GKKannadaPersons and PersonaltySpardha Times

ಶಿವರಾಮ ಕಾರಂತರ ಪರಿಚಯ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

Share With Friends

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಕೋಟವೆಂಬ ಗ್ರಾಮದಲ್ಲಿ 1902ರ ಅಕ್ಟೋಬರ್ 10ರಂದು ತಂದೆ ಶೇಷ ಕಾರಂತರು, ತಾಯಿ ಲಕ್ಷ್ಮೀ ದಂಪತಿಗಳಿಗೆ ಶಿವರಾಮ ಕಾರಂತರು ಹುಟ್ಟಿದರು. ಪ್ರಾಥಮಿಕ ಶಿಕ್ಷಣ ಕೋಟದಲಿ, ಪ್ರೌಢ ಶಿಕ್ಷಣ ಕುಂದಾಪುರದಲ್ಲಿ ಮುಗಿಸಿ 1920ರಲ್ಲಿ ಕಾಲೇಜು ಶಿಕ್ಷಣಕ್ಕಾಗಿ ವಿಜ್ಞಾನದ ವಿದ್ಯಾರ್ಥಿಯಾಗಿ ಮಂಗಳೂರಿನ ಸರಕಾರಿ ಕಾಲೇಜನ್ನು ಸೇರಿದ ಕಾರಂತರು ಎಂಟು ತಿಂಗಳು ವ್ಯಾಸಂಗ ಮಾಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಕಾರಂತರು ಕಾಂಗ್ರೆಸ್ ಪಕ್ಷದ ಧ್ಯೇಯೋದ್ದೇಶಗಳನ್ನು ಪ್ರಚಾರಮಾಡುವ ಸಲುವಾಗಿ ಊರೂರು ತಿರುಗಿ ಉಪನ್ಯಾಸ ನೀಡಲಾರಂಭಿಸಿದರು. ಅದು ಹೆಚ್ಚು ಕೆಲ್ಸ ಮಾಡದಾದಾಗ ಚರಕಗಳನ್ನು ಮಾಡಿಸಿ ಖಾದಿ ಉತ್ಪನ್ನಗಳನ್ನು ತಯಾರಿಸಿ ಜನರಿಗೆ ಹಂಚುವಂಥ ರಚನಾತ್ಮಕ ಕೆಲಸಗಳನ್ನು ಕೈಗೊಂಡರು.

ಕುಂದಾಪುರದಲ್ಲಿ ಸ್ನೇಹಿತರೊಡನೆ ಖಾದಿಭಂಡಾರವನ್ನು ಸ್ಥಾಪಿಸಿದರು. ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಕಾರಂತರು ಕೈಗೆತ್ತಿಕೊಂಡ ಮಾಧ್ಯಮ ರಂಗಭೂಮಿ. ಏಕಚ್ ಪ್ಯಾಲಾ ಎಂಬ ಮರಾಠೀ ನಾಟಕವನ್ನು ಮಿತ್ರರ ಸಹಾಯದಿಂದ ಅನುವಾದಿಸಿ ಮದ್ಯಪಾನದ ಕೆಡುಕುಗಳನ್ನು ಹೇಳುವ ನಿಶಾಮಹಿಮೆ ಎಂಬ ನಾಟಕವಾಗಿ ರೂಪಾಂತರಿಸಿ ಪ್ರದರ್ಶಿಸಿದರು. ಉಪನ್ಯಾಸಗಳ ಮೂಲಕ ಹಳ್ಳಿಗಳಲ್ಲಿ ಗ್ರಾಮ ನೈರ್ಮಲ್ಯ, ಪರಿಸರ ಶುಚಿತ್ವ, ಆರೋಗ್ಯ ರಕ್ಷಣೆ ಕ್ರಮ ರೂಪಿಸಿ ಜನಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

1936ರಷ್ಟು ಹಿಂದೆಯೇ ಸಂಪ್ರದಾಯ ಸಮಾಜಕ್ಕೆ ಸಡ್ಡುಹೊಡೆದು ಲೀಲಾ ಅವರನ್ನು ಅಂತರ್ಜಾತೀಯ ಪ್ರೇಮವಿವಾಹವಾದರು. ಇವರ ಮಗನ ನೆನಪಿಗಾಗಿ ಹರ್ಷ ಮುದ್ರಣಾಲಯವನ್ನು ಸ್ಥಾಪಿಸಿ 24 ಕಾದಂಬರಿಗಳು ಮತ್ತು ಇತರ ಹಲವು ಕೃತಿಗಳನ್ನು ಈ ಮುದ್ರಣಾಲಯದಲ್ಲಿ ಬೆಳಕು ಕಂಡವು. 1923 ರಲ್ಲಿ ವಸಂತ ಎಂಬ ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿ, ಐದು ವರ್ಷಗಳ ಕಾಲ ನಡೆಸಿದರು. ವಿಚಿತ್ರಕೂಟ ಮತ್ತು ಭೂತ ಎಂಬ ಎರಡು ಪತ್ತೇದಾರಿ ಕಾದಂಬರಿಗಳ ಮೂಲಕ ಕಾದಂಬರಿ ಬರೆಯಲು ಪ್ರಾರಂಭಿಸಿದ ಕಾರಂತರು ಅವುಗಳನ್ನು ಧಾರಾವಾಹಿಯಾಗಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರು.

ಇದೇ ವೇಳೆಯಲ್ಲಿ ಕಾರಮ್ತರು ಸ್ವದೇಶಾಭಿಮಾನಿ ಪತ್ರಿಕೆಗೂ ಮುತ್ತು ಇಂಗ್ಲಿಷ್ ಪತ್ರಿಕೆಗಳಿಗೂ ಲೇಖನಗಳನ್ನು ಬರೆದರು. ಕಾರಂತರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೆಲಸ ಮಾದಿದವರು. ಚೋಮನದುಡಿ, ಸರಸಮ್ಮನ ಸಮಾಧಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಕುಡಿಯರ ಕೂಸು, ಮೂಕಜ್ಜಿಯ ಕನಸುಗಳು ಹೀಗೆ 45 ಕಾದಂಬರಿಗಳನ್ನು ಬರೆದಿದ್ದಾರೆ. ರಾಷ್ಟ್ರಗೀತ ಸುಧಾಕರ ಹಾಗೂ ನೀಳ್ಗವನಗಳು ಎಂಬ ಎರಡು ಕವನ ಸಂಕಲನಗಳನ್ನು ರಚಿಸಿದ್ದಾರೆ. ಮಕ್ಕಳಿಗಾಗಶೂಗನ್ನಡ ಪಾಠಮಾಲೆಯ 8 ಭಾಗಗಳು, ಸಾಮಾನ್ಯ ವಿಜ್ಞಾನದ 3 ಭಾಗಗಳು, ಸಮಾಜ ನೀತಿಯ 2 ಭಾಗಗಳು, ಗೃಹವಿಜ್ಞಾನದ 3 ಭಾಗಗಳು, ಸಿರಿಗನ್ನಡ ಪಾಠಮಾಲೆಯ 7 ಭಾಗಗಳು, ಇತರ 16 ಗ್ರಂಥಗಳನ್ನು ರಚಿಸಿದ್ದಾರೆ.

1928-30 ರ ಅವಧಿಯಲ್ಲಿ ಕಾರಂತರು ಡುಮಿಂಗೊ ಮತ್ತು ಭೂತರಾಜ ಎಂಬ ಎರಡು ಮೂಕಿ ಚಿತಗಳ ನಿರ್ಮಾಣ ಮಾಡಿದರು. ಯಕ್ಷಗಾನದತ್ತ ತಮ್ಮ ಒಲವನ್ನು ಬೆಳಸಿಕೊಂಡ ಕಾರಂತರು ಯಕ್ಷಗಾನ ಪ್ರಸಂಗಗಳ ತಾಡವಾಲೆಗಳನ್ನು ಸಂಗ್ರಹಿಸಿ ಅಧ್ಯಯನ ಕೈಗೊಂಡರು. ಇದರ ಫಲವಾಗಿ 1975ರಲ್ಲಿ ಯಕ್ಷಗಾನ ಬಯಲಾಟ ಎಂಬ ಗ್ರಂಥವನ್ನು ಬರೆದರು. ಇದು ಸ್ಟಾಕ್ ಹೋಮ್ನ ಇಂಟರ್ನ್ಯಾಶನಲ್ ಆರ್ಕೈವ್ಸ್ ಬಹುಮಾನ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದವು.

ಶಿಕ್ಷಣದಲ್ಲಿ ಬದಲಾವಣೆಯ ಇಂಗಿತವನ್ನು ಪ್ರಕಟಿಸುವ ಅವರ ಬಾಲಪ್ರಪಂಚದ ಮೂರು ಬೃಹತ್ ಸಂಪುಟಗಳು ಮಕ್ಕಳು ಮತ್ತು ಅಧ್ಯಾಪಕರಿಗಾಗಿ ರೈತವಾದ ಕೃತಿಗಳಾಗಿವೆ. ಶಾಲಾ ವಿದ್ಯಾರ್ಥಿಗಳ ಬಿಡುವಿನ ಸಂದರ್ಭದಲ್ಲಿ ಅವರನ್ನು ಪ್ರವಾಸಕ್ಕೆ ಕರೆದೊಯ್ದು ಬೆಟ್ಟ ಗುಡ್ಡಗಳಲ್ಲಿ ಅಲೆದಾಡಿಸಿ ಅವರಲ್ಲಿ ಪ್ರಕೃತಿ ಪ್ರೇಮವನ್ನು ಬೆಳೆಸಿದರು. ಹಳ್ಳಿಗರ ಬಡತನ, ಹಸಿವು ಬವಣೆಯನ್ನು ಪ್ರತ್ಯಕ್ಷವಾಗಿ ತೋರಿಸಿ ವಾಸ್ತವದ ದರ್ಶನ ಮಾಡಿಸಿದರು.

1970 ರಲ್ಲಿ ಸಾಂಪ್ರದಾಯಿಕ ಯಕ್ಷಗಾನ ಶಿಕ್ಷಣ ನೀಡುವ ಉದ್ದೇಶದಿಂದ ಬ್ರಹ್ಮಾವರದಲ್ಲಿ ಯಕ್ಷಗಾನ ಶಾಲೆಯನ್ನು ಆರಂಭಿಸಿದರು. ಎರಡು ವರ್ಷಗಳ ನಂತರದಲ್ಲಿ ಅದನ್ನು ಉಡುಪಿಗೆ ವರ್ಗಾಯಿಸಿದರು. ಅಲ್ಲಿಂದ ಮುಂದೆ ಅವರಿಗೆ ಅಂತರರಾಷ್ಟ್ರೀಯ ಮನ್ನಣೆ ದೊರೆತು ವಿದೇಶಿಯರೂ ಇಲ್ಲಿನ ಯಕ್ಷಗಾನದಲ್ಲಿ ಆಸಕ್ತರಾಗಿ ಅಧ್ಯಯನಗಳನ್ನು ಕೈಗೊಳ್ಳುವುದಕ್ಕೆ ಹಾದಿಯಾಯಿತು.

1975 ರಲ್ಲಿ ಯಕ್ಷರಂಗ ಎಂಬ ಯಕ್ಷಗಾನ ಬ್ಯಾಲೆ ತಂಡವನ್ನು ರೂಪಿಸಿದರು. 1982ರಲ್ಲಿ ಜಾಪಾನೀಸ್ ಡ್ಯಾನ್ಸ್ ಕ್ರಿಟಿಕ್ಸ್ ಸೊಸೈಟಿ ಅವಾರ್ಡ ಲಭಿಸಿತು. 1968ರಲ್ಲಿ ಪದ್ಮಭೂಷಣ ಲಭ್ಯವಾಯಿತು. ತುರ್ತುಪರಿಸ್ಥಿತಿಯ ಸಮಯದಲ್ಲಿ ಅದನ್ನು ಹಿಂದಿರುಗಿಸಿ ಪ್ರತಿಭಟಿಸಿದರು. ಐದು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟೋರೇಟ್ ಪದವಿಗಳು ಅವರಿಗೆ ಲಭಿಸಿವೆ. ತಮ್ಮ ತೊಂಬತ್ತೈದು ವರ್ಷಗಳ ತುಂಬು ಬದುಕನ್ನು ನಿಜವಾದ ಅರ್ಥದಲ್ಲಿ ಬಾಳಿದ ಕಾರಂತರು 1997ರಲ್ಲಿ ನಮ್ಮನ್ನು ಅಗಲಿದರು.

➤ ಜೀವನ
ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ 1902, ಅಕ್ಟೋಬರ್ 10ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ತಮ್ಮ ಜೀವಿತಾವಧಿಯಲ್ಲಿ ಸುಮಾರು 427 ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು 47. ತಮ್ಮ 96ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು.

ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.

ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೇ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ.

ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (1931) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು.

➤ ಪರಿಸರ ಹೋರಾಟ :
ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ “ಕಾರಂತಜ್ಜ” ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾ ಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.

➤ ಕೃತಿಗಳು
ಕವನ ಸಂಕಲನಗಳು : ರಾಷ್ಟ್ರಗೀತ ಸುಧಾಕರ, ಸೀಳ್ಗವನಗಳು
#ಕಾದಂಬರಿಗಳು : ಅದೇ ಊರು, ಅದೆ ಮರ, ಅಳಿದ ಮೇಲೆ, ಅಂಟಿದ ಅಪರಂಜಿ, ಆಳ, ನಿರಾಳ, ಇದ್ದರೂ ಚಿಂತೆ, ಇನ್ನೊಂದೇ ದಾರಿ, ಇಳೆಯೆಂಬ,  ಉಕ್ಕಿದ ನೊರೆ, ಒಡಹುಟ್ಟಿದವರು, ಒಂಟಿ ದನಿ , ಔದಾರ್ಯದ ಉರುಳಲ್ಲಿ, ಕಣ್ಣಿದ್ದೂ ಕಾಣರು, ಕನ್ನಡಿಯಲ್ಲಿ ಕಂಡಾತ, ಕನ್ಯಾಬಲಿ, ಕರುಳಿನ ಕರೆ,  ಕೇವಲ ಮನುಷ್ಯರು, ಗೆದ್ದ ದೊಡ್ಡಸ್ತಿಕೆ, ಗೊಂಡಾರಣ್ಯ, ಜಗದೋದ್ಧಾರ,  ನಾ  ಜಾರುವ ದಾರಿಯಲ್ಲಿ, ದೇವದೂತರು, ಧರ್ಮರಾಯನ ಸಂಸಾರ, ನಷ್ಟ ದಿಗ್ಗಜಗಳು, ನಂಬಿದವರ ನಾಕ, ನರಕ, ನಾವು ಕಟ್ಟಿದ ಸ್ವರ್ಗ, ನಿರ್ಭಾಗ್ಯ ಜನ್ಮ, ಬತ್ತದ ತೊರೆ, ಭೂತ, ಮರಳಿ ಮಣ್ಣಿಗೆ, ಮುಗಿದ ಯುದ್ಧ, ಮೂಜನ್ಮ, ಮೈ ಮನಗಳ ಸುಳಿಯಲ್ಲಿ, ಮೊಗ ಪಡೆದ ಮನ, ವಿಚಿತ್ರ ಕೂಟ,  ಶನೀಶ್ವರನ ನೆರಳಿನಲ್ಲಿ, ಸನ್ಯಾಸಿಯ ಬದುಕು, ಸಮೀಕ್ಷೆ, ಸರಸಮ್ಮನ ಸಮಾಧಿ, ಸ್ವಪ್ನದ ಹೊಳೆ, ಹೆತ್ತಳಾ ತಾಯಿ

➤ ಚಲನಚಿತ್ರವಾಗಿರುವ ಕಾದಂಬರಿಗಳು :
ಕುಡಿಯರ ಕೂಸು , ಚಿಗುರಿದ ಕನಸು, ಚೋಮನ ದುಡಿ, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

➤ ನಾಟಕಗಳು :
ಅವಳಿ ನಾಟಕಗಳು, ಏಕಾಂಕ ನಾಟಕಗಳು, ಐದು ನಾಟಕಗಳು, ಕಟ್ಟೆ ಪುರಾಣ, ಕಠಾರಿ ಭೈರವ, ಕರ್ಣಾರ್ಜುನ, ಕೀಚಕ ಸೈರಂಧ್ರಿ, ಗರ್ಭಗುಡಿ,  ಗೀತ ನಾಟಕಗಳು, ಜಂಬದ ಜಾನಕಿ, ಜ್ಯೂಲಿಯಸ್ ಸೀಸರ್, ಡುಮಿಂಗೊ,  ದೃಷ್ಟಿ ಸಂಗಮ, ನವೀನ ನಾಟಕಗಳು, ನಾರದ ಗರ್ವಭಂಗ, ಬಿತ್ತಿದ ಬೆಳೆ,  ಬೆವರಿಗೆ ಜಯವಾಗಲಿ, ಬೌದ್ಧ ಯಾತ್ರಾ, ಮಂಗಳಾರತಿ, ಮುಕ್ತದ್ವಾರ, ರೊ ಅಂದರು, ವಿಜಯ, ವಿಜಯ ದಶಮಿ, ಸರಳ ವಿರಳ ನಾಟಕಗಳು, ಸಾವಿರ ಮಿಲಿಯ, ಹಣೆ ಬರಹ, ಹಿರಿಯಕ್ಕನ ಚಾಳಿ, ಹೇಗಾದರೇನು?, ಹೇಮಂತ

➤ಸಣ್ಣ ಕತೆ :
ಭಾರತೀಯ ಶಿಲ್ಪ, ಯಕ್ಷಗಾನ ಬಯಲಾಟ, ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು, ಕವಿಕರ್ಮ, ತೆರೆಯ ಮರೆಯಲ್ಲಿ, ಹಸಿವು, ಹಾವು ,

➤ ಹರಟೆ/ವಿಡಂಬನೆ :
ಗ್ನಾನ, ಚಿಕ್ಕ ದೊಡ್ಡವರು , ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು, ಮೈಗಳ್ಳನ ದಿನಚರಿಯಿಂದ, ಮೈಲಿಕಲ್ಲಿನೊಡನೆ ಮಾತುಕತೆಗಳು, ಹಳ್ಳಿಯ ಹತ್ತು ಸಮಸ್ತರು

➤ ವೈಜ್ಞಾನಿಕ :
ಅದ್ಭುತ ಜಗತ್ತು (1. ವಿಚಿತ್ರ ಖಗೋಲ, 2. ನಮ್ಮ ಭೂಖಂಡಗಳು), ಉಷ್ಣವಲಯದ ಆಗ್ನೇಸ್ಯ, ಪ್ರಾಣಿ ಪ್ರಪಂಚದ ವಿಸ್ಮಯಗಳು, ಮಂಗನ ಕಾಯಿಲೆ, ವಿಜ್ಞಾನ ಮತ್ತು ಅಂಧಶೃದ್ಧೆ, ವಿಶಾಲ ಸಾಗರಗಳು, ಹಿರಿಯ ಕಿರಿಯ ಹಕ್ಕಿಗಳು

➤ ಪ್ರವಾಸ ಕಥನ :
ಅಪೂರ್ವ ಪಶ್ಚಿಮ, ಅರಸಿಕರಲ್ಲ , ಅಬೂವಿನಿಂದ ಬರಾಮಕ್ಕೆ, ಪಾತಾಳಕ್ಕೆ ಪಯಣ, ಪೂರ್ವದಿಂದ ಅತ್ಯಪೂರ್ವಕ್ಕೆ, ಯಕ್ಷರಂಗಕ್ಕಾಗಿ ಪ್ರವಾಸ

➤ ಆತ್ಮಕಥನ :   ಸ್ಮೃತಿಪಟಲದಿಂದ (1,2,3), ಹುಚ್ಚು ಮನಸ್ಸಿನ ಹತ್ತು ಮುಖಗಳು

➤ ಜೀವನ ಚರಿತ್ರೆ : ಕಲಾವಿದ ಕೃಷ್ಣ ಹೆಬ್ಬಾರರು

➤ವಿಶ್ವಕೋಶ : ಕಲಾ ಪ್ರಪಂಚ, ಪ್ರಾಣಿ ಪ್ರಪಂಚ, ಬಾಲ ಪ್ರಪಂಚ (1,2,3), ವಿಜ್ಞಾನ ಪ್ರಪಂಚ (1,2,3,4)

➤ ನಿಘಂಟು : ಸಿರಿಗನ್ನಡ ಅರ್ಥಕೋಶ

➤ ಸಂಪಾದನೆ : ಐರೋಡಿ ಶಿವರಾಮಯ್ಯ ಬದುಕು, ಬರಹ, ಕೌಶಿಕ , ಮಾಯಣ, ಪಂಜೆಯವರ ನೆನಪಿಗಾಗಿ

➤ ಕಲಾಪ್ರಬಂಧ :
ಕಲೆಯ ದರ್ಶನ, ಕರ್ನಾಟಕದಲ್ಲಿ ಚಿತ್ರಕಲೆ, ಚಾಲುಕ್ಯ ವಾಸ್ತು ಮತ್ತು ಶಿಲ್ಪ, ಚಿತ್ರಶಿಲ್ಪ, ವಾಸ್ತುಕಲೆಗಳು, ಜಾನಪದ ಗೀತೆಗಳು, ಭಾರತೀಯ ಚಿತ್ರಕಲೆ

➤ ಅನುವಾದ ;
ಕೀಟನಾಶಕಗಳ ಪಿಡುಗುಗಳು, ಕೋಟ ಮಹಾಜಗತ್ತು, ಜನತೆಯೂ ಅರಣ್ಯಗಳೂ, ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು, ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ, ನಮ್ಮ ಸುತ್ತಲಿನ ಕಡಲು, ನಮ್ಮೆಲ್ಲರಿಗೂ ಒಂದೇ ಭವಿಷ್ಯ, ಪರಮಾಣು – ಇಂದು ನಾಳೆ
ಪಂಚ ಋತು, ಬೆಳೆಯುತ್ತಿರುವ ಸಮಸ್ಯೆ , ಭಾರತದ ಪರಿಸರ – ದ್ವಿತೀಯ ಸಮಿಕ್ಷೆ, ಭಾರತದ ಪರಿಸರದ ಪರಿಸ್ಥಿತಿ – 1982 – ಪ್ರಜೆಯ ದೃಷ್ಟಿಯಲ್ಲಿ, ಭಾರತ ವರ್ಷದಲ್ಲಿ ಬ್ರಿಟಿಷರು, ಯಾರು ಲಕ್ಷಿಸುವರು?, ಶ್ರೀ ರಾಮಕೃಷ್ಣರ ಜೀವನ ಚರಿತೆ

➤ ಮಕ್ಕಳ ಪುಸ್ತಕಗಳು :
ಅನಾದಿ ಕಾಲದ ಮನುಷ್ಯ, ಒಂದೇ ರಾತ್ರಿ ಒಂದೇ ಹಗಲು, ಗಜರಾಜ
ಗೆದ್ದವರ ಸತ್ಯ, ಢಂ ಢಂ ಢೋಲು, ನರನೋ ವಾನರನೋ, ಮರಿಯಪ್ಪನ ಸಾಹಸಗಳು, ಮಂಗನ ಮದುವೆ, ಸೂರ್ಯ ಚಂದ್ರ, ಹುಲಿರಾಯ

➤  ಶೈಕ್ಷಣಿಕ ಕೃತಿಗಳು :
ಓದುವ ಆಟ, ಗೃಹ ವಿಜ್ಞಾನ (1,2,3), ಚಿತ್ರಮಯ ದಕ್ಷಿಣ ಕನ್ನಡ, ಚಿತ್ರಮಯ ದಕ್ಷಿಣ ಕನ್ನಡ – ಅಂದು-ಇಂದು, ಚಿತ್ರಮಯ ದಕ್ಷಿಣ ಹಿಂದುಸ್ತಾನ, ನಾಗರಿಕತೆಯ ಹೊಸ್ತಿಲಲ್ಲಿ, ರಮಣ ತಾತ, ಸ್ನೀತಿ (1,2,3), ಸಾಮಾನ್ಯ ವಿಜ್ಞಾನ (1,2,3), ಸಿರಿಗನ್ನಡ ಪಾಠಮಾಲೆ (1,2,3,4,5,6,7), ಹೂಗನ್ನಡ ಪಾಠಮಾಲೆ (1,2,3,4,5,6,7,8), ವಯಸ್ಕರ ಶಿಕ್ಷಣ, ಅಳಿಲ ಭಕ್ತಿ ಮಳಲ ಸೇವೆ, ಕರ್ನಾಟಕದ ಜಾನಪದ ಕಲೆಗಳು, ಕೋಳಿ ಸಾಕಣೆ,  ಜೋಗಿ ಕಂಡ ಊರು, ದಕ್ಷಿಣ ಹಿಂದುಸ್ತಾನದ ನದಿಗಳು, ದೇವ ಒಲಿದ ಊರು,  ಬೇರೆಯವರೂ ಸರಿ ಇರಬಹುದು, ಹುಟ್ಟು ಸಾವು ಒಟ್ಟು ಒಟ್ಟು

➤ ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು :
Folk Art of Karnataka, Karnataka Paintings, My Concern for Life, Literature and Art, Picturesque South Kanara, Yakshagana

➤ ಪ್ರಶಸ್ತಿ /ಪುರಸ್ಕಾರಗಳು :
ಜ್ಞಾನಪೀಠ ಪ್ರಶಸ್ತಿ
ಪದ್ಮಭೂಷಣ ಪ್ರಶಸ್ತಿ
ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್
ರಾವ್ ಬಹದೂರ್ ಪ್ರಶಸ್ತಿ (1930 ರಲ್ಲಿ)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ

➤ನಿಧನ :
ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮಕಾರಂತರು 1997] ಡಿಸೆಂಬರ್ 09 ರಂದು ನಿಧನ ಹೊಂದಿದರು. ನಿಸರ್ಗದ ಚೆಲುವಿನೊಂದಿಗೆ ಅವಿರತವಾಗಿ ಸಾಹಿತ್ಯ ಸೃಷ್ಟಿಸಿದವರು ಕಾರಂತರು. ದೂರದ ಕೋಟದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದು ಪ್ರಕೃತಿಯ ಮಡಿಲಿನಲ್ಲಿ ಜೀವನದ ಹೋರಾಟದೊಂದಿಗೆ, ಸಮಗ್ರ ಕೋನವನ್ನು ಸ್ಪರ್ಷಿಸಿ ಧನ್ಯತೆಯ ಭಾವವನ್ನು ಕಾಣಲು ಸಾಧ್ಯವಾದ ದಿವ್ಯ ಕ್ಷೇತ್ರ

Leave a Reply

Your email address will not be published. Required fields are marked *

error: Content Copyright protected !!