ಮಾನವನ ಅಸ್ಥಿಪಂಜರ
• ಮೂಳೆ : ಮಾನವ ದೇಹದ ಗಟ್ಟಿಯಾದ ರಚನೆಯೇ ಮೂಳೆ. ಹಲ್ಲಿನ “ಎನಾಮೆಲ್” ಪದರವನ್ನು ಹೊರತುಪಡಿಸಿದರೆ ನಂತರದ ಗಟ್ಟಿಯಾದ ರಚನೆಯಾಗಿದೆ. ನಮ್ಮ ದೇಹದ ಒಟ್ಟಾರೆ ತೂಕದ ಹೆಚ್ಚಿನ ಭಾಗ ಮೂಲೆಗಳಿಂದಾಗಿದೆ. ಮೂಳೆ ದೇಹಕ್ಕೆ ಆಧಾರ, ಅಕಾರ, ರಕ್ಷಣೆ ನೀಡುವುದಲ್ಲದೆ ಚಲನೆಯಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳುತ್ತದೆ. ಮತ್ತು ಕೆಲವು ಜೈವಿಕ ಕ್ರಿಯೆಗಳಲ್ಲಿ ಸಹ ಮುಖ್ಯ ಪಾತ್ರವಹಿಸುತ್ತವೆ. ಮೂಳೆ
ಅಂಗಾಂಶದ ಮಾತೃಕೆಯು ಕೊಲಾಜನ್ ತಂತುಗಳು, ಪ್ರೋಟಿನ್‍ಗಳು, ಕ್ಯಾಲ್ಸಿಯಂ ಫಾಸ್ಫೇಟ್, ಸೋಡಿಯಂ ಮತ್ತು ಮೆಗ್ನೀಷಿಯಂಗಳ ಕ್ಲೋರ್ಯಡ್‍ಗಳು ಮುಂತಾದ ಲವಣಗಳಿಂದ ಕೂಡಿದೆ.
• ಮಾನವನ ಅಸ್ಥಿಪಂಜರ :
ಮಾನವನ ದೇಹದಲ್ಲಿರುವ ಎಲ್ಲಾ ಮೂಳೆಗಳ ಒಟ್ಟು ಜೋಡಣೆಯೇ ಅಸ್ಥಿಪಂಜರ. ಇದು ಅನೇಕ ಮೂಳೆಗಳಿಂದಾಗಿದೆ. ಪ್ರೌಡಮಾನವನ ದೇಹದಲ್ಲಿ ಒಟ್ಟು 206 ಕ್ಕಿಂತಲೂ ಹೆಚ್ಚಿನ ಮೂಳೆಗಳಿವೆ. ಇವುಗಳ ಪೈಕಿ ಕೆಲವೊಂದು ಮೂಳೆಗಳು ಒಂದರಲ್ಲಿ ಒಂದು ಸೇರ್ಪಡೆಯಾಗಿ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಕೆಲವೊಂದು ಮೂಳೆಗಳು ಬಿಬಿಡಿಯಾಗಿ ಸ್ಪಷ್ಟವಾಗಿ ಗೋಚರವಾಗುತ್ತದೆ.
• ಮೂಳೆಗಳ ಬೆಳವಣಿಗೆ: ಮೂಳೆಗಳ ಬೆಳವಣಿಗೆಯು ಭ್ರೂಣವು ಗರ್ಭದಲ್ಲಿದ್ದಾಗಲೇ ಪ್ರಾರಂಭವಾಗುತ್ತದೆ. ಭ್ರೂಣದಲ್ಲಿ ಮೊದಲು ಮೂಳೆಗಳ ಬದಲು ಮೃದ್ವಸ್ಥಿ ಇರುತ್ತದೆ. ಕಾಲ ಕಳೆದಂತೆ ಮೃದ್ವಸ್ಥಿಗಳ ಸ್ಥಾನವನ್ನು ಮೂಳೆಗಳು ಆಕ್ರಮಿಸಿಕೊಳ್ಳುತ್ತವೆ. ಅಂದರೆ ಮೃದ್ವಸ್ಥಿಗಳಲ್ಲಿ ಲವಣಗಳು ಸೇರ್ಪಡೆಯಾಗುತ್ತಾ ಮೂಳೆಗಳಾಗಿ ಬದಲಾಗುತ್ತವೆ. ಜನನದ ನಂತರವು ಸಹ ಕೆಲವು ವರ್ಷಗಳ ಕಾಲ ಇದು ಮುಂದುವರೆಯುತ್ತವೆ.
• ಅಸ್ಥಿಪಂಜರದ ಕಾರ್ಯ: ಮಾನವನ ಅಸ್ಥಿಪಂಜರವು ಬಹುಮುಖ್ಯವಾದ ಆರು ಕಾರ್ಯಗಳನ್ನು ನಿರ್ವಹಿಸುತ್ತವೆ.
ಎ. ಆಧಾರ : ಮಾನವನ ಅಸ್ಥಿಪಂಜರವು ಎಲ್ಲಾ ಅಂಗಗಳಿಗೆ ಆಧಾರ ಚೌಕಟ್ಟನ್ನು ಒದಗಿಸುತ್ತವೆ. ಸ್ನಾಯುಗಳು ಮೂಳೆಗಳಿಗೆ ಅಂಟಿಕೊಳ್ಳಲು ಒಳಾಂಗಗಳಿಗೆ ಆಧಾರವನ್ನು ಇದೇ ಕೊಡುತ್ತದೆ. ಅಷ್ಟೇ ಅಲ್ಲದೇ ದೇಹಕ್ಕೆ ಆಕಾರವನ್ನು ಸಹ ನೀಡುತ್ತದೆ.
ಬಿ. ಚಲನೆ : ಇದು ಚಲನೆಯನ್ನು ಉಂಟುಮಾಡುವ ಅಂಗಾಂಶ ಕೈ- ಕಾಲಿನ ಮೂಳೆಗಳ ಚಲನೆಯ ಸಹಾಯದಿಂದ ಚಲಿಸಲು ಸಾಧ್ಯವಾಗುತ್ತದೆ.
ಸಿ. ರಕ್ಷಣೆ : ಅಸ್ಥಿಪಂಜರದ ಕಾರ್ಯಗಳ ಪೈಕಿ ಅತಿ ಪ್ರಮುಖವಾದ ಕಾರ್ಯ ರಕ್ಷಣೆ. ಅಸ್ಥಿಪಂಜರವು ದೇಹದ ವಿವಿಧ ಅಂಗಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.
1. ತಲೆಬುರುಡೆಯು ಮೆದುಳು, ಕಣ್ಣು, ಮಧ್ಯಕಿವಿ ಮತ್ತು ಒಳಕಿವಿಗೆ ರಕ್ಷಣೆ ನೀಡುತ್ತದೆ.
2. ಬೆನ್ನುಮೂಳೆಯು ಮೆದುಳು ಬಳ್ಳಿಯನ್ನು ರಕ್ಷಸುತ್ತದೆ.
3. ಎದೆಗೂಡು, ಹೃದಯ ಮತ್ತು ಪುಪ್ಪಸಗಳನ್ನು ರಕ್ಷಿಸುತ್ತದೆ.
4. ಎದೆಮೂಳೆಯೂ ಜೀರ್ಣಾಂಗಗಳು, ವಿಸರ್ಜನಾಂಗಗಳು, ಪ್ರಜನನಾಂಗಗಳನ್ನು ಕಾಪಾಡುತ್ತವೆ.
5. ಭುಜದ ಭಾಗದಲ್ಲಿ ಮೂಳೆಗಳು ಭುಜವನ್ನು ರಕ್ಷಿಸುತ್ತದೆ.
6. ಮೊಣಕಾಲಿನ ಚಿಪ್ಪು ಮೂಳೆಯು ಮೊಣಕಾಲನ್ನು ರಕ್ಷಿಸುತ್ತದೆ
ಡಿ. ರಕ್ತಕಣಗಳ ಉತ್ಪತ್ತಿ : ರಕ್ತಕಣಗಳಾದ ಕೆಂಪುರಕ್ತಕಣಗಳು, ಬಿಳಿರಕ್ತಕಣಗಳು, ಕಿರುತಟ್ಟೆಗಳು ಉದ್ದವಾದ ಮೂಳೆಗಳ ಮಧ್ಯದಲ್ಲಿ ಕಂಡು ಬರುವ ಅಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ.
ಇ. ಹಾರ್ಮೋನ್ ಉತ್ಪತ್ತಿ : ಮೂಳೆಯ ಜೀವಕೋಶಗಳು ಆಸ್ಟಿಯೋಕ್ಯಾಲ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತವೆ. ಇದು ರಕ್ತದಲ್ಲಿರುವ ಗ್ಲೂಕೋಸ್‍ನ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಆಸ್ಟಿಯೋಕ್ಯಾಲಿಸಿನ್ ಇನ್ಸುಲಿನ್‍ನ ಸ್ರವಿಕೆಯನ್ನು ಹೆಚ್ಚಿಸುತ್ತದೆ. ಮತ್ತು ಇನ್ಸುಲಿನ್ ಕ್ರಿಯಾತ್ಮಕತೆಯನ್ನು ಹೆಚ್ಚಿಸುತ್ತದೆ.
• ಮೂಳೆಗಳ ವರ್ಗೀಕರಣ
1. ತಲೆ ಬುರುಡೆ : ತಲೆ ಬುರುಡೆಯು ಅತ್ಯಂತ ಗಟ್ಟಿಯಾದ ಮೂಳೆಗಳಿಂದ ಮಾಡಲ್ಪಟ್ಟಿದೆ. ಇದು ಚಪ್ಪಟೆಯಾದ ಮೂಳೆಗಳನ್ನು ಒಳಗೊಂಡಿದೆ. ತಲೆಬುರುಡೆಯ ಎಲ್ಲಾ ಮೂಳೆಗಳು ಒಂದಕ್ಕೊಂದು ಸೇರಿಕೊಂಡಿವೆ.
ತಲೆಬುರುಡೆಯಲ್ಲಿ ಎರಡು ವಿಧದ ಮೂಳೆಗಳನ್ನು ಕಾಣುತ್ತೇವೆ.
1. ಕಾರ್ನಿಯಲ್ ಬೋನ್ಸ್
2. ಪೇಶಿಯಲ್ ಬೋನ್ಸ್(ಮುಖದ ಮೂಳೆ)
ತಲೆಬುರುಡೆಯ ಮೂಳೆಗಳ ಪೈಕಿ ಚಲಿಸುವ ಏಕೈಕ ಮೂಳೆಯೆಂದರೆ ಕೆಳದವಡೆಯ ಮೂಳೆ . ಇದರಲ್ಲಿ ಕೆಳದವಡೆಯಲ್ಲಿ 16 ಹಲ್ಲುಗಳಿದ್ದು ಇವು ಆಹಾರವನ್ನು ಅಗೆಯಲು ಸಹಾಯಕವಾಗಿದೆ.
2. ಬೆನ್ನು ಮೂಳೆ : ಬೆನ್ನು ಮೂಳೆಯು ದೇಹದ ಹಿಂಭಾಗದಲ್ಲಿ, ಬೆನ್ನಿನ ಭಾಗದಲ್ಲಿ ಇದೆ. ಇದೂ ಸಹ ತಲೆ ಬುರುಡೆಯ ಮೂಳೆಗಳ ರೀತಿಯಲ್ಲಿಯೇ ತುಂಬಾ ಗಟ್ಟಿಯಾಗಿದೆ. ಇದು ಮಿದುಳು ಬಳ್ಳಿಗೆ ರಕ್ಷಣೆ ಒದಗಿಸುತ್ತವೆ.
3. ಭುಜ : ಭುಜವು ಮುಖ್ಯವಾಗಿ ಎರಡು ಮೂಳೆಗಳಿಂದ ಕೂಡಿದೆ.
4. ಕೈಮೂಳೆಗಳು : ತೋಳಿನ ಭಾಗದಲ್ಲಿ ಉದ್ದವಾದ ಮೂಳೆಯಿದೆ. ಇದನ್ನು ‘ಹ್ಯೂಮರಸ್’ ಎನ್ನುವರು. ಮೊಣಕೈ ಹತ್ತಿರ ಈ ಮೂಳೆಗಳು ಕೊನೆಗೊಳ್ಳುತ್ತದೆ. ಇಲ್ಲಿಂದ ಎರಡು ಮೂಳೆಗಳಿದ್ದು ಹೊರಭಾಗಕ್ಕೆ ಇದು ಒಂದೇ ಮೂಳೆಯ ಹಾಗೆ ಕಂಡು ಬರುತ್ತವೆ.
5. ಎದೆಗೂಡು : ಎದೆಯ ಮುಂಭಾಗದಲ್ಲಿರುವ ಗಟ್ಟಿಯಾದ ಉದ್ದವಾದ ಮೂಳೆಯನ್ನು ‘ಸ್ಟರ್ನಮ್” ಎನ್ನುವರು.
6. ಸೊಂಟದ ಮೂಳೆ : ಸ್ತ್ರೀ ಮತ್ತು ಪುರುಷರ ಅಸ್ಥಿಪಂಜರದಲ್ಲಿ ಪ್ರಮುಖವಾದ ವ್ಯತ್ಯಾಸವು ಇಲ್ಲಿ ಕಂಡುಬರುತ್ತದೆ. ಸ್ತ್ರೀಯರ ಸೊಂಟದ ಮೂಳೆಯ ಮಧ್ಯದಲ್ಲಿ ಒಂದು ರಂಧ್ರವಿದ್ದು ಅಗಲವಾಗಿದೆ. ಏಕೆಂದರೆ ಮಗುವಿನ ಜನನ ಸಂದರ್ಭದಲ್ಲಿ ಮಗುವಿನ ತಲೆಯು ತೂರಿಹೋಗುವಷ್ಟು ಇದು ಅಗಲವಾಗಿದೆ. ಆದರೆ ಪುರುಷರಲ್ಲಿ ಈ ರಂಧ್ರವು ಚಿಕ್ಕದಾಗಿರುತ್ತದೆ.
7. ಕಾಲುಗಳು : ತೊಡೆಯ ಭಾಗದಲ್ಲಿ ನಮ್ಮ ದೇಹದ ಅತ್ಯಂತ ಉದ್ದವಾದ ‘ ಫೀಮರ್’ ಎಂಬ ಮೂಳೆಯಿದೆ. ಇದು ಸೊಂಟದ ಭಾಗದಿಂದ ಮೊಣಕಾಲಿನವರೆಗೂ ವ್ಯಾಪಿಸಿದೆ.
8. ಮಧ್ಯಕಿವಿ : ನಮ್ಮ ಕಿವಿಯ ಭಾಗವಾದ ಮಧ್ಯಕಿವಿಯಲ್ಲಿ ಮೂರು ಮೂಳೆಗಳಿಂದಾದ ಒಂದು ಸರಪಣಿಯಿದೆ. ಆ ಮುಳೆಗಳನ್ನು ಮ್ಯಾಲಿಯಸ್ ( ಸುತ್ತಿಗೆ ಮೂಳೆ), ಇಂಕಸ್( ಅಡಿಗಲ್ಲು ಮೂಳೆ), ಸ್ಟೇಪಿಸ್ ( ರಿಕಾಪು) ಎನ್ನುವರು. ಈ ಮೂಳೆಗಳ ಪೈಕಿ “ಸ್ಟೇಪಿಸ್” ಎನ್ನುವುದು ನಮ್ಮ ದೇಹದ ಅತ್ಯಂತ ಚಿಕ್ಕ ಮೂಳೆಯಾಗಿದೆ.
• “ಆಸ್ಟಿಯೊಪೊರೋಸಿಸ್” ಎಂಬುದು ಮೂಳೆಯ ಖನಿಜಾಂಶಗಳ ಸಾಂದರತೆ ಕಡಿಮೆ ಇದ್ದಾಗ ಕಂಡುಬರುವ ಕಾಯಿಲೆಯಾಗಿದೆ. ಇದರಿಂದ ಮೂಳೆ ಮುರಿತದ ಸಾಧ್ಯತೆಯು ಹೆಚ್ಚಾಗುತ್ತದೆ.
• ‘ಸ್ಕೋಲಿಯೋಸಿಸ್’ ಇದು ಸಂಧಿವಾತದ (ಕೀಲುಗಳ) ಒಂದು ಕಾಯಿಲೆಯಾಗಿದೆ. ಇದು ಒಂದು ಅಥವಾ ಹೆಚ್ಚು ಕೀಲುಗಳ ಊರಿಯೂತವನ್ನು ಒಳಗೊಂಡಿರುತ್ತದೆ.ಸ