ಇಂದಿನ ಪ್ರಚಲಿತ ವಿದ್ಯಮಾನಗಳು / 20-09-2025 (Today’s Current Affairs)
ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs
✶ ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟನೆ :
PM Modi To Inaugurate India’s Largest Cruise Terminal In Mumbai
ಪ್ರಧಾನಿ ನರೇಂದ್ರ ಮೋದಿ ಇಂದು ಬಲ್ಲಾರ್ಡ್ ಪಿಯರ್‌ನಲ್ಲಿ ಅತ್ಯಾಧುನಿಕ ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ (MICT) ಅನ್ನು ಉದ್ಘಾಟಿಸಿದ್ದಾರೆ. ‘ಕ್ರೂಸ್ ಭಾರತ್ ಮಿಷನ್’ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಈ ಟರ್ಮಿನಲ್ ಭಾರತದ ಕಡಲ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಮುಂಬೈಯನ್ನು ಪ್ರಮುಖ ಕ್ರೂಸ್ ಪ್ರವಾಸೋದ್ಯಮ ತಾಣವಾಗಿ ಇರಿಸಲು ಸಜ್ಜಾಗಿದೆ.
415,000 ಚದರ ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ MICT, ವಾರ್ಷಿಕವಾಗಿ 1 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಏಕಕಾಲದಲ್ಲಿ ಐದು ಕ್ರೂಸ್ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.72 ಚೆಕ್-ಇನ್ ಮತ್ತು ವಲಸೆ ಕೌಂಟರ್‌ಗಳನ್ನು ಹೊಂದಿರುವ ಈ ಟರ್ಮಿನಲ್, ಪ್ರಯಾಣಿಕರಿಗೆ ತಡೆರಹಿತ ಮತ್ತು ಪರಿಣಾಮಕಾರಿ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.
Dynastic Politicians : ಅತಿ ಹೆಚ್ಚು ರಾಜವಂಶೀಯ ಸಂಸದರು, ಶಾಸಕರು ಮತ್ತು MLCಗಳನ್ನು ಹೊಂದಿದ ರಾಜ್ಯ ಯಾವುದು..?
✶ T20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಅರ್ಶದೀಪ್ ಸಿಂಗ್
Arshdeep Singh becomes first Indian to claim 100 T20I wickets
2025ರ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲ ಸಲ ಕಣಕ್ಕಿಳಿದ ಎಡಗೈ ವೇಗಿ ಅರ್ಶದೀಪ್ ಸಿಂಗ್, ತಾವಾಡಿದ ಮೊದಲ ಪಂದ್ಯದಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಅರ್ಶದೀಪ್ ಸಿಂಗ್ ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ 100 ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾ ಪರ 2022ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಗಿನಿಂದ ಇವರು ಭಾರತ ತಂಡದ ಪ್ರಮುಖ ವೇಗದ ಬೌಲರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಇವರು ಭಾರತದ ಪರ 64 ಟಿ20 ಪಂದ್ಯಗಳನ್ನು ಆಡಿದ್ದು, 100 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ 25ನೇ ಬೌಲರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 12ನೇ ವೇಗದ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತದಲ್ಲಿ ನೂರು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ರಶೀದ್ ಖಾನ್ 100 ವಿಕೆಟ್ ಪಡೆಯಲು 1185 ಎಸೆತ ತೆಗೆದುಕೊಂಡರೆ, ನೇಪಾಳದ ಸಂದೀಪ್ 1220 ಎಸೆತಗಳಲ್ಲಿ ನೂರು ವಿಕೆಟ್ ಹಾಗೂ ಭಾರತದ ಅರ್ಷದೀಪ್ ಸಿಂಗ್ 1329 ಎಸೆತಗಳಲ್ಲಿ ವಿಕೆಟ್‌ಗಳ ಶತಕ ಪೂರೈಸಿದ್ದಾರೆ. ಟೀಮ್ ಇಂಡಿಯಾ 2024ರಲ್ಲಿ ಟಿ20 ವಿಶ್ವ ಕಪ್ ಗೆದ್ದಾಗ ಅರ್ಷದೀಪ್ ಸಿಂಗ್ ಆ ತಂಡದ ಸದಸ್ಯರಾಗಿದ್ದಾರೆ.
✶ H-1B ವೀಸಾಗಳ ಮೇಲೆ ವಾರ್ಷಿಕ 1 ಲಕ್ಷ ಡಾಲರ್ ಶುಲ್ಕ ವಿಧಿಸಿದ ಅಮೆರಿಕಾ
ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತದ ವಿರುದ್ಧ ಒಂದಲ್ಲಾ ಒಂದು ರೀತಿಯಲ್ಲಿ ಅಮೆರಿಕ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಸುಂಕಾಸ್ತ್ರದ ನಡುವೆ ವ್ಯಾಪಾರ ಮಾತುಕತೆ ಆರಂಭಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಪರ ಒಲವಿನ ಮಾತುಗಳನ್ನಾಡಿದ ಟ್ರಂಪ್, ಸೆ. 18ರಂದು ಇರಾನ್‌ನ ಚಬಹಾರ್ ಬಂದರು ನಿರ್ಬಂಧ ವಿನಾಯಿತಿ ರದ್ದುಗೊಳಿಸುವ ಮೂಲಕ ಭಾರತದ ಯೋಜನೆಗೆ ಅಡ್ಡಪಡಿಸಿದ್ದಾರೆ.
ಭಾರತೀಯರಿಗೆ ಮತ್ತೊಂದು ಹೊಡೆತ ನೀಡಿದ್ದಾರೆ. ಹೆಚ್ಚು ನುರಿತರನ್ನು ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ವಾರ್ಷಿಕ $ 100,000 ವೀಸಾ ಶುಲ್ಕದ ಅಗತ್ಯವಿರುವ ಘೋಷಣೆಗೆ ಸಹಿ ಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ನಿಂದ ವ್ಯಾಪಕ ಟೀಕೆಗಳ ನಡುವೆ ಶ್ರೀಮಂತ ವ್ಯಕ್ತಿಗಳಿಗೆ ಯುಎಸ್ ಪೌರತ್ವದ ಮಾರ್ಗವಾಗಿ 1 ಮಿಲಿಯನ್ ಡಾಲರ್ ಮೌಲ್ಯದ ಗೋಲ್ಡ್ ಕಾರ್ಡ್ ವೀಸಾವನ್ನು ಹೊರತಂದಿದ್ದಾರೆ. ಇದು ಕೆಲವು ಕಾನೂನು ಸವಾಲುಗಳನ್ನು ಎದುರಿಸುತ್ತಿದೆ. ಇದು ಕಾನೂನು ಆಗಿ ಜಾರಿಗೆ ಬಂದರೆ, ವೀಸಾ ಬೆಲೆ ಗಗನಕ್ಕೇರಲಿದೆ. ಪ್ರತಿಭಾವಂತ ಕೆಲಸಗಾರರ ವೀಸಾ ಶುಲ್ಕ 215 ಡಾಲರ್ ಗೆ ಜಿಗಿಯಲಿದೆ. ಅನೇಕ ಯುರೋಪಿಯನ್ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹೂಡಿಕೆದಾರರ ವೀಸಾಗಳ ಶುಲ್ಕವು ವರ್ಷಕ್ಕೆ $10,000 ದಿಂದ $20,000 ವರೆಗೆ ಏರುತ್ತದೆ. ಈ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿರುವುದರಿಂದ ಇತರೆ ದೇಶಗಳಿಂದ ನುರಿತರನ್ನು ಕರೆತರಲು ಅರ್ಜಿ ಸಲ್ಲಿಸುವ ಕಂಪನಿಗಳು ವಾರ್ಷಿಕವಾಗಿ ಪ್ರತಿ ವೀಸಾಕ್ಕೆ 1,00,000 ಡಾಲರ್ ಪಾವತಿಸಬೇಕಾಗುತ್ತದೆ.
ಮಹಿಳಾ ಸ್ವಸಹಾಯ ಸಂಘ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದ ಮೊದಲ ರಾಜ್ಯ ತಮಿಳುನಾಡು
Tamil Nadu Becomes First State to Issue ID Cards for Women SHG Members
ತಮಿಳುನಾಡು ಮಹಿಳಾ ಸ್ವ-ಸಹಾಯ ಗುಂಪು (SHG-Women Self-Help Group) ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಿದ ಭಾರತದ ಮೊದಲ ರಾಜ್ಯವಾಯಿತು, ಇದು ತಳಮಟ್ಟದಲ್ಲಿ ಮಹಿಳೆಯರ ಸಬಲೀಕರಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಉಪಕ್ರಮವನ್ನು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸೇಲಂ ಜಿಲ್ಲೆಯ ಕರುಪ್ಪೂರಿನಲ್ಲಿ ಅಧಿಕೃತವಾಗಿ ಪ್ರಾರಂಭಿಸಿದರು ಮತ್ತು ಸ್ವ-ಸಹಾಯ ಗುಂಪುಗಳಿಗೆ ₹3,500 ಕೋಟಿ ಸಾಲವನ್ನು ವಿತರಿಸಿದರು.
1989 ರಲ್ಲಿ ಭಾರತದಲ್ಲಿ ಸ್ವಸಹಾಯ ಗುಂಪುಗಳ ಆಂದೋಲನವನ್ನು ಆರಂಭಿಸಿದ ತಮಿಳುನಾಡು, ಈಗ ಮತ್ತೊಮ್ಮೆ ಅಧಿಕೃತ ಗುರುತಿನ ಚೀಟಿಗಳನ್ನು ನೀಡುವ ಮೂಲಕ ಒಂದು ಪೂರ್ವನಿದರ್ಶನವನ್ನು ಸ್ಥಾಪಿಸಿದೆ, ಸ್ಥಳೀಯ ಅಭಿವೃದ್ಧಿ ಮತ್ತು ಮಹಿಳೆಯರ ನೇತೃತ್ವದ ಆರ್ಥಿಕ ಚಟುವಟಿಕೆಯಲ್ಲಿ ಸ್ವಸಹಾಯ ಗುಂಪುಗಳ ಪಾತ್ರವನ್ನು ಮತ್ತಷ್ಟು ಕಾನೂನುಬದ್ಧಗೊಳಿಸಿದೆ.
SHG ಗುರುತಿನ ಚೀಟಿಗಳ ಪ್ರಯೋಜನಗಳು :
*ಸ್ವಸಹಾಯ ಸಂಘ ಸದಸ್ಯರು ತಮ್ಮ ಸರಕುಗಳನ್ನು ಸಾಗಿಸಲು ಸರ್ಕಾರಿ ಬಸ್‌ಗಳಲ್ಲಿ 100 ಕಿ.ಮೀ ವರೆಗೆ ಉಚಿತ ಪ್ರಯಾಣ.
*ಆವಿನ್, ಕೋ-ಆಪ್ಟೆಕ್ಸ್ ಮತ್ತು ಮುಧಲ್ವರ್ ಮರುಂತಗಂ (ಮುಖ್ಯಮಂತ್ರಿಗಳ ವೈದ್ಯಕೀಯ ಮಳಿಗೆಗಳು) ಮೂಲಕ ಮಾರಾಟವಾಗುವ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿಗಳು.
*ಕಲ್ಯಾಣ ಯೋಜನೆಗಳು ಮತ್ತು ರಾಜ್ಯ ಬೆಂಬಲಿತ ಮಾರುಕಟ್ಟೆಗಳಿಗೆ ಸುಲಭ ಪ್ರವೇಶ.
*ಈ ಪ್ರಯೋಜನಗಳು ಮಹಿಳಾ ಉದ್ಯಮಿಗಳಿಗೆ ವೆಚ್ಚವನ್ನು ಕಡಿಮೆ ಮಾಡುವುದು, ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಸಮಗ್ರ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.
✶ 6 ವರ್ಷಗಳ ನಂತರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕವಿಲ್ಲದೆ ಮರಳಿದ ಭಾರತ
No World Athletics medal for India after 6 years
ಟೋಕಿಯೊ(Tokyo)ದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ(World Athletics Championships) ನೀರಸ ಪ್ರದರ್ಶನ ತೋರಿದ ಭಾರತ, ಆರು ವರ್ಷಗಳಲ್ಲಿ ಮೊದಲ ಬಾರಿಗೆ ಪೋಡಿಯಂ ಫಿನಿಶ್ ಇಲ್ಲದೆ ತವರಿಗೆ ಮರಳಿದೆ. ಜಾವೆಲಿನ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ನೀರಜ್ ಚೋಪ್ರಾ(Neeraj Chopra) ಅವರ ಮೇಲೆ ಭಾರತ ಕನಿಷ್ಠ ಒಂದು ಪದಕದ ನಿರೀಕ್ಷೆ ಮಾಡಿತ್ತು. ಆದರೆ ಅವರು 8ನೇ ಸ್ಥಾನ ಪಡೆಯುವ ಮೂಲಕ ನಿರೀಕ್ಷೆಯನ್ನು ಹುಸಿಯಾಗಿಸಿದರು. ನಾಲ್ಕನೇ ಸ್ಥಾನ ಪಡೆದ ಜಾವೆಲಿನ್ ಎಸೆತಗಾರ ಸಚಿನ್ ಯಾದವ್ ಮತ್ತು ಹೈ ಜಂಪ್‌ನಲ್ಲಿ ಸರ್ವೇಶ್ ಕುಶಾರೆ ಐದನೇ ಸ್ಥಾನ ಗಳಿಸಿದ್ದೇ ಭಾರತದ ಪಾಲಿನ ಶ್ರೇಷ್ಠ ಸಾಧನೆ ಎನಿಸಿತು. ದಾಖಲೆಯ ಕ್ರೀಡಾಪಟುಗಳನ್ನು ಕಳುಹಿಸಿತ್ತು. ಅದರಂತೆ ಭಾರತವು ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿತ್ತು. ಆದರೆ ಟೋಕಿಯೊ ಅಭಿಯಾನವು ಬಹುತೇಕ ತಪ್ಪುಗಳು ಮತ್ತು ಅನಿರೀಕ್ಷಿತ ಹಿನ್ನಡೆಗಳಿಂದ ನಿರೂಪಿಸಲ್ಪಟ್ಟಿತು. ಯಾರೊಬ್ಬರು ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.
2023ರ ಬುಡಾಪೆಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಲಾಂಗ್ ಜಂಪ್‌ನಲ್ಲಿ ಜೆಸ್ವಿನ್, ಜಾವೆಲಿನ್‌ನಲ್ಲಿ ನೀರಜ್, ಮನು ಮತ್ತು ಕಿಶೋರ್, 3 ಸಾವಿರ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಪಾರುಲ್ ಮತ್ತು ಪುರುಷರ 4×400 ಮೀಟರ್ ರಿಲೇ ತಂಡ ಸೇರಿದಂತೆ ಆರರಿಂದ ಏಳು ಕ್ರೀಡಾಪಟುಗಳನ್ನು ಫೈನಲ್ ಪ್ರವೇಶಿಸಿದ್ದರು. ಈ ಬಾರಿ ಕೇವಲ 3 ಮಂದಿ ಮಾತ್ರ ಫೈನಲ್ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು.
✶ ಶೇಖ್ ಹಸೀನಾ ಮತದಾರ ಚೀಟಿ ತಡೆಹಿಡಿದ ಬಾಂಗ್ಲಾ ಚುನಾವಣಾ ಆಯೋಗ
Bangladesh Election Commission bars deposed PM Hasina from voting
ದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಷ್ಟ್ರೀಯ ಗುರುತಿನ ಚೀಟಿಯನ್ನು ತಡೆಹಿಡಿದಿದ್ದಾಗಿ ಬಾಂಗ್ಲಾದೇಶ ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಮತದಾನ ಮಾಡಲು ಆಗದು.’ಯಾರದ್ದಾದ್ದರೂ ರಾಷ್ಟ್ರೀಯ ಗುರುತಿನ ಚೀಟಿಯನ್ನು (ಎನ್ ಐಡಿ) ತಡೆಹಿಡಿದಿದ್ದರೆ, ಅವರು ವಿದೇಶದಿಂದ ಮತ ಚಲಾಯಿಸಲು ಆಗದು. ಹಸೀನಾ ಅವರ ಎನ್‌ಐಡಿಯನ್ನು ತಡೆಹಿಡಿಯಲಾಗಿದೆ’ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಅಬ್ಬರ್ ಅಹಮದ್ ಹೇಳಿದ್ದಾರೆ. ರಹಾನಾ ಅವರ ಮಕ್ಕಳಾದ ತುಲಿಪ್ ರಿಜ್ವಾನಾ ಸಿದ್ದೀಕ್, ಅಜೈನಾ ಸಿದ್ದೀಕ್ ಮತ್ತು ಸೋದರಳಿಯ ರದ್ವಾನ್ ಮುಜೀಬ್ ಸಿದ್ದೀಕ್ ಬಾಬಿ, ಅವರ ಸೋದರ ಮಾವ ಮತ್ತು ಹಸೀನಾ ಅವರ ಮಾಜಿ ಭದ್ರತಾ ಸಲಹೆಗಾರ ನಿವೃತ್ತ ಮೇಜರ್ ಜನರಲ್ ತಾರಿಕ್ ಅಹ್ಮದ್ ಸಿದ್ದೀಕ್. ಅವರ ಪತ್ನಿ ಶಾಹಿನ್ ಸಿದ್ದೀಕ್ ಮತ್ತು ಅವರ ಪುತ್ರಿ ಬುತ್ತಾ ಸಿದ್ದೀಕ್ ಅವರ ಗುರುತಿನ ಚೀಟಿಯನ್ನೂ ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ.
ವಿದ್ಯುನ್ಮಾನ ಮತಯಂತ್ರ(EVM)ಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಚುನಾವಣಾ ಆಯೋಗ
✶ ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಾಬರ್ಟ್ ರೆಡ್‌ಫೋರ್ಡ್ ನಿಧನ
Robert Redford, actor and director, dies at 89
ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ದೇಶಕ, ನಿರ್ಮಾಪಕ ರಾಬರ್ಟ್ ರೆಡ್‌ಫೋರ್ಡ್ ಮಂಗಳವಾರ ನಿಧನರಾಗಿರುವ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ರಾಬರ್ಟ್ ರೆಡ್‌ಪೋರ್ಡ್(89) ಯುಟಾ ರಾಜ್ಯದ ಪ್ರೊವೊದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ‘ಬುಚ್ ಕ್ಯಾಸಿಡಿ ಅಂಡ್ ದ ಸಂಡಾನ್ಸ್ ಕಿಡ್’ (1969), ‘ದಿ ಸ್ಟಿಂಗ್’ (1973), ‘ಆಲ್ ದ ಪ್ರೆಸಿಡೆಂಟ್ಸ್ ಮೆನ್’ (1976) ಸಿನಿಮಾಗಳ ಮೂಲಕ ವಿಶ್ವಪ್ರಸಿದ್ಧರಾದ ಅವರು 1981ರಲ್ಲಿ ‘ಆರ್ಡಿನರಿ ಪೀಪಲ್ ಚಿತ್ರದ ನಿರ್ದೇಶನಕ್ಕಾಗಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಸ್ಥಾಪಿಸಿದ ಸಂಡಾನ್ಸ್ ಇನ್ಸಿಟ್ಯೂಟ್ ಹಾಗೂ ಚಲನಚಿತ್ರೋತ್ಸವ ಸ್ವತಂತ್ರ ಚಿತ್ರರಂಗದ ಹಲವು ಪೀಳಿಗೆಯ ಚಲನಚಿತ್ರ ನಿರ್ದೇಶಕರಿಗೆ ವೇದಿಕೆಯಾಗಿತ್ತು.
Unemployment rate : ಆಗಸ್ಟ್ 2025ರಲ್ಲಿ ಭಾರತದ ನಿರುದ್ಯೋಗ ದರ ಶೇ. 5.1ಕ್ಕೆ ಇಳಿಕೆ
- Nobel Prize 2025 : 2025ನೇ ಸಾಲಿನ ನೊಬೆಲ್ ಪ್ರಶಸ್ತಿಗಳು ಪ್ರಕಟ : ಇಲ್ಲಿದೆ ವಿಜೇತರ ಪಟ್ಟಿ
- RRB Recruitment : ರೈಲ್ವೆ ನೇಮಕಾತಿ ಮಂಡಳಿ (RRB)ಯಲ್ಲಿ 8050 ಹುದ್ದೆಗಳಿಗೆ ಅರ್ಜಿ ಆಹ್ವಾನ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (30-09-2025)
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (29-09-2025)
- Asia Cup 2025 : ಏಷ್ಯಾಕಪ್ 2025 ಗೆದ್ದ ಭಾರತ