Current AffairsSpardha Times

‘ಸೂರ್ಯೋದಯ ಯೋಜನೆ’ಗೆ ಚಾಲನೆ : ಇದರ ಮಹತ್ವ ಮತ್ತು ಲಾಭಗಳೇನು..?

Share With Friends

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಐತಿಹಾಸಿಕ ದಿನದ ಬೆನ್ನಲ್ಲೇ ಒಂದು ಕೋಟಿ ಮನೆಗಳ ಮೇಲ್ಛಾವಣಿ ಮೇಲೆ ಸೌರ ಘಟಕ ಸ್ಥಾಪಿಸುವುದಕ್ಕೆ ಅನುಕೂಲವಾಗುವ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya Yojana)ಯನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಜ.22) ಘೋಷಿಸಿದರು. ಸೂರ್ಯವಂಶದ ರಾಮನ ಬೆಳಕು ಪಡೆದು, ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ಕರೆ ನೀಡಿದರು.

ಸೌರಶಕ್ತಿಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಒಂದು ಅದ್ಭುತ ಉಪಕ್ರಮವಾಗಿರುವ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಸಾಮಾನ್ಯ ನಾಗರಿಕರಿಗೆ ಪ್ರಯೋಜನವನ್ನು ನೀಡುವುದರೊಂದಿಗೆ ಇಂಧನ ವಲಯದಲ್ಲಿ ಸ್ವಾವಲಂಬನೆಯತ್ತ ಭಾರತವನ್ನು ಮುನ್ನಡೆಸಲು ಪ್ರಯತ್ನಿಸುತ್ತದೆ. ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು 40 GW ಛಾವಣಿಯ ಸೌರ ಸಾಮರ್ಥ್ಯದ ಗುರಿಯನ್ನು ತಲುಪುವುದಕ್ಕೆ ಸಹಾಯ ಮಾಡುವ ಹೊಸ ಪ್ರಯತ್ನ ಎಂದು ಬಣ್ಣಿಸಲಾಗಿದೆ.

ಮೇಲ್ಛಾವಣಿ ಸೌರ ಕಾರ್ಯಕ್ರಮ ಎಂದರೇನು..?
ಭಾರತದ ವಸತಿ ವಲಯದಲ್ಲಿ ಮೇಲ್ಛಾವಣಿಯ ಸೌರ ಘಟಕ ಅಳವಡಿಸುವ ಸಾಮರ್ಥ್ಯವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ ಯೋಜನೆ ಮೇಲ್ಛಾವಣಿ ಸೌರ ಕಾರ್ಯಕ್ರಮ. ಇದನ್ನು 2014 ರಲ್ಲಿ ಕೇಂದ್ರ ಹಣಕಾಸು ನೆರವು, ಎಂಎನ್‌ಆರ್‌ಇ ಮಾರ್ಗಸೂಚಿಗಳ ಪ್ರಕಾರ ಅರ್ಹ ಯೋಜನೆಗಳಿಗೆ ಹಣಕಾಸಿನ ನೆರವಿನೊಂದಿಗೆ ಜಾರಿಗೊಳಿಸಲಾಗಿದೆ. 2026ರ ಮಾರ್ಚ್‌ ವೇಳೆಗೆ ಮೇಲ್ಛಾವಣಿಯ ಸೌರ ಘಟಕಗಳ ಸಾಮರ್ಥ್ಯವನ್ನು 40 ಗಿಗಾವ್ಯಾಟ್‌ ಹೆಚ್ಚಿಸುವ ಗುರಿಯನ್ನು ಡಿಸ್ಕಾಂಗಳಿಗೆ ನೀಡಲಾಗಿತ್ತು. ಪ್ರಸ್ತುತ ಇದು ಎರಡನೇ ಹಂತದಲ್ಲಿದೆ. ಈ ಯೋಜನೆಯಿಂದಾಗಿ, ದೇಶದ ಮೇಲ್ಛಾವಣಿಯ ಸೌರಶಕ್ತಿಯು ಮಾರ್ಚ್ 2019 ರಂತೆ 1.8 GW ನಿಂದ ನವೆಂಬರ್ 2023 ಕ್ಕೆ 10.4 GW ಗೆ ಹೆಚ್ಚಾಗಿದೆ.

ಮೇಲ್ಛಾವಣಿ ಸೌರ ವ್ಯವಸ್ಥೆಗಳ ಮೂಲಕ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುವ ಮೂಲಕ ಭಾರತದಾದ್ಯಂತ ಮನೆಗಳನ್ನು ಸಬಲೀಕರಣಗೊಳಿಸಲು ಈ ಉಪಕ್ರಮವು ಸಿದ್ಧವಾಗಿದೆ. ಒಂದು ಕೋಟಿ ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ, ಇಂಧನ ಕ್ಷೇತ್ರದಲ್ಲಿ ಸುಸ್ಥಿರತೆ ಮತ್ತು ಸ್ವಾವಲಂಬನೆಯನ್ನು ಬೆಳೆಸುವುದರೊಂದಿಗೆ ಬಡ ಮತ್ತು ಮಧ್ಯಮ ವರ್ಗದ ಆರ್ಥಿಕ ಹೊರೆಯನ್ನು ನಿವಾರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರಸ್ತುತ ಭಾರತದ ಸೌರಶಕ್ತಿ ಸಾಮರ್ಥ್ಯವೆಷ್ಟು..?
✦ ಭಾರತದಲ್ಲಿ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 2023ರ ಡಿಸೆಂಬರ್ ವೇಳೆಗೆ 73.31 GW ತಲುಪಿದೆ. ಇದೇ ವೇಳೆ, ಛಾವಣಿಯ ಸೌರ ಘಟಕಗಳ ಸಾಮರ್ಥ್ಯವು 11.08 GW ಆಗಿದೆ. ಒಟ್ಟು ಸೌರ ಸಾಮರ್ಥ್ಯದ ವಿಷಯದಲ್ಲಿ, ರಾಜಸ್ಥಾನವು 18.7 GW ನೊಂದಿಗೆ ಅಗ್ರಸ್ಥಾನದಲ್ಲಿದೆ. ಗುಜರಾತ್ 10.5 GW ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೇಲ್ಛಾವಣಿಯ ಸೌರ ಸಾಮರ್ಥ್ಯಕ್ಕೆ ಬಂದಾಗ, ಗುಜರಾತ್ 2.8 GW ನೊಂದಿಗೆ ಅಗ್ರಸ್ಥಾನದಲ್ಲಿದೆ, ಮಹಾರಾಷ್ಟ್ರವು 1.7 GW ನಂತರದ ಸ್ಥಾನದಲ್ಲಿದೆ. ಗಮನಾರ್ಹವಾಗಿ, ಸೌರ ಶಕ್ತಿಯು ದೇಶದ ಪ್ರಸ್ತುತ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯದಲ್ಲಿ ಪ್ರಮುಖ ಪಾಲನ್ನು ಹೊಂದಿದೆ, ಇದು ಸುಮಾರು 180 GW ಆಗಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ವೆಬ್‌ಸೈಟ್‌ನ ಮಾಹಿತಿ ತಿಳಿಸಿದೆ.

✦ ಮುಂದಿನ 30 ವರ್ಷಗಳಲ್ಲಿ ವಿಶ್ವದ ಯಾವುದೇ ದೇಶ ಅಥವಾ ಪ್ರದೇಶದ ಅತಿದೊಡ್ಡ ಶಕ್ತಿಯ ಬೇಡಿಕೆಯ ಬೆಳವಣಿಗೆಯನ್ನು ಭಾರತ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಇಂಟರ್‌ನ್ಯಾ‍ನಲ್ ಎನರ್ಜಿ ಏಜೆನ್ಸಿಯ ಇತ್ತೀಚಿನ ವರ್ಲ್ಡ್ ಎನರ್ಜಿ ಔಟ್‌ಲುಕ್ ವರದಿ ಹೇಳಿದೆ.

✦ ಈ ಬೇಡಿಕೆಯನ್ನು ಪೂರೈಸಲು, ದೇಶಕ್ಕೆ ಶಕ್ತಿಯ ವಿಶ್ವಾಸಾರ್ಹ ಮೂಲ ಬೇಕಾಗುತ್ತದೆ. ಅದು ಕೇವಲ ಕಲ್ಲಿದ್ದಲು ಸ್ಥಾವರಗಳಾಗಿರಬಾರದು. ಇತ್ತೀಚಿನ ವರ್ಷಗಳಲ್ಲಿ ಭಾರತವು ತನ್ನ ಕಲ್ಲಿದ್ದಲು ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ. ಆದರೂ, 2030ರ ವೇಳೆಗೆ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗೆ ತಲುಪುವ ಗುರಿಯನ್ನು ಹೊಂದಿದೆ. ಆದ್ದರಿಂದ, ಸೌರ ವಿದ್ಯುತ್ ಸಾಮರ್ಥ್ಯವನ್ನು ವಿಸ್ತರಿಸುವುದು ಅತ್ಯಗತ್ಯ.

ಪ್ರಚಲಿತ ಘಟನೆಗಳ ಕ್ವಿಜ್ (12,13-01-2024)

Leave a Reply

Your email address will not be published. Required fields are marked *

error: Content Copyright protected !!