯವನ್ನು “ಆಶ್ರಯ ಮತ್ತು ಸ್ವಾಭಾವಿಕವಾದುದು” ಎಂದು ಬಣ್ಣಿಸಿದ್ದಾರೆ. ಶ್ರೀಮಂತ ಮನೆಗಳಲ್ಲಿ ಆನಂದ್ ಭವನ ಎಂಬ ಹೆಸರಿನ ಅರಮನೆಯ ಎಸ್ಟೇಟ್ ಸೇರಿದಂತೆ ಅವರು ಸವಲತ್ತುಗಳ ವಾತಾವರಣದಲ್ಲಿ ಬೆಳೆದರು. ಅವರ ತಂದೆ ಅವರು ಖಾಸಗಿ ಗವರ್ನೆಸ್ ಮತ್ತು ಬೋಧಕರಿಂದ ಮನೆಯಲ್ಲಿ ಶಿಕ್ಷಣ ಕೊಡಿಸಿದ್ದರು. ಅವರಲ್ಲಿ ಒಬ್ಬ ಬೋಧಕ ಫರ್ಡಿನ್ಯಾಂಡ್ ಟಿ. ಬ್ರೂಕ್ಸ್ ನ ಪ್ರಭಾವದ ಅಡಿಯಲ್ಲಿ, ಅವರು ವಿಜ್ಞಾನ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು.
ತರುವಾಯ ಅವರು ಥಿಯಾಸಾಫಿಕಲ್ ಸೊಸೈಟಿಯಲ್ಲಿ ಹದಿಮೂರನೇ ವಯಸ್ಸಿನಲ್ಲಿ ಕುಟುಂಬ ಸ್ನೇಹಿತೆ ಅನ್ನಿ ಬೆಸೆಂಟ್ ಅವರಿಂದ ಬೋಧಿಸಲ್ಪಟ್ಟರು. ಆದಾಗ್ಯೂ, ಥಿಯಾಸಾಫಿಕಲ್ ಸೊಸೈಟಿಯ ತತ್ವಶಾಸ್ತ್ರದ ಬಗೆಗಿನ ಅವರ ಆಸಕ್ತಿಯು ಶಾಶ್ವತವಾಗಿ ಉಳಿಯಲಿಲ್ಲ. ಬ್ರೂಕ್ಸ್ ತನ್ನ ಬೋಧಕನಾಗಿ ಹೊರಟು ಸ್ವಲ್ಪ ಸಮಯದ ನಂತರ ನೆಹರು ಥಿಯಾಸಾಫಿಕಲ್ ಸಮಾಜವನ್ನು ತೊರೆದನು. ಅವರು ಹೀಗೆ ಬರೆದಿದ್ದ್ದಾರೆ: “ಸುಮಾರು ಮೂರು ವರ್ಷಗಳ ಕಾಲ [ಬ್ರೂಕ್ಸ್] ನನ್ನೊಂದಿಗೆ ಇದ್ದರು ಮತ್ತು ಅನೇಕ ವಿಧಗಳಲ್ಲಿ ಅವರು ನನ್ನ ಮೆಲೆಹೆಚ್ಚು ಪ್ರಭಾವ ಬೀರಿದರು”.
ನೆಹರೂ ಅವರ ತತ್ವಶಾಸ್ತ್ರದ ಈ ಆಸಕ್ತಿಗಳು ಅವರನ್ನು ಬೌದ್ಧ ಮತ್ತು ಹಿಂದೂ ಧರ್ಮಗ್ರಂಥಗಳ ಅಧ್ಯಯನಕ್ಕೆ ಪ್ರೇರೇಪಿಸಿದವು. ಬಾಲ ರಾಮ್ ನಂದರ ಪ್ರಕಾರ, ಈ ಗ್ರಂಥಗಳು ನೆಹರೂರವರಿಗೆ “ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೊದಲ ಪರಿಚಯ ಮಾಡಿಕೊಡುವುವಾಗಿತ್ತು. ನೆಹರೂ ಅವರ ಬೌದ್ಧಿಕ ಶೋಧನೆಗೆ ಪ್ರಾರಂಭಿಕ ಉದ್ವೇಗವನ್ನು ಒದಗಿಸಿತು. ಇದು ನಂತರ ಅವರು ಬರೆದ ‘ದಿ ಡಿಸ್ಕವರಿ ಆಫ್ ಇಂಡಿಯಾ” ದಲ್ಲಿ ಪರಿಪಾಕವಾಗಿ ಹೊಮ್ಮಿತು.
# ಶಿಕ್ಷಣ :
ನೆಹರೂ ತನ್ನ ಯೌವನದಲ್ಲಿ ತೀವ್ರವಾದ ರಾಷ್ಟ್ರೀಯತಾವಾದಿಯಾಗಿದ್ದರು. ಎರಡನೇ ಬೋಯರ್ ಯುದ್ಧ ಮತ್ತು ರುಸ್ಸೋ-ಜಪಾನೀಸ್ ಯುದ್ಧವು ಅವರ ಭಾವನೆಗಳನ್ನು ತೀವ್ರಗೊಳಿಸಿತು. ಎರಡನೆಯದರ ಬಗ್ಗೆ ಅವರು ಹೀಗೆ ಬರೆದಿದ್ದಾರೆ, “ಜಪಾನೀಯರ ಗೆಲುವುಗಳು ನನ್ನ ಉತ್ಸಾಹಕ್ಕೆ ಸಂಚಲನೆ ನೀಡಿದೆ … ರಾಷ್ಟ್ರೀಯತಾವಾದಿ ವಿಚಾರಗಳು ನನ್ನ ಮನಸ್ಸನ್ನು ತುಂಬಿವೆ … ನಾನು ಭಾರತೀಯ ಸ್ವಾತಂತ್ರ್ಯ ಮತ್ತು ಯುರೋಪಿನ ಅಧೀನತೆಯಿಂದ ಏಷ್ಯಾ ಸ್ವಾತಂತ್ರ್ಯದ ಬಗ್ಗೆ ಯೋಚಿಸಿದೆ”.
ಅವರು 1905 ರಲ್ಲಿ ಇಂಗ್ಲೆಂಡಿನ ಪ್ರಮುಖ ಶಾಲೆಯಾದ ಹ್ಯಾರೋನಲ್ಲಿ ತಮ್ಮ ಸಾಂಸ್ಥಿಕ ಶಿಕ್ಷಣವನ್ನು ಪ್ರಾರಂಭಿಸಿದರು, ಅವರು ಜಿಎಂ ಟ್ರೆವೆಲಿಯನ್’ನ ಗರಿಬಾಲ್ಡಿ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು, ಅವರು ಶೈಕ್ಷಣಿಕ ಅರ್ಹತೆಗಾಗಿ ಬಹುಮಾನ ಪಡೆದಿದ್ದರು. ಅವರು ಗರಿಬಾಲ್ಡಿಯನ್ನು ಕ್ರಾಂತಿಕಾರಕ ನಾಯಕ ಎಂಬ ದೃಷ್ಠಿಯಿಂದ ನೋಡಿದರು. ಅವರು ಹೀಗೆ ಬರೆದಿದ್ದಾರೆ: “ಭಾರತದ ಸ್ವಾತಂತ್ರ್ಯಕ್ಕಾಗಿ ನನ್ನ ಧೈರ್ಯದ ಹೋರಾಟ ಮತ್ತು ನನ್ನ ಮನದಲ್ಲಿ ಭಾರತದ ಮತ್ತು ಇಟಲಿಯ ವಿಚಿತ್ರವಾದ ಮಿಶ್ರಣವನ್ನು ಪಡೆಯಿತು” ಎಂದು. (ಭಾರತದಲ್ಲಿ ಇದೇ ರೀತಿಯ ಕಾರ್ಯಗಳ ಕನಸುಗಳು ಬಂದವು).
ಅಕ್ಟೋಬರ್ 1907 ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜ್’ಗೆ ನೆಹರು ಸೇರಿದರು ಮತ್ತು 1910 ರಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಗೌರವ (ಆನರ್ಸ್) ಪದವಿ ಪಡೆದರು. ಈ ಅವಧಿಯಲ್ಲಿ ಅವರು ರಾಜಕಾರಣ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯವನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿದರು. ಬರ್ನಾರ್ಡ್ ಷಾ, ಎಚ್.ಜಿ.ವೆಲ್ಸ್, ಜೆ.ಎಂ. ಕೀನ್ಸ್, ಬರ್ಟ್ರಾಂಡ್ ರಸ್ಸೆಲ್, ಲೋವೆಸ್ ಡಿಕಿನ್ಸನ್ ಮತ್ತು ಮೆರೆಡಿತ್ ಟೌನ್ಸೆಂಡ್ ಅವರ ಬರಹಗಳು ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಯಿಂದಾಗಿ ರೂಪಿಸಲ್ಪಟ್ಟವು.
1910 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ನೆಹರು ಲಂಡನ್ನಿಗೆ ತೆರಳಿ ಇನ್ನರ್ ಟೆಂಪಲ್–ಇನ್’ನಲ್ಲಿ ಕಾನೂನು ಅಧ್ಯಯನ ಮಾಡಿದರು ಈ ಸಮಯದಲ್ಲಿ, ಅವರು ಬೀಟ್ರಿಸ್ ವೆಬ್ ಸೇರಿದಂತೆ ಫ್ಯಾಬಿಯನ್ ಸೊಸೈಟಿಯ ವಿದ್ವಾಂಸರ ಅಧ್ಯಯನವನ್ನು ಮುಂದುವರೆಸಿದರು. ಅವರನ್ನು 1912 ರಲ್ಲಿ ಬಾರ್’ಗೆ (ನ್ಯಾಯವಾದಿಯಾಗಿ) ಕರೆದರು.
ಆಗಸ್ಟ್ 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ, ನೆಹರು ಅಲಹಾಬಾದ್ ಹೈಕೋರ್ಟಇನಲ್ಲಿ ವಕೀಲರಾಗಿ ಸೇರಿಕೊಂಡರು ಮತ್ತು ನ್ಯಾಯವಾದಿಯಾಗಿ ನೆಲೆಸಲು ಪ್ರಯತ್ನಿಸಿದರು. ಆದರೆ, ಅವರ ತಂದೆಗಿಂತ ಭಿನ್ನವಾಗಿ, ಅವರ ವೃತ್ತಿಜೀವನದಲ್ಲಿ ಅವರು ಶ್ರದ್ಧೆಯುಳ್ಳ ಆಸಕ್ತಿಯನ್ನು ಹೊಂದಿರಲಿಲ್ಲ ಮತ್ತು ಕಾನೂನಿನ ಅಭ್ಯಾಸ ಅಥವಾ ವಕೀಲರ ಕಂಪನಿಯನ್ನು ಆನಂದಿಸಲಿಲ್ಲ. ಅವರು ಹೀಗೆ ಬರೆದಿದ್ದಾರೆ: “ವಾತಾವರಣವು ಬೌದ್ಧಿಕವಾಗಿ ಉತ್ತೇಜಿಸುವಂತಿಲ್ಲ ಮತ್ತು ಜೀವನದ ಸಂಪೂರ್ಣ ಜಡತೆಯ ರ್ಥಹೀನ ಒಂದು ಭಾವ ನನ್ನ ಮೇಲೆ ಆವರಿಸಿತು.” ರಾಷ್ಟ್ರೀಯತೆಯ ರಾಜಕೀಯದಲ್ಲಿ ಅವರ ಒಳಗೊಳ್ಳುವಿಕೆಯು ಅವರ ನ್ಯಾಯವಾದಿ ಉದ್ಯೋಗವನ್ನು ಮುಂಬರುವ ವರ್ಷಗಳಲ್ಲಿ ಕ್ರಮೇಣ ಬದಲಾಯಿಸಿತು.
# ಸ್ವಾತಂತ್ರ್ಯಕ್ಕಾಗಿ ಹೋರಾಟ :
1912 ರಲ್ಲಿ ಭಾರತಕ್ಕೆ ಹಿಂದಿರುಗಿದ ಕೆಲವೇ ತಿಂಗಳುಗಳಲ್ಲಿ, ಪಾಟ್ನಾದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನಕ್ಕೆ ನೆಹರೂ ಹಾಜರಾಗಿದ್ದರು. ಕಾಂಗ್ರೆಸ್ 1912 ರಲ್ಲಿ ಮಧ್ಯಮವರ್ಗ ಮತ್ತು ಗಣ್ಯರ ಪಕ್ಷವಾಗಿತ್ತು ಅವರು “ಇಂಗ್ಲಿಷ್-ತಿಳಿವಳಿಕೆಯ ಉನ್ನತ-ವರ್ಗದ ವ್ಯವಹಾರ” ವನ್ನು ಅಲ್ಲಿನೋಡಿದ್ದರಿಂದ ಅವರಿಗೆ ಮುಜುಗರದ ಗೊಂದಲ ವಿಚಾರವುಂಟಾಯಿತು. ಕಾಂಗ್ರೆsಸ್ಸು ಪರಿಣಾಮಕಾರಿ ಆಗುವುದರ ಬಗ್ಗೆ ನೆಹರೂ ಅನುಮಾನಗಳನ್ನು ಹೊಂದಿದ್ದರು ಆದರೆ ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧಿಯವರು ನೇತೃತ್ವದ ಭಾರತೀಯ ನಾಗರಿಕ ಹಕ್ಕುಗಳ ಚಳವಳಿಯನ್ನು ಬೆಂಬಲಿಸಲು ಪಕ್ಷಕ್ಕೆ ಕೆಲಸ ಮಾಡಲು ಒಪ್ಪಿಕೊಂಡರು,. 1913 ರಲ್ಲಿ ಚಳುವಳಿಗೆ ಹಣವನ್ನು ಸಂಗ್ರಹಿಸಿದರು.ನಂತರ, ಅವರು ಬ್ರಿಟಿಷ್ ವಸಾಹತುಗಳಲ್ಲಿ ಭಾರತೀಯರು ಎದುರಿಸಿದ ಒಪ್ಪಂದಕ್ಕೆ ಒಳಗಾದ ಕಾರ್ಮಿಕರ ಮತ್ತು ಅಂತಹ ಇತರ ತಾರತಮ್ಯಗಳ ವಿರುದ್ಧ ಪ್ರಚಾರ ಮಾಡಿದರು.