2024ರ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿ ಬಿಡುಗಡೆ
ಈ ವರ್ಷದ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆರು ದೇಶಗಳ ಪಾಸ್‌ಪೋರ್ಟ್‌ಗಳು ವಿಶ್ವಾದ್ಯಂತ ಅತ್ಯಂತ ಪವರ್‌ಫುಲ್ ಆಗಿವೆ. ಈ ಆರು ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಪೂರ್ವ ವೀಸಾ ಇಲ್ಲದೆ 194 ದೇಶಗಳಿಗೆ ಪ್ರಯಾಣಿಸಬಹುದು. ಆದರೆ ಈ ಪಟ್ಟಿಯಲ್ಲಿ ಭಾರತ 80ನೇ ಸ್ಥಾನದಲ್ಲಿದೆ. ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಜಪಾನ್ ಮತ್ತು ಸಿಂಗಾಪುರ ಮೊದಲ ಸ್ಥಾನದಲ್ಲಿವೆ ಎಂದು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ (Henley Passport Index) ಬಹಿರಂಗಪಡಿಸಿದೆ.
ಭಾರತೀಯ ಪಾಸ್ ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ 62 ದೇಶಗಳಿಗೆ ಭೇಟಿ ನೀಡಬಹುದು. ಕಳೆದ ವರ್ಷ ಈ ಸೂಚ್ಯಂಕದಲ್ಲಿ ಭಾರತ 85ನೇ ಸ್ಥಾನದಲ್ಲಿತ್ತು. ಇದರ ಪ್ರಕಾರ 59 ದೇಶಗಳಿಗೆ ಮಾತ್ರ ಭೇಟಿ ನೀಡಬಹುದಿತ್ತು. ಕಳೆದ ಐದು ವರ್ಷಗಳಿಂದ ಸಿಂಗಾಪುರ ಮತ್ತು ಜಪಾನ್ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಆದರೆ ಈ ಬಾರಿ ಇನ್ನೂ ನಾಲ್ಕು ದೇಶಗಳು ಈ ಪಟ್ಟಿಗೆ ಸೇರಿಕೊಂಡವು. ದಕ್ಷಿಣ ಕೊರಿಯಾ, ಫಿನ್ಲೆಂಡ್ ಮತ್ತು ಸ್ವೀಡನ್ ದೇಶಗಳು ಎರಡನೇ ಸ್ಥಾನದಲ್ಲಿವೆ. ಈ ಪಾಸ್‌ಪೋರ್ಟ್‌ಗಳೊಂದಿಗೆ ನೀವು 193 ದೇಶಗಳಿಗೆ ಹೋಗಬಹುದು.
ಮೂರನೇ ಸ್ಥಾನದಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಇದ್ದು, ಈ ಪಾಸ್‌ಪೋರ್ಟ್ ಇದ್ದರೆ 192 ದೇಶಗಳಿಗೆ ಪ್ರಯಾಣಿಸಬಹುದು. ಈ ಬಾರಿ ಅಫ್ಘಾನಿಸ್ತಾನವು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಅಂದರೆ 104ನೇ ಸ್ಥಾನ. ಆ ದೇಶದ ಪಾಸ್‌ಪೋರ್ಟ್‌ನೊಂದಿಗೆ 28 ದೇಶಗಳಿಗೆ ಮಾತ್ರ ಹೋಗಬಹುದು. ಸೋದರ ರಾಷ್ಟ್ರ ಪಾಕಿಸ್ತಾನ 101ನೇ ಸ್ಥಾನದಲ್ಲಿದೆ. ಭಾರತದ ಒಟ್ಟಾರೆ ಶ್ರೇಯಾಂಕವು ಹಿಂದಿನ ವರ್ಷಕ್ಕಿಂತ ಸ್ಥಿರವಾಗಿ ಉಳಿದಿದೆಯಾದರೂ, ವೀಸಾ-ಮುಕ್ತ ತಾಣಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ.
ಇನ್ನು, ಕೇವಲ 28 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುವ ಮೂಲಕ ಅಫ್ಘಾನಿಸ್ತಾನವು ಕೆಳಪಟ್ಟಿಯಲ್ಲಿದೆ. ಹಾಗೆಯೇ, ಸಿರಿಯಾ ಮತ್ತು ಇರಾಕ್ ಕ್ರಮವಾಗಿ 29 ಮತ್ತು 31 ವೀಸಾ-ಮುಕ್ತ ಸ್ಥಳಗಳಿಗೆ ಮಾತ್ರ ಪ್ರವೇಶವನ್ನು ಒದಗಿಸುತ್ತವೆ. ಪಾಕಿಸ್ತಾನವು 34 ದೇಶಗಳಿಗೆ ಪ್ರವೇಶದೊಂದಿಗೆ ಈ ಕ್ವಾರ್ಟೆಟ್ ಅನ್ನು ಪೂರ್ಣಗೊಳಿಸುತ್ತದೆ.
ಮೊದಲ ಸ್ಥಾನದಲ್ಲಿ ಜಪಾನ್ :
ಅದೇ ರೀತಿ ಜಪಾನಿನ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಗಳು ಅಲ್ಲಿನ 227 ಸ್ಥಳಗಳ ಪೈಕಿ 193 ಸ್ಥಳಗಳಿಗೆ ವೀಸಾ ಇಲ್ಲದೇ (ಮುಕ್ತ) ಭೇಟಿ ನೀಡಬಹುದಾಗಿದೆ. ಜಪಾನಿನ ಪಾಸ್‌ಪೋರ್ಟ್ ಸತತ ಐದನೇ ವರ್ಷಕ್ಕೆ ವಿಶ್ವದ ಎಲ್ಲಾ ಪಾಸ್‌ಪೋರ್ಟ್‌ಗಳಲ್ಲಿ ಅತ್ಯಂತ ಶಕ್ತಿಶಾಲಿ ಎನ್ನಲಾಗಿದೆ. ಏಕೆಂದರೆ ಈ ಪಾಸ್‌ಪೋರ್ಟ್ ಹೊಂದಿರುವವರು ಆ ದೇಶಗಳಲ್ಲಿನ ಒಟ್ಟು ಸ್ಥಳಗಳ ಪೈಕಿ 193 ಕಡೆಗೆ ವೀಸಾ-ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದೆ. ಇಷ್ಟು ಸ್ಥಳಗಳಿಗೆ ವೀಸಾ ಇಲ್ಲದೇ ತೆರಳಲು ಅವಕಾಶ ನೀಡಿರುವ ಪೈಕಿ ಜಪಾನ್ ಅಗ್ರಸ್ಥಾನದಲ್ಲಿದೆ.
ಏನಿದು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ..?
ವಿಶ್ವಾದ್ಯಂತ ಪಾಸ್‌ಪೋರ್ಟ್‌ಗಳಿಗೆ ಶ್ರೇಯಾಂಕ ನೀಡಲು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವು ಅಗ್ರಗಣ್ಯ ಎಂದು ಪರಿಗಣಿಸಲಾಗಿದೆ. ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಒದಗಿಸಿದ ಡೇಟಾದಿಂದ ಅದರ ಶ್ರೇಯಾಂಕಗಳನ್ನು ಪಡೆದುಕೊಂಡಿದೆ. ಇದು ರಾಷ್ಟ್ರಗಳಾದ್ಯಂತ ಪಾಸ್‌ಪೋರ್ಟ್‌ಗಳ ರಾಜತಾಂತ್ರಿಕ ವ್ಯಾಪ್ತಿ ಮತ್ತು ಪ್ರವೇಶವನ್ನು ಪ್ರತಿಬಿಂಬಿಸುತ್ತದೆ. ಈ ಸೂಚ್ಯಂಕವನ್ನು ಸುಮಾರು 20 ವರ್ಷದ ಹಿಂದೆ ಡಾ.ಕ್ರಿಶ್ಚಿಯನ್ ಎಚ್ ಕೈಲಿನ್ ಎಂಬುವವರು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಕಂಡು ಹಿಡಿದರು. ಈ ಸೂಚ್ಯಂಕವು ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA)ನ ವಿಶೇಷ ಮತ್ತು ಅಧಿಕೃತ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ವೀಸಾ ಇಲ್ಲದೆಯೇ ದೇಶಗಳಿಗೆ ಹೋಗಬಹುದಾದ ಮಾಹಿತಿ ಆಧರಿಸಿದ ಶ್ರೇಣಿಗಳನ್ನು ಕೊಡಲಾಗಿದೆ.ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕವು ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಯ ವಿಶೇಷ ಮತ್ತು ಅಧಿಕೃತ ಡೇಟಾವನ್ನು ಆಧರಿಸಿದೆ. ಇದು ಪ್ರಯಾಣದ ಮಾಹಿತಿಯ ವಿಶ್ವದ ಅತಿದೊಡ್ಡ ಮತ್ತು ನಿಖರವಾದ ಡೇಟಾಬೇಸ್ ಅನ್ನು ನಿರ್ವಹಿಸುತ್ತದೆ ಮತ್ತು ಜಾಗತಿಕ ನಾಗರಿಕರಿಗೆ ಪ್ರಮುಖ ಉಲ್ಲೇಖವೆಂದು ಪರಿಗಣಿಸಲಾಗಿದೆ.
ಭಾರತದ ಕಡಿಮೆ ಶ್ರೇಯಾಂಕವು ಪ್ರಪಂಚದಾದ್ಯಂತದ ನಾಗರಿಕರ ಕಡಿಮೆ ಚಲನಶೀಲತೆಯನ್ನು ಸೂಚಿಸುತ್ತದೆ. ದೇಶದ ನಾಗರಿಕರ ಅಂತರರಾಷ್ಟ್ರೀಯ ಚಲನಶೀಲತೆಯ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ವಿಶೇಷವಾಗಿ ವಲಸೆಗೆ ಸಂಬಂಧಿಸಿದ ರಾಜಕೀಯ ಮತ್ತು ಭದ್ರತಾ ಕಾಳಜಿಗಳನ್ನು ಸೂಚಿಸುತ್ತದೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಆತಿಥೇಯ ರಾಷ್ಟ್ರದ ಭದ್ರತೆ ಮತ್ತು ಆರ್ಥಿಕತೆಗೆ ಬೆದರಿಕೆಯೊಡ್ಡುವ ಭಾರತದ ಹೆಚ್ಚಿನ ಜನಸಂಖ್ಯೆಯಿಂದ ಉಂಟಾಗುವ ಅತಿ-ವಲಸೆಯ ಅಪಾಯಗಳ ಬಗ್ಗೆಯೂ ಅನೇಕ ದೇಶಗಳು ಕಾಳಜಿ ವಹಿಸುತ್ತವೆ.
✦ ಇದನ್ನೂ ಓದಿ : ‘ಸೂರ್ಯೋದಯ ಯೋಜನೆ’ಗೆ ಚಾಲನೆ : ಇದರ ಮಹತ್ವ ಮತ್ತು ಲಾಭಗಳೇನು..?
ಟಾಪ್ 10 ಪವರ್‌ಫುಲ್ ಪಾಸ್‌ಪೋರ್ಟ್ :
1.ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ, ಸ್ಪೇನ್ (194 ದೇಶಗಳು)
2.ಫಿನ್ಲ್ಯಾಂಡ್, ದಕ್ಷಿಣ ಕೊರಿಯಾ, ಸ್ವೀಡನ್ (193 ದೇಶಗಳು)
3.ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್, ನೆದರ್ಲ್ಯಾಂಡ್ಸ್ (192 ದೇಶಗಳು)
4.ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್, ಯುನೈಟೆಡ್ ಕಿಂಗ್‌ಡಮ್ (193 ದೇಶಗಳು)
5.ಗ್ರೀಸ್, ಮಾಲ್ಟಾ, ಸ್ವಿಟ್ಜರ್ಲೆಂಡ್ (190 ದೇಶಗಳು)
6.ಜೆಕ್ ರಿಪಬ್ಲಿಕ್, ನ್ಯೂಜಿಲ್ಯಾಂಡ್, ಪೋಲೆಂಡ್ (189 ದೇಶಗಳು)
7.ಕೆನಡಾ, ಹಂಗೇರಿ, ಯುನೈಟೆಡ್ ಸ್ಟೇಟ್ಸ್ (188 ದೇಶಗಳು)
8.ಎಸ್ಟೋನಿಯಾ, ಲಿಥುವೇನಿಯಾ (187 ದೇಶಗಳು)
9.ಲಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ (186 ದೇಶಗಳು)
10.ಐಲ್ಯಾಂಡ್ (185 ದೇಶಗಳು)