GKIndian ConstitutionMultiple Choice Questions SeriesQuizSpardha Times

ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1

Share With Friends

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ.
1. ಕೇಂದ್ರದಲ್ಲಿ ಸಚಿವ ಸಂಪುಟವು ಸಾಮೂಹಿಕವಾಗಿ ಸಂಸತ್ತಿಗೆ ಜವಾಬ್ದಾರವಾಗಿರುತ್ತದೆ.
2. ಕೇಂದ್ರ ಮಂತ್ರಿಗಳು ಭಾರತದ ರಾಷ್ಟ್ರಪತಿಯು ಬಯಸುವವರೆಗೆ ಮಾತ್ರ ಅಧಿಕಾರದಲ್ಲಿರುತ್ತಾರೆ.
3. ಪ್ರಧಾನ ಮಂತ್ರಿಯು ರಾಷ್ಟ್ರಪತಿಯವರಿಗೆ ಶಾಸನಗಳ ಕುರಿತಾದ ಪ್ರಸ್ತಾಪಗಳನ್ನು ತಿಳಿಸಬೇಕು.
ಈ ಕೆಳಗಿನವುಗಳಲ್ಲಿ ಯಾವುದು ಸರಿ.?
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

2. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ.
1. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ಯೋಜನಾ ಆಯೋಗದ ಅಂಗ
2. ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳನ್ನು ಭಾರತ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿಡಲಾಗಿದೆ.
3. ಭಾರತದ ಸಂವಿಧಾನವು ಆರ್ಥಿಕಾಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಯೋಜನೆಗಳ ಸಿದ್ಧತೆಯಲ್ಲಿ ಪಂಚಾಯತಿಗಳಿಗೆ ಕಾರ್ಯವನ್ನು ವಹಿಸಬೇಕು ಎಂದು ಹೇಳುತ್ತದೆ.
ಸರಿಯಾದ ಆಯ್ಕೆ ಮಾಡಿ..?
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

3. ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ.
ಎ. ರಾಜ್ಯಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ರಾಜ್ಯಸಭೆಯ ಸದಸ್ಯರಾಗಿರುವುದಿಲ್ಲ.
ಬಿ. ಸಂಸತ್ತಿನ ಎರಡೂ ಸದನಗಳ ನಾಮನಿರ್ದೇಶಿತ ಸದಸ್ಯರಿಗೆ ರಾಷ್ಟ್ರಪತಿಯ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರವಿಲ್ಲ. ಆದರೆ ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿ ಮತ ಚಲಾಯಿಸಬಹುದು.
ಸರಿಯಾದ ಆಯ್ಕೆ ಯಾವುದು?
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ಅಲ್ಲ

4.  ಕೆಳಗಿನ ಹೇಳಿಕೆಗಳನ್ನು ಗಮನಿಸಿ.
ಸಂವಿಧಾನಾತ್ಮಕ ಸರ್ಕಾರವೆಂದರೆ..
1. ರಾಷ್ಟ್ರದ ಅಧಿಕಾರದ ದೃಷ್ಟಿಯಿಂದ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮಕಾರಿ ನಿರ್ಬಂಧಗಳನ್ನು ಹಾಕಲಾಗುತ್ತದೆ.
2. ವೈಯಕ್ತಿಕ ಸ್ವಾತಂತ್ರ್ಯದ ದ್ಠಷ್ಟಿಯಿಂದ ರಾಷ್ಟ್ರದ ಅಧಿಕಾರದ ಮೇಲೆ ಪರಿಣಾಮಕಾರಿ ನಿರ್ಬಂಧಗಳನ್ನು ಹಾಕಲಾಗಿರುತ್ತದೆ.
ಈ ಮೇಲಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 1 2 ಎರಡೂ ಸರಿ ಅಲ್ಲ

5. ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯಗಳ ರಾಜ್ಯಪಾಲರ ವಿವೇಚನೆಗೆ ಬಿಡಲಾದ ಅಧಿಕಾರಗಳಾಗಿವೆ?
1. ಭಾರತದ ರಾಷ್ಟ್ರಪತಿಗೆ ರಾಷ್ಟ್ರಪತಿ ಆಡಳಿತವನ್ನು ಹೇರುವ ಕುರಿತು ವರದಿಯನ್ನು ಕಳಿಸಲು
2. ಮಂತ್ರಿಗಳ ನೇಮಕ
3. ರಾಜ್ಯ ವಿಧಾನಸಭೆಯ ಪಾಸು ಮಾಡಿದ ಕೆಲವು ಮಸೂದೆಗಳನ್ನು ಭಾರತದ ರಾಷ್ಟ್ರಪತಿಗಳ ಅವಗಾಹನೆಗೆ ತರಲು ಮೀಸಲಿಡುವುದು.
4. ರಾಜ್ಯ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳ ತಯಾರಿ
ಈ ಮೇಲಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
ಎ. 1 ಮತ್ತು 2 ಮಾತ್ರ
ಬಿ. 1 ಮತ್ತು 3 ಮಾತ್ರ
ಸಿ. 2, 3 ಮತ್ತು 4 ಮಾತ್ರ
ಡಿ. 1, 2, 3 ಮತ್ತು 4

6. ಭಾರತದ ಸಂವಿಧಾನದ ಯಾವ ಅನುಸೂಚಿಯು ಪಕ್ಷಾಂತರ ನಿಷೇಧ ನಿಯಮವನ್ನು ಹೊಂದಿವೆ?
ಎ. 2 ನೇ ಅನುಸೂಚಿ
ಬಿ. 5 ನೇ ಅನುಸೂಚಿ
ಸಿ. 8 ನೇ ಅನುಸೂಚಿ
ಡಿ. 10 ನೇ ಅನುಸೂಚಿ

7. ರಾಜ್ಯಸಭೆಯ 2/3 ನೆಯ ಬಹುಮತದ ಬೆಂಬಲ ಪಡೆದ ನಿರ್ಣಯವನ್ನು 312 ನೇ ಅನುಚ್ಛೇದದ ಅನ್ವಯ ಜಾರಿಗೊಳಿಸುವ ವಿಷಯ…..
ಎ. ಕೇಂದ್ರ ಸಚಿವಾಲಯದ ಸೇವೆಯನ್ನು ಸೃಷ್ಠಿಸಬಹುದು
ಬಿ. ಕೇಂಧ್ರಿಯ ಸೇವೆಯನ್ನು ಸೃಷ್ಟಿಸಬಹುದು.
ಸಿ. ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸಬಹುದು ಮತ್ತು ಈಗಿರುವ ಅಖಿಲ ಭಾರತ ಸೇವೆಯನ್ನು ರದ್ದುಪಡಿಸಬಹುದು.
ಡಿ. ಒಂದು ರಾಜ್ಯದ ಕೋರಿಕೆಯ ಮೇರೆಗೆ ರಾಜ್ಯ ಸೇವೆಯನ್ನು ಸೃಷ್ಠಿಸಬಹುದು.

8. 92 ನೇ ಸಂವಿಧಾನದ ತಿದ್ದುಪಡಿ, 2003 ರ ಮೂಲಕ ಸಂವಿಧಾನದ 8 ನೇ ಅನುಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು?
ಎ. ಸಂತಾಲಿ, ಬೋಡೋ, ಕೊಂಕಣಿ ಮತ್ತು ಉದು
ಬಿ. ಬೋಡೋ, ಮಣಿಪುರಿ, ಭೋಜ್‍ಪುರಿ ಮತ್ತು ಸಂತಾಲಿ
ಸಿ. ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂತಾಲಿ
ಡಿ. ಕೊಂಕಣಿ, ತುಳು, ಕೊಡವ ಮತ್ತು ಭೋಜ್‍ಪುರಿ

9. ಭಾರತೀಯ ಸಂವಿಧಾನದ 86 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?
ಎ. ವೀಸಾ ಕಾಯಿದೆ
ಬಿ. ಪ್ರಾಥಮಿಕ ಶಿಕ್ಷಣ
ಸಿ. ಆಸ್ತಿ
ಡಿ. ಪಂಚಾಯತ್‍ರಾಜ್

10. ಮೈಸೂರಿನ ಕೆಳಕಂಡ ಯಾವ ರಾಜ್ಯಪಾಲರು ಅನಂತರದಲ್ಲಿ ಭಾರತದ ರಾಷ್ಟ್ರಪತಿಯಾದರು?
ಎ. ಫಕ್ರುದ್ದೀನ್ ಅಹ್ಮದ್
ಬಿ. ವಿ. ವಿ. ಗಿರಿ
ಸಿ. ಸಂಜೀವ್‍ರೆಡ್ಡಿ
ಡಿ. ಮಾವಲಂಕರ್

11. ಭಾರತದ ಸಂವಿಧಾನದ ಕರಡು ತಯಾರಿಕೆಯ ಸಮೀತಿ ಅಧ್ಯಕ್ಷರು ಯಾರು?
ಎ. ಜೆ. ಬಿ. ಕೃಪಲಾನಿ
ಬಿ. ರಾಜೇಂದ್ರ ಪ್ರಸಾದ್
ಸಿ. ಜೆ. ಎನ್ . ನೆಹರು
ಡಿ. ಬಿ. ಆರ್. ಅಂಬೇಡ್ಕರ್

12. ಸಂವಿಧಾನದ ಯಾವ ವಿಧಿಯು ಭಾರತೀಯ ಚುನಾವಣಾ ಆಯೋಗವನ್ನು ರಚಿಸಲು ಅವಕಾಶ ನೀಡಿದೆ….
ಎ. 320 ನೆ ವಿಧಿ
ಬಿ 321 ನೇ ವಿಧಿ
ಸಿ. 324 ವಿಧಿ
ಡಿ. 326 ನೇ ವಿಧಿ

13. ಭಾರತದ ಸಂವಿಧಾನವು ಪ್ರಪ್ರಥವಾಗಿ ಯಾವಾಗ ತಿದ್ದುಪಡಿಗೆ ಒಳಪಟ್ಟಿತು?
ಎ. 1955
ಬಿ. 1956
ಸಿ. 1954
ಡಿ. 1951

14. ಈ ಕೆಳಗಿನವುಗಳಲ್ಲಿ ಯಾವುದು ಸಂಸದೀಯ ಸಮಿತಿಯಲ್ಲ?
ಎ. ಬೇಡಿಕೆ ಮೇಲಿನ ಅನುದಾನ ಸಮಿತಿ
ಬಿ. ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಸಿ. ಸಾರ್ವಜನಿಕ ಸ್ವಾಮ್ಯದ ಘಟಕಗಳ ಮೇಲಿನ ಸಮಿತಿ
ಡಿ. ಅಂದಾಜು ಸಮಿತಿ

15. ಯಾವ ಲೋಕಸಭೆಯ ಅವಧಿಯನ್ನು ಸಂವಿಧಾನ ನಿಗದಿಪಡಿಸಿರುವ 5 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಲಾಗಿತ್ತು?
ಎ. 4 ನೇ ಲೋಕಸಭೆ
ಬಿ. 5 ನೆ ಲೋಕಸಭೆ
ಸಿ. 6 ನೆ ಲೋಕಸಭೆ
ಡಿ. 7 ನೆ ಲೋಕಸಭೆ

[ ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -6 ]

# ಉತ್ತರಗಳು :
1. ಬಿ. 2 ಮತ್ತು 3 ಮಾತ್ರ
2. ಬಿ. 2 ಮತ್ತು 3 ಮಾತ್ರ
3. ಬಿ. 2 ಮಾತ್ರ
4. ಸಿ. 1 ಮತ್ತು 2
5. ಬಿ. 1 ಮತ್ತು 3 ಮಾತ್ರ
6. ಡಿ. 10 ನೇ ಅನುಸೂಚಿ
7. ಸಿ. ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸಬಹುದು ಮತ್ತು ಈಗಿರುವ ಅಖಿಲ ಭಾರತ ಸೇವೆಯನ್ನು ರದ್ದುಪಡಿಸಬಹುದು.

8. ಸಿ. ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂತಾಲಿ
9. ಬಿ. ಪ್ರಾಥಮಿಕ ಶಿಕ್ಷಣ
10. ಬಿ. ವಿ. ವಿ. ಗಿರಿ
11. ಡಿ. ಬಿ. ಆರ್. ಅಂಬೇಡ್ಕರ್
12. ಸಿ. 324 ವಿಧಿ
13. ಡಿ. 1951
14. ಎ. ಬೇಡಿಕೆ ಮೇಲಿನ ಅನುದಾನ ಸಮಿತಿ
15. ಬಿ. 5 ನೆ ಲೋಕಸಭೆ

.

 

 

 

 

 

Leave a Reply

Your email address will not be published. Required fields are marked *

error: Content Copyright protected !!