ಸಾಧ್ವಿ ಸತೀಶ್ ಸೈಲ್‌ಗೆ ಒಲಿದ ‘ಫೆಮಿನಾ ಮಿಸ್ ಇಂಡಿಯಾ 2026’ ಕಿರೀಟ
ಸಾಧ್ವಿ ಸತೀಶ್ ಸೈಲ್ ಒಡಿಶಾ ಭುವನೇಶ್ವರದಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದು ಗೋವಾಕ್ಕೆ ಮೊದಲ ಮಿಸ್ ಇಂಡಿಯಾ ಪಟ್ಟ ತಂದುಕೊಟ್ಟರು, 2027 ಮಿಸ್ ವರ್ಲ್ಡ್‌ನಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ಏಪ್ರಿಲ್ 18ರಂದು ನಡೆದ 61ನೇ ಆವೃತ್ತಿಯ ಅದ್ಧೂರಿ ಫೆಮಿನಾ ಮಿಸ್ ಇಂಡಿಯಾ 2026 ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ 30 ಬಲಿಷ್ಠ ಸ್ಪರ್ಧಿಗಳನ್ನು ಹಿಂದಿಕ್ಕಿ ಸಾಧ್ವಿ ಸತೀಶ್ ಸೈಲ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.
ವಿವಿಧ ರಾಜ್ಯಗಳ ಸ್ಪರ್ಧಿಗಳು ಫಿನಾಲೆಯಲ್ಲಿ ಇದ್ದರು. ಒಟ್ಟೂ 29 ಮಂದಿಯನ್ನು ಹಿಂದಿಕ್ಕಿ ಗೋವಾ ಪ್ರತಿನಿಧಿಸಿದ್ದ ಸಾಧ್ವಿ ಗೆದ್ದಿದ್ದಾರೆ. ಮಹಾರಾಷ್ಟ್ರದ ರಾಜನಂದಿನಿ ಅವರು ಮೊದಲ ರನ್ನರ್ ಅಪ್ ಆದರೆ, ಜಮ್ಮು ಹಾಗೂ ಕಾಶ್ಮೀರದ ಶ್ರೀತಿ ಅದ್ವೈತಾ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಕಳೆದ ವರ್ಷದ ವಿನ್ನರ್ ನಿಕಿತಾ ಪೋರ್ವಾಲ್ ಅವರು ಸಾಧ್ವಿಗೆ ಕಿರೀಟ ತೊಡಿಸಿದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಖುಷಿ ರಮೇಶ್ ಅವರು ಟಾಪ್ 15ರಲ್ಲಿ ಸ್ಥಾನ ಪಡೆಯಲಷ್ಟೇ ಶಕ್ತರಾದರು.
ಕರ್ನಾಟಕದ ಶಾಸಕರ ಪುತ್ರಿ :
ಇವರು ಕರ್ನಾಟಕದ ಕಾರವಾರ ಕ್ಷೇತ್ರದ ಹಾಲಿ ಶಾಸಕ ಸತೀಶ್ ಸೈಲ್ ಅವರ ಪುತ್ರಿಯಾಗಿದ್ದು, ಈ ಬಾರಿಯ ಸ್ಪರ್ಧೆಯಲ್ಲಿ ನೆರೆಯ ಗೋವಾ ರಾಜ್ಯವನ್ನು ಪ್ರತಿನಿಧಿಸುವ ಮೂಲಕ ಗೋವಾಕ್ಕೆ ಮೊದಲ ಮಿಸ್ ಇಂಡಿಯಾ ಪಟ್ಟವನ್ನು ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ.
ಮೂಲತಃ ಕರ್ನಾಟಕದ ಕುಟುಂಬದ ಹಿನ್ನೆಲೆ ಹೊಂದಿರುವ ಸಾಧ್ವಿ, ಜುಲೈ 15, 1998ರಂದು ಮುಂಬೈನಲ್ಲಿ ಜನಿಸಿದ್ದು, ಪ್ರಸ್ತುತ 27ನೇ ವಯಸ್ಸಿನಲ್ಲಿ ರಾಷ್ಟ್ರೀಯ ವೇದಿಕೆಯ ಮೇಲೆ ಮಿಂಚಿ ಕೋಟ್ಯಂತರ ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ.
ಶಿಕ್ಷಣದಲ್ಲಿಯೂ ಅಪಾರ ಸಾಧನೆ :
ಕೇವಲ ಸೌಂದರ್ಯವಷ್ಟೇ ಅಲ್ಲದೆ ಶಿಕ್ಷಣದಲ್ಲಿಯೂ ಅಪಾರ ಸಾಧನೆ ಮಾಡಿರುವ ಸಾಧ್ವಿ, ಕೆನಡಾದ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ (UBC) ದಲ್ಲಿ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಡಬಲ್ ಮೇಜರ್ ಪದವಿ ಪಡೆದಿದ್ದಾರೆ.
ಇವರ ಬಹುಮುಖ ಪ್ರತಿಭೆಗೆ ಸಾಕ್ಷಿಯೆಂಬಂತೆ ಇವರು ಕನ್ನಡ, ಕೊಂಕಣಿ, ಮರಾಠಿ, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ ನಿರರ್ಗಳವಾಗಿ ಸಂವಹನ ನಡೆಸಬಲ್ಲ ಪ್ರಾವೀಣ್ಯತೆ ಹೊಂದಿದ್ದಾರೆ. ಇದರೊಂದಿಗೆ ಪಾಟರಿ, ಜೇನು ಕೃಷಿ, ಟ್ಯಾಕ್ಸಿಡರ್ಮಿ, ಫೋಟೋಗ್ರಫಿ ಹಾಗೂ ಬ್ಯಾಡ್ಮಿಂಟನ್‌ನಂತಹ ವಿಭಿನ್ನ ಹವ್ಯಾಸಗಳನ್ನು ಹೊಂದಿರುವ ಸಾಧ್ವಿ ಸೈಲ್, ಬುದ್ಧಿ ಮತ್ತು ಸೌಂದರ್ಯದ ಅಪರೂಪದ ಸಂಗಮವಾಗಿ ಗುರುತಿಸಿಕೊಂಡಿದ್ದಾರೆ.
ಏಳು ಭಾಷೆಗಳಲ್ಲಿ ನಿರರ್ಗಳವಾಗಿ ಸಂವಹನ :

ವೃತ್ತಿಜೀವನದಲ್ಲಿಯೂ ಅತ್ಯಂತ ವೇಗವಾಗಿ ಬೆಳೆದಿರುವ ಸಾಧ್ವಿ ಸೈಲ್ ಅವರು ಪದವಿ ಶಿಕ್ಷಣದ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಹಲವು ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಪ್ರಖ್ಯಾತ ಕ್ಯಾಲಿಫೋರ್ನಿಯಾ ಬುರ್ರಿಟೋ ಬ್ರ್ಯಾಂಡ್ ಕ್ಯಾಂಪೇನ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡಿರುವ ಇವರು, ಕೇವಲ ಮಾಡೆಲಿಂಗ್‌ಗೆ ಸೀಮಿತವಾಗದೆ ಯಶಸ್ವಿ ಉದ್ಯಮಿಯಾಗಿಯೂ ಬೆಳೆದಿದ್ದಾರೆ.

ಕನ್‌ಸ್ಟ್ರಕ್ಷನ್ ಮತ್ತು ಡೆವಲಪ್‌ಮೆಂಟ್ ಕಂಪನಿಯೊಂದರ ಸಹ-ಸಂಸ್ಥಾಪಕಿ ;
ಕನ್‌ಸ್ಟ್ರಕ್ಷನ್ ಮತ್ತು ಡೆವಲಪ್‌ಮೆಂಟ್ ಕಂಪನಿಯೊಂದರ ಸಹ-ಸಂಸ್ಥಾಪಕಿಯಾಗಿ ವೃತ್ತಿಜೀವನ ರೂಪಿಸಿಕೊಂಡಿರುವ ಇವರು, ಈಗ ಭಾರತವನ್ನು ಜಾಗತಿಕ ವೇದಿಕೆಯ ಮೇಲೆ ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಕನ್‌ಸ್ಟ್ರಕ್ಷನ್ ಮತ್ತು ಡೆವಲಪ್‌ಮೆಂಟ್ ಕಂಪನಿಯೊಂದರ ಸಹ-ಸಂಸ್ಥಾಪಕಿಯಾಗಿ ವೃತ್ತಿಜೀವನ ರೂಪಿಸಿಕೊಂಡಿರುವ ಇವರು, ಈಗ ಭಾರತವನ್ನು ಜಾಗತಿಕ ವೇದಿಕೆಯ ಮೇಲೆ ಪ್ರತಿನಿಧಿಸಲು ಸಜ್ಜಾಗಿದ್ದಾರೆ
‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಸಾಧ್ವಿ ಸತೀಶ್ ಸೈಲ್ :
2027ರ ಅಂತ್ಯದಲ್ಲಿ ನಡೆಯಲಿರುವ 74ನೇ ಆವೃತ್ತಿಯ ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಸಾಧ್ವಿ ಸತೀಶ್ ಸೈಲ್ ಅವರು ಭಾರತದ ಪರವಾಗಿ ಭಾಗವಹಿಸಲಿದ್ದಾರೆ. 2027ರ ಅಂತ್ಯದಲ್ಲಿ ನಡೆಯಲಿರುವ 74ನೇ ಆವೃತ್ತಿಯ ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಸಾಧ್ವಿ ಸತೀಶ್ ಸೈಲ್ ಅವರು ಭಾರತದ ಪರವಾಗಿ ಭಾಗವಹಿಸಲಿದ್ದಾರೆ.
- ಸಾಧ್ವಿ ಸತೀಶ್ ಸೈಲ್‌ಗೆ ಒಲಿದ ‘ಫೆಮಿನಾ ಮಿಸ್ ಇಂಡಿಯಾ 2026’ ಕಿರೀಟ
- ಮಹಿಳೆಯರಿಗೆ ಶಾಸನಸಭೆಗಳಲ್ಲಿ 33% ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು
- 2025-26 ಹಣಕಾಸು ವರ್ಷದಲ್ಲಿ ದಾಖಲೆಯ 5,200ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಿಗೆ ಮಾನ್ಯತೆ
- ಜಾಗತಿಕ ಮಟ್ಟದ ಮಹತ್ವದ ಸಾಧನೆ ಮಾಡಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)
- ಮುಖೇಶ್ ಅಂಬಾನಿ ಹಿಂದಿಕ್ಕಿ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ