ಇಂದಿನ ಪ್ರಚಲಿತ ವಿದ್ಯಮಾನಗಳು (27-04-2026)
Current AffairsLatest Updates

ಇಂದಿನ ಪ್ರಚಲಿತ ವಿದ್ಯಮಾನಗಳು (27-04-2026)

Share With Friends

ರಾಷ್ಟ್ರೀಯ । National

✶ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (FTA): ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸರಕು ಮತ್ತು ಸೇವೆಗಳ ಸುಂಕ ರಹಿತ ವ್ಯಾಪಾರಕ್ಕೆ ಉತ್ತೇಜನ ನೀಡಲು ಇಂದು ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

✶ ಭಾರತ್ ಟ್ಯಾಕ್ಸಿ (Bharat Taxi) ಬಿಡುಗಡೆ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮುಂಬೈನಲ್ಲಿ ಭಾರತದ ಮೊದಲ ಸಹಕಾರಿ ಮಾದರಿಯ ರೈಡ್-ಹೇಲಿಂಗ್ ಅಪ್ಲಿಕೇಶನ್ ‘ಭಾರತ್ ಟ್ಯಾಕ್ಸಿ’ಗೆ ಚಾಲನೆ ನೀಡಿದ್ದಾರೆ.

✶ ಆಂಧ್ರ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ : Justice Lisa Gill ಆಂಧ್ರ ಪ್ರದೇಶ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಜಯವಾಡದಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ S. Abdul Nazeer ಅವರು ಪ್ರಮಾಣವಚನ ಬೋಧಿಸಿದರು. ಈ ನೇಮಕಾತಿ ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಮಹಿಳೆಯರ ಪ್ರತಿನಿಧಿತ್ವ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ. ಮುಖ್ಯಮಂತ್ರಿ N. Chandrababu Naidu ಅವರು ಅಭಿನಂದನೆ ಸಲ್ಲಿಸಿದರು. More Details

✶ ಸಿಕ್ಕಿಂಗೆ ಪ್ರಧಾನಿ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿಕಿಂಗೆ ಭೇಟಿ ನೀಡುತ್ತಿದ್ದು, ಗಡಿ ಸಂಪರ್ಕ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

✶ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯ: ಕರ್ನಾಟಕದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅರಿವು ಹೆಚ್ಚಿಸಲು ಪ್ರತಿದಿನ 10 ನಿಮಿಷ ಕನ್ನಡ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ.

✶ ರಘು ರಾಯ್ ವಿಧಿವಶ: ಭಾರತದ ಖ್ಯಾತ ಛಾಯಾಗ್ರಾಹಕ ರಘು ರಾಯ್ (83) ಅವರು ಇಂದು ವಿಧಿವಶರಾಗಿದ್ದಾರೆ. ಅವರು ಸ್ವತಂತ್ರ ಭಾರತದ ಪ್ರಮುಖ ಘಟನೆಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.

ಬ್ರಹ್ಮಪುರ ರೈಲು ನಿಲ್ದಾಣದ ಮೇಲ್ದರ್ಜೆ: ಒಡಿಶಾದ ಐತಿಹಾಸಿಕ ಬ್ರಹ್ಮಪುರ ರೈಲು ನಿಲ್ದಾಣವನ್ನು ಆಧುನೀಕರಿಸಲು ₹300 ಕೋಟಿ ಮೊತ್ತದ ಯೋಜನೆಯನ್ನು ಭಾರತೀಯ ರೈಲ್ವೆ ಅನುಮೋದಿಸಿದೆ.

✶ ಸೆಮಿಕಂಡಕ್ಟರ್ ಮಿಷನ್ 2.0: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0’ (ISM) ಅನುಷ್ಠಾನದ ಕುರಿತು ಇಂದು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

✶ WWF ಗೌರವ : ಕೇರಳದಲ್ಲಿ ಆಕ್ರಮಣಕಾರಿ ಸಸ್ಯಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ ಸಸ್ಯಶಾಸ್ತ್ರಜ್ಞ N. Alim Yusuf ಅವರಿಗೆ World Wide Fund for Nature ವತಿಯಿಂದ ಗೌರವ ಲಭಿಸಿದೆ. ಈ ಆಪ್ ಸುಮಾರು 100ಕ್ಕೂ ಹೆಚ್ಚು ಆಕ್ರಮಣಕಾರಿ ಸಸ್ಯ ಜಾತಿಗಳನ್ನು ಗುರುತಿಸಲು ಸಹಾಯಮಾಡಿ, ಜೈವವೈವಿಧ್ಯ ಸಂರಕ್ಷಣೆಯಲ್ಲಿ ತಂತ್ರಜ್ಞಾನ ಬಳಕೆಗೆ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.


ಅಂತರರಾಷ್ಟ್ರೀಯ । International

ಮಧ್ಯಪೂರ್ವ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ವಿಶೇಷವಾಗಿ ಗಾಜಾ ಪಟ್ಟೆ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರವಾಗಿದೆ. ಮಾನವೀಯ ನೆರವು ಬಗ್ಗೆ ಜಾಗತಿಕ ಒತ್ತಡ ಹೆಚ್ಚಾಗಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆ ಪರಿಸ್ಥಿತಿ ನಿಯಂತ್ರಣಕ್ಕೆ ತುರ್ತು ಸಭೆ ನಡೆಸಿದೆ.

✶ ಚೆರ್ನೋಬಿಲ್ ದುರಂತದ ನೆನಪು: ಏಪ್ರಿಲ್ 26 ರಂದು ಸಂಭವಿಸಿದ ವಿಶ್ವದ ಅತಿ ದೊಡ್ಡ ಪರಮಾಣು ದುರಂತದ ಪರಿಣಾಮಗಳ ಕುರಿತು ಇಂದು ಜಾಗತಿಕವಾಗಿ ಚರ್ಚೆಗಳು ನಡೆಯುತ್ತಿವೆ.

✶ ಯುನೆಸ್ಕೋ ಚೇರ್ (UNESCO Chair): ಲಿಂಗ ಒಳಗೊಳ್ಳುವಿಕೆ ಮತ್ತು ಕೌಶಲ್ಯ ವರ್ಧನೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ಯುನೆಸ್ಕೋ ಚೇರ್ ಅನ್ನು ಸ್ಥಾಪಿಸಲಾಗಿದೆ.

✶ ಚಾರ್ಲ್ಸ್ III ಭೇಟಿ: ಈ ಭೀತಿಯ ನಡುವೆಯೂ ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಅವರ 4 ದಿನಗಳ ಅಮೆರಿಕ ಪ್ರವಾಸ ಇಂದಿನಿಂದ ನಿಗದಿಯಂತೆ ಆರಂಭವಾಗಲಿದೆ.

✶ ಹೊರ್ಮುಜ್ ಜಲಸಂಧಿ (Strait of Hormuz): ಈ ಜಲಸಂಧಿಯನ್ನು ಪುನಃ ತೆರೆಯಲು ಇರಾನ್ ಸರ್ಕಾರ ಅಮೆರಿಕಕ್ಕೆ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದೆ ಎಂದು ವರದಿಯಾಗಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಯುದ್ಧ ನಿಲ್ಲಿಸುವ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲಿದ್ದಾರೆ.

✶ ಸಿಯೆರಾ ಲಿಯೋನ್ (Sierra Leone): ಪಶ್ಚಿಮ ಆಫ್ರಿಕಾದ ಈ ರಾಷ್ಟ್ರವು ಇಂದು ತನ್ನ 65ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದೆ.

ಡಸ್ಟ್ಲಿಕ್ (Dustlik) ಯುದ್ಧಾ ಭ್ಯಾಸಕ್ಕೆ ತೆರೆ : ಭಾರತ–ಉಜ್ಬೆಕಿಸ್ತಾನ್ ಸಂಯುಕ್ತ ಸೇನಾ ಅಭ್ಯಾಸ (Joint Military Exercise) ‘ಡಸ್ಟ್ಲಿಕ್’ 7ನೇ ಆವೃತ್ತಿ ಉಜ್ಬೆಕಿಸ್ತಾನ(Uzbekistan)ದ ನಮಂಗನ್‌ನಲ್ಲಿ ಯಶಸ್ವಿಯಾಗಿ ಅಂತ್ಯಗೊಂಡಿದೆ. ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ, ಸಮನ್ವಯ ಹಾಗೂ ತಂತ್ರಜ್ಞಾನ ಕೌಶಲ್ಯಗಳನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಎರಡೂ ದೇಶಗಳಿಂದ ಸಮಾನ ಪ್ರಮಾಣದ ಸೈನಿಕರು ಭಾಗವಹಿಸಿದರು.


ಕ್ರೀಡೆ । Sports

ಐಪಿಎಲ್ 2026 : ಪಂದ್ಯಗಳು ರೋಚಕ ಹಂತ ತಲುಪಿವೆ. ವಿರಾಟ್ ಕೊಹ್ಲಿ ಮತ್ತೊಂದು ಅರ್ಧಶತಕದೊಂದಿಗೆ ತನ್ನ ಫಾರ್ಮ್ ಮುಂದುವರೆಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಪ್ರವೇಶದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.

ಲಂಡನ್ ಮ್ಯಾರಾಥಾನ್ ದಾಖಲೆ: ಕೀನ್ಯಾದ ಸೆಬಾಸ್ಟಿಯನ್ ಸಾವೆ ಅವರು ಇಂದು ಇತಿಹಾಸ ನಿರ್ಮಿಸಿದ್ದಾರೆ. ಅವರು ಲಂಡನ್ ಮ್ಯಾರಾಥಾನ್ ಅನ್ನು 1 ಗಂಟೆ 59 ನಿಮಿಷ 30 ಸೆಕೆಂಡ್‌ಗಳಲ್ಲಿ ಪೂರೈಸುವ ಮೂಲಕ ಸ್ಪರ್ಧಾತ್ಮಕ ಮ್ಯಾರಾಥಾನ್‌ನಲ್ಲಿ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ ವಿಶ್ವದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ: ಐಪಿಎಲ್ ಇತಿಹಾಸದಲ್ಲಿ 800 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ.

ಇಂಡಿಯನ್ ಎಥ್ಲೆಟಿಕ್ಸ್ ಸೀರೀಸ್: ರಾಂಚಿಯಲ್ಲಿ ನಡೆದ ಇಂಡಿಯನ್ ಎಥ್ಲೆಟಿಕ್ಸ್ ಸೀರೀಸ್-4 ರಲ್ಲಿ ಸಂದೀಪ್ ಪಾಲ್ (5000 ಮೀ) ಮತ್ತು ಮಹೇಂದ್ರ ಸಾಂತಾ (200 ಮೀ) ಚಿನ್ನದ ಪದಕ ಗೆದ್ದಿದ್ದಾರೆ.

ಮ್ಯಾರಥಾನ್ ದಾಖಲೆ : Sabastian Sawe ಅವರು London Marathon 2026 ನಲ್ಲಿ 1:59:30 ಸಮಯದಲ್ಲಿ ಓಡಿ, ಅಧಿಕೃತ ಮ್ಯಾರಥಾನ್ ಅನ್ನು ಎರಡು ಗಂಟೆಗಳೊಳಗೆ ಪೂರ್ಣಗೊಳಿಸಿದ ಪ್ರಥಮ ಅಥ್ಲೀಟ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಹೊಸ ವಿಶ್ವದಾಖಲೆ ಸ್ಥಾಪನೆಯಾಗಿದೆ. ಈ ಹಿಂದೆ Kelvin Kiptum ಹೊಂದಿದ್ದ 2:00:35 ದಾಖಲೆಯನ್ನು ಅವರು ಮೀರಿಸಿದ್ದಾರೆ. ಸ್ಪರ್ಧೆಯಲ್ಲಿ Yomif Kejelcha ಎರಡನೇ ಸ್ಥಾನ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ Tigst Assefa ಪ್ರಶಸ್ತಿಯನ್ನು ಕಾಯ್ದುಕೊಂಡರು. ಈ ಸಾಧನೆಯನ್ನು Roger Bannister ಅವರ 4 ನಿಮಿಷ ಮೈಲ್ ಮತ್ತು Usain Bolt ಅವರ 100 ಮೀ. ವಿಶ್ವದಾಖಲೆಯಂತಹ ಐತಿಹಾಸಿಕ ಕ್ಷಣಗಳಿಗೆ ಹೋಲಿಸಲಾಗಿದೆ.

✶ISSF ಜೂನಿಯರ್ ವರ್ಲ್ಡ್ ಕಪ್ 2026-ಭಾರತಕ್ಕೆ ಅಗ್ರಸ್ಥಾನ : ಕೈರೋದಲ್ಲಿ ನಡೆದ ISSF Junior World Cup 2026ನಲ್ಲಿ ಭಾರತ 16 ಪದಕಗಳನ್ನು (5 ಚಿನ್ನ, 6 ಬೆಳ್ಳಿ, 5 ಕಂಚು) ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. Hemant Burman 50 ಮೀ. ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು. ಟ್ರ್ಯಾಪ್ ಮಿಕ್ಸ್ಡ್ ತಂಡದಲ್ಲಿ Zuhair Khan ಮತ್ತು Addya Katyal ಜೋಡಿ ಕಂಚು ಪಡೆದರು.


ತಂತ್ರಜ್ಞಾನ ಮತ್ತು ವಿಜ್ಞಾನ । Tech & Science

AI ವೇದಿಕೆ ‘ಮಿಥೋಸ್’ (Mythos): ಕೃತಕ ಬುದ್ಧಿಮತ್ತೆ ವೇದಿಕೆಯಾದ ಮಿಥೋಸ್‌ನಿಂದ ಉಂಟಾಗುವ ಅಪಾಯಗಳನ್ನು ಪರಿಶೀಲಿಸಲು ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಮಿನಿ ಐಸಿಯು ಮಾನದಂಡ: ಆಸ್ಪತ್ರೆಗಳಲ್ಲಿ ಐಸಿಯುಗಳಿಗೆ (ICU) ಸಂಬಂಧಿಸಿದಂತೆ ಕನಿಷ್ಠ ಮೂಲಸೌಕರ್ಯ ಮತ್ತು ಸಿಬ್ಬಂದಿ ಮಾನದಂಡಗಳನ್ನು ಸುಪ್ರೀಂ ಕೋರ್ಟ್ ಸಮಿತಿಯು ಇಂದು ನಿಗದಿಪಡಿಸಿದೆ.

ಸೈಬರ್ ಭದ್ರತೆ ಎಚ್ಚರಿಕೆ: ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ‘ಮಿಥೋಸ್’ (Mythos) ಎಐ ಪ್ಲಾಟ್‌ಫಾರ್ಮ್‌ನಿಂದ ಉಂಟಾಗಬಹುದಾದ ಸೈಬರ್ ಭದ್ರತಾ ಅಪಾಯಗಳ ಬಗ್ಗೆ ಜಾಗರೂಕರಾಗಿರುವಂತೆ CERT-In ಇಂದು ಎಚ್ಚರಿಕೆ ನೀಡಿದೆ.

✶ ಆನ್‌ಲೈನ್ ಕಂಟೆಂಟ್ ಬ್ಲಾಕಿಂಗ್: ಕಳೆದ ಒಂದು ವರ್ಷದಲ್ಲಿ ದೀಪ್‌ಫೇಕ್ (Deepfake) ಮತ್ತು ಆಕ್ಷೇಪಾರ್ಹ ಪೋಸ್ಟ್‌ಗಳ ವಿರುದ್ಧ ಸರ್ಕಾರವು ಬ್ಲಾಕಿಂಗ್ ಆದೇಶಗಳನ್ನು ಸುಮಾರು 24,000 ಕ್ಕೆ ದುಪ್ಪಟ್ಟುಗೊಳಿಸಿದೆ ಎಂಬ ವರದಿ ಇಂದು ಬಿಡುಗಡೆಯಾಗಿದೆ.

✶ ಸ್ಪೇಸ್‌ಎಕ್ಸ್ ಲಾಂಚ್: ಫಾಲ್ಕನ್ ಹೆವಿ ರಾಕೆಟ್ ಮೂಲಕ ViaSat-3 ಅಂತಿಮ ಉಪಗ್ರಹವನ್ನು ಉಡಾವಣೆ ಮಾಡಲು ಯೋಜನೆ.


ರಾಜಕೀಯ । Politics

ಆಮ್ ಆದ್ಮಿ ಪಾರ್ಟಿಯ (AAP) 7 ಸಂಸದರು ಬಿಜೆಪಿಗೆ ಸೇರ್ಪಡೆಯಾಗುವುದರೊಂದಿಗೆ ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟದ ಸಂಖ್ಯಾಬಲ 148 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ 113 ಕ್ಕೆ ತಲುಪಿದೆ.

✶ ಅರವಿಂದ್ ಕೇಜ್ರಿವಾಲ್ ಪತ್ರ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ಖುದ್ದಾಗಿ ಹಾಜರಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಾಕರಿಸಿದ್ದು, ಈ ಕುರಿತು ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾರೆ.

✶ ಬಂಗಾಳದಲ್ಲಿ ಕೇಂದ್ರ ಪಡೆ ನಿಯೋಜನೆ: ಪಶ್ಚಿಮ ಬಂಗಾಳದ ಚುನಾವಣೆಗಳು ಮುಗಿದ ನಂತರವೂ ಕನಿಷ್ಠ 7 ದಿನಗಳ ಕಾಲ ಕೇಂದ್ರ ಪಡೆಗಳು ರಾಜ್ಯದಲ್ಲಿಯೇ ಇರಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

✶ ರಾಜಕೀಯ ನಿವೃತ್ತಿ : Emmanuel Macron ಅವರು 2027ರಲ್ಲಿ ತಮ್ಮ ಎರಡನೇ ಅವಧಿ ಪೂರ್ಣಗೊಂಡ ಬಳಿಕ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. Cyprus ಭೇಟಿ ವೇಳೆ ಈ ಬಗ್ಗೆ ಸ್ಪಷ್ಟಪಡಿಸಿದ ಅವರು, ಅಧಿಕಾರ ತ್ಯಜಿಸಿದ ನಂತರ ಸಾರ್ವಜನಿಕ ಜೀವನಕ್ಕೆ ಮರಳುವುದಿಲ್ಲ ಎಂದರು. ಇದರಿಂದ ಅವರ ಭವಿಷ್ಯದ ರಾಜಕೀಯ ಮರಳುವಿಕೆ ಕುರಿತ ಊಹಾಪೋಹಗಳಿಗೆ ತೆರೆ ಬಿದ್ದಿದೆ.


ಆರ್ಥಿಕತೆ & ವ್ಯವಹಾರ | Economy & Business

ಸೆನ್ಸೆಕ್ಸ್ ಮತ್ತು ನಿಫ್ಟಿ 50 ಸ್ವಲ್ಪ ಏರಿಕೆ ಕಂಡಿದ್ದು, ಐಟಿ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿ ಖರೀದಿ ಹೆಚ್ಚಾಗಿದೆ. ಸ್ಟಾರ್ಟ್‌ಅಪ್ ವಲಯದಲ್ಲಿ ಹೂಡಿಕೆ ಚಟುವಟಿಕೆಗಳು ಮತ್ತೆ ವೇಗ ಪಡೆದುಕೊಂಡಿವೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಕಡಿಮೆಯಾಗುವ ಮುನ್ಸೂಚನೆಯಿಂದಾಗಿ ಇಂದು ಭಾರತೀಯ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಸೆನ್ಸೆಕ್ಸ್ ಸುಮಾರು 600 ಪಾಯಿಂಟ್‌ಗಳಷ್ಟು ಜಿಗಿದು 77,200 ಮಟ್ಟಕ್ಕೆ ತಲುಪಿದ್ದರೆ, ನಿಫ್ಟಿ 24,100 ರ ಗಡಿಯಲ್ಲಿ ವಹಿವಾಟು ನಡೆಸುತ್ತಿದೆ.

ರೂಪಾಯಿ ಮೌಲ್ಯ ಕುಸಿತ: ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಕುಸಿದು ₹94.27 ಕ್ಕೆ ತಲುಪಿದೆ.

IMF ವರದಿ: ಭಾರತದ GDP ಬೆಳವಣಿಗೆ ಮುನ್ಸೂಚನೆ 6.5%ಕ್ಕೆ ಏರಿಕೆ. ಜಾಗತಿಕ ಬೆಳವಣಿಗೆ 3.1%ಕ್ಕೆ ಇಳಿಕೆ. ಪಶ್ಚಿಮ ಏಷ್ಯಾಕ್ಕೆ ಭಾರತದ ಎಂಜಿನಿಯರಿಂಗ್ ರಫ್ತು 50% ಕುಸಿತ.


ಆರೋಗ್ಯ । Health :

ಮೊದಲ ಮಲೇರಿಯಾ ಔಷಧಿಗೆ WHO ಅನುಮೋದನೆ :
World Health Organization (WHO) 2026ರ World Malaria Day 2026 ಅಂಗವಾಗಿ ಶಿಶುಗಳಿಗೆ ವಿಶೇಷವಾಗಿ ರೂಪಿಸಿದ ಮೊದಲ ಮಲೇರಿಯಾ ಔಷಧಿಗೆ ಅನುಮೋದನೆ ನೀಡಿದೆ. 5 ಕೆ.ಜಿ.ಗಿಂತ ಕಡಿಮೆ ತೂಕದ ಶಿಶುಗಳಿಗೆ ಚಿಕಿತ್ಸೆ ನೀಡುವಲ್ಲಿ ಇದ್ದ ದೊಡ್ಡ ಕೊರತೆಯನ್ನು ಇದು ತುಂಬಲಿದೆ. ಹೊಸ ಔಷಧಿ ಆರ್ಟೆಮೆಥರ್–ಲುಮೆಫ್ಯಾಂಟ್ರಿನ್ ಸಂಯೋಜನೆ ಆಗಿದ್ದು, ಶಿಶುಗಳಿಗೆ ಸುರಕ್ಷಿತ ಮತ್ತು ಸರಿಯಾದ ಡೋಸ್‌ ನೀಡಲು ಸಹಕಾರಿ. ಈ ಕ್ರಮವು ಮಲೇರಿಯಾ ബാധಿತ ಪ್ರದೇಶಗಳಲ್ಲಿ ಲಕ್ಷಾಂತರ ಶಿಶುಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.



author avatar
spardhatimes
error: Content Copyright protected !!