ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-1 – LANGUAGE-1 : KANNADA – Key Answers
PAPER-1 – PART-1 – ಭಾಷೆ-1 – ಕನ್ನಡ
ಸೂಚನೆ: ಈ ಕೆಳಗಿನ ಗದ್ಯಭಾಗವನ್ನು ಓದಿ 1 ರಿಂದ ಪ್ರಶ್ನೆಗಳಿಗೆ ಉತ್ತರಿಸಿರಿ:
ಮಲೆನಾಡಿನ ಗೋಪಾಲಕರು ದಿಟ್ಟರು, ಕೆಚ್ಚೆದೆಯಾಳುಗಳು, ಅಲ್ಲದೆ ಕಷ್ಟಸಹಿಷ್ಣುಗಳು, ಗಿರಿವನಗಳಲ್ಲಿ ಮಳೆಬಿಸಿಲೆನ್ನದೆ ಅಲೆದು ಅಲೆದು ಗಟ್ಟಿಮುಟ್ಟಾಗಿರುವರು. ಬಣ್ಣದಲ್ಲಿ ಅವರು ಸ್ವಲ್ಪಕಪ್ಪು ಮೊರಡಾದ ದೇಹ ಅವರ ಜೀವನದ ಕಾಠಿನ್ಯವನ್ನು.ತೋರ್ಪಡಿಸುವುದು, ನಡನುಡಿಗಳಲ್ಲಿ ಬಹಳ ವಿನಯರು, ಗರ್ವವಿಲ್ಲ, ಅತ್ಯಾಶೆಯಿಲ್ಲದವರು. ಅವರು ದಿನವೂ ಬೆಳಗ್ಗೆ ಎದ್ದುಗಂಜಿಯುಂಡು ತುರುಗಳನ್ನೆಲ್ಲಾ ಮೇಯಿಸಲು ಹೊಡೆದುಕೊಂಡು ಹೋಗುವರು. ಸಾಯಂಕಾಲ ಹಿಂತಿರುಗುವರು. ಅಷ್ಟುಹೊತ್ತಿನವರೆಗೆ ದನಗಳನ್ನು ಹುಲ್ಲು ಹುಲುಸಾಗಿರುವ ಕಡೆ ಹೊಡೆದುಕೊಂಡು ಹೋಗಿಮೇಯಿಸುವರು. ಬೇಸಗೆಯಲ್ಲಿ ನಡುಹಗಲಿನಲ್ಲಿ ಗೋವುಗಳನ್ನು ನೆರಳಿರುವ ಕಡೆ ಅಟ್ಟಿಕೊಂಡು ಹೋಗುವರು. ಅಲ್ಲಿ ಅವು ಸ್ವಲ್ಪ ಹೊತ್ತು ಮಲಗಿ ಮಲುಕು ಹಾಕುತ್ತಾ ವಿಶ್ರಮಿಸಿಕೊಳ್ಳುತ್ತವೆ. ಹೀಗೆ ವಿಶ್ರಮಿಸಿಕೊಳ್ಳುವ ಸ್ಥಳ ಬದಲಾಗುವುದಿಲ್ಲ. ಈ ಸ್ಥಳವನ್ನು ‘ತರುಬುಗುಣಿ’ ಎನ್ನುತ್ತಾರೆ. ಕೊಳಲು ಪ್ರತಿಯೊಬ್ಬ ದನಗಾಹಿಯ ಪರಮಗಳೆಯ. ಅದಿಲ್ಲದಿದ್ದರೆ ದನಕಾಯುವ ಪದವಿಗೆ ಗೌರವ ಕಡಿಮೆ.
ನಮ್ಮೂರಿನಲ್ಲಿ ‘ಹಿರಗ’ ಎಂಬ ದನಕಾಯುವವನಿದ್ದಾನೆ. ಅವನು ದನಗಾಹಿಗಳಿಗೆಲ್ಲ ಮಾದರಿ. ಇತರರಂತೆಯೇ ದನಗಳನ್ನು ಮೇಯಿಸುವನು. ಆದರೆ ಅವನ ಕೊಳಲಗಾನ ಎಲ್ಲರನ್ನೂ ಆಕರ್ಷಿಸುತ್ತದೆ. ಕೊಳಲೂದುವುದರಲ್ಲಿ ಆತನ ಸಮಾನರಿಲ್ಲವೆಂದು ಅಕ್ಕಪಕ್ಕದ ಹಳ್ಳಿಗಳಲ್ಲಿ ಪ್ರಸಿದ್ಧಿಯಾಗಿದ್ದಾನೆ. ಮಕ್ಕಳಿಗೆ ಅವನಲ್ಲಿ ಇಲ್ಲದ ಸಲಿಗೆ ಹಿರಗ ಬಂದನೆಂದರೆ ಹುಡುಗರೆಲ್ಲಾ ಅವನನ್ನು ಮುತ್ತಿಕೊಳ್ಳುತ್ತಾರೆ. ಮಕ್ಕಳು ಅವನಿಗೆ ಅನೇಕ ಕೆಲಸಗಳನ್ನು ಹಚ್ಚುತ್ತಿದ್ದರು. ಒಬ್ಬನು”ಹಿರಗಾ ನನಗೊಂದು ಕೊಳಲು ಬೇಕು’ಮತ್ತೊಬ್ಬ ನನಗೊಂದು ಬುಗುರಿ’ ಇನ್ನೊಬ್ಬ”ನನಗೊಂದಿಷ್ಟುಕಲ್ಲು ಸಂಪಗೆ ಹಣ್ಣು’ ಎಂದು ಕೆಲಸ ಹೇಳುತ್ತಾರೆ. ಅವನು ಯಾವುದಕ್ಕೂ ಇಲ್ಲ ಎನ್ನದೆ ‘ಹೂ’ ಎನ್ನುವನು ಕೈಲಾದ ಮಟ್ಟಿಗೆ ತಂದುಕೊಡುವನು.
ಹಿರಗ ತಾನು ಸಾಕಿರುವ ನಾಯಿಯ ಬಾಲ ಕಡಿದಿದ್ದಾನೆ. ಯಾರಾದರೂ ಅದು ಎಂಥಾ ನಾಯಿ ಎಂದರೆ ಅವನು ಸ್ವಲ್ಪವೂ ಸಂಕೋಚಪಡದೆ, ‘ಚೀನೀ ನಾಯಿ’ ಎನ್ನುತ್ತಾನೆ. ನಿಜವಾಗಿಯೂ ಅದು ಕಂತ್ರಿ ನಾಯಿಯೆ , ಅವನು ಮಾತ್ರ ಅದುಜಾತಿ ನಾಯಿ ಎಂದು ನಂಬಿದ್ದಾನೆ. ಬಾಲ ಕಡಿದ ನಾಯಿಗಳೆಲ್ಲ ಚೀನೀ ನಾಯಿಗಳೇ ಆಗುತ್ತವೆಂದು ಆತನ ಸಿದ್ಧಾಂತ. ಇದು ಅವನೊಬ್ಬನ ನಂಬಿಕೆಯಲ್ಲ ಸುತ್ತಮುತ್ತಲಿನ ಊರಿನವರ ಅಭಿಪ್ರಾಯವಲ್ಲ ಹಾಗೆಯೇ ಇದೆ.
1. ಮಲೆನಾಡಿನ ಗೋಪಾಲಕರು ಗಟ್ಟಿಮುಟ್ಟಾಗಿರಲು ಕಾರಣ
(1) ಗೋವುಗಳನ್ನು ಮೇಯಿಸುವುದರಿಂದ
(2) ಧೈರ್ಯಶಾಲಿಗಳಾಗಿರುವುದರಿಂದ
(3) ಮಳೆಬಿಸಿಲನ್ನದೆ ಆಲೆದು ಅಲೆದು✔
(4) ನಡೆನುಡಿಯಲ್ಲಿ ವಿನಯವಾಗಿರುವುದರಿಂದ
2, ‘ತರುಬುಗುಣಿ’ ಎಂದರೆ
(1)ಗೋವುಗಳು ಮಲಗಿ ವಿಶ್ರಮಿಸುವ ಸ್ಥಳ✔
(2) ಗೋವುಗಳ ಮೈ ತೊಳೆಯುವ ಸ್ಥಳ
(3) ಗೋಪಾಲಕರು ವಿಶ್ರಮಿಸುವ ಸ್ಥಳ
(4) ಗೋವುಗಳನ್ನು ಮಾರಾಟ ಮಾಡುವ ಸ್ಥಳ
3. ಮಲೆನಾಡಿನ ಪ್ರತಿಯೊಬ್ಬ ದನಗಾಹಿಯ ಗೆಳೆಯ
(1) ಗೋವು
(2) ಕೊಳಲು✔
(3) ಕಂಬಳಿ
(4) ಕಾಡು
4. ಹಿರಗನು ಪಕ್ಕದ ಹಳ್ಳಿಗಳಲ್ಲೆಲ್ಲಾ ಪ್ರಸಿದ್ಧಿಯಾಗಿರುವುದು ಇದಕ್ಕೆ
(1) ದನ ಕಾಯುವುದಕ್ಕೆ
(2) ನಾಯಿಯನ್ನು ಸಾಕಿರುವುದಕ್ಕೆ
(3) ಮಕ್ಕಳು ಹೇಳಿದ ಕೆಲಸ ಮಾಡುವುದಕ್ಕೆ
(4)ಅವನ ಕೊಳಲ ಗಾನಕ್ಕೆ✔
5. ಮಕ್ಕಳು ಹಿರಗನನ್ನು ಕಂಡ ಕೂಡಲೆ ಹೀಗೆ ಮಾಡುತ್ತಾರೆ
(1) ಹೆದರಿ ಓಡುತ್ತಾರೆ
(2) ಮುತ್ತಿಕೊಳ್ಳುತ್ತಾರೆ✔
(3) ಕೋಪಿಸಿಕೊಳ್ಳುತ್ತಾರೆ
(4) ಬಯ್ಯುತ್ತಾರೆ
6. ‘ದಿನದಿನವೂ’ ಎಂಬುದು ಈ ವ್ಯಾಕರಣಾಂಶಕ್ಕೆ ಸೇರಿದೆ
(1) ಜೋಡಿ ಪದ
(2) ಅನುಕರಣಾವ್ಯಯ
(3) ನುಡಿಗಟ್ಟು
(4) ದ್ವಿರುಕ್ತಿ✔
7. ‘ಅತ್ಯಾಶೆ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ
(1) ಯಣ್ ಸಂಧಿ✔
(2) ವೃದ್ಧಿಸಂಧಿ
(3) ಗುಣಸಂಧಿ
(4) ಸವರ್ಣದೀರ್ಘಸಂಧಿ
8, ಬಾಲಕಡಿದ ನಾಯಿಯ ಬಗ್ಗೆ ಹಿರಗನ ಸಿದ್ಧಾಂತವಿದು
(1)ಅವು ಚೀನೀ ನಾಯಿಗಳಾಗುತ್ತವೆ ಎಂಬುದು✔
(2) ಅವು ಕಂತ್ರಿ ನಾಯಿಗಳಾಗುತ್ತವೆ ಎಂಬುದು
(3) ಅವು ಜಾತಿ ನಾಯಿಗಳಾಗುತ್ತವೆ ಎಂಬುದು
(4) ಅವು ಹುಚ್ಚುನಾಯಿಗಳಾಗುತ್ತವೆ ಎಂಬುದು
ಸೂಚನೆ: ಈ ಕೆಳಗಿನ ಪದ್ಯಭಾಗವನ್ನು ಓದಿಕೊಂಡು9 ರಿಂದ 15 ರವರೆಗಿನ ಪ್ರಶ್ನೆಗಳಿಗೆ ಉತ್ತರಿಸಿರಿ:
ನಾನು ಬರೆಯುತ್ತೇನೆ
ಕಾಳ ರಾತ್ರಿಗಳಲ್ಲಿ ಬಂದು ಕದ ತಟ್ಟುವ
ಧ್ವನಿಗಳನ್ನು ಕುರಿತು
ನಾನು ಬರೆಯುತ್ತೇನೆ
ಬಿರುಗಾಳಿಯಲ್ಲಿ ಕಡಲಿನ ಮೇಲೆ
ಹೊಯ್ದಾಡುವ ದೋಣಿಗಳನ್ನು ಕುರಿತು
ನಾನು ಬರೆಯುತ್ತೇನೆ
ನೆಲದಾಳಗಳಲ್ಲಿ ಮಲಗಿರುವ ಮೂಳೆಗಳ
ನಿಟ್ಟುಸಿರನ್ನು ಕುರಿತು
ನಾನು ಬರೆಯುತ್ತೇನೆ
ಸಂಜೆಗತ್ತಲಿನಲ್ಲಿ ಕರಗುತ್ತಿರುವ
ಉಜ್ವಲವಾದ ಹಗಲುಗಳನ್ನು ಕುರಿತು
ನಾನು ಬರೆಯುತ್ತೇನೆ
ಶತಮಾನಗಳ ಕತ್ತಲನ್ನೊಡೆದು
ಮೆತ್ತಗೆ ತಲೆಯತ್ತುವ ಮೊಳಕೆಗಳನ್ನು ಕುರಿತು
ನಾನು ಬರೆಯುತ್ತೇನೆ
ಕೊನಯಿರದ ಬೀದಿಗಳ ಮೇಲೆ
ಕೀರ್ತಿಗೆ ಕಚ್ಚಾಡುವವರನ್ನು ಕುರಿತು
ಅರಳುವ ಕನಸುಗಳನ್ನು ಕುರಿತು
ಉರುಳುವ ಚಕ್ರಗಳನ್ನುಕುರಿತು
ನಾನು ಬರೆಯುತ್ತೇನೆ, ನನ್ನ
ಒಂದೊಂದೇ ಎಲೆಯುದುರಿ
ನಾನು ಬೋಳಾಗುವುದನ್ನುಕುರಿತು
9. ಬಿರುಗಾಳಿಯಲ್ಲಿ ದೋಣಿಗಳು ಇಲ್ಲಿ ಹೊಯ್ದಾಡುತ್ತವೆ
(1) ಮರಳಿನ ಮೇಲೆ
(2) ಮಣ್ಣಿನ ಮೇಲೆ
(3)ಕಡಲಿನ ಮೇಲೆ✔
(4) ರಸ್ತೆಯ ಮೇಲೆ
10, ಮಲಗಿರುವ ಮೂಳೆಗಳ ನಿಟ್ಟುಸಿರು ಇರುವುದು
(1) ಕಾಳ ರಾತ್ರಿಯಲ್ಲಿ
(2)ನಲದಾಳದಲ್ಲಿ✔
(3) ಕಡಲಿನಲ್ಲಿ
(4) ಬಿರುಗಾಳಿಯಲ್ಲಿ
11. ಸಂಜೆಯ ಕತ್ತಲಿನ ಉಜ್ವಲ ಹಗಲುಗಳು ಹೀಗೆ ಆಗುತ್ತಿವೆ
(1) ಕರಗುತ್ತಿವ✔
(2) ಸೊರಗುತ್ತಿವೆ
(3) ಬೆಳಗುತ್ತಿವೆ
(4) ಕುಣಿಯುತ್ತಿವೆ
12. ಕವಿ ಬರೆಯುತ್ತಿರುವುದು ಇದಕ್ಕೆ ಕಚ್ಚಾಡುವವರನ್ನು ಕುರಿತು
(1) ಬೀದಿ
(2) ಕೀರ್ತಿ✔
(3) ಮನೆ
(4) ಆಸೆ
13. ಕವಿ ಬರೆಯುವ ‘ಮೊಳಕೆಗಳು’ ಇಷ್ಟುಕಾಲದ ಕತ್ತಲನ್ನು ಒಡೆದು ತಲೆಯೆತ್ತುತ್ತವೆ
(1) ಶತಮಾನ✔
(2) ದಿನ
(3) ವರ್ಷ
(4) ತಿಂಗಳು
14, ‘ಮೊಳಕೆಗಳನ್ನು’ ಈ ಪದದಲ್ಲಿರುವ ವಿಭಕ್ತಿ
(1) ಪ್ರಥಮಾ
(2) ತೃತೀಯಾ
(3) ಪಂಚಮಿ
(4) ದ್ವಿತೀಯಾ✔
15. ‘ಕದ’ ಪದದ ಅರ್ಥ
(1) ಕಿಟಕಿ
(2) ಬಾಗಿಲು✔
(3) ಮನೆ
(4) ನೆಲ
16, ‘ಮಕ್ಕಳ ಮಾತು ಕಲಿಕೆಗೆ ಅವರ ಸಾಮಾಜಿಕ ಅಂತರ ಕ್ರಿಯೆಗಳು ಹಾಗೂ ಅನುಭವಗಳು ಅತ್ಯಂತ ಸಮೃದ್ಧವಾದಸಂಪನ್ಮೂಲಗಳು’ ಈ ಚಿಂತನೆ ನೀಡಿರುವ ಭಾಷಾ ಶಾಸ್ತ್ರಜ್ಞ
(1) ಲಿವ್ ವೈಘೋಷಿ✔
(2) ಜೀನ್ ಫಿಯಾಜೆ
(3) ಬಿ.ಎಫ್, ಸ್ಕಿನ್ನರ್
(4) ನೋಮ್ ಚೋಮ್‌ಸ್ಕಿ
17. ಉತ್ತಮ ಆಲಿಸುವಿಕೆ ಕಣ್ಣಿನಿಂದಲೂ ಆಗುತ್ತದೆ ಎಂಬ ಮಾತಿನ ಹಿನ್ನಲೆ
(1) ಕಣ್ಣು ಮುಚ್ಚಿ ಕುಳಿತು ಸಾವಧಾನದಿಂದ ಕೇಳುವುದು
(2) ಕಿವಿಯಿಂದ ಆಲಿಸುತ್ತಾ, ಹೇಳುವವರ ಆಂಗಿಕ ಭಾವಗಳನ್ನು ನೋಡುತ್ತಾ ಆಲಿಸುವುದು✔
(3) ಕಣ್ಣು ಮುಚ್ಚಆಲಿಸುತ್ತಾ ವಿಷಯ ವಿಮರ್ಶೆ ಮಾಡುವುದು
(4) ಕಣ್ಣು ಮುಚ್ಚಿ ಆಲಿಸುತ್ತಾ ಹೇಳುವವರು ಮಾಡುವ ತಪ್ಪುಗಳನ್ನು ಗುರ್ತಿಸುವುದು
18. ಪ್ರಾಥಮಿಕ ಹಂತದ ಮಕ್ಕಳಲ್ಲಿ ಭಾಷೆಯ ಸೃಷ್ಟಿ ಮತ್ತು ಮೌಖಿಕ ಸಾಮರ್ಥ್ಯ ಬೆಳೆಸುವ ಒಂದು ಕ್ರಮ
(1) ವಾಕ್ಯವೃಂದವನ್ನು ಕಂಠಪಾಠ ಮಾಡಿ ಒಪ್ಪಿಸುವ ಚಟುವಟಿಕೆ
(2) ದೂರದರ್ಶನ ವಾರ್ತೆಗಳವಾಚನವನ್ನು ವೀಕ್ಷಿಸುವುದು
(3) ಪ್ರಬಂಧವನ್ನು ಬಾಯ್ದೆರೆಯಾಗಿ ಓದಿಸುವುದು
(4) ಚಿತ್ರಸರಣಿಯನ್ನು ನೋಡುತ್ತಾ ಕತೆ ಕಟ್ಟುವ ಚಟುವಟಿಕೆ✔
19. ಇವು ಪ್ರಧಾನವಾಗಿ ಭಾಷೆಯ ಸ್ವೀಕೃತ ಕೌಶಲಗಳು
(1) ಬರವಣಿಗೆ ಮತ್ತು ಮಾತು
(2) ಆಲಿಸುವಿಕೆ ಮತ್ತು ಮೌನವಾಚನ✔
(3) ಮಾತು ಮತ್ತು ಗಟ್ಟಿವಾಚನ
(4) ಓದು ಮತ್ತು ಬರಹ
20) ಪದ್ಯ ಬೋಧನೆಯನ್ನು ಹೆಚ್ಚು ಆಕರ್ಷಕವಾಗಿ ರೂಪಿಸಲು ಬಳಸಬಹುದಾದ ಪ್ರಮುಖ ಸಾಧನ
(1) ಕಪ್ಪುಹಲಗೆ
(2) ‘ಚಿತ್ರ ಪಟಗಳು
(3) ಬಹು ಮಾಧ್ಯಮ (ಮಲ್ಟಿಮೀಡಿಯಾ)✔
(4) ಪಠ್ಯಪುಸ್ತಕ
21. ಮಾಧ್ಯಮಿಕ ಹಾಗೂ ಸೆಕೆಂಡರಿ ಹಂತದಲ್ಲಿ ವ್ಯಾಕರಣ ಬೋಧಿಸುವ ಉತ್ತಮ ಕ್ರಮ
(1) ಪ್ರತ್ಯೇಕ ಅವಧಿಯಲ್ಲಿ ವ್ಯಾಕರಣ ಬೋಧನೆ
(2) ಶಾಸ್ತ್ರೀಯ ಕ್ರಮದಲ್ಲಿ ವ್ಯಾಕರಣ ಬೋಧನ
(3) ಸ್ವಯಂ ಬೋಧಿನಿ ಉಪಕ್ರಮಗಳ ಮೂಲಕ
(4) ಬೋಧನಾ-ಕಲಿಕಾ ಸಂದರ್ಭಗಳಲ್ಲಿ ಕ್ರಿಯಾತ್ಮಕ ವ್ಯಾಕರಣ ಬೋಧನೆ✔
22. ಪ್ರತಿ ಮಗುವಿನ ಕಲಿಕೆಯ ದೋಷಗಳನ್ನು ಚಿಕಿತ್ಸಕ ಕ್ರಮದಿಂದ ಪರಿಹರಿಸಿ ಕಲಿಕೆಯ ಮುಖ್ಯವಾಹಿನಿಗೆ ತರುವಉಪಕ್ರಮ.
(1)ಪರಿಹಾರ ಬೋಧನೆ✔
(2) ಗೃಹಕಾರ್ಯ
(3) ಸ್ವಯಂ ಬೋಧಿನಿ ಕ್ರಮ
(4) ವೇಗ ವರ್ಧನ ಬೋಧನೆ
23, 4ನೇ ತರಗತಿಯ 12 ಜನ ವಿದ್ಯಾರ್ಥಿಗಳಿಗೆ ಬಾಯ್ದೆರೆ ವಾಚನದಲ್ಲಿ ದೋಷಗಳಿದೆ. ಈ ಸಮಸ್ಯೆಗೆ ಶಿಕ್ಷಕ ತಕ್ಷಣ.ಕೈಗೊಳ್ಳಬೇಕಾದ ಪರಿಹಾರ ಕ್ರಮ
(1) ನಿಯಂತ್ರಿತ ಅಭ್ಯಾಸ
(2)ಭಾಷಾ ಪ್ರಯೋಗಾಲಯ
(3) ಗುಂಪು ಅಧ್ಯಯನ
4) ಕ್ರಿಯಾ ಸಂಶೋಧನೆ✔
24, ವಿದ್ಯಾರ್ಥಿಗಳ ಲಿಖಿತ ಅಭಿವ್ಯಕ್ತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಪ್ರಮುಖ ಮಾರ್ಗ
(1) ಮೌಖಿಕ ಸಂದರ್ಶನ
(2) ಪ್ರಬಂಧ ಮಾದರಿ ಪ್ರಶ್ನೆಗಳು✔
(3) ಪ್ರಾಯೋಗಿಕ ಚಟುವಟಿಕೆ
(4) ಬಾಯ್ದೆರೆ ವಾಚನ
25 ಮಕ್ಕಳ ಜ್ಞಾನೇಂದ್ರಿಯಗಳ ತರಬೇತಿಗೆ ಮಾಂಟೆಸೊರಿವರು ಸಲಹೆ ಮಾಡಿರುವ ಸಾಧನಗಳು
(1) ಭಾಷಾ ಪ್ರಯೋಗಾಲಯ
(2) ಕಲಿಕಾ ಏಣಿಗಳು
(3) ವ್ಯಾಯಾಮ ಮತ್ತು ಹಾಡುಗಳು
(4) ಪ್ರಬೋಧಕ ಉಪಕರಣಗಳು✔
26. ಮಕ್ಕಳಲ್ಲಿ ಸ,ಷಶಲ,, ಇಂತಹ ಅಕ್ಷರಗಳ ಉಚ್ಚಾರ ದೋಷ ಪರಿಹರಿಸಲು ಕೈಗೊಳ್ಳಬಹುದಾದ ಚಟುವಟಿಕೆ
(1) ವಾಕ್ ಶ್ರವಣ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುವುದು
(2) ದೋಷವುಳ್ಳ ಅಕ್ಷರಗಳ ಸ್ಪಷ್ಟ ಉಚ್ಚಾರದ ಬಗ್ಗೆ ನಾಲಿಗೆ ಸುರಳಿ ಮೂಲಕ ಅಭ್ಯಾಸ ಮಾಡಿಸುವುದು✔
(3) ಉಚ್ಚಾರ ದೋಷವಿರುವ ಮಕ್ಕಳು ಹೆಚ್ಚು ಮಾತನಾಡದಂತೆ ಹೇಳುವುದು
(4) ಇಂತಹ ಮಕ್ಕಳು ಮಾತನಾಡದೆ ಬರೆದು ತೋರಿಸುವ ಅವಕಾಶ ಕಲ್ಪಿಸುವುದು
27) ಈ ಕೆಳಗಿನ ಭಾಷಾಂಶಗಳಲ್ಲಿ ತಪ್ಪಾಗಿರುವುದು ಇದು
(1) ಮಾತು ನಮನೀಯ ಸ್ವರೂಪ: ಬರಹ ಶಿಷ್ಯ, ಶಾಶ್ವತ ರೂಪ
(2) ಪದ್ಯ ಕಲಿಕೆಯಿಂದ ಆನಂದ: ಗದ್ಯಕಲಿಕೆಯಿಂದ ವಿಷಯ ಗ್ರಹಿಕೆ
(3) ಬಾಯ್ದರೆ ವಾಚನದಿಂದ ಸೃಜನ ಶೀಲತೆ: ಮೌನ ವಾಚನದಿಂದ ಧ್ವನಿ ಸಂಸ್ಕಾರ✔
(4) ಮಾತು ಓದಿಗೆ ಆಧಾರ: ಕಾಗುಣಿತ ಶುದ್ಧ ಬರಹಕ್ಕೆ ಆಧಾರ
28. ಶುದ್ಧ ಭಾಷಾ ಪ್ರಯೋಗದಿಂದ ಕೂಡಿದ ಪದವಿದು
(1) `ರುದ್ಧಾಶ್ರಮ
(2) ವೃದ್ಧಾಶ್ರಮ✔
(3) ವೃದಾಪ್ರಮ
(4) ವೃದ್ಧಾಪ್ರಮ
29, ‘ನಂಬಿಕೆ’ ಈ ಪದದ ವಿರುದ್ದಾರ್ಥಕ ಪದವಿದು
(1)ಅಪನಂಬಿಕೆ✔
(2) ವಿಶ್ವಾಸ
(3) ಅಗೌರವ
(4) ಅವಮಾನ
30. ‘ನೀರಿಗೆ ಹಾಕು’ ಈ ನುಡಿಗಟ್ಟಿನ ಅರ್ಥ ಹೀಗಿದೆ
(1) ಮೋಸಮಾಡು
(2) ಸಮಾಧಾನ ಮಾಡು
(3) ತೊಂದರೆಗೆ ಸಿಕ್ಕಿಸು
(4) ವ್ಯರ್ಥಮಾಡು✔
# ಇವುಗಳನ್ನೂ ಓದಿ :
# ಎಫ್‌ಡಿಎ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಕನ್ನಡ | FDA QUESTION PAPER – 2019
# ಎಫ್‌ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಜ್ಞಾನ | FDA QUESTION PAPER – 2019
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್-2, ವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-3, ಮಕ್ಕಳ ವಿಕಾಸ ಮತ್ತು ಶೈಕ್ಷಣಿಕ ಮನೋವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ