Padma Awards 2026 : 131 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಣೆ, ಇಲ್ಲಿದೆ ಪುರಸ್ಕೃತರ ಪಟ್ಟಿ
Padma Awards 2026 : ಗಣರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ಕರ್ನಾಟಕದ 8 ಮಂದಿ ಸೇರಿದಂತೆ ದೇಶಾದ್ಯಂತ 131 ಮಂದಿ ಸಾಧಕರನ್ನು ಕೇಂದ್ರ ಸರ್ಕಾರ ಭಾನುವಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಐವರಿಗೆ ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಈ ವರ್ಷದ ಪುರಸ್ಕೃತರ ಪಟ್ಟಿಯಲ್ಲಿ 19 ಮಹಿಳಾ ಪುರಸ್ಕೃತರು, ವಿದೇಶಿಯರು, NRI, PIO, OCI ವರ್ಗದಿಂದ 6 ಮಂದಿ ಹಾಗೂ 16 ಮರಣೋತ್ತರ ಪ್ರಶಸ್ತಿಗಳು ಸೇರಿವೆ.
ಒಟ್ಟು 131 ಪದ್ಮಗಳಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಸೇರಿವೆ. ಇದರಲ್ಲಿ ಇಬ್ಬರು ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ಒಂದಾಗಿ ಪರಿಗಣಿಸಲಾದ 2 ಪ್ರಸಂಗಳಿವೆ.
ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾಹಿತ್ಯ–ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಈ ಗೌರವ ನೀಡಲಾಗಿದೆ.
ರಾಜೀವ್ ಗಾಂಧಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಕೆ.ಟಿ. ಥಾಮಸ್, ಕಲೆಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಮತ್ತು ಪಿಟೀಲು ವಾದಕ ಎನ್. ರಾಜಮ್, ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಖ್ಯಾತ ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶ್ಯಾರಿ, ನಟ ಮಮ್ಮುಟ್ಟಿ ಮತ್ತು ಬ್ಯಾಂಕರ್ ಉದಯ್ ಕೋಟಕ್ ಅವರು ಪದ್ಮಭೂಷಣ ಪ್ರಶಸ್ತಿ ವಿಜೇತರಲ್ಲಿ ಸೇರಿದ್ದಾರೆ.ಜಾಹೀರಾತು ಗುರು ಪೀಯೂಷ್ ಪಾಂಡೆ, ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ ಮತ್ತು ಬಿಜೆಪಿ ನಾಯಕ ವಿ.ಕೆ. ಮಲ್ಹೋತ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದ್ದು, ಹಾಸ್ಯನಟ ಸತೀಶ್ ಶಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
✶ ಕ್ರೀಡಾ ಕೆಟಗರಿ:
ಕ್ರೀಡಾ ಕೆಟಗರಿಯಲ್ಲಿ ಟೆನಿಸ್ ದಂತಕಥೆ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ. ಕ್ರಿಕೆಟಿಗ ರೋಹಿತ್ ಶರ್ಮಾ, ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಹಾಕಿ ಆಟಗಾರ್ತಿ ಸವಿತಾ ಪುನಿಯಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
✶ 131 ಪುರಸ್ಕೃತರಲ್ಲಿ 90 ಮಹಿಳೆಯರು!
ಪ್ರಶಸ್ತಿ ಪುರಸ್ಕೃತರಲ್ಲಿ ಮಹಿಳೆಯರಿಗೆ ಸಿಂಹಪಾಲು ಹೋಗಿದೆ. ಒಟ್ಟು 90 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 16 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ವಿದೇಶಿಗರ ವರ್ಗದಲ್ಲಿ 6 ಅನಿವಾಸಿ ಭಾರತೀಯರಿದ್ದಾರೆ.
2026 ಪದ್ಮ ಪ್ರಶಸ್ತಿ ಪಡೆದ 8 ಕನ್ನಡಿಗರು :
ಅಂಕೇಗೌಡ – ಮಂಡ್ಯ
ವೈದ್ಯ ಡಾ ಸುರೇಶ್ ಹನಗವಾಡಿ – ದಾವಣಗೆರೆ
ಎಸ್‌ಜಿ ಸುಶೀಲಮ್ಮ – ಬೆಂಗಳೂರು
ಡಾ.ಪ್ರಭಾಕರ್ ಕೋರೆ – ಬೆಳಗಾವಿ
ಶಶಿಶೇಖರ ವೆಂಪತಿ – ಬೆಂಗಳೂರು
ಶುಭಾ ವೆಂಕಟೇಶ್ ಅಯ್ಯಂಗಾರ್ – ಬೆಂಗಳೂರು
ಟಿಟಿ ಜಗನ್ನಾಥ್ – ಬೆಂಗಳೂರು
ಶತಾವಧಾನಿ ಆರ್ ಗಣೇಶ್ – ಬೆಂಗಳೂರು
ಪದ್ಮ ಪ್ರಶಸ್ತಿಗಳ ಬಗ್ಗೆ :
ಪದ್ಮ ಪ್ರಶಸ್ತಿಗಳು ರಾಷ್ಟ್ರದ ಉನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದ್ದು, ಕಲೆ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ವೈದ್ಯಕೀಯ, ಸಮಾಜ ಸೇವೆ, ಕ್ರೀಡೆ, ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ.
1954ರಲ್ಲಿ ಆರಂಭಗೊಂಡ ಪದ್ಮ ಪ್ರಶಸ್ತಿಗಳಿಗೆ ಯಾವುದೇ ಜಾತಿ, ಧರ್ಮ, ಲಿಂಗ ಅಥವಾ ವೃತ್ತಿ ಬೇಧವಿಲ್ಲದೆ ಅರ್ಹತೆ ನೀಡಲಾಗುತ್ತದೆ. ಪ್ರಶಸ್ತಿಯೊಂದಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಹಣಕಾಸು ಬಹುಮಾನ ನೀಡಲಾಗುವುದಿಲ್ಲ.
ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರದಾನ ಮಾಡುತ್ತಾರೆ. ಪದ್ಮ ಪ್ರಶಸ್ತಿಗಳು ದೇಶದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಮಹತ್ವದ ವೇದಿಕೆಯಾಗಿ ಗುರುತಿಸಿಕೊಂಡಿವೆ.
(Read this also : ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳೇ ಏಕೆ ಧ್ವಜಾರೋಹಣ (unfurls) ನೆರವೇರಿಸುತ್ತಾರೆ..? )
✶ ಪದ್ಮ ಪ್ರಶಸ್ತಿಗಳ ವಿಭಾಗಗಳು
ಪದ್ಮ ವಿಭೂಷಣ :👉 ಅತೀ ವಿಶಿಷ್ಟ ಮತ್ತು ಅಪರೂಪದ ಸೇವೆಗೆ
ಪದ್ಮ ಭೂಷಣ : 👉 ಉನ್ನತ ಮಟ್ಟದ ವಿಶಿಷ್ಟ ಸೇವೆಗೆ
ಪದ್ಮ ಶ್ರೀ : 👉 ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆಗೆ
✶ ಯಾವ ಕ್ಷೇತ್ರಗಳಿಗೆ.. ?
ಕಲೆ ಮತ್ತು ಸಾಹಿತ್ಯ
ಶಿಕ್ಷಣ
ವಿಜ್ಞಾನ ಮತ್ತು ತಂತ್ರಜ್ಞಾನ
ವೈದ್ಯಕೀಯ
ಸಮಾಜ ಸೇವೆ
ಕ್ರೀಡೆ
ಸಾರ್ವಜನಿಕ ಸೇವೆ
ವಾಣಿಜ್ಯ ಮತ್ತು ಕೈಗಾರಿಕೆ
✶ ಆಯ್ಕೆ ಪ್ರಕ್ರಿಯೆ :
ಯಾರಾದರೂ ಯಾರನ್ನಾದರೂ ಶಿಫಾರಸು ಮಾಡಬಹುದು (Self-nomination ಕೂಡ ಸಾಧ್ಯ)
ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ ಸಮಿತಿ ಶಿಫಾರಸುಗಳನ್ನು ಪರಿಶೀಲಿಸುತ್ತದೆ
ಅಂತಿಮ ಅನುಮೋದನೆ ರಾಷ್ಟ್ರಪತಿಗಳಿಂದ
ಪ್ರದ್ಮ ಪ್ರಶಸ್ತಿಗಳ ಕುರಿತ ಮುಖ ಅಂಶಗಳು :
*ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಸೇರಿವೆ, ಇದನ್ನು ವಾರ್ಷಿಕವಾಗಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
*1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.
*ಕಲೆ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ಕ್ರೀಡೆ ಮತ್ತು ನಾಗರಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
*ಪ್ರಕಟಣೆ ದಿನ: ಪ್ರತಿವರ್ಷ ಗಣರಾಜ್ಯೋತ್ಸವ (ಜನವರಿ 26) ಸಂದರ್ಭದಲ್ಲಿ
*ಪ್ರಶಸ್ತಿ ಪ್ರದಾನ: ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡುತ್ತಾರೆ
*ಪದ್ಮ ಪ್ರಶಸ್ತಿಗಳು ಭಾರತದಲ್ಲಿ ಭಾರತ ರತ್ನದ ನಂತರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು.
*ಪದ್ಮ ಪ್ರಶಸ್ತಿಗಳು ಜಾತಿ, ಧರ್ಮ, ವೃತ್ತಿ ಯಾವುದೇ ಬೇಧವಿಲ್ಲದೆ ನೀಡಲಾಗುತ್ತವೆ
*ಪ್ರಶಸ್ತಿಯೊಂದಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ
*ಇದಕ್ಕೆ ಯಾವುದೇ ಹಣಕಾಸು ಬಹುಮಾನ ಇರುವುದಿಲ್ಲ
*ಸರ್ಕಾರಿ ನೌಕರರು (PSU ಉದ್ಯೋಗಿಗಳು ಸೇರಿದಂತೆ) ಸಾಮಾನ್ಯವಾಗಿ * ಅರ್ಹರಾಗಿರುವುದಿಲ್ಲ, ಆದರೆ ವೈದ್ಯರು ಮತ್ತು ವಿಜ್ಞಾನಿಗಳು ಹೊರತಾಗಿದ್ದಾರೆ.
*ಪದ್ಮ ಪ್ರಶಸ್ತಿಯನ್ನು ಹೆಸರಿನ ಮುಂದಾಗಲಿ, ಹಿಂದೆ ಆಗಲಿ ಬಳಸಲು ಅನುಮತಿ ಇಲ್ಲ. ಪ್ರಶಸ್ತಿ * ಪಡೆದವರನ್ನು “ಪದ್ಮಶ್ರೀ”, “ಪದ್ಮಭೂಷಣ” ಎಂದು ಅಧಿಕೃತವಾಗಿ ಕರೆಯಲು * ಅವಕಾಶವಿಲ್ಲಆದರೆ ಸಾಮಾಜಿಕವಾಗಿ ಬಳಸುವುದು ಸಾಮಾನ್ಯ
*1978–1980 ಅವಧಿಯಲ್ಲಿ ಪದ್ಮ ಪ್ರಶಸ್ತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು, ನಂತರ ಪುನರಾರಂಭಗೊಂಡವು
*ವಿದೇಶಿ ನಾಗರಿಕರು, NRIಗಳು, OCIಗಳು ಕೂಡ ಪದ್ಮ ಪ್ರಶಸ್ತಿಗೆ ಅರ್ಹರು.
2026ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ
| ಪದ್ಮವಿಭೂಷಣ ಪ್ರಶಸ್ತಿ ಪಡೆದವರ ಪಟ್ಟಿ | ||
| ಹೆಸರು | ಕ್ಷೇತ್ರ | ರಾಜ್ಯ / ದೇಶ |
| ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಕೆ. ಟಿ. ಥಾಮಸ್ | ಸಾರ್ವಜನಿಕ ವ್ಯವಹಾರಗಳು | ಕೇರಳ |
| ಎನ್. ರಾಜಮ್ | ಕಲೆ | ಉತ್ತರ ಪ್ರದೇಶ |
| ಪಿ. ನಾರಾಯಣನ್ | ಸಾಹಿತ್ಯ ಮತ್ತು ಶಿಕ್ಷಣ | ಕೇರಳ |
| ವಿ. ಎಸ್. ಅಚ್ಯುತಾನಂದನ್ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಕೇರಳ |
| ಪದ್ಮಭೂಷಣ ಪಡೆದವರ ಪಟ್ಟಿ | ||
| ಹೆಸರು | ಕ್ಷೇತ್ರ | ರಾಜ್ಯ / ದೇಶ |
| ಅಲ್ಕಾ ಯಾಗ್ನಿಕ್ | ಕಲೆ | ಮಹಾರಾಷ್ಟ್ರ |
| ಭಗತ್ ಸಿಂಗ್ ಕೋಶಿಯಾರಿ | ಸಾರ್ವಜನಿಕ ವ್ಯವಹಾರಗಳು | ಉತ್ತರಾಖಂಡ |
| ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ | ವೈದ್ಯಕೀಯ | ತಮಿಳುನಾಡು |
| ಮಮ್ಮುಟ್ಟಿ | ಕಲೆ | ಕೇರಳ |
| ಡಾ. ನೋರಿ ದತ್ತಾತ್ರೇಯಡು | ವೈದ್ಯಕೀಯ | ಅಮೇರಿಕಾ (USA) |
| ಪಿಯೂಷ್ ಪಾಂಡೆ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಎಸ್. ಕೆ. ಎಂ. ಮೈಲಾನಂದನ್ | ಸಮಾಜ ಸೇವೆ | ತಮಿಳುನಾಡು |
| ಶತಾವಧಾನಿ ಆರ್. ಗಣೇಶ್ | ಕಲೆ | ಕರ್ನಾಟಕ |
| ಶಿಬು ಸೊರೆನ್ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಜಾರ್ಖಂಡ್ |
| ಉದಯ್ ಕೋಟಕ್ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
| ವಿ. ಕೆ. ಮಲ್ಹೋತ್ರಾ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ದೆಹಲಿ |
| ವೆಲ್ಲಪ್ಪಳ್ಳಿ ನಟೇಸನ್ | ಸಾರ್ವಜನಿಕ ವ್ಯವಹಾರಗಳು | ಕೇರಳ |
| ವಿಜಯ ಅಮೃತ್ರಾಜ್ | ಕ್ರೀಡೆ | ಅಮೇರಿಕಾ (USA) |
| ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕರು | ||
| ಹೆಸರು | ಕ್ಷೇತ್ರ | ರಾಜ್ಯ / ದೇಶ |
| ಎ. ಇ. ಮುತ್ತುನಾಯಗಮ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಕೇರಳ |
| ಅನಿಲ್ ಕುಮಾರ್ ರಸ್ತೋಗಿ | ಕಲೆ | ಉತ್ತರ ಪ್ರದೇಶ |
| ಅಂಕೇಗೌಡ ಎಂ. | ಸಮಾಜ ಸೇವೆ | ಕರ್ನಾಟಕ |
| ಆರ್ಮಿಡಾ ಫರ್ನಾಂಡಿಸ್ | ವೈದ್ಯಕೀಯ | ಮಹಾರಾಷ್ಟ್ರ |
| ಅರವಿಂದ್ ವೈದ್ಯ | ಕಲೆ | ಗುಜರಾತ್ |
| ಅಶೋಕ್ ಖಾಡೆ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
| ಅಶೋಕ್ ಕುಮಾರ್ ಸಿಂಗ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಉತ್ತರ ಪ್ರದೇಶ |
| ಅಶೋಕ್ ಕುಮಾರ್ ಹಲ್ದಾರ್ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ಬಲದೇವ್ ಸಿಂಗ್ | ಕ್ರೀಡೆ | ಪಂಜಾಬ್ |
| ಭಗವಾನ್‌ದಾಸ್ ರೈಕ್ವಾರ್ | ಕ್ರೀಡೆ | ಮಧ್ಯಪ್ರದೇಶ |
| ಭರತ್ ಸಿಂಗ್ ಭಾರತಿ | ಕಲೆ | ಬಿಹಾರ |
| ಭಿಕ್ಯಾ ಲಡಕ್ಯಾ ದಿಂಡಾ | ಕಲೆ | ಮಹಾರಾಷ್ಟ್ರ |
| ವಿಶ್ವ ಬಂಧು (ಮರಣೋತ್ತರ) | ಕಲೆ | ಬಿಹಾರ |
| ಬ್ರಿಜ್ ಲಾಲ್ ಭಟ್ | ಸಮಾಜ ಸೇವೆ | ಜಮ್ಮು ಮತ್ತು ಕಾಶ್ಮೀರ |
| ಬುದ್ಧ ರಶ್ಮಿ ಮಣಿ | ಇತರೆ – ಪುರಾತತ್ವ | ಉತ್ತರ ಪ್ರದೇಶ |
| ಡಾ. ಬುಧ್ರಿ ಟಾಟಿ | ಸಮಾಜ ಸೇವೆ | ಛತ್ತೀಸ್ಗಢ |
| ಚಂದ್ರಮೌಳಿ ಗಡ್ಡಮನುಗು | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತೆಲಂಗಾಣ |
| ಚರಣ್ ಹೆಂಬ್ರಮ್ | ಸಾಹಿತ್ಯ ಮತ್ತು ಶಿಕ್ಷಣ | ಒಡಿಶಾ |
| ಚಿರಂಜಿ ಲಾಲ್ ಯಾದವ್ | ಕಲೆ | ಉತ್ತರ ಪ್ರದೇಶ |
| ದೀಪಿಕಾ ರೆಡ್ಡಿ | ಕಲೆ | ತೆಲಂಗಾಣ |
| ಧಾರ್ಮಿಕ್‌ಲಾಲ್ ಚುನಿಲಾಲ್ ಪಾಂಡ್ಯ | ಕಲೆ | ಗುಜರಾತ್ |
| ಗಡ್ಡೆ ಬಾಬು ರಾಜೇಂದ್ರ ಪ್ರಸಾದ್ | ಕಲೆ | ಆಂಧ್ರಪ್ರದೇಶ |
| ಗಫ್ರುದ್ದೀನ್ ಮೇವಾಟಿ ಜೋಗಿ | ಕಲೆ | ರಾಜಸ್ಥಾನ |
| ಗಂಭೀರ್ ಸಿಂಗ್ ಯೋನ್ಜೋನ್ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ) | ಕಲೆ | ಆಂಧ್ರಪ್ರದೇಶ |
| ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ರಂಜನಿ ಬಾಲಸುಬ್ರಮಣಿಯನ್ (ಜೋಡಿ) | ಕಲೆ | ತಮಿಳುನಾಡು |
| ಗೋಪಾಲ್ ಜಿ ತ್ರಿವೇದಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಬಿಹಾರ |
| ಗುಡೂರು ವೆಂಕಟ್ ರಾವ್ | ವೈದ್ಯಕೀಯ | ತೆಲಂಗಾಣ |
| ಹೆಚ್. ವಿ. ಹಂಡೆ | ವೈದ್ಯಕೀಯ | ತಮಿಳುನಾಡು |
| ಹ್ಯಾಲಿ ವಾರ್ | ಸಮಾಜ ಸೇವೆ | ಮೇಘಾಲಯ |
| ಹರಿ ಮಾಧಬ್ ಮುಖೋಪಾಧ್ಯಾಯ (ಮರಣೋತ್ತರ) | ಕಲೆ | ಪಶ್ಚಿಮ ಬಂಗಾಳ |
| ಹರಿಚರಣ್ ಸೈಕಿಯಾ | ಕಲೆ | ಅಸ್ಸಾಂ |
| ಹರ್ಮನ್‌ಪ್ರೀತ್ ಕೌರ್ ಭುಲ್ಲರ್ | ಕ್ರೀಡೆ | ಪಂಜಾಬ್ |
| ಇಂದರ್‌ಜಿತ್ ಸಿಂಗ್ ಸಿಧು | ಸಮಾಜ ಸೇವೆ | ಚಂಡೀಗಢ |
| ಜನಾರ್ದನ್ ಬಾಪುರಾವ್ ಬೋಥೆ | ಸಮಾಜ ಸೇವೆ | ಮಹಾರಾಷ್ಟ್ರ |
| ಜೋಗೇಶ್ ದೌರಿ | ಇತರೆ – ಕೃಷಿ | ಅಸ್ಸಾಂ |
| ಜುಜರ್ ವಾಸಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಮಹಾರಾಷ್ಟ್ರ |
| ಜ್ಯೋತಿಷ್ ದೇಬ್ನಾಥ್ | ಕಲೆ | ಪಶ್ಚಿಮ ಬಂಗಾಳ |
| ಕೆ. ಪಜನಿವೇಲ್ | ಕ್ರೀಡೆ | ಪುದುಚೇರಿ |
| ಕೆ. ರಾಮಸಾಮಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತಮಿಳುನಾಡು |
| ಕೆ. ವಿಜಯ್ ಕುಮಾರ್ | ನಾಗರಿಕ ಸೇವೆ | ತಮಿಳುನಾಡು |
| ಕಬೀಂದ್ರ ಪುರಕಾಯಸ್ಥ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಅಸ್ಸಾಂ |
| ಕೈಲಾಶ್ ಚಂದ್ರ ಪಂತ್ | ಸಾಹಿತ್ಯ ಮತ್ತು ಶಿಕ್ಷಣ | ಮಧ್ಯಪ್ರದೇಶ |
| ಕಲಾಮಂಡಲಂ ವಿಮಲಾ ಮೆನನ್ | ಕಲೆ | ಕೇರಳ |
| ಕೇವಲ್ ಕಿಶನ್ ಥಕ್ರಾಲ್ | ವೈದ್ಯಕೀಯ | ಉತ್ತರ ಪ್ರದೇಶ |
| ಖೇಮ್ ರಾಜ್ ಸುಂದ್ರಿಯಾಲ್ | ಕಲೆ | ಹರಿಯಾಣ |
| ಕೊಲ್ಲಕಲ್ ದೇವಕಿ ಅಮ್ಮ ಜಿ. | ಸಮಾಜ ಸೇವೆ | ಕೇರಳ |
| ಕೃಷ್ಣಮೂರ್ತಿ ಬಾಲಸುಬ್ರಮಣಿಯನ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತೆಲಂಗಾಣ |
| ಕುಮಾರ್ ಬೋಸ್ | ಕಲೆ | ಪಶ್ಚಿಮ ಬಂಗಾಳ |
| ಕುಮಾರಸಾಮಿ ತಂಗರಾಜ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತೆಲಂಗಾಣ |
| ಪ್ರೊ. (ಡಾ.) ಲಾರ್ಸ್-ಕ್ರಿಶ್ಚಿಯನ್ ಕೋಚ್ | ಕಲೆ | ಜರ್ಮನಿ |
| ಲಿಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ | ಸಾಹಿತ್ಯ ಮತ್ತು ಶಿಕ್ಷಣ | ರಷ್ಯಾ |
| ಮಾಧವನ್ ರಂಗನಾಥನ್ | ಕಲೆ | ಮಹಾರಾಷ್ಟ್ರ |
| ಮಾಗಂಟಿ ಮುರಳಿ ಮೋಹನ್ | ಕಲೆ | ಆಂಧ್ರಪ್ರದೇಶ |
| ಮಹೇಂದ್ರ ಕುಮಾರ್ ಮಿಶ್ರಾ | ಸಾಹಿತ್ಯ ಮತ್ತು ಶಿಕ್ಷಣ | ಒಡಿಶಾ |
| ಮಹೇಂದ್ರ ನಾಥ್ ರಾಯ್ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ಮಾಮಿಡಾಲ ಜಗದೀಶ್ ಕುಮಾರ್ | ಸಾಹಿತ್ಯ ಮತ್ತು ಶಿಕ್ಷಣ | ದೆಹಲಿ |
| ಮಂಗಳಾ ಕಪೂರ್ | ಸಾಹಿತ್ಯ ಮತ್ತು ಶಿಕ್ಷಣ | ಉತ್ತರ ಪ್ರದೇಶ |
| ಮೀರ್ ಹಾಜಿಭಾಯ್ ಕಸಂಭಾಯ್ | ಕಲೆ | ಗುಜರಾತ್ |
| ಮೋಹನ್ ನಾಗರ್ | ಸಮಾಜ ಸೇವೆ | ಮಧ್ಯಪ್ರದೇಶ |
| ನಾರಾಯಣ ವ್ಯಾಸ್ | ಇತರೆ – ಪುರಾತತ್ವ | ಮಧ್ಯಪ್ರದೇಶ |
| ನರೇಶ್ ಚಂದ್ರ ದೇವ್ ವರ್ಮಾ | ಸಾಹಿತ್ಯ ಮತ್ತು ಶಿಕ್ಷಣ | ತ್ರಿಪುರಾ |
| ನೀಲೇಶ್ ವಿನೋದ್‌ಚಂದ್ರ ಮಾಂಡ್ಲೆವಾಲಾ | ಸಮಾಜ ಸೇವೆ | ಗುಜರಾತ್ |
| ನೂರುದ್ದೀನ್ ಅಹ್ಮದ್ | ಕಲೆ | ಅಸ್ಸಾಂ |
| ಒಥವಾಲ್ ತಿರುತಣಿ ಸ್ವಾಮಿನಾಥನ್ | ಕಲೆ | ತಮಿಳುನಾಡು |
| ಡಾ. ಪದ್ಮ ಗುರ್ಮೆಟ್ | ವೈದ್ಯಕೀಯ | ಲಡಾಖ್ |
| ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ | ವೈದ್ಯಕೀಯ | ತೆಲಂಗಾಣ |
| ಪೋಖಿಲಾ ಲೆಕ್ತೆಪಿ | ಕಲೆ | ಅಸ್ಸಾಂ |
| ಡಾ. ಪ್ರಭಾಕರ್ ಬಸವಪ್ರಭು ಕೋರೆ | ಸಾಹಿತ್ಯ ಮತ್ತು ಶಿಕ್ಷಣ | ಕರ್ನಾಟಕ |
| ಪ್ರತೀಕ್ ಶರ್ಮಾ | ವೈದ್ಯಕೀಯ | ಅಮೇರಿಕಾ (USA) |
| ಪ್ರವೀಣ್ ಕುಮಾರ್ | ಕ್ರೀಡೆ | ಉತ್ತರ ಪ್ರದೇಶ |
| ಪ್ರೇಮ್ ಲಾಲ್ ಗೌತಮ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಹಿಮಾಚಲ ಪ್ರದೇಶ |
| ಪ್ರಸೇನ್‌ಜಿತ್ ಚಟರ್ಜಿ | ಕಲೆ | ಪಶ್ಚಿಮ ಬಂಗಾಳ |
| ಡಾ. ಪುಣ್ಯಮೂರ್ತಿ ನಟೇಸನ್ | ವೈದ್ಯಕೀಯ | ತಮಿಳುನಾಡು |
| ಆರ್. ಕೃಷ್ಣನ್ (ಮರಣೋತ್ತರ) | ಕಲೆ | ತಮಿಳುನಾಡು |
| ಆರ್. ವಿ. ಎಸ್. ಮಣಿ | ನಾಗರಿಕ ಸೇವೆ | ದೆಹಲಿ |
| ರಬಿಲಾಲ್ ಟುಡು | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ರಘುಪತ್ ಸಿಂಗ್ (ಮರಣೋತ್ತರ) | ಇತರೆ – ಕೃಷಿ | ಉತ್ತರ ಪ್ರದೇಶ |
| ರಘುವೀರ್ ತುಕಾರಾಮ್ ಖೇಡ್ಕರ್ | ಕಲೆ | ಮಹಾರಾಷ್ಟ್ರ |
| ರಾಜಸ್ತಪತಿ ಕಾಳಿಯಪ್ಪ ಗೌಂಡರ್ | ಕಲೆ | ತಮಿಳುನಾಡು |
| ರಾಜೇಂದ್ರ ಪ್ರಸಾದ್ | ವೈದ್ಯಕೀಯ | ಉತ್ತರ ಪ್ರದೇಶ |
| ರಾಮ ರೆಡ್ಡಿ ಮಾಮಿಡಿ (ಮರಣೋತ್ತರ) | ಇತರೆ – ಪಶುಸಂಗೋಪನೆ | ತೆಲಂಗಾಣ |
| ರಾಮಮೂರ್ತಿ ಶ್ರೀಧರ್ | ಇತರೆ – ರೇಡಿಯೋ ಪ್ರಸಾರ | ದೆಹಲಿ |
| ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ (ಜೋಡಿ) | ವೈದ್ಯಕೀಯ | ಛತ್ತೀಸ್ಗಢ |
| ರತಿಲಾಲ್ ಬೋರಿಸಾಗರ್ | ಸಾಹಿತ್ಯ ಮತ್ತು ಶಿಕ್ಷಣ | ಗುಜರಾತ್ |
| ರೋಹಿತ್ ಶರ್ಮಾ | ಕ್ರೀಡೆ | ಮಹಾರಾಷ್ಟ್ರ |
| ಎಸ್. ಜಿ. ಸುಶೀಲಮ್ಮ | ಸಮಾಜ ಸೇವೆ | ಕರ್ನಾಟಕ |
| ಸಂಗ್ಯುಸಾಂಗ್ ಎಸ್. ಪೋಂಜೆನರ್ | ಕಲೆ | ನಾಗಾಲ್ಯಾಂಡ್ |
| ಸಂತ ನಿರಂಜನ್ ದಾಸ್ | ಇತರೆ – ಆಧ್ಯಾತ್ಮಿಕತೆ | ಪಂಜಾಬ್ |
| ಶರತ್ ಕುಮಾರ್ ಪಾತ್ರ | ಕಲೆ | ಒಡಿಶಾ |
| ಸರೋಜ ಮಂಡಲ್ | ವೈದ್ಯಕೀಯ | ಪಶ್ಚಿಮ ಬಂಗಾಳ |
| ಸತೀಶ್ ಶಾ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಸತ್ಯನಾರಾಯಣ ನುವಾಲ್ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
| ಸವಿತಾ ಪುನಿಯಾ | ಕ್ರೀಡೆ | ಹರಿಯಾಣ |
| ಪ್ರೊ. ಶಫಿ ಶೌಕ್ | ಸಾಹಿತ್ಯ ಮತ್ತು ಶಿಕ್ಷಣ | ಜಮ್ಮು ಮತ್ತು ಕಾಶ್ಮೀರ |
| ಶಶಿ ಶೇಖರ್ ವೆಂಪತಿ | ಸಾಹಿತ್ಯ ಮತ್ತು ಶಿಕ್ಷಣ | ಕರ್ನಾಟಕ |
| ಶ್ರೀರಂಗ ದೇವಾಬಾ ಲಾಡ್ | ಇತರೆ – ಕೃಷಿ | ಮಹಾರಾಷ್ಟ್ರ |
| ಶುಭಾ ವೆಂಕಟೇಶ ಅಯ್ಯಂಗಾರ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಕರ್ನಾಟಕ |
| ಶ್ಯಾಮ್ ಸುಂದರ್ | ವೈದ್ಯಕೀಯ | ಉತ್ತರ ಪ್ರದೇಶ |
| ಸಿಮಾಂಚಲ್ ಪಾತ್ರೋ | ಕಲೆ | ಒಡಿಶಾ |
| ಶಿವಶಂಕರಿ | ಸಾಹಿತ್ಯ ಮತ್ತು ಶಿಕ್ಷಣ | ತಮಿಳುನಾಡು |
| ಡಾ. ಸುರೇಶ್ ಹನಗವಾಡಿ | ವೈದ್ಯಕೀಯ | ಕರ್ನಾಟಕ |
| ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್ | ಸಮಾಜ ಸೇವೆ | ರಾಜಸ್ಥಾನ |
| ಟಿ. ಟಿ. ಜಗನ್ನಾಥನ್ (ಮರಣೋತ್ತರ) | ವಾಣಿಜ್ಯ ಮತ್ತು ಕೈಗಾರಿಕೆ | ಕರ್ನಾಟಕ |
| ತಗಾ ರಾಮ್ ಭೀಲ್ | ಕಲೆ | ರಾಜಸ್ಥಾನ |
| ತರುಣ್ ಭಟ್ಟಾಚಾರ್ಯ | ಕಲೆ | ಪಶ್ಚಿಮ ಬಂಗಾಳ |
| ಟೆಚಿ ಗುಬಿನ್ | ಸಮಾಜ ಸೇವೆ | ಅರುಣಾಚಲ ಪ್ರದೇಶ |
| ತಿರುವಾರೂರ್ ಭಕ್ತವತ್ಸಲಂ | ಕಲೆ | ತಮಿಳುನಾಡು |
| ತೃಪ್ತಿ ಮುಖರ್ಜಿ | ಕಲೆ | ಪಶ್ಚಿಮ ಬಂಗಾಳ |
| ವೀಳಿನಾಥನ್ ಕಾಮಕೋಟಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತಮಿಳುನಾಡು |
| ವೆಂಪತಿ ಕುಟುಂಬ ಶಾಸ್ತ್ರಿ | ಸಾಹಿತ್ಯ ಮತ್ತು ಶಿಕ್ಷಣ | ಆಂಧ್ರಪ್ರದೇಶ |
| ವ್ಲಾಡಿಮಿರ್ ಮೆಸ್ಟ್‌ವಿರಿಶ್ವಿಲಿ (ಮರಣೋತ್ತರ) | ಕ್ರೀಡೆ | ಜಾರ್ಜಿಯಾ |
| ಯುವ್ನಾಮ್ ಜಾತ್ರಾ ಸಿಂಗ್ (ಮರಣೋತ್ತರ) | ಕಲೆ | ಮಣಿಪುರ |


