Current AffairsLatest Updates

Hydrogen Truck : ಭಾರತದ ಮೊದಲ ಹಸಿರು ಹೈಡ್ರೋಜನ್ ಟ್ರಕ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ

Share With Friends

Hydrogen Truck : ಭಾರತ 2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯತ್ತ ಹೆಜ್ಜೆ ಹಾಕಿದ್ದು, ದೇಶದ ಮೊದಲ ಹೈಡ್ರೋಜನ್ ಚಾಲಿತ ವಾಹನದ ಪ್ರಾಯೋಗಿಕ ಸಂಚಾರಕ್ಕೆ ( Hydrogen Truck) ಚಾಲನೆ ಸಿಕ್ಕಿದೆ. ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದ ಹೈಡ್ರೋಜನ್ ಚಾಲಿತ ಹೆವಿ-ಡ್ಯೂಟಿ ಟ್ರಕ್‌ಗಳ ಮೊದಲ ಪ್ರಾಯೋಗಿಕ ಸಂಚಾರಕ್ಕೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ನವದೆಹಲಿಯಲ್ಲಿ ಹಸಿರು ನಿಶಾನೆ ತೋರಿದರು.

*ಎರಡು ವರ್ಷಗಳ ಕಾಲ 16 ಸುಧಾರಿತ ಹೈಡ್ರೋಜನ್ ವಾಹನಗಳ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. H2 -ICE ಮತ್ತು ಇಂಧನ ಕೋಶ H 2 -FCEV ತಂತ್ರಜ್ಞಾನ ಹೊಂದಿರುವ ಈ ಟ್ರಕ್‌ಗಳು ಮುಂಬೈ, ಪುಣೆ, ದೆಹಲಿ-NCR, ಸೂರತ್, ವಡೋದರಾ, ಜಮ್ಶೆಡ್‌ಪುರ ಮತ್ತು ಕಳಿಂಗನಗರ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಭಾರತದ ಪ್ರಮುಖ ಸರಕು ಸಾಗಣೆ ಮಾರ್ಗಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಿವೆ

*3 ಹೈಡ್ರೋಜನ್ ಚಾಲಿತ ಹೆವಿ-ಡ್ಯೂಟಿ ಟ್ರಕ್‌ಗಳ ಮೊದಲ ಬ್ಯಾಚ್ ಫರಿದಾಬಾದ್-ದೆಹಲಿ NCR ಮತ್ತು ಅಹಮದಾಬಾದ್-ಸೂರತ್-ವಡೋದರಾ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಫರಿದಾಬಾದ್, ವಡೋದರಾ, ಪುಣೆ ಮತ್ತು ಬಾಲಸೋರ್‌ನಲ್ಲಿ ಹೈಡ್ರೋಜನ್ ಮರುಪೂರಣ ಕೇಂದ್ರಗಳನ್ನು ಸ್ಥಾಪಿಸುತ್ತಿದೆ

*ಹಸಿರು ಹೈಡ್ರೋಜನ್ ವಲಯದಲ್ಲಿ ಭಾರತ ಈಗಾಗಲೇ ಗಮನಾರ್ಹ ಪ್ರಗತಿ ಸಾಧಿಸಿದೆ. ವರ್ಷಕ್ಕೆ 4,12,000 ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ನೀಡಿದೆ. 3 GW ಎಲೆಕ್ಟ್ರೋಲೈಸರ್ ಉತ್ಪಾದನಾ ಸಾಮರ್ಥ್ಯವನ್ನು ಅನುಮೋದಿಸಿದೆ. ಅಲ್ಲದೇ, ಸಾರಿಗೆ, ಸಾಗಣೆ, ಉಕ್ಕು ಮತ್ತು ಸಂಗ್ರಹಣೆಯಲ್ಲಿ ಹೊಸದಾಗಿ 7 ಪೈಲಟ್ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ

*ಮುಂಬರುವ ದಿನಗಳಲ್ಲಿ ವಾರ್ಷಿಕವಾಗಿ 5 ಮಿಲಿಯನ್ ಮೆಟ್ರಿಕ್ ಟನ್ (MMT) ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿ ಹೊಂದಿದೆ. 2030ರ ವೇಳೆಗೆ 60-100 GW ಎಲೆಕ್ಟ್ರೋಲೈಸರ್ ಸಾಮರ್ಥ್ಯದ ಸ್ಥಾಪನೆ ಮತ್ತು ಹೈಡ್ರೋಜನ್ ಉತ್ಪಾದನೆಗೆ ಮೀಸಲಾಗಿರುವ 125 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ

*ಭಾರತ 3ನೇ ಅತಿ ದೊಡ್ಡ ತೈಲ ಗ್ರಾಹಕ ಮತ್ತು 4ನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರವಾಗಿದ್ದು, ಈ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಹೈಡ್ರೋಜನ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ.

Current Affairs Today Current Affairs