Current Affairs

ಇಂದಿನ ಪ್ರಚಲಿತ ವಿದ್ಯಮಾನಗಳು (28-08-2023)

Share With Friends

ಮೊದಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಇನ್ನಿಲ್ಲ
ಅಂತಾರಾಷ್ಟ್ರೀಯ ಖ್ಯಾತಿಯ ಕವಿ ಮತ್ತು ಸಾಹಿತಿ ಜಯಂತ ಮಹಾಪಾತ್ರ( 94) ಅವರು ಒಡಿಶಾದ ಕಟಕ್ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಜಯಂತ ಮಹಾಪಾತ್ರ ಅವರು ಇಂಗ್ಲಿಷ್ ಕಾವ್ಯಕ್ಕಾಗಿ ಸಾಹಿತ್ಯ ಅಕಾಡೆಮಿ (ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ) ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕವಿ.ಅವರು ಆಧುನಿಕ ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾದ ಇಂಡಿಯನ್ ಸಮ್ಮರ್ ಮತ್ತು ಹಸಿವು ನಂತಹ ಕವನಗಳನ್ನು ರಚಿಸಿದ್ದಾರೆ. ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕವಿಗೆ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಆದಾಗ್ಯೂ, ಅವರು 2015 ರಲ್ಲಿ ಪ್ರಶಸ್ತಿಯನ್ನು ಹಿಂದಿರುಗಿಸಿದರು.22 ಅಕ್ಟೋಬರ್ 1928 ರಂದು ಒಡಿಯಾ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಮಹಾಪಾತ್ರ ಅವರು ಒಡಿಶಾದ ಕಟಕ್ನಲ್ಲಿ ಶಾಲೆಗೆ ಹೋದರು. ಅವರು ಭೌತಶಾಸದ ಉಪನ್ಯಾಸಕರಾಗಿ ತಮ್ಮ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು ಒಡಿಶಾದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದರು.

ಉತ್ಕೃಷ್ಟ ಸಾಹಿತ್ಯಕ ವ್ಯಕ್ತಿತ್ವ ಮಹಾಪಾತ್ರ ಆಧುನಿಕ ಕಾಲದ ಅತ್ಯಂತ ವ್ಯಾಪಕವಾಗಿ ತಿಳಿದಿರುವ ಕವಿಗಳಲ್ಲಿ ಅವರು ಒಬ್ಬರು. ಮಹಾಪಾತ್ರ ಅವರ ಜನಪ್ರಿಯ ಕವಿತೆಗಳಾದ ‘ಇಂಡಿಯನ್ ಸಮ್ಮರ್’ ಮತ್ತು ‘ಹಸಿವು ಆಧುನಿಕ ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಭಾರತೀಯ ಇಂಗ್ಲಿಷ್ ಕಾವ್ಯದ ಮೂರು ಸಂಸ್ಥಾಪಕರಲ್ಲಿ ಇವರು ಒಬ್ಬರಾಗಿದ್ದಾರೆ. ಇತರ ಇಬ್ಬರು ಎ.ಕೆ. ರಾಮಾನುಜನ್ ಮತ್ತು ಸಿಸಿಫ್ ಎಜೆಕಿಲ್. ಮಹಾಪಾತ್ರ ಅವರ ಮೊದಲ ಕವನಗಳ ಸಂಗ್ರಹ ಸ್ವಯಂವರ ಮತ್ತು ಇತರ ಕವಿತೆಗಳು(1971), ಅದರ ನಂತರ ಕ್ಲೋಸ್ ದಿ ಸೈಟೆನ್ ಬೈ ಟೆನ್ (1971), ಎ ಫಾದರ್ಸ್ ಅವರ್ಸ್ (1976), ಎ ಲೈನ್ ಆಫ್ ರೈಟ್ಸ್ (1975), ವೇಟಿಂಗ್ (1979), ಲೈಫ್ ಸೈನ್ಸ್ (1983), ಎ ವೈಟ್ನೆಸ್ ಆಫ್ ಬೋನ್ (1992) ಶ್ಯಾಡೋ ಸ್ಪೇಸ್ (1997), ಬೇರ್ ಫೇಸ್ (2000) ರಾಂಡಮ್ ಡಿಸೆಂಟ್ ಮತ್ತಿತರ ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಅವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (Mahila Samman Savings Certificate-MSSC)


ನೀರಜ್ ಚೋಪ್ರಾಗೆ ಮತ್ತೊಂದು ಚಿನ್ನ, ಮತ್ತೊಂದು ದಾಖಲೆ
ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದಾಖಲೆ ನಿರ್ಮಿಸಿದ್ದಾರೆ. ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಅವರು 88.17 ಮೀಟರ್ ಎಸೆಯುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು ಮತ್ತು ಚಿನ್ನದ ಪದಕವನ್ನು ಗೆದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ. ಅರ್ಹತಾ ಸುತ್ತಿನಲ್ಲಿ ನೀರಜ್ ಮೊದಲ ಪ್ರಯತ್ನದಲ್ಲಿ 88.77 ಮೀಟರ್ ದೂರ ಎಸೆದು ಫೈನಲ್ ಪ್ರವೇಶಿಸಿದರು. ಫೈನಲ್ ನಲ್ಲಿ ಮೊದಲ ಪ್ರಯತ್ನ ವಿಫಲವಾಯಿತು. ಎರಡನೇ ಪ್ರಯತ್ನದಲ್ಲಿ ಅವರು 88.17 ಮೀಟರ್ ಎತ್ತರಕ್ಕೆ ಈಟಿಯನ್ನು ಎಸೆದರು. ನೀರಜ್ 86.32, 84.64, 87.73 ಮತ್ತು 83.98 ಮೀಟರ್ ಜಾವೆಲಿನ್ ಎಸೆದರು. ಭಾರತದ ಅಥ್ಲೀಟ್ ಕಿಶೋರ್ ಜೆನಾ 84.77 ಮೀಟರ್ ಎಸೆದು ಐದನೇ ಸ್ಥಾನ ಪಡೆದರೆ, ಡಿಪಿ ಮನು 84.14 ಮೀಟರ್ ಎಸೆದು ಆರನೇ ಸ್ಥಾನ ಪಡೆದರು. ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರು. ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಚ್ 86.67 ಮೀಟರ್ ಎಸೆದು ಕಂಚಿನ ಪದಕ ಗೆದ್ದರು.


▶ ರಿಲೇಯಲ್ಲಿ ಭಾರತ ಹೊಸ ದಾಖಲೆ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ (World Athletics Championships 2023) ಪುರುಷರ 4x 400 ಮೀಟರ್ ರಿಲೇಯಲ್ಲಿ ಭಾರತ ಏಷ್ಯಾದಲ್ಲಿಯೇ ದಾಖಲೆ ನಿರ್ಮಿಸಿದೆ. ಕೇರಳದ ಆಟಗಾರರಾದ ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಮುಹಮ್ಮದ್ ಅನಸ್ ಯಾಹಿಯಾ ಮತ್ತು ರಾಜೇಶ್ ರಮೇಶ್ ಅವರನ್ನೊಳಗೊಂಡ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಅಲ್ಲದೇ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಭಾರತದ ರಿಲೇ ತಂಡವು ಫೈನಲ್‌ಗೆ ಪ್ರವೇಶಿಸಿ ದಾಖಲೆ ಬರೆದಿದೆ. ಭಾರತ ತಂಡವು 2 ನಿಮಿಷ 59.05 ಸೆಕೆಂಡುಗಳಲ್ಲಿ ಓಡಿ ಹಳೆಯ ದಾಖಲೆಯನ್ನು ಮುರಿದಿದೆ. ಯುನೈಟೆಡ್ ಸ್ಟೇಟ್ಸ್ 2: 58.47 ಸಮಯದೊಂದಿಗೆ ಅಗ್ರಸ್ಥಾನದಲ್ಲಿದೆ. ಗ್ರೇಟ್ ಬ್ರಿಟನ್, ಬೋಟ್ಸ್ವಾನಾ, ಜಮೈಕಾ, ಫ್ರಾನ್ಸ್, ಇಟಲಿ ಮತ್ತು ನೆದರ್ಲ್ಯಾಂಡ್ಸ್ ಫೈನಲ್ ತಲುಪಿದ ಇತರ ತಂಡಗಳು ಆಗಿವೆ.

ಹಿಂದಿನ ರಾಷ್ಟ್ರೀಯ ದಾಖಲೆಯು 2021 ರಲ್ಲಿ ನೋಡುವುದಾದರೆ 3 ನಿಮಿಷ 25 ಸೆಕೆಂಡ್‌ ಆಗಿತ್ತು. ಭಾರತವು ಅಂತಿಮವಾಗಿ ಎರಡು ರೌಂಡ್‌ಗಳ ನಂತರ ಅಮೇರಿಕಾವನ್ನು ಹಿಂದಿಕ್ಕಿದೆ. ಆದರೆ ಗ್ರೇಟ್ ಬ್ರಿಟನ್ 3ನೇ ಸ್ಥಾನದಲ್ಲಿದ್ದು, 2 ನಿಮಿಷದ 59.42 ಸೆಕೆಂಡ್‌ ಮತ್ತು ಜಮೈಕಾ 2 ನಿಮಿಷದ 59.82 ಸೆಕೆಂಡ್‌ ದಾಖಲೆ ಹೊಂದುವ ಮೂಲಕ 4ನೇ ಸ್ಥಾನದಲ್ಲಿದೆ.


▶ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೊಝಿನ್ ಸಾವು ದೃಢಪಡಿಸಿದ ರಷ್ಯಾ
ವ್ಯಾಗ್ನರ್ ಗುಂಪಿನ ಮುಖಂಡ ಯೆವ್‍ಗಿನಿ ಪ್ರಿಗೊಝಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದನ್ನು ಕಡೆಗೂ ರಷ್ಯಾ ದೃಢಪಡಿಸಿದೆ. ವಿಮಾನ ದುರಂತ ನಡೆದ ಸ್ಥಳದಲ್ಲಿ ಛಿದ್ರಗೊಂಡು ಪತ್ತೆಯಾಗಿದ್ದ ಮೃತದೇಹಗಳ ಡಿಎನ್‍ಎ ಪರೀಕ್ಷೆ ನಡೆಸಲಾಗಿದ್ದು ಮೃತದೇಹಗಳಲ್ಲಿ ಒಂದು ಪ್ರಿಗೊಝಿನ್‍ರದ್ದು ಎಂದು ಹೇಳಿದೆ. ಉಳಿದ 9 ಮೃತದೇಹಗಳ ಗುರುತನ್ನೂ ಪತ್ತೆಹಚ್ಚಲಾಗಿದೆ. ಪ್ರಿಗೊಝಿನ್ ಬಲಗೈ ಬಂಟ ಎಂದೇ ಹೆಸರಾಗಿದ್ದ ಡಿಮಿಟ್ರಿ ಉಟ್ಕಿನ್ ಅವರೂ ಮೃತರಲ್ಲಿ ಸೇರಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಆಗಸ್ಟ್​ 23 ರಂದು ಖಾಸಗಿ ಜೆಟ್​ ರಷ್ಯಾದ ರಾಜಧಾನಿ ಮಾಸ್ಕೋದಿಂದ ಸೇಂಟ್​ ಪೀಟರ್ಸ್​ಬರ್ಗ್​ಗೆ ತೆರಳುವಾಗ ರಾಜಧಾನಿಯಿಂದ 100 ಕಿಮೀ ದೂರದಲ್ಲಿ ಪತನವಾಗಿತ್ತು.

#CurrentAffairs, #DailyCurrentAffairs, #TodayCurrentAffairs, #CurrentAffairs, #SpardhaTimes, #CurrentAffairsToday, #CAToday, #ಪ್ರಚಲಿತವಿದ್ಯಮಾನಗಳು, #ಪ್ರಚಲಿತಘಟನೆಗಳು

error: Content Copyright protected !!