GKSpardha TimesTET - CET

ಭಾರತ ಸರ್ಕಾರದ ಹೊಸ ಶಿಕ್ಷಣ ನೀತಿ -2020

Share With Friends

ಭಾರತ ಸರ್ಕಾರದ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿನ ಪರಿವರ್ತನೆಯ ಸುಧಾರಣೆಗಳ ಕುರಿತಾಗಿ ಹಲವಾರು ಸಾರ್ವಜನಿಕ ಸಮಾಲೋಚನೆಗಳು ನಡೆದವು.

ಈ ಶಿಕ್ಷಣ ಸಮಿತಿಯ ಅಧ್ಯಕ್ಷರು ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ರವರು.  2019 ರಲ್ಲಿ ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವಾಲಯವು ಕರಡು ಹೊಸ ಶಿಕ್ಷಣ ನೀತಿಯನ್ನು ಬಿಡುಗಡೆ ಮಾಡಿತು. ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿತರುವ ಉದ್ದೇಶದಿಂದ 2020ರ ಜುಲೈ 29 ರಂದು ಕ್ಯಾಬಿನೆಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿತು. ಹೊಸ ನೀತಿಯು ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿ 1986ನ್ನು ಬದಲಾಯಿಸುತ್ತದೆ.

ಈ ನೀತಿಯು ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ವೃತ್ತಿಪರ ತರಬೇತಿಗೆ ಸಮಗ್ರ ಚೌಕಟ್ಟಾಗಿದೆ.
ಈ ಶಿಕ್ಷಣ ನೀತಿ ಈಗಿರುವ 10+ 12 ರಚನೆಯನ್ನು 5+3+3+4 ಮಾದರಿಯಾಗಿ ಬದಲಾಯಿಸಲಾಗುತ್ತದೆ.

1. ಅಡಿಪಾಯ ಹಂತ-
3 ವರ್ಷಗಳ ಪ್ರಿಸ್ಕೂಲ್ ಅಥವಾ ಅಂಗನವಾಡಿ, ಮತ್ತು ಪ್ರಾಥಮಿಕ ಶಾಲೆಯಲ್ಲಿ 1 ಮತ್ತು 2 ತರಗತಿಗಳು .   3-8 ವರ್ಷದ ಮಕ್ಕಳನ್ನು ಒಳಗೊಳ್ಳುತ್ತದೆ. ಇದು ಚಟುವಟಿಕೆ ಆಧಾರಿತ ಕಲಿಕೆ.

2. ಪೂರ್ವಸಿದ್ಧತಾ ಹಂತ
3 ರಿಂದ 5ನೇ ತರಗತಿಗಳು 8ರಿಂದ 11 ವರ್ಷ ವಯಸ್ಸಿನವರನ್ನು ಒಳಗೊಂಡಿರುತ್ತದೆ. ಇದರಲ್ಲಿ ಓದುವುದು, ಬರೆಯುವುದು, ಭಾಷೆಗಳು, ಕಲೆ, ವಿಜ್ಞಾನ, ದೈಹಿಕ ಶಿಕ್ಷಣ, ವಿಷಯಗಳನ್ನು ಪರಿಚಯಿಸುತ್ತದೆ.

3. ಮಧ್ಯ ಹಂತ
6 ರಿಂದ 8 ನೇ ತರಗತಿಗಳು. 11- 14 ವರ್ಷದೊಳಗಿನ ಮಕ್ಕಳನ್ನು ಒಳಗೊಳ್ಳುತ್ತದೆ. ಇದು ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ, ಕಲೆ, ವಿಷಯಗಳಲ್ಲಿ ಪರಿಕಲ್ಪನೆಯನ್ನು ಪರಿಚಯಿಸುತ್ತದೆ.

4. ದ್ವೀತಿಯ ಹಂತ
9 ರಿಂದ 12 ನೇ ತರಗತಿಗಳು. 14- 18 ವರ್ಷ ವಯಸ್ಸಿನವರು. ಇದರಲ್ಲಿ 9 ಮತ್ತು 10 ನೇ ತರಗತಿ ಮೊದಲ ಹಂತ,
11-12 ನೇ ತರಗತಿಗಳು ಎರಡನೆ ಹಂತ ಒಳಗೊಂಡಿದೆ. ಈ 4 ವರ್ಷಗಳ ಅಧ್ಯಯನವು ಆಳ ಮತ್ತು ವಿಮರ್ಶಾತ್ಮಕ ಚಿಂತನೆಗಳೊಂದಿಗೆ ಅಧ್ಯಯನವನ್ನು  ಉದ್ದೇಶಿಸಿದೆ. ವಿಷಯಗಳ ಬಹುಆಯ್ಕೆಯನ್ನು ಒದಗಿಸಲಾಗುವುದು.

ಪ್ರತಿ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳ ನಡೆಯುವ ಬದಲು, ವಿದ್ಯಾರ್ಥಿಗಳು 3,5,8 ನೇ ತರಗತಿಗಳಲ್ಲಿ ಕೇವಲ ಮೂರು ಪರೀಕ್ಷೆಗಳಿಗೆ ಉತ್ತರಿಸುತ್ತಾರೆ. 10-12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಮುಂದುವರಿಸಲಾಗುವುದು. ಈ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಪಠ್ಯಕ್ರಮದ ಹೊರೆ ಕಡಿಮೆ ಮಾಡುವುದು.

Leave a Reply

Your email address will not be published. Required fields are marked *

error: Content Copyright protected !!