GeographyGKMultiple Choice Questions SeriesQUESTION BANKQuizSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02

Share With Friends

1. ಭೂಮಿಯ ಆಕಾರ ಯಾವ ರೀತಿ ಇರುವುದು..?
ಎ.ಅಂಡಾಕಾರ
ಬಿ. ಗೋಳಾಕಾರ
ಸಿ. ಚಪ್ಪಟೆ
ಡಿ. ಯಾವುದು ಅಲ್ಲಾ

2. ‘ನಾಕ್ಷತ್ರಿಕ ದಿನ’ ವೆಂದರೆ..?
ಎ. ಯಾವುದಾದರೊಂದು ನಕ್ಷತ್ರವು ನೆತ್ತಿಯ ಮೇಲೆ ಬಂದಾಗನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು
ಬಿ.ಚಂದ್ರನು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತು ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು.
ಸಿ. ಸೂರ್ಯನು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ ಬೇಖಾಗುವುದು.
ಡಿ. ಯಾವುದೂ ಅಲ್ಲ

3. ಸೌರದಿನ ಎಂದರೆ?
ಎ. ಒಂದು ಚಂದ್ರೋದಯದಿಂದ ಮತ್ತೊಂದು ಚಂದ್ರೋದಯದವರೆಗೆ
ಬಿ. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದವರೆಗೂ
ಸಿ. ಸೂರ್ಯ ಚಂದ್ರ ಎರಡು ಉಗಮಗಳನ್ನು ಪರಿಗಣಿಸಿ
ಡಿ. ಯಾವಯದು ಇಲ್ಲ

4. ನಾಕ್ಷತ್ರಿಕ ಹಾಗೂ ಸೌರದಿನಗಳ ನಡುವೆ ಸಮಯದ ಅಂತರ ಎಷ್ಟು..?
ಎ. 3 ನಿಮಿಷ 56 ಸೆಕೆಂಡು
ಬಿ. 5 ನಿಮಿಷ 20 ಸೆಕೆಂಡ್
ಸಿ. 4 ನಿಮಿಷ 30 ಸೆಕೆಂಡ್
ಡಿ. ಯಾವುದೂ ಅಲ್ಲ

5. ನಮಗೆ ಯಾವಾಗಲೂ ಚಂದ್ರನ ಒಂದೇ ಭಾಗವು ಗೋಚರಿಸುವುದು ಎಕೆಂದರೆ..?
ಎ. ಅದು ಭೂಮಿಗಿಂತ ಚಿಕ್ಕದು
ಬಿ,. ಅದು ಭೂಮಿಯ ದೈನಂದಿನ ಚಲನೆಯ ವಿರುದ್ಧ ದಿಕ್ಕಿನಲ್ಲಿ ಸುತ್ತುವುದು
ಸಿ. ಅದು ಭೂಮಿಯ ಸುತ್ತ ಪರಿಭ್ರಮಿಸಲು ಹಾಗೂ ತನ್ನ ಅಕ್ಷದ ಸುತ್ತ ಸುತ್ತಲು ಒಂದೇ ಅವಧಿ ತೆಗೆದುಕೊಳ್ಳುತ್ತದೆ
ಡಿ. ಅದು ಭೂಮಿಯ ಸೂರ್ಯನ ಸುತ್ತ ಸುತ್ತುವ ವೇಗದಲ್ಲಿ ತನ್ನ ಅಲಕ್ಷದ ಸುತ್ತ ಸುತ್ತುವುದು.

6. ದಕ್ಷಿಣ ಧ್ರುವ ಕೇಂದ್ರವು 24 ಘಂಟೆ ಹಗಲನ್ನು ಹೊಂದಿರುವುದು..?
ಎ. ಮಕರ ಸಂಕ್ರಾತಿಯ ದಿನದಂದು
ಬಿ. ತುಲಾ ಸಂಕ್ರಾತಿ ದಿನದಂದು
ಸಿ. ಕರ್ಕಾಟಕ ಸಂಕ್ರಾತಿ ದಿನದಂದು
ಡಿ. ಮೇಷಸಂಕ್ರಾತಿ ದಿನದಂದು

7. ಅಂತರಾಷ್ಟ್ರೀಯ ದಿನಾಂಕ ರೇಖೆ ಯಾವುದೆಂದರೆ..?
ಎ. ಸಮಭಾಜಕ ವೃತ್ತ
ಬಿ. 0 ಡಿಗ್ರಿ ಅಕ್ಷಾಂಶ
ಸಿ. 90 ಡಿಗ್ರಿ ರೇಖಾಂಶ
ಡಿ. 180 ಡಿಗ್ರಿ ರೇಖಾಂಶ

8. ಭೂಮಿಯು ಸೂರ್ಯನನ್ನು ಸುತ್ತುವಾಗ ಅನುಸರಿಸುವ ಪಥ ಯಾವುದು..?
ಎ. ನೇರಪಥ
ಬಿ. ಅಂಢಾಕಾರ ಪಥ
ಸಿ. ವೃತ್ತಾಕಾರ ಪಥ
ಡಿ. ಯಾವುದೂ ಅಲ್ಲ

9. ಭೂಮಿಯ ಮೇಲೆ ಋತುಗಳು ಉಂಟಾಗುವುದು…
ಎ. ದೈನಂದಿನ ಭ್ರಮಣದಿಂದ
ಬಿ. ನಾಕ್ಷತ್ರಿಕ ದಿನದಿಂದ
ಸಿ. ಸೌರದಿನದಿಂದ
ಡಿ. ವಾರ್ಷಿಕ ಚಲನೆಯಿಂದ

10. ‘ ಮೇಷ ಸಂಕ್ರಾಂತಿ’ ಎಂದು ಯಾವ ದಿನವನ್ನು ಕರೆಯುವರು..?
ಎ. ಫೆಬ್ರವರಿ 21
ಬಿ. ಏಪ್ರಿಲ್ 21
ಸಿ. ಮಾರ್ಚ್ 21
ಡಿ. ಜೂನ್ 21

11. ‘ ಕಕಟಾಯನ ಅಥವಾ ಕರ್ಕಾಟಕ ಸಂಕ್ರಾಂತಿ ಎಂದು ಯಾವ ದಿನವನ್ನು ಕರೆಯಲಾಗಿದೆ..?
ಎ. ಏಪ್ರಿಲ್ 21
ಬಿ. ಮೇ 20
ಸಿ. ಜೂನ್ 21
ಡಿ. ಯಾವುದೂ ಅಲ್ಲ

12. ಅಕ್ಷಾಂಶ ಮತ್ತು ರೇಖಾಂಶಗಳನ್ನು ಅಳೆಯಲು ಬಳಸುವ ಮಾನ ಯಾವುದು..?
ಎ. ಜಾಲ
ಬಿ. ಕೋನ
ಸಿ. ಜಾಲ ಮತ್ತು ಕೋನ
ಡಿ. ಯಾವುದೂ ಅಲ್ಲ

13. ಅಕ್ಷಾಂಶ ವೃತ್ತಗಳಲ್ಲಿ ಯಾವ ವೃತ್ತವು ಅತಿಹೆಚ್ಚು ಸುತ್ತಳತೆಯನ್ನು ಹೊಂದಿದೆ..?
ಎ. ಕರ್ಕಾಟಕ ಸಂಕ್ರಾಂತಿ ವೃತ್ತ
ಬಿ. ಮಕರ ಸಂಕ್ರಾತಿ ವೃತ್ತ
ಸಿ. ಸಮಭಾಜಕ ವೃತ್ತ
ಡಿ. ಮೇಲಿನ ಎಲ್ಲವೂ

14. ಧ್ರುವಗಳ ಕಡೆಗೆ ಹೋದಂತೆ ಅಕ್ಷಾಂಶಗಳ ಸುತ್ತಳತೆಯು…..
ಎ. ಜಾಸ್ತಿಯಾಗುವುದು
ಬಿ. ಸಮನಾಗಿರುವುದು
ಸಿ. ಕಡಿಮೆಯಾಗುವುದು
ಡಿ. ಎಲ್ಲವೂ

15. ಯಾವ ಒಂದೇ ಖಂಡದಲ್ಲಿ ಭೂಮಧ್ಯರೇಖೆ, ಕರ್ಕಾಟಕ ಸಂಕ್ರಾಂತಿ ವೃತ್ತ, ಮಕರ ಸಂಕ್ರಾಂತಿ ವೃತ್ತ ಹಾದು ಹೋಗಿದೆ..?
ಎ. ಆಫ್ರಿಕಾ
ಬಿ. ಉತ್ತರ ಅಮೇರಿಕಾ
ಸಿ. ಏಷ್ಯಾ
ಡಿ. ಯುರೋಪ್

# ಉತ್ತರಗಳು :
1. ಬಿ. ಗೋಳಾಕಾರ
2. ಎ. ಯಾವುದಾದರೊಂದು ನಕ್ಷತ್ರÀವು ನೆತ್ತಿಯ ಮೇಲೆ ಬಂದಾಗನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು
3. ಬಿ. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದವರೆಗೂ
4. ಎ. 3 ನಿಮಿಷ 56 ಸೆಕೆಂಡು
5. ಸಿ. ಅದು ಭೂಮಿಯ ಸುತ್ತ ಪರಿಭ್ರಮಿಸಲು ಹಾಗೂ ತನ್ನ ಅಕ್ಷದ ಸುತ್ತ ಸುತ್ತಲು ಒಂದೇ ಅವಧಿ ತೆಗೆದುಕೊಳ್ಳುತ್ತದೆ
6. ಎ. ಮಕರ ಸಂಕ್ರಾತಿಯ ದಿನದಂದು
7. ಡಿ. 180 ಡಿಗ್ರಿ ರೇಖಾಂಶ
8. ಬಿ. ಅಂಢಾಕಾರ ಪಥ
9. ಡಿ. ವಾರ್ಷಿಕ ಚಲನೆಯಿಂದ
10. ಸಿ. ಮಾರ್ಚ್ 21
11. ಸಿ. ಜೂನ್ 21
12. ಬಿ. ಕೋನ
13. ಬಿ. ಮಕರ ಸಂಕ್ರಾತಿ ವೃತ್ತ
14. ಎ. ಜಾಸ್ತಿಯಾಗುವುದು
15. ಎ. ಆಫ್ರಿಕಾ

➤READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

 

 

error: Content Copyright protected !!