ಕರ್ನಾಟಕ ಇತಿಹಾಸ ಅಧ್ಯಯನ : ಕಲ್ಯಾಣಿ ಚಾಲುಕ್ಯರು
ಕ್ರಿ.ಶ 973 ರಲ್ಲಿ , ತೈಲಪ 2, ರಾಷ್ಟ್ರಕೂಟ ರಾಜವಂಶದ ಸಾಮಂತ (ಬಿಜಾಪುರದಿಂದ), ತನ್ನ ಅಧಿಪತಿಗಳ ಸೋಲಿಸಿ ಮಾನ್ಯಖೆಟವನ್ನು ತನ್ನ ರಾಜಧಾನಿಯಾಗಿಸಿದನು. ಸೋಮೇಶ್ವರ 1 ರ ಆಳ್ವಿಕೆಯಲ್ಲಿ ಬೆಳೆದ ಈ ರಾಜವಂಶ ತನ್ನ ರಾಜಧಾನಿಯನ್ನು ಕಲ್ಯಾಣಿಗೆ ಸ್ಥಳಾಂತರಿಸಿತು. ಉತ್ತರದ ನರ್ಮದ ದಿಂದ ದಕ್ಷಿಣದ ಕಾವೇರಿ ತನಕ ಇವರ ರಾಜ್ಯ ವ್ಯಾಪಿಸಿತು . ವಿಕ್ರಮಾದಿತ್ಯ-6 ಇವನ ಐವತ್ತು ವರುಷದ ಆಳ್ವಿಕೆ ಕರ್ನಾಟಕದ ಇತಿಹಾಸದಲ್ಲಿ ಒಂದು ಪ್ರಮುಖ ಕಾಲಮಾನವಾಗಿದ್ದು ಇತಿಹಾಸತಜ್ಞ್ಯರು ಇದನ್ನು “ಚಾಲುಕ್ಯ ವಿಕ್ರಮ ಯುಗ” ವೆಂದು ಕರೆಯುತ್ತಾರೆ.
ಉತ್ತರ ಮತ್ತು ದಕ್ಷಿಣದಲ್ಲಿ ತನ್ನ ಪ್ರಬಲ ಸಾಮಂತರು ನಿಯಂತ್ರಿಸಿದ್ದಲ್ಲದೆ ಚೋಳರನ್ನು 1093 (ವೆಂಗಿ ಯುದ್ದದಲ್ಲಿ) ಮತ್ತು 1118 ಸೋಲಿಸಿದನು. ಭರತ ಖಂಡ ಕಂಡ ಸೋಲನ್ನೇ ಅರಿಯದ ಏಕಮೇವ ರಾಜ ಎಂದರೆ ವಿಕ್ರಮಾದಿತ್ಯ, ಕೇವಲ ಪರಾಕ್ರಮಿಯಲ್ಲದೆ, ಹೃದಯವಂತನು, ಪ್ರಜೆಗಳಿಗೆ ಸುಲಭವಾಗಿ ಸಿಗುವವನು, ಅಧಿಕಾರಿಗಳನ್ನು ಅಂಕೆಯಲ್ಲಿ ಇಟ್ಟವನು ಆಗಿದ್ದನು. ಎಲ್ಲ ಧರ್ಮವನ್ನು ಸಮಾನ ಎಂದು ಹೇಳಿದನು. ಮಹಿಳೆಯರಿಗೆ ಗೌರವದ ಸ್ಥಾನಮಾನ ಮತ್ತು ಕಲೆಗೆ ಆಶ್ರಯ ನೀಡಿದ್ದನು.
ಉತ್ಖನನ ಶಾಸನಗಳಲ್ಲಿ ಮಹಾಪ್ರಧಾನ, ಸಂಧಿವಿಗ್ರಾಹಿಕ ಮತ್ತು ಧರ್ಮಾಧಿಕಾರಿ ಪದಗಳನ್ನು ಉಪಯೋಗಿಸಲಾಗಿದೆ. ಸಚಿವ ಸ್ಥಾನಗಳಲ್ಲಿ ತಡೆಯದಂಡನಾಯಕ ಮತ್ತು ದಂಡನಾಯಕ ಸ್ಥಾನಗಳಿದ್ದು ಇವರುಗಳು ಸೇನೆ ದಂಡನಾಯಕತ್ವ ಮತ್ತು ಆಡಳಿತಾತ್ಮಕ ಕೌಶಲ್ಯಗಳಲ್ಲಿ ನಿಪುಣರಾಗಿದ್ದರು ಎಂದು ತಿಳಿದುಬರುತ್ತದೆ. ಸಾಮ್ರಾಜ್ಯವು ಬನವಾಸಿ, ನೋಲಂಬವಾಡಿ, ಗಂಗವಾಡಿ ಪ್ರಾಂತ್ಯಗಳಾಗಿ ವಿಭಜಿಸಲಾಗಿತ್ತು. ದೊಡ್ಡ ಪ್ರಾಂತ್ಯಗಳು ಮಂಡಲಗಳಾಗಿ, ಮಂಡಲ ನಾಡಾಗಿ, ನಾಡು ಕಂಪನಗಳಾಗಿ (ಹಳ್ಳಿಗಳ ಗುಂಪು) ಮತ್ತು ಕೊನೆಯದಾಗಿ ಬಡ (ಹಳ್ಳಿ) ಎಂದು ವಿಭಜಿಸಲಾಗಿತ್ತು.
ಬಸವಣ್ಣ ಮತ್ತು ಇತರ ವೀರಶೈವರು ಜಾತಿ ವ್ಯವಸ್ಥೆಯಿಲ್ಲದ ನಂಬಿಕೆಯ ಧರ್ಮೋಪದೇಶ ಮಾಡಿದರು. ಬಸವಣ್ಣ ತನ್ನ ವಚನಗಳಲ್ಲಿ, ಜನಸಾಮಾನ್ಯರಿಗೆ ಸರಳ ಕನ್ನಡದಲ್ಲಿ ಕಾಯಕವೇ ಕೈಲಾಸ ಎಂದು ಭೋದಿಸಿದರು. ಲಿಂಗಾಯತರೆಂದು ಕರೆಸಿಕೊಳ್ಳುವ ವೀರಶೈವರು ಸಮಾಜದ ಹಲವು ನಿಯಮಗಳನ್ನು ( ಪುನರ್ಜನ್ಮ) ಪ್ರಶ್ನಿಸಿದ್ದಲ್ಲದೆ ವಿಧವೆಯರು ಮತ್ತು ಮದುವೆಯಾಗದ ಹಿರಿಯ ಹೆಂಗಸರ ಮದುವೆಗಳನ್ನು ಪ್ರೊತ್ಸಾಹಿಸಿದರು. ಅಕ್ಕ ಮಹಾದೇವಿ, ಅಲ್ಲಮ ಪ್ರಭು ಮತ್ತು ಬಸವಣ್ಣ ಅನುಯಾಯಿಗಳಾದ ಚೆನ್ನಬಸವ, ಪ್ರಭುದೇವ, ಸಿದ್ದರಾಮ, ಮತ್ತು ಕೊಂಡ ಗುಲಿ ಕೇಶಿರಾಜರು ನೂರಾರು ವಚನಗಳನ್ನು ಶಿವನ ಆರಾಧನೆಯಲ್ಲಿ ರಚಿಸಿದ್ದಾರೆ.
ಕನ್ನಡ ವಿದ್ವಾಂಸರ ಪೈಕಿ ಅತ್ಯಂತ ಗಮನಾರ್ಹರಾದವರು ರನ್ನ, ಗಣಿತಜ್ಞ್ಯ ನಾಗವರ್ಮ-2, ಮಂತ್ರಿ ದುರ್ಗಸಿಂಹ ವೀರಶೈವ ಸಂತ ಬಸವಣ್ಣನವರು. ಕನ್ನಡ ಸಾಹಿತ್ಯದ ಮೂರು ರತ್ನಗಳಲ್ಲಿ ಒಬ್ಬರಾದ ರನ್ನ ರನ್ನು ರಾಜ ತೈಲಪ-2 ಮತ್ತು ಸತ್ಯಾಶ್ರಯ ರು ಆಶ್ರಯಿಸಿದರು. ಐದು ಪ್ರಮುಖ ಕೃತಿಗಳನ್ನು ರಚಿಸಿದ ಇವರಿಗೆ ರಾಜ ತೈಲಪ-2 “ಕವಿ ಚಕ್ರವರ್ತಿ” ಬಿರುದನ್ನು ನೀಡಿ ಗೌರವಿಸಿದನು. ಚಂಪು ಶೈಲಿಯಲ್ಲಿ ರಚಿಸಿದ ರನ್ನರ ಸಾಹಸಭೀಮ ವಿಜಯಂ ( ಅಥವ ಗದಾಯುದ್ದ) ಕೃತಿಯಲ್ಲಿ ತನ್ನನ್ನು ಆಶ್ರಯಿಸಿದ ರಾಜ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಸುತ್ತ 18 ದಿವಸ ನಡೆದ ಮಹಾಭಾರತದ ಯುದ್ದದಲ್ಲಿ ಭೀಮ-ದುರ್ಯೋಧನರ ಗದಾಯುದ್ದವನ್ನು ವರ್ಣಿಸಿದ್ದಾರೆ.
ಕಾಶ್ಮೀರಿ ಪಂಡಿತ ಬಿಲ್ಹಣ ಬರೆದ ವಿಕ್ರಮಾಂಕದೇವ ಚರಿತೆ, (18 ವಿಭಾಗಗಳ ಮಹಾಕಾವ್ಯ), ತನನ್ನು ಪೋಷಿಸಿದ ರಾಜ ವಿಕ್ರಮಾದಿತ್ಯ-6 ರ ಜೀವನ ಮತ್ತು ಸಾಧನೆಗಳನ್ನು ಹಾಡಿ ಹೊಗಳುತ್ತದೆ. ಭಾರತದ ಪ್ರಖ್ಯಾತ ಗಣಿತಶಾಸ್ತ್ರಜ್ಞ ಭಾಸ್ಕರ-2 ಈ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದರು. ಬಿಜ್ಜಡ ಬಿಡ (ಈಗಿನ ಬಿಜಾಪುರ) ದವರಾದ ಇವರು ತಮ್ಮ ಪ್ರಸಿದ್ದ ಕೃತಿ ಸಿದ್ಧಾಂತ ಶಿರೋಮಣಿ ಯಲ್ಲಿ ಲೀಲಾವತಿ.
ಬೀಜಗಣಿತ, ಗೋಳಾಧ್ಯಾಯ, ಗ್ರಹಗಣಿತದ ಬಗ್ಗೆ ಬರೆದಿದ್ದಾರೆ. ಸೋಮೇಶ್ವರ-3 ರವರ ಮಾನಸೋಲ್ಲಾಸ ಅಥವಾ ಅಭಿಲಾಶಿತರ್ತ ಚಿಂತಾಮಣಿ ಎಂಬ ಸಂಸ್ಕೃತ ಕೃತಿಯಲ್ಲಿ ಸಮಾಜದ ಎಲ್ಲಾ ವಿಭಾಗಗಳ ಕುರಿತು (ಔಷಧ, ಮಂತ್ರಜಾಲ, ಪಶು ವಿಜ್ಞಾನ, ಅಮೂಲ್ಯ ಕಲ್ಲುಗಳು ಮತ್ತು ಮುತ್ತುಗಳ ಮೌಲ್ಯಮಾಪನ, ಕೋಟೆ ಕಟ್ಟುವಿಕೆ ಚಿತ್ರಕಲೆ, ಸಂಗೀತ, ಆಟಗಳು) ಬರೆದಿರುವ ಒಂದು ವಿಶ್ವಕೋಶ.ಕಲ್ಯಾಣಿ ಚಾಲುಕ್ಯರ ಕಲೆಯನ್ನು “ಗದಗ್ ಶೈಲಿ” ಎಂದೂ ಕರೆಯಲಾಗಿದೆ (ನರ್ಮದ ಮತ್ತು ಕಾವೇರಿ ನದಿಗಳ ಮಧ್ಯದ ಪ್ರದೇಶದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ).
ದೇವಸ್ಥಾನಗಳಲ್ಲದೆ, ಈ ರಾಜವಂಶದ ಕಲೆಯನ್ನು ಪುಷ್ಕರಣಿಗಳಲ್ಲಿ (ಧಾರ್ಮಿಕ ಸ್ನಾನ ಸ್ಥಳ) ಲಕ್ಕುಂಡಿಯಲ್ಲಿ ಈಗಲೂ ನೋಡಬಹುದು. ಚಾಲುಕ್ಯ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳನ್ನು ಕಾಶಿವಿಶ್ವೇಶರ ದೇವಸ್ಥಾನ (ಲಕ್ಕುಂಡಿ), ದೊಡ್ಡ ಬಸಪ್ಪ ದೇವಸ್ಥಾನ (ದಂಬಾಳ), ಮಲ್ಲಿಕಾರ್ಜುನ ದೇವಸ್ಥಾನ (ಕುರುವಟ್ಟಿ), ಕಲ್ಲೇಶ್ವರ ದೇವಸ್ಥಾನ (ಬಾಗಳಿ) , ಸಿದ್ದೇಶ್ವರ ದೇವಸ್ಥಾನ (ಹಾವೇರಿ), ಅಮೃತೇಶ್ವರ ದೇವಸ್ಥಾನ (ಅಣ್ಣಿಗೇರಿ), ಮಹದೇವ ದೇವಸ್ಥಾನ (ಇಟಗಿ) , ಕೈತಬೇಶ್ವರ ದೇವಸ್ಥಾನ (ಕುಬತುರು) ಮತ್ತು ಕೇದಾರೇಶ್ವರ ದೇವಸ್ಥಾನ (ಬಳ್ಳಿಗಾವಿ) ಗಳಲ್ಲಿ ಕಾಣಬಹುದು.
# ನೆನಪಿನಲ್ಲಿಡಬೇಕಾದ ಅಂಶಗಳು :
➤ ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
➤ ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
➤ ಇವರ ಪ್ರಾರಂಭದ ರಾಜಧಾನಿ – ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
ಇವರ ಲಾಂಛನ – ವರಾಹ
➤ ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ – ಈ ಮನೆತನದ ಮೂಲ ಪುರುಷ
➤ ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಾಜ್ಯಕ್ಕೆ ತಳಹದಿ ಹಾಕಿದನು
# ಆಧಾರಗಳು : ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ,
ಮೂರನೇ ಸೋಮೇಶ್ವರನ – ಮಾನಸೋಲ್ಲಾಸ, ಬಿಲ್ಹಣನ – ವಿಕ್ರಮಾಂಕದೇವ ಚರಿತಾ, ವಿಜ್ಞಾನೇಶ್ವರನ – ಮಿತಾಕ್ಷರ
➤ ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು – ಚಂದ್ರಲಾದೇವಿ
ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದನು, “ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” . “ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ – ಮಹಾದೇವಾ ( ದಂಡಾದೀಶ )
ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು.
➤ 6 ನೇ ವಿಕ್ರಮಾಧಿತ್ಯನ ನಂತರ ಮೂರನೇ ಸೋಮೇಶ್ವರ ಅಧಿಕಾರಕ್ಕೆ ಬಂದನು, ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು, ಮಾನಸೋಲ್ಲಾಸದ ಇನ್ನೊಂದು ಹೆಸರು – “ಅಭಿಲಾಷಿತಾರ್ಥ ಚಿಂತಾಮಣಿ ”
“ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”, ಈತನ ಬಿರುದ – “ಸರ್ವಜ್ಞ ಚಕ್ರವರ್ತಿ ”, ಈತನ ಇತರೆ ಬಿರುದುಗಳು – ಭೂಲೋಕಮಲ್ಲ , ತ್ರಿಭುವನ ಮಲ್ಲ
➤ ಕಲ್ಯಾಣಿ ಚಾಲುಕ್ಯರ ಮಂತ್ರಿಗಳ ವಿಧಗಳು – “ ಪ್ರಧಾನ ” ಮತ್ತು “ ಮಹಾಪ್ರಧಾನ ”, ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”, ಸ್ಥಳೀಯ ಆಡಳಿತ ವರ್ಗಗಳು – ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು, ಆಡಳಿತದ ಕೊನೆಯ ಘಟಕ – ಗ್ರಾಮ
ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
ವೈಶ್ಯರನ್ನು – ನಬರ ಎಂದು ಕರೆಯುತ್ತಿದ್ದರು, ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು – ಕಡಿತವರ್ಗಡೆ
➤ ಕಲ್ಯಾಣಿ ಚಾಲುಕ್ಯರ ರಾಜಧಾನಿ – ಬೀದರ್ ಜಿಲ್ಲೆಯ ಕಲ್ಯಾಣ
➤ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ – ರನ್ನ
➤ ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು – ಚಂದ್ರಲಾದೇವಿ
➤ ಕನ್ನಡದ ಮೊದಲ ಪಶುವೈಧ್ಯ ಕೃತಿ – ಗೋವೈದ್ಯ ( ಕೀರ್ತಿವರ್ಮ )
➤ ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ – ಜಾತಕ ತಿಲಕ ( ಶ್ರೀಧರಚಾರ್ಯ )
➤ 3 ನೇ ಸೋಮೇಶ್ವರ ನ ಬಿರುದು – ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
➤ ಅಭಿನವ ಪಂಪ ಎಂದು ಖ್ಯಾತಿವೆತ್ತವರು – ನಾಗಚಂದ್ರಕವಿ
➤ ಕನ್ನಡದ ಪ್ರಪ್ರಥಮ ಕವಯಿತ್ರಿ – ಕಂತಿ
➤ ಅರಿಕೇಸರಿಯ ಆಸ್ಥಾನದ ಕವಿ – ಪಂಪ
➤ ಸಾಹಸ ಭೀಮ ವಿಜಯ – ರನ್ನ
➤ ಆದಿ ಕವಿ ಪಂಪ – ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ – ನಾಗ ಚಂದ್ರ ಕವಿಯ – ರಾಮಚರಿತಪುರಾಣ
➤ ಎರಡನೇ ತೈಲಪನ ಬಿರುದು – ತ್ರೈಲೋಕ ಮಲ್ಲ
➤ ಎರಡನೇ ತೈಲಪನ ದಂಡ ನಾಯಕ – ಬರ್ಫೆ
➤ 6ನೇ ವಿಕ್ರಮಾಧಿತ್ಯನ ದಂಡನಾಯಕ – ದಂಡಾದೀಶ
➤ ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ – ಮದನ ತಿಲಕ (ಚಂದ್ರರಾಜ )
➤ ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು – 2 ನೇ ತೈಲಪ
➤ ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ – 3 ನೇ ತೈಲಪ
➤ ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು – ಕಲಚೂರಿ ಬಿಜ್ಜಳ
➤ ಕಲ್ಯಾಣಿ ಚಾಲುಕ್ಯರ ರಾಜಧಾನಿ – ಬಿದರ್ ಜಿಲ್ಲೆಯ ಬಸವನ ಕಲ್ಯಾಣ
6 ನೇ ವಿಕ್ರಮಾಧಿತ್ಯನ ತಂದೆ ತಾಯಿ – 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ