‘ನಾಗ್’ ಕ್ಷಿಪಣಿ ಪರೀಕ್ಷೆ ಯಶಸ್ವಿ, ಏನಿದರ ವಿಶೇಷತೆಗಳು..?
ಯುದ್ಧ ಟ್ಯಾಂಕರ್‌ಗಳನ್ನು ಹೊಡೆಉರುಳಿಸಬಲ್ಲ ಶಕ್ತಿಶಾಲಿ ಕ್ಷಿಪಣಿ ನಾಗ್ ಪರೀಕ್ಷೆ ಯಶಸ್ವಿಯಾಗಿದೆ. ರಾಜಸ್ತಾನದ ಪೋಖ್ರಾನ್ ಮರುಭೂಮಿಯಲ್ಲಿ ವೈರಿಗಳ ಸಮರ ಟ್ಯಾಂಕರ್‍ಗಳು ಇತರ ಅಗಾಧ ಶಸ್ತ್ರ ಸಜ್ಜಿತ ವಾಹನಗಳನ್ನು ಕ್ಷಣಾರ್ಧದಲ್ಲೇ ಧ್ವಂಸಗೊಳಿಸಬಲ್ಲ ನಾಗ್ ಕ್ಷಿಪಣಿ ಪರೀಕ್ಷೆಯ ಅಂತಿಮ ಪ್ರಯೋಗ ಯಶಸ್ವಿಯಾಗಿದೆ.
ಇದರೊಂದಿಗೆ ಮತ್ತೊಂದು ಬ್ರಹ್ಮಾಸ್ತ್ರ ಭಾರತೀಯ ಸೇನಾ ಪಡೆಯ ಬತ್ತಳಿಕೆಗೆ ಸೇರಿದಂತಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಾಗ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ಕ್ಷಿಪಣಿಯನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು , ಸಿಡಿ ತಲೆಗಳನ್ನು ಹೊಂದಿರುವ ಈ ಕ್ಷಿಪಣಿ 8 ಕಿ.ಮೀ ದೂರದಲ್ಲಿರುವ ವೈರಿಗಳ ಟ್ಯಾಂಕ್‍ಗಳು ಮತ್ತು ಸಶಸ್ತ್ರ ವಾಹನಗಳನ್ನು ನುಚ್ಚು ನೂರು ಮಾಡುವ ಅಗಾಧ ಸಾಮಥ್ರ್ಯ ಹೊಂದಿದೆ.
# ವಿಶೇಷತೆಗಳೇನು..? :
* ನಾಗ್-ಎಟಿಜಿಎಂ ಕ್ಷಿಪಣಿಯನ್ನು ನೆಲದಿಂದ ಮತ್ತು ವಾಯು ನೆಲೆಯಿಂದ ನಿಖರ ಗುರಿಯತ್ತ ಅತ್ಯಂತ ಕರಾರುವಕ್ಕಾಗಿ ಸಿಡಿಸಿ ವೈರಿಗಳ ಸಮರ ಟ್ಯಾಂಕ್‍ಗಳು ಮತ್ತು ಇತರ ವಾಹನಗಳನ್ನು ಕ್ಷಣಾರ್ಧದಲ್ಲೇ ಧ್ವಂಸ ಮಾಡಬಹುದು.
* ಹಗಲು ಮತ್ತು ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ನಾಗ್ ಕ್ಷಿಪಣಿಗೆ ನಿಖರ ಗುರಿ ತಲುಪಲು ಅತ್ಯಾಧುನಿಕ ಮಾರ್ಗದರ್ಶಿ ವ್ಯವಸ್ಥೆ , ಇನ್ಫಾರೆಡ್ ಕಿರಣ ಮತ್ತು ಏರಿಯೋನಿಕ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ
* ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮ ನಿರ್ಭರ್ ಯೋಜನೆ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಇದನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದೆ.
# ಇಂಡೋ ಚೀನಾ ಮತ್ತು ಇಂಡೋ ಪಾಕ್ ಗಡಿ ಪ್ರದೇಶದಲ್ಲಿ ಚೀನಿ ಮತ್ತು ಪಾಕ್ ಸೇನಾ ಪಡೆಗಳಿಂದ ನಿರಂತರ ಗಡಿ ಸಂಘರ್ಷ ಉದ್ಭವಿಸಿದ ಸಂದರ್ಭದಲ್ಲೇ ಭಾರತೀಯ ಸೇನಾ ಪಡೆಗೆ ನಾಗ್ ಕ್ಷಿಪಣಿ ಸೇರ್ಪಡೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
* ಇಂತಹ ಅತ್ಯಾಧುನಿಕ ಯುದ್ಧ ಟ್ಯಾಂಕ್ ಧ್ವಂಸಕ ಕ್ಷಿಪಣಿ ಅಮೆರಿಕಾ, ರಷ್ಯಾ, ಫ್ರಾನ್ಸ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಇವೆ. 2018ರಲ್ಲಿ 200 ನಾಗ್ ಎಟಿಜಿಎಂಗಳನ್ನು ಹೊಂದಲು ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.
* ಇದು ಭಾರತದ ಸೇನಾ ಪಡೆಗೆ ಸೇರ್ಪಡೆಯಾದ ಮೊಟ್ಟ ಮೊದಲ ಮೂರನೆ ತಲೆಮಾರಿನ ಸಮರ ಟ್ಯಾಂಕ್ ಧ್ವಂಸಕ ಕ್ಷಿಪಣಿಯಾಗಿದೆ.
* ಇಂಡೋ ಚೀನಾ ಮತ್ತು ಇಂಡೋ ಪಾಕ್ ಗಡಿ ಪ್ರದೇಶದಲ್ಲಿ ಚೀನಿ ಮತ್ತು ಪಾಕ್ ಸೇನಾ ಪಡೆಗಳಿಂದ ನಿರಂತರ ಗಡಿ ಸಂಘರ್ಷ ಉದ್ಭವಿಸಿದ ಸಂದರ್ಭದಲ್ಲೇ ಭಾರತೀಯ ಸೇನಾ ಪಡೆಗೆ ನಾಗ್ ಕ್ಷಿಪಣಿ ಸೇರ್ಪಡೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.