GKKannadaSpardha Times

ಕನ್ನಡ ವ್ಯಾಕರಣ : ಅಲಂಕಾರ

Share With Friends

ಕಾವ್ಯದ ಸೌಂದರ್ಯವನ್ನು ಉಂಟುಮಾಡುವ ಶಬ್ದ ಮತ್ತು ಅರ್ಥ ಚಮತ್ಕಾರಕ್ಕೆ ‘ಅಲಂಕಾರ’ ಎನ್ನುವರು.
➤ ಅಲಂಕಾರದಲ್ಲಿ 2 ವಿಧ. (ಶಬ್ದಾಲಂಕಾರ, ಅರ್ಥಾಲಂಕಾರ)
1.ಶಬ್ದಾಲಂಕಾರ : ಶಬ್ದ/ ಅಕ್ಷರಗಳ ಜೋಡಣೆಯ ಚಮತ್ಕಾರದಿಂದ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿದ್ದರೆ ಅದೇ ಶಬ್ದಾಲಂಕಾರ.
# ಶಬ್ದಾಲಂಕಾರದ  3 ವಿಧಗಳು.
1. ಅನುಪ್ರಾಸ – ಇದರಲ್ಲಿ ಎರಡು ವಿಧ.
* ವೃತ್ತಾನು ಪ್ರಾಸ: ಒಂದು/ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಪುನರಾವರ್ತಿತವಾಗಿದ್ದರೆ ಅದು ವೃತ್ತಾನು ಪ್ರಾಸ.
ಉದಾ: ಬಲ್ಲವನೆ ಬಲ್ಲ ಬೆಲ್ಲದ ರುಚಿಯ. ಈ ಉದಾಹರಣೆಯಲ್ಲಿ ‘ ಲ’ ವ್ಯಂಜನ ಪದ್ಯದ ಸಾಲಿನಲ್ಲಿ ಪುನರಾವರ್ತನೆಯಾಗಿದೆ.
* ಛೇಕಾನುಪ್ರಾಸ: ಪದ್ಯದ ಸಾಲುಗಳಲ್ಲಿ ಎರಡು/ ಹೆಚ್ಚು ವ್ಯಂಜನಗಳಿಂದ ಕೂಡಿದ ಪದ ಪುನರಾವರ್ತನೆಯಾಗಿದ್ದರೆ ಛೇಕಾನು ಪ್ರಾಸ. ಉದಾ: ಉಗುಳಿ ಉಗುಳಿ ರೋಗ, ಹಾಡಿ ಹಾಡಿ ಕಲಿತರು, ಬರೆದು ಬರೆದು ಓದಿದರು. ಈ ಉದಾಹರಣೆಗಳಲ್ಲಿ ಉಗುಳಿ, ಹಾಡಿ, ಬರೆದು ಎಂಬ ಪದಗಳು ಜೋಡಿಯಾಗಿ ಬಂದಿವೆ.
2. ಯಮಕ – ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದ/ ಪದಭಾಗ ಪದ್ಯದ / ಆದಿ/ ಮಧ್ಯ/ ಅಂತ್ಯದಲ್ಲಿ ಎಲ್ಲಿಯಾದರೂ ನಿಯತವಾಗಿ ಬರುವುದೇ ಯಮಕ.
ಉದಾ: ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿಂದಲ್ಲಿ ಗಲ್ಲಿಗೆ ವನ ಸ್ಥಳಗಳಿಂದ.
ವಿವರಣೆ- ಅಲ್ಲಿಗಲ್ಲಿಗೆ ಪದ ಪ್ರತಿಸಾಲಿನ ಆದಿಯಲ್ಲಿ ನಿಯತವಾಗಿ ಬಂದಿದೆ. ಆದ್ದರಿಂದ ಯಮಕಲಂಕಾರ.
3. ಚಿತ್ರಕವಿತ್ವ : ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ.
ಉದಾ: ನನ್ದನ ನನ್ದನ ನುನ್ನೊನ್ದನ
ಮ್ಯ ಮುನ್ದೆ ನಿನ್ದೆದೆನ್ದೆನೆ ಮುದದಿ.

2. ಅರ್ಥಾಲಂಕಾರ : ಪದಗಳ ಅರ್ಥ ಚಮತ್ಕಾರದಿಂದಾಗಿ ಕಾವ್ಯಸೌಂದರ್ಯ ಹೆಚ್ಚಿದ್ದರೆ ಅದನ್ನು ‘ಅರ್ಥಾಲಂಕಾರ ‘ಎನ್ನುವರು.
ಉಪಮೇಯ ಉಪಮಾನಗಳೊಳಗಿನ ಸಂಬಂಧದಿಂದ ‘ಅಲಂಕಾರ’ ಯಾವುದೆಂದು ತಿಳಿಯಬಹುದು.
*ಉಪಮೇಯ: ಇದನ್ನು ವಣ್ರ್ಯ ಎಂದು ಕರೆಯುವರು. ವಾಕ್ಯದಲ್ಲಿ ಕವಿಯಾವ ವಸ್ತುವನ್ನು ವರ್ಣಿಸುತ್ತಾನೋ ಅದೇ ವಣ್ರ್ಯ ಅಥವಾ ಉಪಮೇಯ.
* ಉಪಮಾನ: ಇದನ್ನು ಅವಣ್ರ್ಯ ಎಂತಲೂ ಕರೆಯುವರು. ಅಂದರೆ ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಅಥವಾ ಮಾನವನ್ನಾಗಿ ಇಟ್ಟುಕೊಂಡು ವರ್ಣಿಸಲಾಗಿದೆಯೋ ಆವಸ್ತುವೆ ಅವಣ್ರ್ಯ ಅಥವಾ ಉಪಮಾನ.
* ಉಪಮವಾಚಕ : ಹೋಲಿಕೆಯ ರೀತಿ, ಅಂತೆ, ಅಂತಿರೆ

# ಅರ್ಥಾಲಂಕಾರದ ವಿಧಗಳು.
*ಸಮಾನಧರ್ಮ/ಉಭತವಾಚಕ: ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ.
1. ಉಪಮಾಲಂಕಾರ : ಉಪಮಾ ಎಂದರೆ ಹೋಲಿಕೆ ಎಂದರ್ಥ ಉಪಮೇಯ ಉಪಮಾನಗಳೊಳಗೆ ಉಪಮಾ(ಹೋಲಿಕೆ) ಇರುವ ಅಲಂಕಾರವೇ ಉಪಮಾಲಂಕಾರ.
ಉದಾ: ರಾಧೆಯು ವಲ್ಲಭ ಕಮಲದಂತೆ ಅರಳಿತು. ಇಲ್ಲಿ ರಾಧೆಗೆ ಸಂತೋಷವಾಗಿದೆ ಎಂದರ್ಥ.
ಇಲ್ಲಿ ಉಪಮೇಯ : ರಾಧೆಯಮುಖ
ಉಪಮಾನ : ಕಮಲ
ಅಲಂಕಾರ : ಉಪಮಾಲಂಕಾರ

# ಉಪಮಾಲಂಕಾರದ ವಿಧಗಳು
1. ಪೂರ್ಣೋಪಮಾಲಂಕಾರ
ಉಪಮೇಯ, ಉಪಮಾನ, ವಾಚಕಪದ ಮತ್ತು ಸಮಾನಧರ್ಮ ಈ ನಾಲ್ಕು ಅಂಶಗಳನ್ನೊಳಗೊಂಡ ಅಲಂಕಾರವೇ ಪೂರ್ಣೋಪಮಾಲಂಕಾರ.
ಉದಾ : ರಾಧೆಯ ಮುಖ ಕಮಲದಂತೆ ಅರಳಿತು.
ಉಪಮೇಯ: ರಾಧೆಯ ಮುಖ
ಉಪಮಾನ : ಕಮಲ
ವಾಚಕಪದ: ಅಂತೆ
ಸಮಾನಧರ್ಮ : ಅರಳುವುದು.

2. ಲುಪ್ತೋಪಮಾಲಂಕಾರ
ಉಪಮೇಯ, ಉಪಮಾನ, ವಾಚಕಪದ ಸಮಾನಧರ್ಮ ಇವುಗಳಲ್ಲಿ ಕೆಲವು ಅಂಶಗಳು ಸ್ಪಷ್ಟವಾಗಿ ಹೇಳಲ್ಪಡದೇ ಇರುವುದೇ ಲಪ್ತೋಪಮಾಲಂಕಾರ.
ಉದಾ: ಅವಳ ಮುಖವು ಚಂದ್ರನಂತಿದೆ.
ಉಪಮಾನ: ಚಂದ್ರ
ಉಪಮೇಯ : ಮುಖ

2.  ರೂಪಕಾಲಂಕಾರ
ಉಪಮೇಯವನ್ನು ಉಪಮಾನವನ್ನಾಗಿ ರೂಪಿಸಿಕೊಳ್ಳುವುದೇ ಅಂದರೆ ಉಪಮೇಯಕ್ಕೂ ಉಪಮನಕ್ಕೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ವಣಿಸುವುದು.
ಉದಾ: ರಾಧೆಯು ಮುಖ ಕಮಲ ಅರಳಿತು
ಉಪಮೇಯ : ರಾಧೆಯ ಮುಖ
ಉಪಮಾನ : ಕಮಲ
ಅಲಂಕಾರ : ರೂಪಕಲಾಂಕಾರ
ಇಲ್ಲಿ ಉಪಮೇಯವಾದ ಸೀತೆಯ ಮುಖಕ್ಕೂ ಉಪಮಾನವಾದ ಕಮಲಕ್ಕೂ ಯಾವ ವ್ಯತ್ಯಾಸವಿಲ್ಲ ಎರಡೂ ಒಂದೇ ಎಂದು ರೂಪಿಸಿರುವುದರಿಂದ ಇದು ರೂಪಕಾಲಂಕಾರ.

3. ದೃಷ್ಟಾಂತಾಲಂಕಾರ : ವರ್ಣನೆಮಾಡುವಾಗ ಕವಿಯು ಒಂದನ್ನೊಂದು ಪ್ರತಿಬಿಂಬಿಸುವ ಹಾಗೆ ಎರಡು ವಾಕ್ಯಗಳನ್ನು ಪ್ರಯೋಗಿಸಿದರೆ ಅಂದರೆ ಬಾರದಭಾವವು ಇನ್ನೊಂದರಲ್ಲಿ ಪ್ರತಿಬಿಂಬದ ಹಾಗೆ ಕಂಡರೆ ಅದನ್ನು ‘ದೃಷ್ಟಾಂತಾಲಂಕಾರ’ ಎಂದು ಕರೆಯುತ್ತೇವೆ.
ಉದಾ : ಮಾತು ಬೆಳ್ಳಿ ಮೌನಬಂಗಾರ
ಮಾತುಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ.
ವಿವರಣೆ- ‘ಮಾತುಬೆಳ್ಳಿ’ ಎಂಬ ಬಿಂಬದಂತಿರುವ ವಾಕ್ಯಕ್ಕೆ ಪ್ರತಿಬಿಂಬವಾಗಿ ‘ಮೌನ ಬಂಗಾರ’ ಎಂಬ ವಾಕ್ಯ ದೃಷ್ಟಾಂತವಾಗಿ ಬಂದಿದೆ ಆದ್ದರಿಂದ ಇದು ದೃಷ್ಟಾಂತ ಅಲಂಕಾರ.

4. ಉತ್ಪ್ರೇಕ್ಷಾಲಂಕಾರ : ಒಂದು ಪದಾರ್ಥವನ್ನಾಗಲಿ, ಸನ್ನೀವೇಶವನ್ನಾಗಲಿ ಮತ್ತೊಂದನ್ನಾಗಿ ವರ್ಣಿಸಿದರೆ ಅದನ್ನು ಉತ್ಪ್ರೇಕ್ಷಾಲಂಕಾರ ಎಂದು ಕರೆಯುತ್ತಾರೆ.
ಉದಾ: ‘ನಿರಪರಾಧಕ್ಕೆ ಮೂಕ ಸಾಕ್ಷಿಯೆಂಬಂತೆ ಬಾಸುಳೆಗಳೆದು ನೆತ್ತೆರುಕ್ಕಿ ಹರಿಯಿತು”.

5.ಅರ್ಥಾಂತರನ್ಯಾಸಾಲಂಕಾರ : ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಲಾಗಲೀ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲೀ ಸಮರ್ಥನೆ ಮಾಡುವುದೇ ಅರ್ಥಾಂತರನ್ಯಾಸಾಲಂಕಾರ ಎಂದು ಕರೆಸಿಕೊಳ್ಳುತ್ತದೆ.
ಉದಾ : ದೇವರು ತನ್ನ ಭಕ್ತರನ್ನು ಎಂದು ಕೈ ಬಿಡುವುದಿಲ್ಲ. ಪ್ರಹ್ಲಾದನನ್ನು ಹರಿಯು ಕೈ ಬಿಡದೆ ಕಾಪಾಡಿದನು.
ದೇವರು ಭಕ್ತರನ್ನು ಕಾಪಾಡುತ್ತಾನೆ ಎಂಬ ವಾಕ್ಯವನ್ನು ವಿಶೇಷವಾಕ್ಯವಾದ ಪಹ್ಲಾದವನ್ನು ದೇವರು ಕಾಪಾಡಿದ್ದಕ್ಕೆ ಸಮರ್ಥಿಸಲಾಗಿದೆ.

6. ಶ್ಲೇಷಾಲಂಕಾರ :  ಬೇರೆ ಬೇರೆ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ವರ್ಣಿಸುವ ವಿಷಯ ಮತ್ತು ಅವಣ್ರ್ಯವಾದ ವಿಷಯಗಳ ಪರವಾಗಿ ಬೇರೆ ಬೇರೆ ಅರ್ಥಕೊಡುವುದೇ ಶ್ಲೇಷಾಲಂಕಾರ.
ಉದಾ: ಕುರುಕುಲಾರ್ಕನುಂ ಅರ್ಕನುಂ ಅಸ್ತಮಯ್ದಿದರ್.
ಅರ್ಕನು ಎಂಬ ಪದವು ವರ್ಣಿಸುವ ವಿಷಯವಾದ ದುರ್ಯೋದನ ಪರವಾಗಿ ಮತ್ತು ಅವಣ್ಯವಾಗಿರುವ ಸೂರ್ಯನ ಪರವಾಗಿ ಬೇರೆ ಬೇರೆ ಅರ್ಥ ಕೊಡುತ್ತದೆ.

7.ದೀಪಕ ಅಲಂಕಾರ : ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳಿಗೆ ಒಂದೇ ಧರ್ಮವಿದೆ ಎಂದು ವರ್ಣಿಸುವುದು.
ಉದಾ: ಗಿಳಿಮರಿ ನೆರೆಯದ ನಂದನವಳಿಸಿಸು ವಿಹರಿಸು
ಪೂಗಳ ಕಳವರದಿಂ, ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ.
ಮೇಲಿನ ಉದಾಹರಣೆಯಲ್ಲಿ- ಗಿರಿಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ ಇವೆಲ್ಲವೂ ಅಪ್ರಸ್ತುತ. ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ.

Leave a Reply

Your email address will not be published. Required fields are marked *

error: Content Copyright protected !!