KannadaModel Question PapersSpardha TimesTET - CET

ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ

Share With Friends

ಸೂಚನೆ : ಈ ಕೆಳಗಿನ ಗದ್ಯ ಭಾಗವನ್ನು ಓದಿ ಕೊಟ್ಟಿರುವ 1 ರಿಂದ 8 ಪ್ರಶ್ನೆಗಳಿಗೆ ಉತ್ತರಿಸಿ.
ಕೆಲವೊಮ್ಮೆ ದೊಡ್ಡವರ ಜೀವನದ ಕೆಲವು ಪ್ರಸಂಗಗಳು, ಘಟನೆಗಳು ನಮ್ಮ ಗಮನವನ್ನು ತೀವ್ರವಾಗಿ ಸೆಳೆದ ನೆನಪಿನ ನಸುಮುಸುಕಿನಲ್ಲಿ ಕಣ್ಮರೆಯಾಗುತ್ತವೆ. ಅಂತಹವುಗಳೆಂದರೆ,  “ಅಭೀಪ್ಸೆ” ಎಂಬ ಹೊ ಸಂಕಲನವನ್ನು ಪ್ರಕಟಿಸಿ ಆಧುನಿಕ ಕವಿಗಳ ಬಳಗಕ್ಕೆ ಸೇರಿರುವ ಎಚ್.ಜಿ.ಸಣ್ಣಗುಟ್ಟಯ್ಯನವರು ತುಮಕೂರಿನಲ್ಲಿ ನನ್ನ ಸಹೊದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು. ಅವರದ್ದು ತೀಕ್ಷ್ಣಮತಿ, ಹರಿತವಾದ ಮಾತು, ಖಚಿತವಾದ ವಿಮರ್ಶೆ ಆಗಾಗ ಸ್ವಲ್ಪ ಹಾಸ್ಯವೈ ಉಂಟು ಅನ್ನೋಣ.

ಒಂದು ದಿನ ಗುಣುಗುಣು ಪದ ಹೇಳುತ್ತಲೆ ಕೊಠಡಿಗೆ ಬಂದವರು ತಮ್ಮ ಕಪಾಟಿನ ಬೀಗ ತೆಗೆದು ಪುಸ್ತಕಗಳನ್ನು ಹುಡುಕುತ್ತ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಸಿಪಾಯಿ ಎಂದು” ಗಟ್ಟಿಯಾಗಿ ಎರಡು ಸಲ ಹಾಡಿದರು. ಹಾಡಿದ್ದಲ್ಲದೇ “ಪ್ರಹ್ಲಾದ ರಾಯರೇ ಹೇಗಿದೆ ಏ ಸಾಲು? ಎಂದು ಕೇಳಿದರು. ಆಗಲೇ ಆವರ ಹಾಡಿನ ನುಡಿಯನ್ನು ಗಮನಿಸಿದ್ದ ನಾನು “ಚೆನ್ನಾಗಿದೆ, ಬಹಳ ಚೆನ್ನಗಿದೆ ಎಂದೆ. ಅಂಥ ನಿರ್ಧಾರಕ್ಕೆ ಬರಬೇಕಾದ ಪ್ರಸಂಗ ಒದಗಿದ್ದಕ್ಕಾಗಿ ಅವರನ್ನು ಸಂತೈಸಿದೆ.

ಈ ಮಾತಿನ ಅರ್ಥ ಹೊಳೆಯ ಬೇಕಾದರೆ ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್.ನರಸಿಂಹಸ್ವಾಮಿಯವರ ಕವನದ ಸಾಲನ್ನು ನಾವು ನೆನೆಯಬೇಕು. ಅವರು ಹೇಳುತ್ತಾರೆ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ”. ಎರಡೂ ಎರಡು ಧ್ರುವಾಂತರ ಸತ್ಯಗಳು ಹೇಳಿದವರಿಬ್ಬರೂ ಕವಿಗಳು. ಸಂಸಾರದ ಮೂಲಾಧಾರಳಾದ ಹೆಂಡತಿಯ ಬಹು ಪ್ರೀಯವೆನಿಸುವ ರಸವಂತಿಕೆಯನ್ನು ಸೂಚಿಸುವ ಈ ಪ್ರಸಂಗ ಸಾಮಾನ್ಯವಾದುದಲ್ಲ.

ಶಿವಮೊಗ್ಗೆಯ ಕರ್ನಾಟಕ ಸಂಘದಲ್ಲಿ ರಾಜ್ಯದ ಯೋಜನಾ ಪ್ರಚಾರದ ಅಂಗವಾಗಿ ಸಮಾವೇಶಗೊಂಡಿದ್ದ ಕವಿ ಸಮ್ಮೇಳನದ ಆಧ್ಯಕ್ಷತೆಯನ್ನು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ವಹಿಸಿದ್ದರು. ತರುಣ ಕವಿಗಳು ಅನೇಕರು ಓದಿದ ಕವನಗಳು ಸಾಧಾರಣವಾಗಿದ್ದರು. ಮಾಸ್ತಿಯವರು ಮಾತ್ರ ಹಸನ್ಮುಖಿಗಳಾಗಿ ಕುಳಿತು ಎಲ್ಲಾ ಕವನಗಳನ್ನು ಸಾವಧಾನವಾಗಿ ಕೇಳುತ್ತಿದ್ದರು. ಅಂಥ ಇಳಿವಯಸ್ಸಿನಲ್ಲೂ ಅವರಿಗಿದ್ದ ತಾಳ್ಮೆಯನ್ನು ಕಮಡು ನನಗೆ ಆಶ್ಚರ್ಯವಾಯಿತು. ತಮ್ಮ ಕವನವನ್ನು ಓದಲು ಬಂದ ತರುಣ ಕವಿ ತಿಮ್ಮರಸಯ್ಯ ಪ್ರಾರಂಭದಲ್ಲಿ ಮಾತನಾಡುತ್ತಾ “ಪೂಜ್ಯ ಮಾಸ್ತಿಯವರು ಅಗಾಧವಾದ ಸಮುದ್ರದಂತಿದ್ದಾರೆ.

ನಾನಾದರೋ ಅವರ ಮುಂದೆ ಒಂದು ಸಣ್ಣ ಮೀನು”. ಎಂದು ವಿನಯದಿಂದ ತಮ್ಮ ಕವನವನ್ನು ಓದಿದರು. ಅದಕ್ಕೆ ಪ್ರತಿಕರಿಯಿಸುತ್ತ ಮಾಸ್ತಿಯವರು”ಈ ಕಿರಿಯ ಗೆಳೆಯ ಹೇಳಿದ ಮಾತು ನಿಜ”. ಆದರೆ ಮೀನಿಗೆ ಯಾವತ್ತೂ ಸಮುದ್ರದ ವಿಷಯದಲ್ಲಿ ಭಯ ಸಂಕೋಚ ಇರಬಾರದು. ಸಮುದ್ರ ಇರುವುದೇ ಇಂಥ ಲಕ್ಷೋಪಲಕ್ಷ ಮೀನುಗಳನ್ನು ಸಾಕಿ ಸಲಹುದಕ್ಕೆ ಎಂದರು. ಈ ಪ್ರಸಂಗ ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ.

1. ಮೈಸೂರು ಮಲ್ಲಿಗೆ ಕವನ ಸಂಕಲನದ ಕರ್ತೃ
1.ಕೆ.ಎಸ್.ನಿಸರ್ ಅಹಮದ್  ✔
2.ಕೆ.ಎಸ್‍ನರಸಿಂಹಸ್ವಾಮಿ
3. ಚನ್ನವೀರ ಕಣವಿ
4. ಗೋಪಾಲ ಅಡಿಗ

2. ಹೆಚ್.ಜಿ ಸಣ್ಣಗುಡ್ಡಯ್ಯನವರು ಪ್ರಕಟಿಸಿದ ಹೊಸ ಕವನ ಸಂಕಲನ ಇದು…
1.ಅನನ್ಯ
2. ಅಸ್ಮಿತೆ
3. ಆಕಾಂಕ್ಷೆ
4. ಅಭೀಪ್ಸೆ ✔

3. ಶಿವಮೊಗ್ಗೆಯ ಕರ್ನಾಟಕ ಸಂಘದ ಕವಿ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿದ್ದರು
1. ಎಚ್.ಜಿ.ಸಣ್ಣಗುಡ್ಡಯ್ಯ
2. ಮಾಸ್ತಿ ವೆಂಕಟೇಶ್ ಅಯ್ಯಂಗಾರ್✔
3. ಪ್ರಹ್ಲಾದ್ ರಾಯರು
4. ಕೆ.ಎಸ್.ನರಸಿಂಹಸ್ವಾಮಿ

4. ಧ್ರುವಾಂತರ ಈ ಪದದಲ್ಲಿ ಆಗಿರುವ ಸಂಧಿ..?
1. ಸವರ್ಣ ಧೀರ್ಘ ಸಂಧಿ✔
2. ಲೋಪ ಸಂಧಿ
3. ಆಗಮ ಸಂಧಿ
4. ಗುಣಸಂದಿ

5. ತಮ್ಮ ಕವನವನ್ನು ಓದಲು ಬಂದ ತರುಣ ಕವಿಯು ಮಾಸ್ತಿಯವರನ್ನು ಇದಕ್ಕೆ ಹೋಲಿಸಿದ್ದಾರೆ
1. ಸಣ್ಣ ಮೀನು
2. ದೊಡ್ಡ ತಿಮಿಂಗಲ
3. ಸರೋವರ
4. ಅಗಾಧವಾದ ಸಮುದ್ರ✔

6. ಕೆ. ಎಸ್. ನರಸಿಂಹಸ್ವಾಮಿಯವರಪ್ರಕಾರ ಹೆಂಡÀತಿಯೊಬ್ಬಳು ಮನೆಯೊಳಗಿದ್ದರೆ ಅವರು ಹೀಗೆ :
1. ಗವಾಯಿ
2. ದಿವಾನ
3. ಸಿಪಾಯಿ✔
4. ಶಹನಾಯಿ

7. ಎಚ್.ಜಿ.ಸಣ್ಣಗುಡ್ಡಯ್ಯನವರ ವ್ಯಕ್ತಿತ್ವ ಈ ರೀತಿಯದಲ್ಲ :
1. ತೀಕ್ಷ್ಣಮತಿ
2.ಹರಿತ ಮಾತು
3. ತಿಳಿಹಾಸ್ಯ
4.ಮುಂಗೋಪಿತನ✔

8. ಗುಣುಗುಣು ಈ ಪದದಲ್ಲಿರುವ ವ್ಯಾಕರಣಾಂಶ
1.ದ್ವಿರುಕ್ತಿ
2.ಜೋಡಿಪದ
3.ಅನುಕರಣಾವ್ಯಯ✔
4.ನುಡಿಗಟ್ಟು

ಸೂಚನೆ : ಈ ಕೆಳಗಿನ ಪದ್ಯಭಾಗವನ್ನು ಓದಿಕೊಂಡು 9 ರಿಂದ 15ರ ವರೆಗಿನ ಪ್ರಶ್ನೆಗಳಿಗೆ ಉತ್ತರಿಸಿ
ರಾವಣನ ಕೊಂದು, ಸೀತೆಯ ತಂದು, ನಗುನಗುತ
ತಾಯಿಗೆರಗಿದ ರಾಮಚಂದ್ರ
ಕೋದಂಡದಂತೆ ಭಾಗಿದನು; ಕೈಮುಗಿದಾಗ
ಉಂಗುರದ ಮಾಣಿಕ್ಯ ಕಿರಣ
ಮೂಡಿ, ಮುಳುಗಿತು ಲೋಕಾಮಾತೆ ಸೀತಾಮಣಿಯ
ಮಾಂಗಲ್ಯ ಮಾಲೆಯೋಳಗೆ
ಕೌಸಲ್ಯೆ ಹರಸಿದಳು ತನ್ನ ಕರುಳಿನ ಮುಗುಳ
ನೀರಿನೊಳೆಯೆ ಕಣ್ಣಿನೊಳಗೆ
ಕಾಡ ಮರೆಯಿರಿ ಇನ್ನು, ರಾಜ್ಯವಾಳಿರಿ ನನ್ನ
ಮುದಿಗಣ್ಣ ತುಂಬಿ, ಬನ್ನಿ
ಮೂಲೋಕದೊಡೆಯ ಶ್ರೀರಾಚಂದ್ರನ ವರಿಸಿ,
ಕಾಡಿನಲಿ ಕೂಡಿ ತಿರುಗಿ,
ಭೂಲೋಕದೊಳಗೆಲಲ್ಲ ದುಖಗಳನ್ನನುಭವಿಸಿ,
ಎರಡೆಲ್ಲ ಎಂದು ಎನಿಸಿ
ರಣಭೂಮಿಯಲಿ ರಕ್ತನದಿಯೊಳಗೆ ನದೆತಂದು,
ರುದ್ರನಿಗೆ ಹಬ್ಬವುಣಿಸಿ
ಪತಿಭಕ್ತಿಯಿಂದಗ್ನಿ ಕುಂಡದಲಿ ನೆರೆಮಿಂದು
ಬಂದವಳ ಸೊಸೆಯ ಹರಸಿ
ಕೌಸಲ್ಯೆ ಕಣ್ತುಂಬ ನೋಡಿದಳು, ಬಿಸಿಯುಸಿರು
ಬೀಸಿತ್ತು ಜಾನಕಿಯ ಮುಖದ ಮೇಲೆ
ಅಂದು ಗಂಗಾನದಿಯ ಮುತ್ತುಗಳೆಲ್ಲ
ಕೆನ್ನಯ ಸೋಕಿದಂತಾದುದಾಗ
ತೌರೂರು, ತಾಯ್ತಂದೆ, ತಾಯಡಿಗೆ ತನಗಿಲ್ಲ
ದೊರೆಮಗಳು, ದೊರೆಯ ಮಡದಿ.
ಅತ್ತೆ ಮಾವಂದಿರನು ಸುತ್ತು ಸೇವಿಸಲಿಲ್ಲ,
ತುದಿಗಾಲನೊತ್ತಲಿಲ್ಲ,
ಕೈಹಿಡಿದ ಗಂಡನಿಗೆ ವನವಾಸಭೋಗ
ತಾನುಟ್ಟಿಹುದು ನಾರ ಸೀರೆ

9. ಈ ಪದ್ಯದಲ್ಲಿ ಬಂದಿರುವ ಮೂಲೊಕದೊಡೆಯ
1.ರಾವಣ
2.ಶ್ರೀರಾಮ✔
3.ರುಧ್ರ
4.ಲಕ್ಷ್ಮಣ

10. ಉಂಗುರದ ಮಾಣಿಕ್ಯ ಕಿರಣ, ಮೂಡಿ ಇಲ್ಲಿ ಮುಳುಗಿತು
1. ಸೀತಾಮಣಿಯ ಮಾಂಗಲ್ಯ ಮಾಲೆಯಲ್ಲಿ ✔
2.ಗಂಗಾನದಿಯ ನೀರ ಮುತ್ತುಗಳಲ್ಲಿ
3. ಅಗ್ನಕುಂಡದಲ್ಲಿ
4.ರಕ್ತನದಿಯೊಳಗೆ

11. ಕೌಸಲ್ಯೆಯ ಬಿಸಿಯುಸಿರು ಜಾರಿ ಇಲ್ಲಿ ಬಿತ್ತ
1. ಶ್ರೀರಾಮಚಂದ್ರನ ಮೇಲೆ
2. ಸೀತಾಮಣಿಯ ಮಾಂಗಲ್ಯ ಮಾಲೆಯ ಮೇಲೆ
3. ಜಾನಕಿಯ ಮುಖದ ಮೇಲೆ✔
4. ನಾರ ಸೀರೆಯ ಮೇಲೆ

12. ಅಗ್ನಿಕುಂಡದಲ್ಲಿ ನೆರೆಮಿಂದು ಬಂದವಳು ಇವಳು
1. ಕೌಸಲ್ಯೆ
2.ಕೈಕೇಯಿ
3.ಸುಮಿತ್ರೆ
4.ಸೀತೆ✔

13. ಕೌಸಲ್ಯೆಯು ಶ್ರೀರಾಮಚಂದ್ರ ಮತ್ತು ಸೀತೆಗೆ ಹೀಗೆಂದು ಹರಸಿದಳು ;
1. ಕಾಡನೆನಪಿಸಿ, ರಾಜ್ಯಮರೆಯಿರಿ ಇನ್ನು
2. ಭೂಲೋಕದೊಳಗಿನ ದುಖಗಳನನುಭವಿಸಿ
3.ರಣಭೂಮಿಯಲಿ ರಕ್ತವನು ಹರಿಸಿ
4.ಕಾಡ ಮರೆಯಿರಿ ಇನ್ನು, ರಾಜ್ಯವಾಳಿರಿ ನನ್ನ ಮುದಿಗಣ್ಣ ತುಂಬಿ✔

14. ಲವಕುಶರು ಈ ಪದದಲ್ಲಿ ಆಗಿರು ಸಮಾಸ
1. ದ್ವಿಗು ಸಮಾಸ
2.ದ್ವಂದ್ವ ಸಮಾಸ ✔
3.ತತ್ಪುರುಷ ಸಮಾಸ
4.ಕರ್ಮಧಾರೆ ಸಮಾಸ

15. ನಗುನಗುತ ಈ ಪದದಲ್ಲಿರುವ ವ್ಯಾಕರಣಾಂಶ
1. ದ್ವಿರುಕ್ತಿ✔
2.ಅನುಕರಣಾವ್ಯಯ
3. ನುಡಿಗಟ್ಟು
4.ಜೋಡಿಪದ

16. ಈ ಕೆಳಗಿನವುಗಳಲ್ಲಿ ಬರವಣಿಗೆ ಸಂಬಂಧಿಸಿದ ಕೌಶಲ್ಯ ಇದಾಗಿದೆ:
1. ಉತ್ತಮ ಶೈಲಿಯಲ್ಲಿ ಬರೆಯುವ ಕೌಶಲ✔
2.ಮೌನವಾಗಿ ಓದಿ ವಿಷಯ ಗ್ರಹಿಸುವ ಸಾರ್ಮಥ್ರ್ಯ
3. ಕಿವಿಗೊಟ್ಟು ಧ್ವನಿಯನ್ನು ಗಮನಿಸಿ ಗ್ರಹಿಸುವುದು
4.ಕವನ ಮತ್ತು ಭಾವಗೀತೆಗಳನ್ನು ರಾಗವಾಗಿ ಹಾಡುವ ಸಾಮಥ್ರ್ಯ

17. ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ, ಪಾತ್ರಗಳು ಸಂಭಾಷಣೆ ಸಂಧರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ಧತಿ:
1.ಉಪನ್ಯಾಸ ಪದ್ದತಿ
2.ಪ್ರಶ್ನೋತ್ತರ ಪದ್ದತಿ
3. ಚರ್ಚಾ ಪದ್ಧತಿ
4. ಕಥನ ಪದ್ಧತಿ✔

18. ಈ ಕೆಳಗಿನ ಭಾಷಾ ಬೋಧನಾ ಪದ್ಧತಿಗಳಲ್ಲಿ ಸಾಂಪ್ರದಾಯಿಕ ಪದ್ದತಿಗೆ ಸೇರಿಲ್ಲದಿರುವುದು:
1. ಪಠ್ಯಪುಸ್ತಕ ಪದ್ಧತಿ
2.ಉಪನ್ಯಾಸ ಪದ್ಧತಿ
3.ಪ್ರಶ್ನೋತ್ತರ ಪದ್ಧತಿ
4. ನಾಟಕಾಭಿನಯ ಪದ್ದತಿ

19. ಭೋಧನಾಕ್ರಿಯೆ ಪರಿಣಾಮಕಾರಿಯಾಗಲೂ ಪ್ರತ್ಯಕ್ಷ ಹಾಗೂ ಸಜೀವ ವಸ್ತುಗಳನ್ನು ಕೆಲವೊಮ್ಮೆ ಮಾದರಿಗಳನ್ನು ಉಪಯೋಗಿಸಿ ಕಲಿಸುವ ಪದ್ದತಿ:
1. ಪಠ್ಯಪುಸ್ತಕ ಪದ್ಧತಿ✔
2. ಸಂಪೂರ್ಣ ಪದ್ಧತಿ
3. ಪ್ರಶ್ನೋತ್ತರ ಪದ್ಧತಿ
4. ನಿದರ್ಶನ ಪದ್ಧತಿ

20. ಈ ಕೇಳಗಿನ ಹೇಳಿಕೆಗಳಲ್ಲಿ ಇದು ಉತ್ತಮ ಮಾತುಗಾರಿಕೆಯ ಲಕ್ಷಣಕ್ಕೆ ಸೇರಿದೆ:
1. ನೇರವಾಗಿ ಮಾತನಾಡದೆ, ಸುತ್ತಿ ಬಳಸಿ ಮಾತನಾಡುವುದು
2. ವಿಷಯದ ಪೂರ್ಣ ತಿಳುವಳಿಕೆ ಇಲ್ಲದೇ ಮಾತನಾಡುವುದು
3. ಹಿಮ್ಮರಳುವಿಕೆ ಹಾಗೂ ಪುನರಾವರ್ತನೆ ಮಾಡುತ್ತಾ ಮಾತನಾಡುವುದು
4. ಸಂಧರ್ಭಕ್ಕನುಗುಣವಾಗಿ ಹಿತಮಿತವಾಗಿ ಮಾತನಾಡುವುದು✔

21.” ವ್ಯಾಕರಣದಿಂದ ಪದ, ಪದದಿಂದ ಅರ್ಥ, ಅರ್ಥದಿಂದ ತತ್ವ , ತತ್ವದಿಂದ ಮೋಕ್ಷ ಲಭಿಸುತ್ತದೆ.” ಈ ಪ್ರಸಿದ್ದ ಹೇಳಿಕೆ ನೀಡಿದವರು:
1. ದಂಡಿ
2. ಕೇಶಿರಾಜ✔
3. 2 ನೇ ನಾಗವರ್ಮ
4. ಭಟ್ಟಾಕಳಂಕ

22. ಒಂದು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಉತ್ತಮ ವಿಧಾನದಿಂದ ಪರಿಹಾರಕ್ಕಾಗಿ ಕೈಗೊಳ್ಳುವ ಪ್ರಕ್ರಿಯೆ:
1. ಸಂಶೋಧನೆ
2. ಕ್ರಿಯಾಸಂಶೋಧನೆ✔
3. ಮೌಲ್ಯಮಾಪನ
4. ಪರಿಹಾರ ಬೋಧನೆ

23. ಒಂದು ನಿರ್ದಿಷ್ಟ ಪದ್ಯಾಂಶಗಳನ್ನು ವಿದ್ಯಾರ್ಥಿಗಳು ತಾವೇ ಕಲಿಯಲು ವ್ಯವಸ್ಥೆಗೊಳಿಸಿರುವ ಕಲಿಕಾ ಸಾಮಗ್ರಿಗಳ ಮೂಲಕ ಕಲಿಯುವ ವಿಧಾನ:
1. ರೂಪಕ ವಿಧಾನ
2. ಸ್ವಯಂ ಬೋಧಿನಿ ವಿಧಾನ✔
3. ನಾಟಕ ವಿಧಾನ
4. ಸಾಂಪ್ರದಾಯಿಕ ಪದ್ಧತಿ

24. ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಪರಿವರ್ತಿಸುವುದು:
1. ರೂಪಾಂತರ
2. ಭಾಷಾಂತರ✔
3. ಭಾಷಾ ಕೌಶಲ್ಯ
4. ತಂತ್ರಜ್ಞಾನ

25. ಒಂದು ವಿಷಯವನ್ನು ಕುರಿತಂತೆ ಪಠ್ಯ ಲೇಖನವನ್ನು ಭಾವ, ಅರ್ಥ ಕೆಡದಂತೆ ಸಾರ ಸಂಗ್ರಹಿಸಿ ಬರೆಯುವುದೇ:
1. ವಿಸ್ತøತ ಬರವಣಿಗೆ
2. ಸೃಜನಶೀಲ ಬರವಣಿಗೆ
3. ಟಿಪ್ಪಣಿ ಬರಹ
4. ಸಂಕ್ಷೇಪ ಬರವಣಿಗೆ✔

26. ಒಂದು ವುಷಯದ ಅಥವಾ ಆಲೋಚನೆಯ ಬಗ್ಗೆ ಸುಸಂಬದ್ಧ ತರ್ಕಬದ್ಧ ವಾಕ್ಯ ವೃಂದಗಳನ್ನು ಕ್ರಮಬದ್ಧವಾಗಿ ಬರೆದ ಪಠ್ಯವಿದು:
1. ಗದ್ಯ
2. ಪದ್ಯ
3. ಪ್ರಬಂಧ✔
4. ಲಹರಿ

27. ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸಲು, ಕಲಿಕೆಯತ್ತ ಆಸಕ್ತಿ ಮೂಡಿಸಿ ಪ್ರೇರಣೆ ನೀಡಲು ಪ್ರಶ್ನಿಸುವ ಪದ್ಧತಿ:
1. ಉಪನ್ಯಾಸ ಪದ್ಧತಿ
2. ಪ್ರಯೋಗಾಲಯ ಪದ್ಧತಿ
3. ಪಠ್ಯಪುಸ್ತಕ ಪದ್ಧತಿ
4. ಪ್ರಶ್ನೋತ್ತರ ಪದ್ದತಿ✔

28. ಭಾಮಿನಿ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ:
1. 32
2. 51.
3. 64
4. 102✔

29. ‘ ಮದವು ಸೊಕ್ಕಿದ ಆನೆ ಇದ್ದಂತೆ’ ಈ ವಾಕ್ಯದಲ್ಲಿರುವ ಅಲಂಕಾರ:
1. ಉಪಮಾಲಂಕಾರ✔
2. ರೂಪಕಾಲಂಕಾರ
3. ದೃಷ್ಟಾಂತಾಲಂಕಾರ
4. ಉತ್ಪ್ರೇಕ್ಷಾಲಂಕಾರ

30. ಸುನೀತ ಅಥವಾ ಸಾನೆಟ್‍ನಲ್ಲಿರುವ ಪಾದಗಳ ಸಂಖ್ಯೆ:
1. 10
2. 8
3. 12
4. 14✔

 

 

 

 

 

 

 

Leave a Reply

Your email address will not be published. Required fields are marked *

error: Content Copyright protected !!