GKScienceSpardha Times

ಗಂಧಕದ ಬಹುರೂಪತೆ ಮತ್ತು ಉಪಯೋಗ

Share With Friends

# ಪ್ರಾಚೀನ ಕಾಲದಿಂದಲೂ ಜನರಿಗೆ ಗಂಧಕದ ಉಪಯೋಗ ತಿಳಿದಿತ್ತು. ಇದನ್ನು “ಬ್ರೀಮ್ ಸ್ಟೋನ್”((ಬೆಂಕಿಯ ಕಲ್ಲು) ಎಂದು ಕರೆಯುತ್ತಿದ್ದರು.
# ಇಂಗ್ಲೀಷನಲ್ಲಿ ಗ0ದಕವನ್ನು “ಸಲ್ಫರ್” ಎನ್ನುತ್ತಾರೆ. ಸಲ್ಫರ್ ಎಂಬ ಪದದ ಮೂಲ ಲ್ಯಾಟಿನ್ ಭಾಷೆಯ “ಸಲ್ಪ್ಯೂರಿಯಮ್” ಎಂಬುದು.
# ಗಂಧಕವು ಕ್ರಿಯಾಶೀಲವಾದ ಧಾತುವಾಗಿದೆ. ಗಂಧಕವನ್ನು ಭೂಮಿಯಿಂದ ಫ್ರಾಶ್ಚ ವಿಧಾನದಲ್ಲಿ ಹೊರತೆಗೆಯುತ್ತಾರೆ.
# ಗಂಧಕವು ಜೀವಿಗಳ ದೇಹದಲ್ಲಿ ಪ್ರೋಟಿನ್‍ಗಳ ರೂಪದಲ್ಲಿ ಇರುತ್ತವೆ. ಈರುಳ್ಳಿ, ಬೆಳ್ಳುಳ್ಳಿ, ಮತ್ತು ಸಾಸಿವೆ ಗಂಧಕದ ಸಂಯುಕ್ತವಿರುವ ಸಸ್ಯ ಆಕರಗಳು. ಈರುಳ್ಳಿಯನ್ನು ಕೊಯ್ದಾಗ ಕಣ್ಣೀರು ಬರುವಿಕೆ ಕಾರಣ ಅದರಲ್ಲಿರುವ ಗಂಧಕದ ಕಣಗಳು, ಸಿಪ್ಪೆ ಸುಲಿದಾಗ ಅಥವಾ ಕೊಯ್ದಾಗ ಗಂಧಕವು ಸಿಡಿದು ಕಣ್ಣೀರಿನಲ್ಲಿ ಕರಗಿ ಗಂಧಕಾಮ್ಲವಾಗುತ್ತದೆ.

#  ಗಂಧಕದ ಬಹುರೂಪಗಳು
1. ರಾಂಬಿಕ್ ಗಂಧಕ
ಇದಕ್ಕೆ ಎಂಟು ಮುಖಗಳಿದ್ದು ಇದನ್ನು ಅಷ್ಟಮುಖಿ ಗಂಧಕ ಎನ್ನುತ್ತಾರೆ. ಇದು ಗಟ್ಟಿಯಾಗಿದ್ದು ,ನಸು ಹಳದಿ ಬಣ್ಣವನ್ನು ಹೊಂದಿದೆ.
2. ಮೊನೋಕ್ಲಿನಿಕ್ ಗಂಧಕ
ಇದು ಪೆಡಸಾದ ಸೂಜಿಯಾಕಾರದ ಸ್ಫಟಿಕವಾಗಿದೆ. ದಟ್ಟ ಹಳದಿ ಬಣ್ಣವನ್ನು ಹೊಂದಿದೆ.

3. ಪ್ಲಾಸ್ಟಿಕ್ ಗಂಧಕ
ಇದು ಮೆದು ಗಂಧಕವಾಗಿದೆ. ಗಂಧಕವನ್ನು ಕಾಯಿಸಿ ದ್ರವರೂಪಕ್ಕೆ ತರಬೇಕು. ಕುದಿಯುತ್ತಿರುವ ಗಂಧಕವನ್ನು ತಣ್ಣನೆಯ ನೀರಿಗೆ ಸುರಿದಾಗ ಮೆದುವಾದ ರಬ್ಬರಿನಂತಹ ಮುದ್ದೆ ದೊರೆಯುತ್ತದೆ. ಇದು ಕಂದು ಬಣ್ಣವನ್ನು ಹೊಂದಿದೆ.

ಗಂಧಕದ ಉಪಯೋಗಗಳು
1 ಕ್ರಿಮಿನಾಶಕಗಳಲ್ಲಿ
2. ಚರ್ಮದ ಮೂಲಾಮುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
3. ಸ್ಫೋಟಕ ಮತ್ತು ಸಿಡಿಮದ್ದುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಪೊಟಾಷಿಯಂ ನೈಟ್ರೇಟ್, ಗಂಧಕ , ಇದ್ದಿಲಿನ ಪುಡಿ ಈ ಮೂರರ ಮಿಶ್ರಣವನ್ನು ಬಂದೂಕಿನ ಪುಡಿ ಎನ್ನುವರು.
4. ಗಂಧಕವನ್ನು ಸಲ್ಪುರಿಕ್ ಆಮ್ಲದ ತಯಾರಿಕೆಯಲ್ಲಿ ಬಳಸುತ್ತಾರೆ.
5.ರಬ್ಬರಿನ ವಲ್ಕನೀಕರಣದಲ್ಲಿ ಗಂಧಕವನ್ನು ಬಳಸುತ್ತಾರೆ.
ರಬ್ಬರ್ ಎನ್ನುವುದು ಮರದ ಹಾಲಿನಿಂದ ತಯಾರಿಸುವ ಒಂದು ನೈಸರ್ಗಿಕ ಪಾಲಿಮಾರ್. ಇದರಲ್ಲಿ ಅಣುಗಳ ದೀರ್ಘ ಸರಪಳಿಯಲ್ಲಿ ಜೋಡಣೆಯಾಗಿರುತ್ತದೆ. ಇದರಿಂದ ರಬ್ಬರಗೆ ಸ್ಥಿತಿಸ್ಥಾಪಕ ಗುಣ ಬಂದಿದ್ದು, ಅದಕ್ಕೆ ಬೇಕಾದ ಆಕಾರ ಕೊಡುವುದು ಕಷ್ಟ. ಆದ್ದರಿಂದ ರಬ್ಬರ್‍ಗೆ ನಿಗದಿತ ಪ್ರಮಾಣದಲ್ಲಿ ‘ಗಂಧಕ’ವನ್ನು ಸೇರಿಸಿದಾಗ ರಬ್ಬರ್ ತನ್ನ ಎಲ್ಲಾ ಲಕ್ಷಣಗಳನ್ನು ಉಳಿಸಿಕೊಂಡು ಗಡಸಾಗುತ್ತದೆ. ತದನಂತರ ರಬ್ಬರಿಗೆ ಯಾವುದೇ ಆಕಾರ ಕೊಡಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *

error: Content Copyright protected !!