FDA ExamGKPOLICE EXAMQUESTION BANKQuizSDA examSpardha TimesUncategorized

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 12

Share With Friends

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಜೀವಶಾಸ್ತ್ರದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ತಪ್ಪಾಗಿರುವ ಹೊಂದಾಣಿಕೆಯನ್ನು ಗುರುತಿಸಿ.
1) Hepatology – ಯಕೃತ್ತಿನ ಅಧ್ಯಯನ
2) Oncology – ಕ್ಯಾನ್ಸರ್ ಅಧ್ಯಯನ
3) Nephrology – ಮೂತ್ರಪಿಂಡದ ಅಧ್ಯಯನ
4) Ophthalmology – ಮೂಳೆಗಳ ಅಧ್ಯಯನ

2. ಅನಿಲವನ್ನು ನಿರಂತರ ಒತ್ತಡದಲ್ಲಿ ಬಿಸಿಮಾಡಿದರೆ ಅದರ ಸಾಂದ್ರತೆಯ ಮೇಲೆ ಏನು ಪರಿಣಾಮ ಬೀರುತ್ತದೆ..?
1) ಸಾಂದ್ರತೆ ಕಡಿಮೆಯಾಗುತ್ತದೆ
2) ಸಾಂದ್ರತೆ ಹೆಚ್ಚಾಗುತ್ತದೆ
3) ಸಾಂದ್ರತೆ ಸ್ಥಿರವಾಗಿರುತ್ತದೆ
4) ಸಾಂದ್ರತೆ ಮೊದಲು ಹೆಚ್ಚಾಗುತ್ತದೆ ಮತ್ತು ನಂತರ ಕಡಿಮೆಯಾಗುತ್ತದೆ

3. ಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಎಲ್ಲಿದೆ..?
1) ಬ್ಯಾಂಕಾಕ್
2) ಮನಿಲಾ
3) ಕೌಲಾಲಂಪುರ್
4) ಟೋಕಿಯೊ

4. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಯಾವ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದಿತು..?
1) 1952
2) 1954
3) 1956
4) 1958

5. ಈ ಕೆಳಗಿನವರಲ್ಲಿ ಯಾರು ಎರಡು ರಾಷ್ಟ್ರಗಳಿಗೆ ರಾಷ್ಟ್ರಗೀತೆ ಬರೆದಿದ್ದಾರೆ..?
1) ಇಕ್ಬಾಲ್
2) ಬಂಕಿಮ್ ಚಂದ್ರ ಚಟರ್ಜಿ
3) ರವೀಂದ್ರ ನಾಥ ಟ್ಯಾಗೋರ್
4) ಶರತ್ ಚಂದ್ರ ಚಟರ್ಜಿ

6. ಎಲೆಕ್ಟ್ರಿಕ್ ಮೋಟಾರ್ ನ ವೈಜ್ಞಾನಿಕ ತತ್ವಗಳನ್ನು ಈ ಕೆಳಗಿನ ಯಾವ ವಿಜ್ಞಾನಿ ಕಂಡುಹಿಡಿದರು..?
1) ಮೈಕೆಲ್ ಫ್ಯಾರಡೆ
2) ಬಿ. ಫ್ರಾಂಕ್ಲಿನ್
3) ಟಿ.ಎ. ಎಡಿಸನ್
4) ಎನ್ರಿಕೊ ಫೆರ್ಮಿ

7. ವಿಶ್ವದ ಅಗ್ರಗಣ್ಯ ಮಾನವ ಹಕ್ಕುಗಳ ಸಂಘಟನೆ ‘ಅಮ್ನೆಸ್ಟಿ ಇಂಟರ್ನ್ಯಾಷನಲ್’ನ ಪ್ರಧಾನ ಕಚೇರಿ ಎಲ್ಲಿದೆ.. ?
1) ಬರ್ಲಿನ್
2) ನ್ಯೂಯಾರ್ಕ್
3) ಲಂಡನ್
4) ಜಿನೀವಾ

8. ಈ ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆಯ ಅಧಿಕೃತ ಭಾಷೆಯಲ್ಲ..?
1) ಚೈನೀಸ್
2) ಫ್ರೆಂಚ್
3) ಜರ್ಮನ್
4) ಅರೇಬಿಕ್

9. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಯಾವ ವರ್ಷದಲ್ಲಿ ರೂಪಾಯಿ ಮೌಲ್ಯವನ್ನು ಅಪಮೌಲ್ಯಗೊಳಿಸಲಾಯಿತು..?
1) 1948
2) 1949
3) 1952
4) 1954

10. ‘ಕ್ಯೂ’ (Cue) ಎನ್ನುವುದು ಈ ಕೆಳಗಿನ ಯಾವ ಕ್ರೀಡೆಯಲ್ಲಿ ಬಳಸುವ ಪದ..?
1) ಬಿಲಿಯರ್ಡ್ಸ್
2) ಫುಟ್ಬಾಲ್
3) ಹಾಕಿ
4) ಚೆಸ್

11. ಲಕ್ನೋ ಈ ಕೆಳಗಿನ ಯಾವ ನದಿಗಳ ದಂಡೆಯಲ್ಲಿದೆ..?
1) ಗೋಮತಿ
2) ಗೋದಾವರಿ
3) ನರ್ಮದಾ
4) ಗಂಗಾ

12. ಪೋಲಿಯೊ ಲಸಿಕೆ ಕಂಡುಹಿಡಿದ ವಿಜ್ಞಾನಿ ಯಾರು..?
1) ಲೂಯಿಸ್ ಪಾಶ್ಚರ್
2) ಆಲ್ಬರ್ಟ್ ಸಬಿನ್
3) ಜೊನಸ್ ಸಾಲ್ಕ್
4) ಅಲೆಕ್ಸಾಂಡರ್ ಫ್ಲೆಮಿಂಗ್

13. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಪರಿಚಯಿಸಿದವರು ಯಾರು..?
1) ಲಾರ್ಡ್ ಡಾಲ್ಹೌಸಿ
2) ಲಾರ್ಡ್ ಕರ್ಜನ್
3) ಲಾರ್ಡ್ ಮಕಾಲೆ
4) ಲಾರ್ಡ್ ರಿಪ್ಪನ್

14. ಮೊದಲ ಮಧ್ಯಂತರ ಲೋಕಸಭೆ ಚುನಾವಣೆ ನಡೆದದ್ದು ಯಾವಾಗ..?
1) 1971
2) 1975
3) 1976
4) 1985

15. ಮಹಿಳಾ ಮುಖ್ಯಮಂತ್ರಿಯನ್ನು ಹೊಂದಿಂದ ಮೊದಲ ರಾಜ್ಯ ಯಾವುದು..?
1) ಉತ್ತರ ಪ್ರದೇಶ
2) ಮಧ್ಯಪ್ರದೇಶ
3) ಸಿಕ್ಕಿಂ
4) ಅರುಣಾಚಲ ಪ್ರದೇಶ

# ಉತ್ತರಗಳು :
1. 4) Ophthalmology – ಮೂಳೆಗಳ ಅಧ್ಯಯನ
Ophthalmology ಜೀವಶಾಸ್ತ್ರದ ಶಾಖೆಯಾಗಿದ್ದು ಅದು ‘ಕಣ್ಣುಗಳ ಅಧ್ಯಯನ’ ಕ್ಕೆ ಸಂಬಂಧಿಸಿದೆ. ‘ಮೂಳೆಗಳ ಅಧ್ಯಯನ’ಕ್ಕೆ ಆಸ್ಟಿಯಾಲಜಿ(Osteology) ಎಂದು ಕರೆಯುವರು.
2. 1) ಸಾಂದ್ರತೆ ಕಡಿಮೆಯಾಗುತ್ತದೆ
3. 2) ಮನಿಲಾ
4. 3) 1956
5. 3) ರವೀಂದ್ರ ನಾಥ ಟ್ಯಾಗೋರ್
6. 1) ಮೈಕೆಲ್ ಫ್ಯಾರಡೆ
7. 3) ಲಂಡನ್
8. 3) ಜರ್ಮನ್
9. 2) 1949
10. 1) ಬಿಲಿಯರ್ಡ್ಸ್
11. 1) ಗೋಮತಿ
12. 3) ಜೊನಸ್ ಸಾಲ್ಕ್
13. 3) ಲಾರ್ಡ್ ಮಕಾಲೆ
14. 1) 1971
15. 1) ಉತ್ತರ ಪ್ರದೇಶ (ಸುಚೇತಾ ಕೃಪಲಾನಿ)

# ಇದನ್ನೂ ಓದಿ :
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 11

 

error: Content Copyright protected !!