ಎಸ್ಡಿಎ, ಎಫ್ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 2
# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಒಂದು ಚದರ ಕೀ.ಮೀ. ನಲ್ಲಿ ವಾಸಿಸುವ ಸರಾಸರಿ ಜನಸಂಖ್ಯೆಯನ್ನು
ಎ. ಒಟ್ಟು ಜನಸಂಖ್ಯೆ ಎನ್ನುವರು
ಬಿ. ಕಿ.ಮೀ ಜನಸಂಖ್ಯೆ ಎನ್ನುವರು
ಸಿ. ಜನಸಾಂದ್ರತೆ ಎನ್ನುವರು
ಡಿ. ಸರಾಸರಿ ಜನಸಂಖ್ಯೆ ಎನ್ನುವರು
2. ಒಂದು ವರ್ಷದಲ್ಲಿ ಜನಿಸುವ ಸಾವಿರ ಮಕ್ಕಳಲ್ಲಿ ಸರಾಸರಿ ಸಾವಿಗೀಡಾಗುವ ಮಕ್ಕಳ ಸಂಖ್ಯೆಯನ್ನು
ಎ. ಲಿಂಗಾನುಪಾತ ಎನ್ನುವರು
ಬಿ. ಕಚ್ಚಾ ಜನನಗತಿ ಎನ್ನುವರು
ಸಿ. ಮಕ್ಕಳ ಮತ್ರ್ಯತೆಯ ಗತಿ ಎನ್ನುವರು
ಡಿ. ಜನಸಾಂಧ್ರತೆ ಎನ್ನುವರು
3. ಬಡತನದ ಪ್ರಮುಖ ಲಕ್ಷಣ
ಎ. ಹಸಿವು ಮತ್ತು ಅರೆಹೊಟ್ಟೆ
ಬಿ. ಪೌಷ್ಟಿಕತೆ ಮತ್ತು ಆರೋಗ್ಯ
ಸಿ. ಶಿಕ್ಷಣ ಮತ್ತು ತರಬೇತಿ
ಡಿ. ಉದ್ಯೋಗ ಅವಕಾಶ
4. ನಿಸ್ಸಹಾಯಕ ವೃಧ್ಧರಿಗೆ ವೃಧ್ಧಾಪ್ಯವೇತನ ನೀಡಲು ಕೈಗೊಂಡಿರುವ ಯೋಜನೆ
ಎ. ಯಶಸ್ವಿನಿ ಯೋಜನೆ
ಬಿ. ಸಂಧ್ಯಾ ಸುರಕ್ಷಾ ಯೋಜನೆ
ಸಿ. ಇಂದಿರಾ ಆವಾಸ್ ಯೋಜನೆ
ಡಿ. ಪ್ರಧಾನ ಮಂತ್ರಿ ಗ್ರಾಮೋದಯ ಯೋಜನೆ
5. ಇತ್ತಿಚೆಗೆ ತೆಲಂಗಾಣ ರಾಜ್ಯವು ಆಂಧ್ರಪ್ರದೇಶದಿಂದ ಪ್ರತ್ಯೇಕತೆಯನ್ನು ಹೊಂದಿದ್ದು, ಈ ಕೆಳಗಿನ ಯಾವ ಸಮಸ್ಯೆಯ ಪ್ರತಿಬಿಂಬವಾಗಿದೆ.
ಎ. ನಕ್ಸಲಿಸಂ
ಬಿ. ಕೋಮುವಾದ
ಸಿ. ಭಾಷಾ ಸಮಸ್ಯೆ
ಡಿ. ಪ್ರಾದೇಶಿಕವಾದ
6. ಈ ಕೆಳಗಿನ ಯಾವ ಆಂಶವು ‘ ಶಿಕ್ಷಣ’ದೊಂದಿಗೆ ಸಂಬಂಧ ಹೊಂದಿಲ್ಲ
ಎ. ಡಿ. ಎಂ. ನಂಜುಡಪ್ಪ ವರದಿ
ಬಿ. ಆರ್. ಓ. ಇ. ಕಾಯಿದೆ 2009
ಸಿ. ಭಾರತ ಸಮವಿಧಾನದ 21 ಎ ವಿಧಿ
ಡಿ. ಸರ್ವ ಶಿಕ್ಷಾ ಅಭಿಯಾನ
7. ತೃತೀಯ ಜಗತ್ತು ಈ ಕೆಳಗಿನ ಒಂದು ಲಕ್ಷಣವನ್ನು ಹೊಂದಿವೆ.
ಎ. ಅಧಿಕತಲಾ ವರಮಾನ ಹೊಂದಿದ ದೇಶಗಳು
ಬಿ. ಅಧಿಕ ಶಸ್ತಾಸ್ತ್ರಗಳನ್ನು ಹೊಂದಿದ ದೇಶಗಳು
ಸಿ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು
ಡಿ. ಅಧಿಕರಾಷ್ಟ್ರೀಯ ಆದಾಯವನ್ನು ಹೊಂದಿರುವ ದೇಶಗಳು
8. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಹೊಂದಿದ್ದ ಮೊದಲ ಭಾರತೀಯರು
ಎ. ವಿ. ಕೆ ಕೃಷ್ಣಮೆನನ್
ಬಿ. ನಟವರ್ ಸಿಂಗ್
ಸಿ. ಆವಹರಲಾಲ್ ನೆಹರು
ಡಿ. ವಿಜಯಲಕ್ಷ್ಮೀ ಪಂಡಿತ್
9. ಈ ಕೆಳಗೆ ವಿಶ್ವಸಂಸ್ಥೆಯ ಕೆಲವು ಸದಸ್ಯ ರಾಷ್ಟ್ರಗಳ ಪಟ್ಟಿಕೊಟ್ಟಿದೆ.
ಎ. ಯು. ಎಸ್.ಎ
ಬಿ. ಭಾರತ
ಸಿ. ಶ್ರೀಲಂಕಾ
ಡಿ. ರಷ್ಯಾ
ಇ. ಬ್ರಿಟನ್
ಎಫ್. ಇಟಲಿ
ಜಿ. ಫ್ರಾನ್ಸ್
ಹೆಚ್. ಚೈನಾ
ಈ ಮೇಲಿನ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಸಂಯೋಜನೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುತ್ತದೆ.
1. ಎ, ಬಿ, ಡಿ, ಇ, ಜಿ
2. ಎ, ಡಿ, ಇ, ಜಿ, . ಹೆಚ್
3. ಎ, ಬಿ, ಸಿ, ಎಫ್, ಜಿ
4. ಎ, ಸಿ, ಇ, ಎಫ್, ಹೆಚ್
10. ವಿಶ್ವಸಂಸ್ಥೆಯ ಈ ಕೆಳಗಿನ ಯಾವ ಪ್ರಧಾನ ಅಂಗವು 1994ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಎ. ಧರ್ಮದರ್ಶಿ ಸಮಿತಿ
ಬಿ. ಆರ್ಥಿಕ ಮತ್ತು ಸಾಮಾಜಿಕ ಸಮಿತಿ
ಸಿ. ಸಚಿವಾಲಯ
ಡಿ. ಅಂತರಾಷ್ಟ್ರೀಯ ನ್ಯಾಯಾಲಯ
11. ಡಿಸೆಂಬರ್ 10, 1948 ಈ ದಿನ ಇತಿಹಾಸದಲ್ಲಿ ಒಂದು ಮಹತ್ವದ ದಿನ ಏಕೆಂದರೆ,
ಎ.ಭಾರತ ಮತ್ತು ಚೀನಾ ನಡುವೆ ಪಂಚಶೀಲ ಒಪ್ಪಂದ ಏರ್ಪಟ್ಟಿತ್ತು.
ಬಿ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ ಮಾಡಿತು
ಸಿ. ವಿಶ್ವಸಂಸ್ಥೆಯು ಶಿಕ್ಷಣದಲ್ಲಿ ಸಾರ್ವತ್ರಿಕತೆ ಹಾಗೂ ಲಿಂಗ ಸಮಾನತೆಯ ಘೋóಣೆ ಮಾಡಿತು
ಡಿ. ವಿಶ್ವಸಂಸ್ಥೆಯು ಯುನಿಸೆಫ್ ಅಂಗವು ಮಕ್ಕಳ ಕಲ್ಯಾಣಕ್ಕಾಗಿ ಶುಭಾಷಯಪತ್ರ ಮಾರಾಟ ವ್ವಯಸ್ಥೆಯನ್ನು ಜಾರಿಗೆ ತಂದಿತು.
12. ಈ ಕೆಳಗಿನ ಯಾವ ಸಂಘಟನೆಯು ವಿಶ್ವಸಂಸ್ಥೆಯ ವಿಶೇಷ ಸೇವಾ ಘಟಕವಲ್ಲ
ಎ.ಡಬ್ಲೂ ಹೆಚ್ ಓ
ಬಿ. ಎಫ್ ಎ ಒ
ಸಿ. ಅಸಿಯಾನ್
ಡಿ. ಯುನೆಸ್ಕೋ
13. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ನಾನು ಎಂಟು ರಾಷ್ಟ್ರಗಳ ಒಕ್ಕೂಟ
2. ನನ್ನ ಜನನ 1985 ರಲ್ಲಿ ಆಯಿತು
3. ನನ್ನ ಕೇಂದ್ರ ಕಛೇರಿ ನೆಫಾಳದ ಕಠ್ಮಂಡುವಿನಲ್ಲಿದೆ.
4. ಪ್ರಾದೇಶಿಕ ಸಹಕಾರ ಏರ್ಪಡಿಸುವುದೇ ನನ್ನ ಕಾರ್ಯ
ಹಾಗಾದರೆ ನಾನು ಯಾರು?
ಎ. ಆಫ್ರಿಕನ್ ಒಕ್ಕೂಟ
ಬಿ. ಆಸಿಯಾನ್
ಸಿ. ಸಾರ್ಕ್
ಡಿ. ಕಾಮನ್ವೆಲ್ತ್ ಒಕ್ಕೂಟ
14. ಭಾರತದಲ್ಲಿ ಕೋಮುವಾದದ ಬೆಳವಣಿಗೆಗೆ ಕಾರಣವಾದ ಅತಿ ಮುಖ್ಯ ಅಂಶ
ಎ. ವಿವಿಧ ಧರ್ಮಗಳ ಅಸ್ಥಿತ್ವ
ಬಿ. ಹಿಂದೆ ಘಟಿಸಿದ ಕೋಮು ಸಂಘರ್ಷಗಳು
ಸಿ. ನಿಗದಿತ ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿ ಸೌಲಭ್ಯ
ಡಿ. ವಿವಿಧ ಕೋಮುಗಳ ಕೆಲವು ನಾಯಕರು ತಮ್ಮ ಕೋಮಿನ ಹಿತಾಸಕ್ತಿಗಾಗಿ ಕೋಮುವಾದದವನ್ನು ಉತ್ತೇಜಿಸುತ್ತಿರುವುದು
15. ವರ್ಣಭೇದ ನೀತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ.
ಎ. ಇದು ಜಾತಿ ಆಧಾರಿತ ತಾರತಮ್ಯ ವ್ಯವಸ್ಥೆ
ಬಿ. ಆಫ್ರಿಕಾ, ಏಷ್ಯ ಮತ್ತು ಅಮೇರಿಕಾ ಖಂಡಗಳಲಿದ್ದ ಒಂದು ಅಮಾನವೀಯ ಪದ್ದತಿ
ಸಿ. ಶ್ವೇತ ವರ್ಣಿಯರ ಹೊಣೆಗಾರಿಕೆ ತತ್ವ ವು ಈ ಪದ್ಧತಿಗೆ ಪುಷ್ಠಿ ನೀಡಿತ್ತು.
ಆಯ್ಕೆಗಳು ;
1. ಹೇಳಿಕೆ ಎ ಮತ್ತು ಬಿ
2. ಹೇಳಿಕೆ ಬಿ ಮತ್ತು ಸಿ
3. ಹೇಳಿಕೆ ಎ ಮತ್ತು ಸಿ
4. ಹೇಳಿಕೆ ಎ, ಬಿ, ಮತ್ತು ಸಿ
16. ಈ ಕೆಳಗಿನ ಹೇಳಿಕೆಗಳನ್ನು ಓದಿ, ಸರಿಯಾದ ಆಯ್ಕೆಯನ್ನು ಗುರುತಿಸಿ
ಪ್ರತಿಪಾದನೆ :
ಎ. ಭಾರತ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ನೀಡಿದೆ.
ಕಾರಣ : (ಆರ್ ) ಭಾರತವು ಮಾನವ ಹಕ್ಕುಗಳಲ್ಲಿ ನಂಬಿಕೆಯನ್ನು ಇರಿಸಿದೆ.
1. ಹೇಳಿಕೆ ಎ ಸರಿ, ಹೇಳಿಕೆ ಆರ್ ತಪ್ಪು
2. ಹೇಳಿಕೆ ಎ ತಪ್ಪು , ಹೇಳಿಕೆ ಆರ್ ಸರಿ
3. ಹೇಳಿಕೆ ಎ ಮತ್ತು ಆರ್ ಗಳೆರಡೂ ಸರಿ. ಆದರೆ ಹೇಳಿಕೆ ಆರ್, ಹೇಳಿಕೆ ಎ ಯ ಸರಿಯಾದ ವಿವರಣೆ
4. ಹೇಳಿಕೆ ಎ ಮತ್ತು ಆರ್ ಗಳೆರಡೂ ಸರಿ ಆದರೆ ಹೇಳಿಕೆ ಆರ್ , ಹೇಳಿಕೆ ಎ ಯ ಸರಿಯಾದ ವಿವರಣೆಯಲ್ಲ.
17. ಫಾರೂಕ್ ಶಿಯಾರ್ ಬ್ರಿಟಿಷರಿಗೆ “ ದಸ್ತಕ” ನೀಡಿದ ಉದ್ದೇಶ
ಎ. ಆಕ್ಟ್ರಾಯ್ ಇಲ್ಲದೆ ವ್ಯಾಪಾರ ನಡೆಸಲು ಪರವಾನಗಿ
ಬಿ. ಸುಂಕವಿಲ್ಲದ ವ್ಯಾಪಾರ ನಡೆಸಲು ಪರವಾನಗಿ
ಸಿ. ಒಳನಾಡಿನಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಪರವಾನಗಿ
ಡಿ. ಹಣಕಾಸನ್ನು ಮುದ್ರಿಸಲು ಪರವಾನಗಿ
18. ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ
ಎ. ಈಸ್ಟ್ ಇಂಡಿಯಾ ಕಂಪನಿಯನ್ನು ನೆದಲ್ಯಾಂಡಿನಲ್ಲಿ ಸ್ಥಾಪಿಸಲಾಯಿತು.
ಬಿ. ಇಂಗ್ಲಿಷರು ತಮ್ಮ ಮೊದಲ ಸರಕುಕೋಠಿಯನ್ನು ಮದ್ರಾಸಿನಲ್ಲಿ ಸ್ಥಾಪಿಸಿದರು.
ಸಿ. ಮೊಘಲ್ ಚಕ್ರವರ್ತಿಯ ಆಸ್ಥಾನಕ್ಕೆ ಸರ್. ಥಾಮಸ್ರೋ ಭೇಟಿ
ಡಿ. ಈಸ್ಟ್ ಇಂಡಿಯಾ ಕಂಪನಿಯನ್ನು ಇಂಗ್ಲೆಂಡಿನಲ್ಲಿ ಸ್ಥಾಪಿಸಲಾಯಿತು.
1. ಡಿ, ಎ, ಸಿ, ಬಿ
2. ಡಿ, ಬಿ, ಸಿ, ಎ
3. ಡಿ, ಎ, ಬಿ, ಸಿ
4. ಡಿ, ಸಿ, ಬಿ, ಎ
19. ಸರಿಯಾದ ಜೋಡಣೆಯನ್ನು ಆಯ್ಕೆ ಮಾಡಿ
ಎ. ಲಾರ್ಡ್ಡಾಲ್ಹೌಸಿ ; ದ್ವಿ ಫ್ರಭುತ್ವ
ಬಿ. ರಾಬರ್ಟ್ಕ್ಲೈವ್ : ದತ್ತು ಮಕ್ಕಳಿಗೆ ಹಕ್ಕಿಲ್ಲ
ಸಿ. ಲಾರ್ಡ್ವೆಲ್ಲೆಸ್ಲಿ : ಸಹಾಯಕ ಸೈನ್ಯ ಪದ್ಧತಿ
ಡಿ. ಲಾರ್ಡ್ಕಾರ್ನ್ವಾಲೀಸ್ : ಮಹಲ್ವಾರಿ ಪದ್ಧತಿ
20. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದ ಬ್ರಿಟಿಷರ ಸಾಮ್ರಾಜ್ಯದಲ್ಲಿ ವಿಲೀನವಾದ ರಾಜ್ಯಗಳು
ಎ. ಸತಾರ
ಬಿ. ಮೈಸೂರು
ಸಿ. ಉದಯಪುರ
ಡಿ. ಹೈದರಾಬಾದ್
ಇ. ಜೈಪುರ
ಎಫ್. ನಾಗಪುರ
1. ಎ, ಸಿ, ಡಿ, ಎಫ್
2. ಎ, ಬಿ, ಸಿ, ಡಿ,
3. ಬಿ, ಡಿ, ಇ, ಎಫ್
4. ಎ, ಸಿ, ಇ, ಎಫ್
21. ಕೇಂದ್ರದ ಬಜೆಟ್ನಿಂದ ಪ್ರಾಂತ್ಯಗಳ ಬಜೆಟ್ನ್ನು ಬೇರ್ಪಡಿಸಿದುದು
ಎ. 1935 ರ ಭಾರತ ಸರ್ಕಾರದ ಕಾಯ್ದೆ
ಬಿ. 1773 ರ ರೆಗ್ಯುಲೇಟಿಂಗ್ ಕಾಯ್ದೆ
ಸಿ. 1919 ರ ಭಾರತೀಯ ಪರಿಷತ್ ಕಾಯ್ದೆ
ಡಿ. 1909 ರ ಭಾರತೀಯ ಪರಿಷತ್ ಕಾಯ್ದೆ
22. ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ
ಎ. ಆಗಸ್ಟ್ ಕೊಡುಗೆ
ಬಿ. ಪೂನಾ ಒಪ್ಪಂದ
ಸಿ. ಮೂರನೇ ದುಂಡು ಮೇಜಿನ ಸಭೆ
ಡಿ. ಅಸಹಕಾರ ಚಳುವಳಿ
23. ಕೆಳಗಿನ ಬಂಡಾಯಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ
ಎ. ಸುರಪುರ ಬಂಡಾಯ
ಬಿ. ಕಿತ್ತೂರು ಬಂಡಾಯ
ಸಿ. ಈಸೂರು ಬಂಡಾಯ
ಡಿ. ದೋಂಡಿಯಾ ವಾಘನ ಬಂಡಾಯ
1. ಎ, ಬಿ, ಸಿ, ಡಿ
2. ಖ, ಬಿ, ಎ, ಸಿ
3. ಬಿ, ಡಿ, ಎ, ಸಿ
4. ಡಿ, ಎ, ಬಿ, ಸಿ
24. “ ಪೀಲ್” ಸಮಿತಿಯ ನೇಮಕದ ಉದ್ದೇಶ
ಎ. ಸೈನಿಕ ವ್ಯವಸ್ಥೆಯ ಮರು ವಿನ್ಯಾಸ
ಬಿ. ಪೋಲಿಸ್ ವ್ಯವಸ್ಥೆಯ ಮರು ವಿನ್ಯಾಸ
ಸಿ. ಭೂ ಸುಧಾರಣೆಯ ನಿಯಮಗಳನ್ನು ರೂಪಿಸಲು
ಡಿ. ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ
25. 1857 ರ ದಂಗೆಗೆ ಈ ಕೆಳಗಿನ ಯಾವ ವರ್ಗ ಬೆಂಬಲ ನೀಡಲಿಲ್ಲ
ಎ. ಬಹುತೇಕ ಮಧ್ಯಮ ವರ್ಗದವರು
ಬಿ. ಬಹುತೇಕ ಕುಶಲಕರ್ಮಿಗಳು
ಸಿ. ಬಹುತೇಕ ರೈತರು
ಡಿ. ಬಹುತೇಕ ಬಡವರ್ಗದವರು
[ ಎಸ್ಡಿಎ, ಎಫ್ಡಿಎ ಪರೀಕ್ಷೆಗೆ ಉಪಯುಕ್ತ 25 ಬಹು ಆಯ್ಕೆ ಪ್ರಶ್ನೆಗಳು ]
# ಉತ್ತರಗಳು :
1. ಸಿ. ಜನಸಾಂದ್ರತೆ ಎನ್ನುವರು
2. ಸಿ. ಮಕ್ಕಳ ಮತ್ರ್ಯತೆಯ ಗತಿ ಎನ್ನುವರು
3. ಎ. ಹಸಿವು ಮತ್ತು ಅರೆಹೊಟ್ಟೆ
4. ಬಿ. ಸಂಧ್ಯಾ ಸುರಕ್ಷಾ ಯೋಜನೆ
5. ಡಿ. ಪ್ರಾದೇಶಿಕವಾದ
6. ಎ. ಡಿ. ಎಂ. ನಂಜುಡಪ್ಪ ವರದಿ
7. ಸಿ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು
8. ಡಿ. ವಿಜಯಲಕ್ಷ್ಮೀ ಪಂಡಿತ್
9. 2. ಎ, ಡಿ, ಇ, ಜಿ, . ಹೆಚ್
10. ಎ. ಧರ್ಮದರ್ಶಿ ಸಮಿತಿ
11. ಬಿ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ ಮಾಡಿತು
12. ಸಿ. ಅಸಿಯಾನ್
13. ಸಿ. ಸಾರ್ಕ್
14. ಡಿ. ವಿವಿಧ ಕೋಮುಗಳ ಕೆಲವು ನಾಯಕರು ತಮ್ಮ ಕೋಮಿನ ಹಿತಾಸಕ್ತಿಗಾಗಿ ಕೋಮುವಾದದವನ್ನು ಉತ್ತೇಜಿಸುತ್ತಿರುವುದು
15. 2. ಹೇಳಿಕೆ ಬಿ ಮತ್ತು ಸಿ
16. 3. ಹೇಳಿಕೆ ಎ ಮತ್ತು ಆರ್ ಗಳೆರಡೂ ಸರಿ. ಆದರೆ ಹೇಳಿಕೆ ಆರ್, ಹೇಳಿಕೆ ಎ ಯ ಸರಿಯಾದ ವಿವರಣೆ
17. ಬಿ. ಸುಂಕವಿಲ್ಲದ ವ್ಯಾಪಾರ ನಡೆಸಲು ಪರವಾನಗಿ
18. 1. ಡಿ, ಎ, ಸಿ, ಬಿ
19. ಸಿ. ಲಾರ್ಡ್ವೆಲ್ಲೆಸ್ಲಿ : ಸಹಾಯಕ ಸೈನ್ಯ ಪದ್ಧತಿ
20. 4. ಎ, ಸಿ, ಇ, ಎಫ್
21. ಸಿ. 1919 ರ ಭಾರತೀಯ ಪರಿಷತ್ ಕಾಯ್ದೆ
22. ಎ. ಆಗಸ್ಟ್ ಕೊಡುಗೆ
23. 2. ಖ, ಬಿ, ಎ, ಸಿ
24. ಎ. ಸೈನಿಕ ವ್ಯವಸ್ಥೆಯ ಮರು ವಿನ್ಯಾಸ
25. ಎ. ಬಹುತೇಕ ಮಧ್ಯಮ ವರ್ಗದವರು