ಡಾರ್ವಿನ್ ಸಿದ್ಧಾಂತ
• ಚಾಲ್ರ್ಸ್ ರಾಬರ್ಟ್ ಡಾರ್ವಿನ್ ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನು ಮಂಡಿಸಿದ ಜೀವವಿಕಾಸವಾದವು ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ. ಚಾಲ್ರ್ಸ್ ಡಾರ್ವಿನ್ ಜೀವ ವಿಕಾಸ ಉಂಟಾಗಿರಬಹುದಾದ ರೀತಿಯನ್ನು ವಿವರಿಸಲು 1859 ರಲ್ಲಿ ಸಿದ್ಧಾಂತವೊಂದನ್ನು ಮಂಡಿಸಿದ . ಇದನ್ನು‘ ನಿಸರ್ಗದ ಆಯ್ಕೆಯ ಸಿದ್ಧಾಂತ’ ಎಂದು ಕರೆಯಲಾಗುತ್ತದೆ. ಇದು “ಡಾರ್ವಿನಿಸಂ” ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ.
• ಭೂಮಿ ಮೇಲಿನ ಪ್ರತಿಯೊಂದು ಜೀವಿಯೂ ಅನೇಕ ರೂಪಾಂತರಗಲಿಗೆ ಒಳಗಾಗಿದೆ ಎಂಬುದರ ಬಗ್ಗೆ “ ಆನ್ ದಿ ಒರಿಜಿನ್ ಆಫ್ ಸ್ಪೀಶಿಸ್” ಎಂಬ ಪುಸ್ತಕದಲ್ಲಿ ಡಾರ್ವಿನ್ ಸವಿವಿಸ್ತಾರವಾಗಿ ದಾಖಲಿಸಿದ್ದಾನೆ.
• ಡಾರ್ವಿನ್‍ಸಂ ಈ ಕೆಳಗಿನ ತತ್ವವನ್ನು ಆಧರಿಸಿದೆ.
ಎಲ್ಲ ಜೀವಿಗಳಲ್ಲಿ ಒಂದು ಕೂತೂಹಲಕಾರಿ ಅಂಶವನ್ನು ಡಾರ್ವಿನ್ ಗಮನಿಸಿದ. ಅದು, ಎಲ್ಲ ಜೀವಿಗಳಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡುವ ಸ್ವಾಭಾವಿಕ ಸಾಮಥ್ರ್ಯವಿದೆ ಎಂಬುದು. ಇದನ್ನು ‘ ಅತಿ ಸಂತಾನ ಸಾಮಥ್ರ್ಯ’ ಎಂದು ಆತ ಕರೆದನು. ಇದನ್ನು ನಿರೂಪಿಸಲು ಅವನು ಹಲವಾರು ಉದಾಹರಣೆಗಳನ್ನು ನೀಡಿದ. ಪ್ರಾಣಿ ಪ್ರಪಂಚದಲ್ಲಿ ಆನೆಗಳು ಅತ್ಯಂತ ನಿಧಾನಗತಿಯಲ್ಲಿ ಪ್ರಜನನ ಮಾಡುವ ಪ್ರಾಣಿಗಳು. ಸುಮಾರು 90 ವರ್ಷಗಳ ಆಯಸ್ಸಿನ ಅವಧಿಯಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ನು ಆನೆ ಸೇರಿ ಹೆಚ್ಚೆಂದರೆ ಆರು ಮ,ರಿಗಳಿಗೆ ಜನ್ಮಕೊಡುತ್ತವೆ. ಡಾರ್ವಿನ್ ಲೆಕ್ಕ ಹಾಖಿದಂತೆ ಈ ಎಲ್ಲ ಆರೂ ಮರಿಗಳು ಉಳಿದು, ಬೆಳೆದು, ಇದೇ ಗತಿಯಲ್ಲಿ ಸಂತಾನೋತ್ಪತ್ತಿ ಮಾಡಿದರೆ ಕೇವಲ 750 ವರ್ಷಗಳಲ್ಲಿ ಭೂಮಿಯ ಮೇಲೆ 19 ಮಿಲಿಯನ್ ಆನೆಗಳು ಇರುತ್ತವೆ. ಅಂಥ ಸ್ಥಿತಿ ಎಲ್ಲಾ ಜೀವಿಗಳಲ್ಲಿ ಇದ್ದರೂ ಸಹ, ಅವುಗಳ ಪ್ರಭೇದಗಳಲ್ಲಿನ ಜೀವಿಸಂದಣಿ ಬಹು ದೀರ್ಘ ಅವಧಿಯಲ್ಲೂ ಏರುಪೇರಾಗದೇ ಸಮಸ್ಥಿತಿಯಲ್ಲಿ ಇರುತ್ತದೆ.
• ತೀವ್ರಗತಿಯಲ್ಲಿ ಪ್ರಜನನ ನಡೆಯುವುದರಿಂದ, ಜೀವಿಗಳ ನಡುವೆ ಸ್ಪರ್ಧೆ ನಡೆಯುತ್ತದೆ ಎಂದು ಡಾರ್ವಿನ್ ತರ್ಕಿಸಿದನು. ನೀರು, ಆಹಾರ, ಆವಾಸ ಹಾಗೂ ಇನ್ನಿತರ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಸಲುವಾಗಿ ಈ ಸ್ಫರ್ಧೆ ಉಂಟಾಗುತ್ತದೆ. ಈ ತತ್ವವನ್ನು ಡಾರ್ವಿನ್ “ ಉಳಿವಿಗಾಗಿ ಹೋರಾಟ” ಎಂದು ಕರೆದನು.
• ಡಾರ್ವಿನ್ನನು ಗಮನಿಸಿದಂತೆ ಮರಿಜೀವಿಗಳು ತಮ್ಮ ಪೋಷಕ ಜೀವಿಗಳಿಗಿಂತ ಭಿನ್ನವಾಗಿರುತ್ತವೆ.ಈ ವ್ಯತ್ಯಾಸಗಳನ್ನು ಆತ ‘ಭಿನ್ನತೆಗಳು’ ಎಂದು ಕರೆದನು. ಭಿನ್ನತೆಗಳು ಪ್ರಕೃತಿ ಸಹಜವಾಗಿದ್ದು, ಜೀವಿಗಳು ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ನೆರವಾಗುತ್ತವೆ.
• ಡಾರ್ವಿನ್ನನ ಪ್ರಕಾರ ಯಾವ ಜೀವಿಗಳು ಉಪಯುಕ್ತವಾದ ಭಿನ್ನತೆಗಳನ್ನು ಹೊಂದಿರುತ್ತವೋ ಅವು ಯಶಸ್ವಿ ಪ್ರಜನನ ನಡೆಸಿ, ಅದೇ ಭಿನ್ನತೆಗಲಿರುವ ಸಂತಾನಗಳನ್ನು ಉತ್ಪತ್ತಿ ಮಾಡುತ್ತವೆ. ಕಡಿಮೆ ಹೊಂದಾಣಿಕೆ ಇರುವ ಹಾಗೂ ಹೋಂದಾಣಿಕೆಯೇ ಇಲ್ಲದ ಜೀವಿಗಳು ಕ್ರಮೇಣ ನಾಶವಾಗುತ್ತವೆ. ಈ ಅಭಿಪ್ರಾಯವನ್ನು ‘ ಅರ್ಹ ಜೀವಿಯ ಉಳಿವು’ ಎಂದು ಕರೆಯಲಾಗುತ್ತದೆ.
• ಉಪಯುಕ್ತ ಭಿನ್ನತೆ ಹೊಂದಿರುವ ಜೀವಿಗಲನ್ನು ಮಾತ್ರ ನಿಸರ್ಗವು ಆಯ್ಕೆ ಮಾಡುತ್ತದೆ. ಅವು ಇದೇ ಭಿನ್ನತೆ ಉಳ್ಳ ಸಂತಾನಗಳನ್ನು ಉತ್ಪತ್ತಿ ಮಾಡುತ್ತವೆ. ಈ ನಿರಂತರ ಪ್ರಕ್ರಿಯೆ ಅಂಥ ಜೀವಿಗಳಿಗೆ ನಿರ್ದಿಷ್ಟ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯನ್ನು ಡಾರ್ವಿನ್’ ನಿಸರ್ಗದ ಆಯ್ಕೆ ಎಂದು ಕರೆದನು.ಹೀಗೆ ನಿಧಾನವಾಗಿ ಕ್ರಮಬದ್ಧವಾಗಿ ನಡೆಯುವ ಪ್ರಕ್ರಿಯೆಗಳಿಂದಾಗಿ ಹೊಸ ಪ್ರಭೇದಗಳು ಉಂಟಾಗುತ್ತವೆ.
ಜೀವ ವಿಕಾಸಕ್ಕೆ ಭಿನ್ನತೆಗಳು ಮೂಲ ವಸ್ತುಗಳಾದರೆ ನಿಸರ್ಗದ ಆಯ್ಕೆ ಪ್ರಕ್ರಿಯೆಯು ಮೂಲ ಕಾರಣವಾಗುತ್ತದೆ ಎಂದು ಡಾರ್ವಿನ್ ನಂಬಿದನು. ಆದರೆ, ಭಿನ್ನತೆಗಳ ಮೂಲವನ್ನು ಗುರುತಿಸುವುದು ಡಾರ್ವಿನ್ನನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ಒಂದು ಜನಪ್ರಿಯ ಹೇಳಿಕೆಯಂತೆ ‘ ಡಾರ್ವಿನ್ ಅರ್ಹ ಜೀವಿಯ ಉಳಿವನ್ನು ವಿವರಿಸಿದನೇ ಹೊರತು ಅರ್ಹ ಜೀವಿಯ ಆಗಮನವನ್ನು ವಿವರಿಸಲಿಲ್ಲ”, ಏಕೆಂದರೆ, ಅವನಿಗೆ ಅನುವಂಶೀಯತೆಯ ತತ್ತ್ವಗಳ ಅರಿವು ಇರಲಿಲ್ಲ.
• 1902 ರಲ್ಲಿ ವಿಕ್ಟರ್ ಹ್ಯೂಗೋ ಡಿವ್ರೀಸ್ ಎಂಬ ವಿಜ್ಞಾನಿಯು ಜೀವಿಗಳ ಅನುವಂಶೀಯ ವಸ್ತುವಿನಲ್ಲಿ ಉಂಟಾಗುವ ದಿಡೀರ್ ಬದಲಾವಣೆಗಳಿಂದಾಗಿ ಭಿನ್ನತೆಗಳು ಉಂಟಾಗುತ್ತವೆ, ಎಂಬ ಅಭಿಪ್ರಾಯವನ್ನು ಸೂಚಿಸಿದನು. ಅಂಥ ಬದಲಾವಣೆಗಳನ್ನು “ಉತ್ಪರಿವರ್ತನೆಗಳು” ಎಂದು ಕರೆಯಲಾಗುತ್ತದೆ. ಈ ಉತ್ಪರಿವರ್ತನಾ ಸಿದ್ಧಾಂತ ಹಾಗೂ ನೈಸರ್ಗಿಕ ಆಯ್ಕೆ ಸಿದ್ಧಾಂತಗಳ ಮುಖ್ಯ ಅಂಶಗಳನ್ನು ಸೇರಿಸಿ ಈಗ ಜೀವ ವಿಕಾಸ ಸಿದ್ಧಾಂತವನ್ನು ವಿವರಿಸಲಾಗುತ್ತದೆ. ಈ ಎರಡು ಸಿದ್ಧಾಂತಗಳನ್ನು ಉತ್ಪರಿವರ್ತನೆಗಳ ಬಗ್ಗೆ ಈಗಿರುವ ಮಾಹಿತಿಗಳ ಬೆಳಕಿನಲ್ಲಿ ಪರಿಶೀಲಿಸಿ, ಹೊಸ ಸಿದ್ಧಾಂತವನ್ನು ರೂಪಿಸಲಾಗಿದೆ. ಇದನ್ನು “ನವ ಡಾರ್ವಿನ್ ವಾದ” ಎಂದು ಕರೆಯಲಾಗುತ್ತದೆ.
# ಇವುಗಳನ್ನೂ ಓದಿ…
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)