ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
1. ನಿಮ್ನ ಮಸೂರುಗಳು ಯಾವ ದೃಷ್ಟಿ ದೋಷವನ್ನು ಸರಿಪಡಿಸಲು ಬಳಸಲ್ಪಡುತ್ತವೆ..?
ಎ. ದೂರದೃಷ್ಟಿ
ಬಿ. ಸಮೀಪದ್ರಷ್ಟಿ
ಸಿ. ಕ್ಯಾಟರಾಕ್ಟ್
ಡಿ. ಇವು ಯಾವುದೂ ಅಲ್ಲ
2. ಈ ಕೆಳಗಿನವುಗಳಲ್ಲಿ ಯಾವ ಲೋಹವು ಅತೀ ಹೆಚ್ಚು ತಂತುಕರಣೀಯತೆಯನ್ನು ಹೊಂದಿದೆ..?
ಎ. ತಾಮ್ರ
ಬಿ. ಸತುವು
ಸಿ. ಅಲ್ಯೂಮಿನಿಯಂ
ಡಿ. ಮೆದು ಉಕ್ಕು
3. ಥರ್ಮೋಸ್ಪಾಟ್ ಉಪಕರಣದ ಉಪಯೋಗವೇನು..?
ಎ. ವಿದ್ಯುತ್ ಉಪಕರಣದ ಶಾಖವನ್ನು ಹೆಚ್ಚಿಸುತ್ತದೆ.
ಬಿ. ವಿದ್ಯುತ್ ಉಪಕರಣದ ಶಾಖವನ್ನು ಒಂದು ನಿರ್ದಿಷ್ಟ ಡಿಗ್ರಿಯಲ್ಲಿ ನಿಯಂತ್ರಿಸುತ್ತದೆ.
ಸಿ. ವಿದ್ಯುತ್ ಉಪಕರಣದ ಶಾಖವನ್ನು ಕಡಿಮೆ ಮಾಡುತ್ತದೆ.
ಡಿ. ಮೇಲಿನ ಯಾವುದೂ ಅಲ್ಲ.
4. ಯಾವ ವಿಟಮಿನ್ ಕೊರತೆ ರಾತ್ರಿ ಕುರುಡುತನಕ್ಕೆ ಕಾರಣವಾಗುತ್ತದೆ..?
ಎ. ವಿಟಮಿನ್ ಬಿ
ಬಿ. ವಿಟಮಿನ್ ಎ
ಸಿ. ವಿಟಮಿನ್ ಸಿ
ಡಿ. ವಿಟಮಿನ್ ಡಿ
5. ಈ ಕೆಳಗಿನ ಯಾವುದು ಶೇವಿಂಗ್ ಕ್ರೀಮ್‍ನ ಮೃದುತ್ವವನ್ನು ಹೆಚ್ಚಿಸುತ್ತದೆ..?
ಎ. ಸೋಡಿಯಂ ಕ್ಲೋರೈಡ್
ಬಿ. ಪೊಟ್ಯಾಷಿಯಂ ಕಾರ್ಬೋನೇಟ್
ಸಿ. ಸೋಡಿಯಂ ಸಿಲಿಕೇಟ್
ಡಿ. ಇವು ಯಾವುದೂ ಅಲ್ಲ
6. ಗ್ರಾಫೈಟನ್ನು ಲೂಬ್ರಿಕೆಂಟ್ ಆಗಿ ಈ ಕೆಳಗಿನ ಯಾವ ಕಾರಣದಿಂದ ಬಳಸಬಹುದಾಗಿದೆ..?
ಎ. ಕಡಿಮೆ ಸ್ನಿಗ್ದತೆ
ಬಿ. ಕಡಿಮೆ ಕರಗುವ ಬಿಮದು
ಸಿ. ಗಡಸು ರಚನೆ
ಡಿ. ಪದರು ಪದರಾದ ರಚನೆ
7. ಒಂದು ಹಾರ್ಸ್ ಪವರ್ ಎಷ್ಟು ವ್ಯಾಟ್‍ಗಳಿಗೆ ಸಮ..?
ಎ. 750 ವ್ಯಾಟ್‍ಗಳು
ಬಿ. 1000 ವ್ಯಾಟ್‍ಗಳು
ಸಿ. 500 ವ್ಯಾಟ್‍ಗಳು
ಡಿ. 746 ವ್ಯಾಟ್‍ಗಳು
8. ಈ ಕೆಳಗಿನ ಯಾವ ವಸ್ತುವು ಹೆಚ್ಚಿನ ಸ್ಥಿತಿಸ್ಥಾಪಕ ಗುಣವನ್ನು ಹೊಂದಿದೆ..?
ಎ. ಗಾಜು
ಬಿ. ಉಕ್ಕು
ಸಿ. ರಬ್ಬರ್
ಡಿ. ಕಂಚು
9. ಈ ಕೆಳಗಿನ ಯಾವ ಅನಿಲವು ಅತೀ ಹೆಚ್ಚು ಕಾರ್ಬನ್ ಮೊನಾಕ್ಸೈಡ್ ಹೊಂದಿದೆ..?
ಎ. ನೈಸರ್ಗಿಕ ಅನಿಲ
ಬಿ. ಜಲ ಅನಿಲ
ಸಿ. ಕಲ್ಲಿದ್ದಲ ಅನಿಲ
ಡಿ. ಗೋಬರ್ ಅನಿಲ
10. ಸೋಪಿನ ತಯಾರಿಕೆಯಲ್ಲಿ ಸಾಮಾನ್ಯ ಉಪ್ಪನ್ನು ಏಕೆ ಸೇರಿಸುತ್ತಾರೆ..?
ಎ.ಸೋಪಿನ ಕರಗುವ ಸಾಮಥ್ರ್ಯವನ್ನು ಹೆಚ್ಚಿಸಲು
ಬಿ. ಸೋಪಿನ ಕರಗುವ ಸಾಮಥ್ರ್ಯವನ್ನು ತಗ್ಗಿಸಲು
ಸಿ. ಹೆಚ್ಚಿನ ಸ್ವಚ್ಚತಾ ಸಾಮಥ್ರ್ಯ ಬರುವಂತೆ ಮಾಡಲು
ಡಿ. ಗಡಸು ನೀರಿನಲ್ಲಿ ನೊರೆಯನ್ನುಂಟು ಮಾಡಲು
11. ಈ ಕೆಳಗಿನ ಯಾವ ಕೊರತೆಯು ಡಯಾಬಿಟಿಕ್ಸ್‍ಗೆ ಕಾರಣವಾಗುತ್ತದೆ..?
ಎ. ಇನ್‍ಸುಲಿನ್
ಬಿ. ಕ್ಯಾಲ್ಸಿಯಂ
ಸಿ. ಸಕ್ಕರೆ
ಡಿ. ವಿಟಮಿನ್‍ಗಳು
12. ಮಾನವರಲ್ಲಿ ಧನುರ್ವಾಯುವನ್ನು ಯಾವುದು ಉಂಟು ಮಾಡುತ್ತದೆ..?
ಎ. ಪ್ರೋಟೋಸೋನ್
ಬಿ. ವೈರಸ್
ಸಿ. ಫಂಗಸ್
ಡಿ. ಬ್ಯಾಕ್ಟೀರಿಯಾ
13. ಲ್ಯುಕೇಮಿಯಾ ಎಂದರೇನು..?
ಎ. ಕೆಂಪು ರಕ್ತ ಕಣಗಳ ಅಧಿಕ ಉತ್ಪಾದನೆ
ಬಿ. ಬಿಳಿ ರಕ್ತ ಕಣಗಳ ಮಿತಿ ಮೀರಿದ ಉತ್ಪಾದನೆ
ಸಿ. ಬಿಳಿ ರಕ್ತ ಕಣಗಳ ಕೊರತೆ
ಡಿ. ಕೆಂಪು ರಕ್ತ ಕಣಗಳ ಕೊರತೆ
14. ಭೂಮಿಯಿಂದ ಮೇಲೆ ಹೋದಂತೆಲ್ಲಾ ವಾಯುವಿನ ಒತ್ತಡ ಏನಾಗಿರುತ್ತದೆ..?
ಎ. ಜಾಸ್ತಿಯಿರುತ್ತದೆ.
ಬಿ. ಕಡಿಮೆ ಇರುತ್ತದೆ
ಸಿ. ಒಂದೇ ಸಮನಿರುತ್ತದೆ.
ಡಿ. ಇವು ಯಾವುದೂ ಅಲ್ಲ
15. ಶಬ್ದ ಮತ್ತು ಶಬ್ದದ ಅಲೆಗಳ ಬಗೆಗೆ ಅಧ್ಯಯನ ಮಾಡುವ ವಿಜ್ಞಾನಕ್ಕೆ ಏನೆನ್ನುತ್ತಾರೆ..?
ಎ. ಏರೋಲಜಿ
ಬಿ. ಅಕಾಸ್ಟಿಕ್ಸ್
ಸಿ. ಆಸ್ಟ್ರೋಫಿಜಿಕ್ಸ್
ಡಿ. ಏರೋಡೈನಾಮಿಕ್ಸ್
# ಉತ್ತರಗಳು :
1. ಎ. ದೂರದೃಷ್ಟಿ
2. ಎ. ತಾಮ್ರ
3. ಬಿ. ವಿದ್ಯುತ್ ಉಪಕರಣದ ಶಾಖವನ್ನು ಒಂದು ನಿರ್ದಿಷ್ಟ ಡಿಗ್ರಿಯಲ್ಲಿ ನಿಯಂತ್ರಿಸುತ್ತದೆ.
4. ಬಿ. ವಿಟಮಿನ್ ಎ
5. ಬಿ. ಪೊಟ್ಯಾಷಿಯಂ ಕಾರ್ಬೋನೇಟ್
6. ಎ. ಕಡಿಮೆ ಸ್ನಿಗ್ದತೆ
7. ಡಿ. 746 ವ್ಯಾಟ್ಗಳು
8. ಬಿ. ಉಕ್ಕು
9. ಸಿ. ಕಲ್ಲಿದ್ದಲ ಅನಿಲ
10. ಡಿ. ಗಡಸು ನೀರಿನಲ್ಲಿ ನೊರೆಯನ್ನುಂಟು ಮಾಡಲು
11. ಎ. ಇನ್ಸುಲಿನ್
12. ಡಿ. ಬ್ಯಾಕ್ಟೀರಿಯಾ
13. ಬಿ. ಬಿಳಿ ರಕ್ತ ಕಣಗಳ ಮಿತಿ ಮೀರಿದ ಉತ್ಪಾದನೆ
14. ಬಿ. ಕಡಿಮೆ ಇರುತ್ತದೆ
15. ಬಿ. ಅಕಾಸ್ಟಿಕ್ಸ್
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13