Indian Economy : ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾದ ಭಾರತ
India overtakes Japan to become world’s 4th largest economy: NITI Aayog CEO
ಮಹತ್ವದ ಬೆಳವಣಿಗೆ ಭಾರತ ದೇಶದ ದಶಕಗಳ ಕನಸು ಕೊನೆಗೂ ನನಸಾಗಿದ್ದು ಜಪಾನ್ ದೇಶವನ್ನು ಹಿಂದಿಕ್ಕಿದ ಭಾರತ ಜಗತ್ತಿನ 4ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಅತಿದೊಡ್ಡ ಆರ್ಥಿಕತೆಯಲ್ಲಿ ಜಪಾನ್ ಅನ್ನು ಹಿಂದಿಕ್ಕಿರುವ ಭಾರತ 4ನೇ ಸ್ಥಾನದಲ್ಲಿದೆ ಎಂದು ನೀತಿ ಆಯೋಗ್ನ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ. ಜರ್ಮನಿಯನ್ನು ಮುಂದಿನ ಮೂರು ವರ್ಷದೊಳಗೆ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಜಪಾನ್ ದೇಶವನ್ನು ಹಿಂದಿಕ್ಕಿ ಭಾರತವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಇತ್ತೀಚಿನ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಭಾರತವು $4 ಟ್ರಿಲಿಯನ್ ಒಟ್ಟು ದೇಶೀಯ ಉತ್ಪನ್ನವನ್ನು (GDP) ಹೊಂದಿದೆ’ ಎಂದು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ನೀತಿ ಆಯೋಗದ 10 ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದರು. ‘ಭಾರತ ಈಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಎಂದು ತಿಳಿಸಲು ನಮಗೆ ಹೆಮ್ಮೆಯಾಗುತ್ತಿದೆ.
ಜಪಾನ್ ದೇಶವನ್ನು ಹಿಂದಿಕ್ಕಿ ಭಾರತವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಇತ್ತೀಚಿನ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಭಾರತವು $4 ಟ್ರಿಲಿಯನ್ ಒಟ್ಟು ದೇಶೀಯ ಉತ್ಪನ್ನವನ್ನು (GDP) ಹೊಂದಿದೆ’ ಎಂದು ಹೇಳಿದರು.
ನಾವು ಈಗ 4 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದೇವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ದತ್ತಾಂಶದ ಪ್ರಕಾರ, “ಜಪಾನ್ ದೇಶದ ಆರ್ಥಿಕತೆಗಿಂತ ಭಾರತದ ಆರ್ಥಿಕತೆ ದೊಡ್ಡದಾಗಿದೆ. ಐಎಂಎಫ್ ಅಂಕಿ ಅಂಶಗಳನ್ನು ಗಮನಿಸಿದರೆ, ಸದ್ಯ ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳು ಮಾತ್ರ ಭಾರತಕ್ಕಿಂತ ದೊಡ್ಡ ಆರ್ಥಿಕತೆಯೆನ್ನು ಹೊಂದಿವೆ. ನಮ್ಮ ಯೋಜನೆಗಳೆಲ್ಲವೂ ಕೈಗೂಡಿದರೆ, ಮುಂದಿನ 2.5-3 ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂದು ಬಿ.ವಿ.ಆರ್ ಸುಬ್ರಹ್ಮಣ್ಯಂ ಭರವಸೆ ವ್ಯಕ್ತಪಡಿಸಿದರು.
ಮೊದಲ ಮೂರು ಸ್ತನದಲ್ಲಿ ಅಮೆರಿಕ, ಚೀನಾ, ಜರ್ಮನಿ :
ಚೀನಾ 19 ಟ್ರಿಲಿಯನ್ ಡಾಲರ್, ಅಮೆರಿಕ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಿದೆ. ಸದ್ಯ ಜರ್ಮನಿಯ ಆರ್ಥಿಕತೆ 4.74 ಟ್ರಿಲಿಯನ್ ಡಾಲರ್ ಇದೆ.
11 ವರ್ಷಗಳ ಹಿಂದೆ 11ನೇ ಸ್ಥಾನದಲ್ಲಿದ್ದ ಭಾರತ :
11 ವರ್ಷಗಳ ಹಿಂದೆ ಭಾರತದ ಜಿಡಿಪಿ ವಿಶ್ವದಲ್ಲೇ 11ನೇ ಸ್ಥಾನದಲ್ಲಿತ್ತು. ಈಗ ಅಮೆರಿಕ, ಚೀನಾ ಹಾಗೂ ಜರ್ಮನಿ ಮಾತ್ರ ಭಾರತಕ್ಕಿಂತಲೂ ಮುಂದಿವೆ. ಜರ್ಮನಿಯ ಆರ್ಥಿಕತೆಯನ್ನು ಭಾರತವು ಮೀರುವುದು ನಿಚ್ಚಳ. ಆದರೆ, ಚೀನಾ ಮತ್ತು ಅಮೆರಿಕ ಭಾರತಕ್ಕಿಂತಲೂ ಬಹಳ ಮುಂದಿದೆ.
2028ಕ್ಕೆ ಜಗತ್ತಿನ ಮೂರನೇ ಆರ್ಥಿಕತೆಯಾಗಲಿದೆ ಭಾರತ :
ಭಾರತವು ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆ ಮೂಲಕ ಜಪಾನ್ ಅನ್ನು ಹಿಂದಿಟ್ಟು ಮುಂದೆ ಸಾಗುತ್ತಿದೆ. 2028ಕ್ಕೆ ಜರ್ಮನಿಯನ್ನೂ ಹಿಂದಿಕ್ಕಿ 5.5 ರಿಂದ 6 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಮುಂದೆ ಹೋಗುವ ಸಾಧ್ಯತೆ ಇದೆ. ಇನ್ನು ಮೂರು ವರ್ಷಗಳಲ್ಲಿ ಜಗತ್ತಿನ ಮೂರನೇ ಆರ್ಥಿಕತೆಯಾಗಿ ಭಾರತವು ಬೆಳೆದು ನಿಲ್ಲಲಿದೆ.
ಜಾಗತಿಕ ಆರ್ಥಿಕತೆ :
ಇದೇ ವೇಳೆ ಜಾಗತಿಕ ಆರ್ಥಿಕತೆಯ ಬೆಳವಣಿಗೆ ದರ ತುಂಬ ಕಡಿಮೆಯಿರಲಿದ್ದು, 2025ರಲ್ಲಿ ಶೇ.2.8 ಮತ್ತು 2026ರಲ್ಲಿ ಶೇ.3ರಷ್ಟು ಇರುವ ನಿರೀಕ್ಷೆಯಿದೆ ಎಂದಿರುವ ಐಎಂಎಫ್ ವರದಿಯು ಭಾರತದ ಅಸಾಧಾರಣ ಪ್ರದರ್ಶನವನ್ನು ಎತ್ತಿ ತೋರಿಸಿದೆ ಎಂದು ಸುಬ್ರಹ್ಮಣ್ಯಂ ತಿಳಿಸಿದರು. ಭಾರತದ ಆರ್ಥಿಕತೆಯು ಈಗ ಅತ್ಯಂತ ವೇಗವಾಗಿ ಬೆಳೆಯುವ ಹಂತದಲ್ಲಿದೆ ಎಂದರು.
ಆ್ಯಪಲ್ ಫೋನ್ ಭಾರತದಲ್ಲಿ ಕಡಿಮೆ ಬೆಲೆಗೆ ತಯಾರಿ
ಆ್ಯಪಲ್ನ ಐಫೋನ್ ಅನ್ನು ಅಮೆರಿಕದಲ್ಲಿ ತಯಾರಿಸದೇ ಹೋದರೆ ಅದಕ್ಕೆ ಶೇ. 25ರಷ್ಟು ಟ್ಯಾರಿಫ್ ಹಾಕುವುದಾಗಿ ಡೊನಾಲ್ಡ್ ಟ್ರಂಪ್ ಹಾಕಿರುವ ಬೆದರಿಕೆಯನ್ನು ಭಾರತದ ನೀತಿ ಆಯೋಗ್ ಸಿಇಒ ತಳ್ಳಿಹಾಕಿದ್ದಾರೆ. ‘ಟ್ಯಾರಿಫ್ ಕ್ರಮ ಇನ್ನೂ ಅನಿಶ್ಚಿತ ಎನಿಸಿದೆ. ಈಗಿರುವ ಅಂಶಗಳನ್ನು ಗಮನಿಸಿದರೆ ಐಫೋನ್ ತಯಾರಿಕೆಯ ವೆಚ್ಚ ಭಾರತದಲ್ಲಿ ಅಗ್ಗ ಎನಿಸುತ್ತದೆ’ ಎಂದು ನೀತಿ ಆಯೋಗ್ ಸಿಇಒ ಹೇಳಿದ್ದಾರೆ.
ಅಮೆರಿಕ ಬಿಟ್ಟು ಭಾರತದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ತಯಾರಿಸುವ ಫೋನ್ಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ಹಾಕುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆ್ಯಪಲ್ ಹಾಗೂ ಸ್ಯಾಮ್ಸುಂಗ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಲ ವರ್ಷಗಳ ಹಿಂದಿನವರೆಗೂ ಶೇ. 95 ಐಫೋನ್ಗಳನ್ನು ಚೀನಾದಲ್ಲಿ ತಯಾರಿಸುತ್ತಿದ್ದ ಆ್ಯಪಲ್ ಕಂಪನಿ ಈಗ ಭಾರತದಲ್ಲಿ ತನ್ನ ತಯಾರಿಕೆ ಸೌಲಭ್ಯ ವಿಸ್ತರಿಸುತ್ತಾ ಬಂದಿದೆ. ಈಗ ಹೆಚ್ಚೂಕಡಿಮೆ ಶೇ. 20ರಷ್ಟು ಐಫೋನ್ಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರ್ ಆಗುತ್ತಿವೆ. ಸ್ಯಾಮ್ಸುಂಗ್ ಕಂಪನಿಯೂ ಕೂಡ ಭಾರತದಲ್ಲಿ ತನ್ನ ಹಲವು ಫೋನ್ಗಳನ್ನು ತಯಾರಿಸುತ್ತಿವೆ. ಸ್ಮಾರ್ಟ್ಫೊನ್ ತಯಾರಿಕೆಯು ಭಾರತದಲ್ಲಿ ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ.
ವಿಕಸಿತ್ ಭಾರತ ಕೇವಲ ಘೋಷಣೆಯಲ್ಲ :
“ವಿಕಸಿತ್ ಭಾರತ@2047” ಎಂಬ ಘೋಷಣೆ ಕೇವಲ ಒಂದು ಘೋಷಣೆಯಲ್ಲ. ಅದರ ಹಿಂದೆ ಒಂದು ಕ್ರಮಬದ್ಧ, ವಿಕೇಂದ್ರೀಕೃತ ಯೋಜನಾ ಕಸರತ್ತು ಇದೆ. 17 ರಾಜ್ಯಗಳು ಈಗಾಗಲೇ ತಮ್ಮ ವಿಷನ್ 2047 ದಾಖಲೆಗಳನ್ನು ಸಿದ್ಧಪಡಿಸಿವೆ. ಗುಜರಾತ್, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಮುಂಚೂಣಿಯಲ್ಲಿವೆ ಎಂದರು.
“ಭಾರತವು ಈಗ ವೇಗವಾಗಿ ಬೆಳೆಯುವ ಹಂತದಲ್ಲಿದೆ. ಮುಂದಿನ 20 ರಿಂದ 25 ವರ್ಷಗಳ ಕಾಲ ಭಾರತವು ವಾಸ್ತವವಾಗಿ ಹೊಂದಿರುವ ಜನಸಂಖ್ಯಾ ಲಾಭಾಂಶವನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆರ್ಥಿಕ ಗುರಿಯನ್ನು ನಿಗದಿಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ” ಎಂದು ನೀತಿ ಆಯೋಗದ ಸಿಇಒ ಮಾಹಿತಿ ನೀಡಿದರು.