GK

ಭಾರತೀಯ ರಿಸರ್ವ ಬ್ಯಾಂಕ್ (ಆರ್‌ಬಿಐ) – Reserve Bank of India (RBI)

Share With Friends

ಭಾರತೀಯ ರಿಸರ್ವ್ ಬ್ಯಾಂಕ್  ಭಾರತದ ಕೇಂದ್ರೀಯ ಬ್ಯಾಂಕ್. ಇದನ್ನು ಏಪ್ರಿಲ್ 1 1935 ರಂದು ಸ್ಥಾಪಿಸಲಾಯಿತು. ರಿಸರ್ವ ಬ್ಯಾಂಕಿನ ಕೇಂದ್ರ ಕಛೇರಿಯನ್ನು ಮೊದಲಿಗೆ ಕೊಲ್ಕತ್ತದಲ್ಲಿ ಪ್ರಾರಂಭಿಸಿದರಾದರೂ ನಂತರ 1937ರಲ್ಲಿ ಮುಂಬಯಿಗೆ ಬದಲಾಯಿಸಲಾಯಿತು. 1949ರಿಂದ ಭಾರತ ಸರ್ಕಾರವು ಇದರ ಒಡೆತನವನ್ನು ಹೊಂದಿದೆ. ಶಕ್ತಿ ಕಾಂತ್ ದಾಸ್ ಬ್ಯಾಂಕ್‌ನ ಹಾಲಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಇದು 22 ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ರಿಜರ್ವ್ ಬ್ಯಾಂಕು ದೇಶದ ಅತ್ಯುನ್ನತ ಬ್ಯಾಂಕ್ ಆಗಿದೆ.

# ಆರ್‌ಬಿಐ ಇತಿಹಾಸ :
ಮೊದಲ ವಿಶ್ವಯುದ್ಧದ ನಂತರದ ಆರ್ಥಿಕ ತೊಂದರೆಗಳಿಗೆ ಸ್ಪಂದಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು 1 ಏಪ್ರಿಲ್ 1935 ರಂದು ಸ್ಥಾಪಿಸಲಾಯಿತು. ಈ ವಿಧಾನಸೂಚಿಗಳನ್ನು ಆರ್‌ಬಿಐ ಕಾಯ್ದೆ 1934 ಎಂದು ಅಂಗೀಕರಿಸಿದ ಕೇಂದ್ರ ವಿಧಾನಸಭೆಯು ಮಂಡಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಪರಿಕಲ್ಪನೆ ಮಾಡಲಾಯಿತು.

ಡಾ. ಬಿ. ಆರ್. ಅಂಬೇಡ್ಕರ್ ಅವರು “ರೂಪಾಯಿ ಸಮಸ್ಯೆ – ಅದರ ಮೂಲ ಮತ್ತು ಅದರ ಪರಿಹಾರ” ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಪ್ರಸ್ತುತಪಡಿಸಿದ ಮಾರ್ಗಸೂಚಿಗಳು, ಕಾರ್ಯ ಶೈಲಿ ಮತ್ತು ದೃಷ್ಟಿಕೋನಗಳ ಪ್ರಕಾರ ಆರ್‌ಬಿಐ ಅನ್ನು ಪರಿಕಲ್ಪನೆ ಮಾಡಲಾಗಿದೆ ಮತ್ತು ಹಿಲ್ಟನ್ ಯಂಗ್ ಆಯೋಗಕ್ಕೆ ಪ್ರಸ್ತುತಪಡಿಸಲಾಯಿತು.

ಹಿಲ್ಟನ್-ಯಂಗ್ ಕಮಿಷನ್ ಎಂದೂ ಕರೆಯಲ್ಪಡುವ 1926 ರ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್‌ನ ಶಿಫಾರಸುಗಳ ಆಧಾರದ ಮೇಲೆ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಆರ್‌ಬಿಐನ ಮುದ್ರೆಯ ಮೂಲ ಆಯ್ಕೆ ಈಸ್ಟ್ ಇಂಡಿಯಾ ಕಂಪನಿ ಡಬಲ್ ಮೊಹೂರ್, ಲಯನ್ ಮತ್ತು ಪಾಮ್ ಟ್ರೀನ ರೇಖಾಚಿತ್ರದೊಂದಿಗೆ. ಆದಾಗ್ಯೂ, ಸಿಂಹವನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿಯೊಂದಿಗೆ ಬದಲಾಯಿಸಲು ನಿರ್ಧರಿಸಲಾಯಿತು.

ಆರ್‌ಬಿಐನ ಮುನ್ನುಡಿ ಬ್ಯಾಂಕ್ ನೋಟುಗಳ ಸಮಸ್ಯೆಯನ್ನು ನಿಯಂತ್ರಿಸಲು, ಭಾರತದಲ್ಲಿ ವಿತ್ತೀಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮೀಸಲುಗಳನ್ನು ಇಟ್ಟುಕೊಳ್ಳಲು ಮತ್ತು ಸಾಮಾನ್ಯವಾಗಿ ದೇಶದ ಹಿತದೃಷ್ಟಿಯಿಂದ ಕರೆನ್ಸಿ ಮತ್ತು ಸಾಲ ವ್ಯವಸ್ಥೆಯನ್ನು ನಿರ್ವಹಿಸಲು ಅದರ ಮೂಲ ಕಾರ್ಯಗಳನ್ನು ವಿವರಿಸುತ್ತದೆ.

ರಿಜರ್ವ್ ಬ್ಯಾಂಕನ್ನು 1934ರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ ಯನ್ವಯ ಒಂದು ಖಾಸಗಿ ಷೇರುದಾರರ ಬ್ಯಾಂಕ್ ಆಗಿ 1935 ರ ಏಪ್ರಿಲ್ 1 ರಂದು ಸ್ಥಾಪಿಸಲಾಯಿತು. ಸ್ವಾತಂತ್ಯ ನಂತರ ಸರ್ಕಾರಿ ಸ್ವಾಮ್ಯದ ಕೇಂದ್ರ ಬ್ಯಾಂಕ್ ಒಂದರ ಅವಶ್ಯಕತೆ ಬಿತ್ತಾದ್ದರಿಂದ ಸರ್ಕಾರ ರಿಜರ್ವ್ ಬ್ಯಾಂಕನ್ನು 1949 ರ ಜನವರಿ 1 ರಂದು ರಾಷ್ಟ್ರೀಕರಿಸಿ ಕೇಂದ್ರ ಬ್ಯಾಂಕನ್ನಾಗಿ ಪರಿವರ್ತಿಸಿತು. ಈ ಬ್ಯಾಂಕು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನ ಪಡೆದಿದ್ದು ಎಲ್ಲಾ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳ ನೇರ ನಿಯಂತ್ರಣ ಸಾಧಿಸುತ್ತಿದೆ. ಇದು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ.

# ಆರ್‌ಬಿಐ ಆಡಳಿತ ಹೇಗಿರುತ್ತೆ..?
ಭಾರತೀಯ ರಿಸರ್ವ್ ಬ್ಯಾಂಕ್‍ನ ಆಡಳಿತ ಮತ್ತು ಮೇಲ್ವಿಚಾರಣೆಯು 20 ಸದಸ್ಯರನ್ನೊಳಗೊಂಡ ಕೇಂದ್ರ ನಿರ್ದೇಶಕರ ಮಂಡಳಿಗೆ ಒಳಪಟ್ಟಿದೆ. ಈ 20 ನಿರ್ದೇಶಕರುಗಳಲ್ಲಿ ಒಬ್ಬ ಗೌರ್ನರ್, ನಾಲ್ವರು ಉಪ ಗೌರ್ನರ್ಗ್ ಗಳು, ಹಣಕಾಸು ಇಲಾಖೆಯ ಒಬ್ಬ ನಿರ್ದೇಶಕ, ವಿವಿಧ ಪ್ರಮುಖ ಕ್ಷೇತ್ರ ಗಳಿಂದ ಆಯ್ದು ಸರ್ಕಾರ ನಾಮಕರಣ ಮಾಡಿದ ಹತ್ತು ಮಂದಿ ನಿರ್ದೇಶಕರು ಹಾಗೂ ಕೋಲ್ಕತ್ತ, ಮುಂಬಯಿ, ಚೆನ್ನೈ ಮತ್ತು ದೆಹಲಿಯಲ್ಲಿರುವ ನಾಲ್ಕು ಪ್ರಾದೇಶಿಕ ಮಂಡಳಿಗಳ ನಾಲ್ಕು ಪ್ರತಿನಿಧಿಗಳಿರುತ್ತಾರೆ.

ಪ್ರಸ್ತುತ ಶಕ್ತಿ ಕಾಂತ್ ದಾಸ್ (25ನೇ ಗವರ್ನರ್,11-12-2018 ರಿಂದ) ರಿಜರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಾರೆ. ರಿಜರ್ವ್ ಬ್ಯಾಂಕ್ ನ ಕೇಂದ್ರ ಕಛೇರಿ ಮುಂಬಯಿನಲ್ಲಿದೆ. ಇದಲ್ಲದೆ ಚೆನ್ನೈ, ದೆಹಲಿ, ಕೋಲ್ಕತಾ ಮತ್ತು ಮುಂಬಯಿನಲ್ಲಿ ನಾಲ್ಕು ಸ್ಥಾನೀಯ ಕಛೇರಿಗಳನ್ನು ಹೊಂದಿದೆ. ಜೊತೆಗೆ ಬೆಂಗಳೂರು, ಹೈದರಾಬಾದ್, ಕಾನ್ ಪುರ್, ಲಕ್ನೋ ಮುಂತಾದೆಡೆ ಶಾಖೆಗಳನ್ನು ಹೊಂದಿದೆ.

# ಆರ್‌ಬಿಐ ಕಾರ್ಯಗಳು :
ಭಾರತದ ರಿಜರ್ವ್ ಬ್ಯಾಂಕು ದೇಶದ ಕೇಂದ್ರ ಬ್ಯಾಂಕ್ ಆಗಿರುವುದರಿಂದ ಅದು ಇತರ ದೇಶಗಳ ಕೇಂದ್ರ ಬ್ಯಾಂಕುಗಳು ನಿರ್ವಹಿಸುವ ಪ್ರಾಥಮಿಕ ಮತ್ತು ಸಾಂಪ್ರದಾಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಸಾಮಾನ್ಯ ಕಾರ್ಯಗಳ ಜೊತೆಗೆ ಅದು ಕೆಲವು ಅಭಿವೃದ್ಧಿ ಪ್ರಧಾನ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತದೆ. ಆರ್‌ಬಿಐ ಕಾರ್ಯಗಳನ್ನು 3 ಭಾಗಗಳಾಗಿ ವಿಂಗಡಿಸಬಹುದು. ಸಾಂಪ್ರದಾಯಿಕ ಕಾರ್ಯಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಇತರೆ ಕಾರ್ಯಗಳೆಂದು ಮೂರು ವರ್ಗಗಳಾಗಿ ವಿಂಗಡಿಸಬಹುದು.

# ನೋಟು ಚಲಾವಣೆ :
ರಿಜರ್ವ್ ಬ್ಯಾಂಕ್ ದೇಶದಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಪರಮಾಧಿಕಾರ ಹೊಂದಿದೆ. ಒಂದು ರೂಪಾಯಿಯನ್ನು ಹೊರತುಪಡಿಸಿ ಎರಡರಿಂದ ಎರಡು ಸಾವಿರದ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ. ನಾಣ್ಯಗಳು ಮತ್ತು ಒಂದು ರೂಪಾಯಿ ನೋಟನ್ನು ಕೇಂದ್ರದ ಹಣಕಾಸು ಸಚಿವಾಲಯ ಮುದ್ರಿಸುತ್ತದೆ.

# ಸರ್ಕಾರದ ಬ್ಯಾಂಕು
ರಿಸರ್ವ್ ಬ್ಯಾಂಕು ಸರ್ಕಾರದ ಬ್ಯಾಂಕ್ ಆಗಿ, ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಸಲಹೆಗಾರನಾಗಿ ರಿಜರ್ವ್ ಬ್ಯಾಂಕು ಎಲ್ಲಾ ಹಣಕಾಸಿನ ವಿಚಾರಗಳ ಮೇಲೆ ಸರ್ಕಾರಕ್ಕೆ ಸಲಹೆ ನೀಡುತ್ತದೆ.

# ಬ್ಯಾಂಕುಗಳ ಬ್ಯಾಂಕು :
ರಿಸರ್ವ್ ಬ್ಯಾಂಕು ಬ್ಯಾಂಕುಗಳ ಬ್ಯಾಂಕ್ ಆಗಿ ಕೆಲಸ ಮಾಡುತ್ತಿದೆ. 1949 ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಯ ಪ್ರಕಾರ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕ್ ನೊಡನೆ ತಮ್ನ್ಮ ಠೇವಣಿಗಳ ಒಂದಂಶವನ್ನು ಕಾಯ್ದಿರಿಸಿದ ಹಣವಾಗಿ ಇಟ್ಟಿರಬೇಕು.

# ಹಣದ ಪೇಟೆಯ ನೇತಾರ :
ರಿಜರ್ವ್ ಬ್ಯಾಂಕು ಭಾರತದ ಹಣದ ಮಾರುಕಟ್ಟೆಯ ನೇತಾರನಾಗಿದೆ. ಅದು ಹಣದ ಮಾರುಕಟ್ಟೆಯ ವಿವಿಧ ಅಂಗಾಂಗಗಳಾದ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳನ್ನುನಿಯಂತ್ರಿಸುವ ಪೂರ್ಣ ಅಧಿಕಾರ ಹೊಂದಿದೆ. ಹಾಗೂ ರಿಜರ್ವ್ ಬ್ಯಾಂಕ್ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುತ್ತದೆ.

# ವಿಶೇಷ ಕಾರ್ಯಗಳು :
ಬ್ಯಾಂಕಿಂಗ್ ಸಂಸ್ಥೆಗಳ ನೌಕರರಿಗೆ ತರಬೇತಿ ನೀಡುತ್ತದೆ. ರಿಜರ್ವ್ ಬ್ಯಾಂಕು ದೇಶದ ಕೇಂದ್ರದ ಬ್ಯಾಂಕಾಗಿ ಸಾಲ ನೀಡಿಕೆ, ಕೃಷಿ, ಕೈಗಾರಿಕಾ ಮುಂತಾದ ಕ್ಷೇತ್ರಗಳ ಸಮಸ್ಯೆಗಳ ಅಧ್ಯಯನ ನಡೆಸಿ ಈ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಸೂಚಿಸುತ್ತದೆ. ಹೀಗೆ ರಿಜರ್ವ್ ಬ್ಯಾಂಕು ದೇಶದ ಕೇಂದ್ರ ಬ್ಯಾಂಕಾಗಿ ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಪ್ರಸ್ತುತ ಹಣಕಾಸಿನ ಸಚಿವರಾಗಿ ಅರುಣ್ ಜೇಟ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

# ಹಣಕಾಸು ನೀತಿ
ಕೇಂದ್ರ ಬ್ಯಾಂಕು ಅನುಸರಿಸುವ ನೀತಿಗೆ “ಕೇಂದ್ರ ಬ್ಯಾಂಕಿನ ನೀತಿ” ಹಣಕಾಸಿನ ನೀತಿ ಎಂದು ಕರೆಯುತ್ತಾರೆ. ಇನ್ನೂ ವಿವರವಾಗಿ ಅರ್ಥೈಸಬೇಕೆಂದರೆ ಚಲಾವಣೆಯಲ್ಲಿ ಇರುವ ಹಣದ ನಿಯಂತ್ರಣ ಮತ್ತು ಹಣಕ್ಕೆ ಸಂಬಂಧಿಸಿದ ವ್ಯವಸ್ಥೆಯ ನಿರ್ವಹಣೆಗೆ ಕೇಂದ್ರ ಬ್ಯಾಂಕ್ ರೂಪಿಸಿ ಜಾರಿಗೆ ತರುವ ನೀತಿಗೆ “ಹಣಕಾಸಿನ ನೀತಿ” ಎಂದು ಹೆಸರು. ಹಣಕಾಸಿನ ನೀತಿಯು ಕೇಂದ್ರ ಬ್ಯಾಂಕ್ ಮುದ್ರಿಸಿ ಚಲಾವಣೆಗೆ ತರುವ ಹಣದ ಗಾತ್ರ, ವಾಣಿಜ್ಯ ಬ್ಯಾಂಕುಗಳ ಸಾಲದ ನಿರ್ಮಾಣದ ಹಾಗೂ ಬಡ್ಡಿ ದರದ ಅಂಶಗಳಿಗೆ ಸಂಬಂಧಿಸಿರುತ್ತದೆ.

ಹಣಕಾಸಿನ ನೀತಿಯು ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಕೇಂದ್ರ ಬ್ಯಾಂಕಿನ ಹಣಕಾಸಿನ ನೀತಿಯ ಉದ್ದೇಶವು ಬೇರೆ ಬೇರೆಯಾಗಿರುವುದು ಕಂಡುಬರುತ್ತದೆ. ಈ ಉದ್ದೇಶವು ದೇಶದಲ್ಲಿನ ಆರ್ಥಿಕ ಪರಿಸ್ಥಿತಿಗಳನ್ನವಲಂಭಿಸಿರುತ್ತದೆ.

# ಹಣಕಾಸು ನೀತಿ ಮತ್ತು ಬೆಲೆ ಹಣದುಬ್ಬರದ ನೀತಿ :
ಸಮಗ್ರ ವೆಚ್ಚವನ್ನು ಕಡಿತ ಗೊಳಿಸುವ ಮೂಲಕ ಹಣದುಬ್ಬರದ ವಿರುದ್ಧ ಸೆಣೆಸಲು ಹಣಕಾಸು ನೀತಿಯು ಒಂದು ಪರಿಣಾಮಕಾರಿ ಅಸ್ತ್ರ ಎಂದು ಪರಿಗಣಿಸಲಾಗಿದೆ. ದೇಶವೊಂದರ ಕೇಂದ್ರ ಬ್ಯಾಂಕು ಸಾಲವನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮಗಳನ್ನು ಹಣಕಾಸು ನೀತಿ ಎನ್ನಲಾಗುತ್ತದೆ. ಭಾರತೀಯ ರಿಜರ್ವ್ ಬ್ಯಾಂಕು ನಮ್ಮ ಕೇಂದ್ರ ಬ್ಯಾಂಕ್ ಆಗಿರುವುದರಿಂದ ಅದಕ್ಕೆ ದೇಶದ ಹಣಕಾಸು ನೀತಿಯನ್ನು ನಿರೂಪಿಸುವ ಅಧಿಕಾರ ನೀಡಲಾಗಿದೆ.

ಆರ್.ಬಿ.ಐ ನ ಹಣಕಾಸು ನೀತಿಯು ಸರ್ಕಾರದ ಆರ್ಥಿಕ ಧೋರಣೆಯ ಎರಡು ಗುರಿಗಳಿಗೆ ಮೊದಲನೇ ಪಂಚವಾರ್ಷಿಕ ಯೋಜನೆಯ ಕಾಲದಿಂದಲೂ ಆದ್ಯತೆ ನೀಡುತ್ತಾ ಬಂದಿದೆ. ಅವುಗಳೆಂದರೆ –  ರಾಷ್ಟ್ರೀಯ ಆದಾಯ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಲು ದೇಶದ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸುವುದು, ಮತ್ತು ಆರ್ಥಿಕತೆಯಲ್ಲಿನ ಹಣದುಬ್ಬರದ ಒತ್ತಡವನ್ನು ನಿಯಂತ್ರಿಸುವುದು ಮತ್ತು ಕಡಿಮೆ ಗೊಳಿಸುವುದು, ಆದ್ದರಿಂದ, ಆರ್.ಬಿ.ಐ ಅನುಸರಿಸುತ್ತಿರುವ ಹಣಕಾಸು ನೀತಿಯನ್ನು ನಿಯಂತ್ರಿತ ಹಣಕಾಸು ವಿಸ್ತರಣೆ ಎನ್ನಲಾಗುತ್ತದೆ. ಇದು “ಆರ್ಥಿಕ ಬೆಳವಣಿಗೆ ಸಾಕಷ್ಟು ಹಣಕಾಸು ಪೂರೈಸುವ ಮತ್ತು ಅದೇ ವೇಳೆಯಲ್ಲಿ ನ್ಯಾಯಯುತ ಬೆಲೆ ಸ್ಥಿರತೆಯನ್ನು ಸಾಧಿಸುವ ಒಂದು ನೀತಿಯಾಗಿದೆ.”

ಆರ್.ಬಿ.ಐ ಕಾಯಿದೆ (1934) ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಪ್ರಕಾರ ಸಾಲ ಪ್ರಮಾಣದ ನಿಯಂತ್ರಣ ಮತ್ತು ಬೆಲೆ ನಿಯಂತ್ರಣಕ್ಕಾಗಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಭಾರತೀಯ ರಿಜರ್ವ್ ಬ್ಯಾಂಕ್ ಗೆ ಅಧಿಕಾರ ನೀಡಲಾಗಿದೆ. ಸಾಲದ ನಿಯಂತ್ರಿತ ವಿಸ್ತರಣೆ ಉದ್ದೇಶದ ಸಾಧನವಾಗಿ ಆರ್.ಬಿ.ಐ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಸಾಲ ನಿಯಂತ್ರಣ ವಿಧಾನಗಳನ್ನು ಅನುಸರಿಸುತ್ತಿದೆ.

ಭಾರತೀಯ ರಿಜರ್ವ್ ಬ್ಯಾಂಕು ಕಾಯ್ದೆಯು ಬ್ಯಾಂಕುದರವನ್ನು ಈ ಕಾಯಿದೆಯಡಿ ಕೊಳ್ಳಲು ಅರ್ಹವಿರುವ ವಿನಿಮಯ ಹುಂಡಿಗಳು ಅಥವಾ ಇತರ ವಾಣಿಜ್ಯ ಕಾಗದಗಳನ್ನು ಅದು (ಆರ್.ಬಿ.ಐ) ಕೊಳ್ಳಲು ಅಥವಾ ವಟಾಯಿಸಲು ತಯಾರಿರುವ ಒಂದು ನಿರ್ಧಿಷ್ಟ ದರ ಎಂದು ವ್ಯಾಖ್ಯಾನಿಸಿದೆ. 2011 ರ ಮಾರ್ಚ್ 17 ರ ವೇಳೆಗೆ ಬ್ಯಾಂಕ್ ದರವನ್ನು ಶೇ 6.75 ರಲ್ಲಿ ಉಳಿಸಲಾಯಿತು.

# ನೋಟುಗಳ ಅನಾಣ್ಯೀಕರಣ :
ಭಾರತ ಪ್ರಧಾನಿ ನರೇಂದ್ರ ಮೋದಿಯವರು ದಿ.8 ನವೆಂಬರ್ 2016 ರಿಂದ 8:15 ರಾತ್ರಿ ಹೊಸದಿಲ್ಲಿಯಲ್ಲಿ ಈ ಪ್ರಕಟಣೆ ಮಾಡಿದರು. ಅದೇ ದಿನ ಮೋದಿಯವರಿಂದ ರಾಷ್ಟ್ರಕ್ಕೆ ಒಂದು ಅನಿಗದಿತ ನೇರ ಪ್ರಸಾರ ಭಾಷಣದಲ್ಲಿ ಮಹಾತ್ಮ ಗಾಂಧಿ ಸರಣಿಯ ಎಲ್ಲಾ ರೂ.500 ಮತ್ತು ರೂ.1000 ಬ್ಯಾಂಕ್ ನೋಟುಗಳ ಪರಿಚಲನೆ ಅಮಾನ್ಯವಾಗಿದೆ ಎಂದು ಘೋಷಿಸಿ ಈ ಪ್ರಕಟಣೆ ಮಾಡಲ್ಪಟ್ಟಿತು. ಹಳೆಯ ಬ್ಯಾಂಕ್‍ನೋಟುಗಳನ್ನು ಮಹಾತ್ಮ ಗಾಂಧಿ ಹೊಸ ಸರಣಿಯ, ಹೊಸ ರೂ.500 ಮತ್ತು ರೂ.2000 ಬ್ಯಾಂಕ್ ನೋಟುಗಳ ನೀಡಿಕೆಯ ವಿನಿಮಯವನ್ನು ಘೋಷಿಸಿತು

# ನೆನಪಿನಲ್ಲಿಡಬೇಕಾದ ಅಂಶಗಳು :
➤1935 ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು.
➤1949 ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು.
➤ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ ಮುಂಬೈನಲ್ಲಿದೆ.
➤ರಿಸರ್ವ ಬ್ಯಾಂಕನ ಆಡಳಿತ ನೋಡಿಕ್ಕೊಳಲು 4 ಜನ ಡೆಪ್ಯೂಟಿ ಗರ್ವನರ್ ಹಾಗೂ ಇತರೆ 15 ಜನ ಸದಸ್ಯರಿರುತ್ತಾರೆ.
➤ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್– ಓರ್ಸ್ಬೋನ್ ಸ್ಮಿತ್
➤ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ — ಸಿ.ಡಿ.ದೇಶಮುಖ್
➤ಪ್ರಸ್ತುತ ರಿಸರ್ವ ಬ್ಯಾಂಕನ ಗವರ್ನರ್ — ರಘುರಾಂ ರಾಜನ್
➤ರಿಸರ್ವ ಬ್ಯಾಂಕನ್ನು ‘ಎಲ್ಲ ಬ್ಯಾಂಕುಗಳ ತಂದೆ’ ಎನ್ನುತ್ತಾರೆ.
➤ನೋಟುಗಳ ಮುದ್ರಣದ ಕೇಂದ್ರ ಕಛೇರಿ — ಮಹಾರಾಷ್ಟ್ರದ ನಾಸಿಕನಲ್ಲಿದೆ.
➤1 ರೂಪಾಯಿ ನೋಟಿನ ಮೇಲೆ — ಹಣಕಾಸು ಕಾರ್ಯದರ್ಶಿ ಸಹಿ ಇರುತ್ತದೆ.
➤ಭಾರತ ಸರಕಾರದ ಟಂಕಶಾಲೆಗಳು :
ಮುಂಬೈ — ಮಹಾರಾಷ್ಟ್ರ  ಕಲ್ಕತ್ತ — ಪಶ್ಚಿಮ ಬಂಗಾಳ,  ಹೈದ್ರಾಬಾದ — ತೆಲಂಗಾಣ,  ನೋಯ್ಡಾ — ಉತ್ತರಪ್ರದೇಶ.
ಭಾರತೀಯ ರಿಸರ್ವ ಬ್ಯಾಂಕ ಮುದ್ರಣ ಪ್ರೈ ಲಿಮಿಟೆಡ್ ಮೈಸೂರ್, :– ಇದೊಂದು ಭಾರತೀಯ ರಿಸರ್ವ ಬ್ಯಾಂಕ್ ಅಂಗಸಂಸ್ಥೆಯಾಗಿದೆ. ಇದು 1995 ರಲ್ಲಿ ಸ್ಫಾಸಿಸಲ್ಪಟ್ಟಿತ್ತು. ಇನ್ನೊಂದು ಮುದ್ರಣಾಲಯ ಪಶ್ಚಿಮ ಬಂಗಾಳದ ಸಲ್ಬೊನಿಯಲ್ಲಿದೆ.

# ಇತರ ಮಹತ್ವದ ಮಾಹಿತಿ :
➤ ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್.
➤ ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್.
➤ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್.
➤ HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್.
➤ ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್.
➤ BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ ಬ್ಯಾಂಕ್.
➤ HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್.
➤CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.
➤ ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್.
➤ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್.
➤ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್.
➤ ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್.
➤ ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.
➤ ದಕ್ಷಿಣ ಕನ್ನಡ ಮತ್ತು ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ.
➤ ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್.
➤ ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್.

Leave a Reply

Your email address will not be published. Required fields are marked *

error: Content Copyright protected !!