ರಾಷ್ಟ್ರೀಯ ಕಾನೂನು ಸೇವೆಗಳ ದಿನ
ಭಾರತೀಯ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ 1987 ರ ಜಾರಿಯ ನೆನಪಿಗಾಗಿ ಪ್ರತಿವರ್ಷ ನವೆಂಬರ್ 9 ರಂದು ಭಾರತದಾದ್ಯಂತ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ. Ii. ಭಾರತದ ಸುಪ್ರೀಂ ಕೋರ್ಟ್ 1995 ರಲ್ಲಿ ದಿನವನ್ನು ಪ್ರಾರಂಭಿಸಿತು.
ಜನರಲ್ಲಿ ಕಾನೂನು ಜಾಗೃತಿ ಮೂಡಿಸುವುದು, ಅಂದರೆ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ 1987 ರ ಅಡಿಯಲ್ಲಿ ವಿವಿಧ ನಿಬಂಧನೆಗಳು ಮತ್ತು ದಾವೆ ಹೂಡುವವರ ಹಕ್ಕುಗಳ ಬಗ್ಗೆ ಈ ದಿನದ ಪ್ರಾಥಮಿಕ ಗುರಿ. ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಸಲುವಾಗಿ, ಬಡ ಮತ್ತು ದುರ್ಬಲ ವರ್ಗದ ಜನರಿಗೆ ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ನೀಡುವ ದಿನವೂ ಇದೆ.
ನಮ್ಮ ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿವೆ. ಇವು ದೇಶದ ಜನಜೀವನ, ವ್ಯವಹಾರ, ರಾಜಕೀಯ, ನ್ಯಾಯಾಪಾಲನೆ ಇತ್ಯಾದಿಗಳು ಸುಗಮವಾಗಿ ಸಾಗುವಂತೆ ಮಾಡುವ ಇರುವ ಸರ್ಕಾರಿ ಸಂಸ್ಥೆಗಳು. ಈ ಪೈಕಿ ಶಾಸಕಾಂಗದಲ್ಲಿ ಜನನಾಯಕರ ಆಯ್ಕೆ ಅವರ ಕಾರ್ಯಕ್ಷೇತ್ರ ಇತ್ಯಾದಿ ಪ್ರಕ್ರಿಯೆ ನಡೆದರೆ, ಕಾರ್ಯಾಂಗದಲ್ಲಿ ಆಡಳಿತ ಕೆಲಸಗಳು ನಡೆಯುತ್ತವೆ.
ನ್ಯಾಯಾಂಗವು ಜನರಿಗೆ ನ್ಯಾಯ ನೀಡುವ ಚಟುವಟಿಕೆಯಲ್ಲಿ ತೊಡಗಿಗೊಂಡಿದೆ. ಆದರೆ ನ್ಯಾಯಾಂಗದ ಸೇವೆ ಎಲ್ಲಾ ಜನರಿಗೂ ಸುಲಭವಾಗಿ ಮತ್ತು ಬೇಕಾದ ಸಂದರ್ಭದಲ್ಲಿ ಸಿಗುತ್ತಿಲ್ಲ ಎಂಬೊಂದು ಅಪವಾದ ಇದೆ.
ವಿಶೇಷವಾಗಿ ಮಹಿಳೆಯರು, ಅಂಗವಿಕಲರು, ಮಕ್ಕಳಿಗೆ ದುರ್ಬಲ ವರ್ಗದವರು, ಹಿಂದುಳಿದ ವರ್ಗದವರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ ಎಂಬ ಕೂಗು ಕೇಳಿ ಬರುತ್ತವೆ. ಈ ನಿಟ್ಟಿನಲ್ಲಿಯೇ ನಮ್ಮ ದೇಶದಲ್ಲಿ ನವೆಂಬರ್ 9 ಅನ್ನು ರಾಷ್ಟ್ರೀಯ ಕಾನೂನು ಸೇವೆ ದಿನವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು ಅಗತ್ಯವಿರುವವರಿಗೆ ಕಾನೂನು ಸೇವೆಗಳನ್ನು ನೀಡಲಾಗುತ್ತದೆ. ಮುಖ್ಯವಾಗಿ ದೇಶದಲ್ಲಿರುವ ವಿವಿಧ ಕಾನೂನುಗಳು ಮತ್ತು ಅದರ ಪ್ರಯೋಜನಗಳನ್ನು ಜನರಿಗೆ ವಿವರಿಸಿ ಹೇಳುವ ಕಾರ್ಯಕ್ರಮಗಳು ನಡೆಯುತ್ತವೆ.
ಈ ಕಾನೂನು ಸೇವೆ ದಿನವನ್ನು ಭಾರತದ ಎಲ್ಲಾ ರಾಜ್ಯಗಳು ಆಚರಿಸುತ್ತವೆ. ವಿವಿಧೆಡೆ ಕಾನೂನು ಸಾಕ್ಷ ರತೆ ಶಿಬಿರಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ, ಅರೆ ಸರ್ಕಾರಿ ಸಂಸ್ಥೆಗಳೂ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತವೆ.
ಈ ದಿನಾಚರಣೆಯನ್ನು 1995 ರಲ್ಲಿ ಸುಪ್ರೀಂಕೋರ್ಟ್ ಮೊದಲ ಬಾರಿಗೆ ಆರಂಭಿಸಿತು. ಸಮಾಜದ ದುರ್ಬಲ ವರ್ಗದವರಿಗೆ ಮುಖ್ಯವಾಗಿ ಬಡವರಿಗೆ ಕಾನೂನು ಸೇವೆ ಸಿಗುವಂತಾಗಬೇಕು ಈ ದಿನದ ಪ್ರಮುಖ ಧ್ಯೇಯ. ಸಾಧ್ಯವಾದಷ್ಟು ಕಾನೂನು ಸೇವೆಗಳು ಉಚಿತವಾಗಿ ಸಿಗಬೇಕು ಎಂಬ ಉದ್ದೇಶವನ್ನೂ ಈ ದಿನ ಹೊಂದಿದೆ.