ಬೆಳಕಿಗೆ ಸಂಬಂಧಿಸಿದ ಪ್ರಮುಖ ಅಂಶಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
✦ಬೆಳಕು ಒಂದು ಶಕ್ತಿಯ ರೂಪವಾಗಿದೆ.
✦ ಸಕಲ ಜೀವಿಗಳ ಮತ್ತು ಸಸ್ಯಗಳ ಚಟುವಟಿಕೆಗಳಿಗೆ ಆಧಾರವಾಗಿರುವುದು – ಸೂರ್ಯನ ಬೆಳಕು
✦ ಸ್ವಂತ ಬೆಳಕನ್ನು ನೀಡುವ ವಸ್ತುಗಳನ್ನು ಹೀಗೆನ್ನುವರು – ಸ್ವಯಂ ಪ್ರಕಾಶ ವಸ್ತುಗಳು
✦ ತಮ್ಮ ಮೂಲಕ ಬೆಳಕನ್ನು ಹರಿಯಲು ಬಿಡದ ವಸ್ತುಗಳು – ಅಪಾರದರ್ಶಕ ವಸ್ತುಗಳು
✦ ತಮ್ಮ ಮೂಲಕ ಬೆಳಕನ್ನು ಹರಿಯಲು ಬಿಡುವ ವಸ್ತುಗಳು – ಪಾರದರ್ಶಕ ವಸ್ತುಗಳು
✦ ತಮ್ಮ ಮೂಲಕ ಸ್ವಲ್ಪ ಪ್ರಮಾಣದ ಬೆಳಕನ್ನು ಹರಿಯಲು ಬಿಡುವ ವಸ್ತುಗಳು – ಮಿತ ಪಾರದರ್ಶಕ ವಸ್ತುಗಳು
✦ ಪರಸ್ಪರ ಸಮಾಂತರವಾಗಿರುವ ಬೆಳಕಿನ ಕಿರಣಗಳನ್ನು ಹೀಗೆನ್ನುವರು – ಸಮಾಂತರ ಕಿರಣಗಳು
✦ ಒಂದು ಬಿಂದುವಿನಲ್ಲಿ ಕೇಂದ್ರಿಕೃತವಾದ ಕಿರಣಗಳು – ಒಮ್ಮುಖ ಕಿರಣಗಳು
✦ ಬೆಳಕಿನ ಮೂಲದಿಂದ ಬೆಳಕಿನ ಕಿರಣಗಳು ಬೇರೆ ಬೇರೆ ದಿಕ್ಕುಗಳಲ್ಲಿ ಚಲಿಸುತ್ತಿದ್ದರೆ ಆ ಕಿರಣಗಳನ್ನು ಹೀಗೆನ್ನುವರು – ವಿಮುಖ ಕಿರಣಗಳು
✦ ವಸ್ತುವಿನ ಮೇಲೆ ಬೆಳಕು ಬಿದ್ದಾಗ ಬೆಳಕು ಹಿಂದಕ್ಕೆ ಬರುವುದನ್ನು ಹೀಗೆನ್ನುವರು –ಪ್ರತಿಫಲನ
✦ ಈ ವಿಧಧ ವಸ್ತುಗಳು ಕಡಿಮೆ ಬೆಳಕನ್ನು ಪ್ರತಿಫಲಿಸುತ್ತದೆ – ಕಪ್ಪು ವಸ್ತುಗಳು
✦ ಈ ವಿಧಧ ವಸ್ತುಗಳು ಹೆಚ್ಚು ಬೆಳಕನ್ನು ಪ್ರತಿಫಲಿಸುತ್ತದೆ – ನುಣುಪಾದ ಮೇಲ್ಮೈಯನ್ನು ಹೊಂದಿರುವ ವಸ್ತುಗಳು
✦ ಕನ್ನಡಿಗಳ ಮೇಲ್ಮೈ ಹೆಚ್ಚು ನುಣುಪಾಗಿ ಮಾಡಿರುತ್ತಾರೆ ಕಾರಣ – ಹೆಚ್ಚು ಬೆಲಕನ್ನು ಪ್ರತಿಫಲಿಸಲು
✦ ಪತನ ಕಿರಣ, ಪ್ರತಿಫಲನ ಕಿರಣ, ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬವು ಒಂದೇ ಸಮತಲದಲ್ಲಿರುತ್ತದೆ- ಇದು ಯಾವ ನಿಯಮ – ಪ್ರತಿಫಲನದ ಮೊದಲನೆ ನಿಯಮ
✦ ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುತ್ತದೆ.- ಇದು ಪ್ರತಿಫಲನದ ಎರಡನೇ ನಿಯಮ
✦ ನುಣುಪಾದ ಮೆರಗುಗೊಳಿಸಿದ ಮೇಲ್ಮೈ ಹೀಗೆನ್ನುವರು – ದರ್ಪಣ
✦ ದರ್ಪಣದ ಮೇಲ್ಮೈ ಸಮತಲವಾಗಿದ್ದರೆ ಅದನ್ನು ಏನೆನ್ನುವರು – ಸಮತಲ ದರ್ಪಣ
✦ ಸಮತಲ ದರ್ಪಣಕ್ಕೆ ಒಂದು ಉತ್ತಮ ಉದಾಹರಣೆ – ಕನ್ನಡಿ
✦ಪರದೆಯಲ್ಲಿ ಪಡೆಯಲು ಸಾಧ್ಯವಿಲ್ಲದ ಪ್ರತಿಬಿಂಬ – ಸತ್ಯ ಪ್ರತಿಬಿಂಬ
✦ ಪರದೆಯಲ್ಲಿ ಪಡೆಯಲು ಸಾಧ್ಯವಿರುವ ಪ್ರತಿಬಿಂಬ – ಮಿಥ್ಯ ಪ್ರತಿಬಿಂಬ
✦ ವಸ್ತುವಿನ ಎಡಬದಿ ಮತ್ತು ಬಲಬದಿ ಪ್ರತಿಬಿಂಬ ಅದಲು ಬದಲಾದಂತೆ ಕಾಣುವುದನ್ನು ಹೀಗೆನ್ನುವರು – ಪಾಶ್ರ್ವ ವಿಪರ್ಯಯ
✦ ಸೂಕ್ಷ್ಮದರ್ಶಕಗಳಲ್ಲಿ ಬೆಳಕನ್ನು ವಸ್ತುವಿನ ಮೇಲೆ ಬೀಳುವಂತೆ ಮಾಡಲು ಬಳಸುವ ದರ್ಪಣ – ಸಮತಲ ದರ್ಪಣ
✦ ಸಬ್ ಮೆರಿನ್‍ಗಳಲ್ಲಿ ನೀರಿನ ಮೇಲಿರುವ ವಸ್ತುಗಳನ್ನು ನೋಡಲು ಇದನ್ನು ಬಳಸುತ್ತಾರೆ – ಪೆರಿ ಸ್ಕೋಪ್
✦ ಗೋಲದ ಭಾಗವಾಗಿ ಪರಿಗಣಿಸಬಹುದಾದ ದರ್ಪಣನ್ನು ಹೀಗೆನ್ನುವರು – ಗೋಲಿಯ ದರ್ಪಣ
✦ ದರ್ಪಣದ ತಗ್ಗಾದ ಮೈ ಪ್ರತಿಫಲನದ ಭಾಗವಾಗಿರುವ ದರ್ಪಣ –ನಿಮ್ನ ದರ್ಪಣ
✦ ದಪ್ಣದ ಉಬ್ಬಿದ ಮೈ ಪ್ರತಿಫಲಿಸುವ ಭಾಗವಾಗಿರುವ ದಪ್ನ – ಪೀನ ದರ್ಪಣ
✦ ದೂರದರ್ಶಕ, ಟಾರ್ಚ್‍ಲೈಟ್, ವಾಹನದ ಹೆಡ್‍ಲೈಟ್, ಹಾಗೂ ಸರ್ಚ್ ಲೈಟ್‍ಗಳಲ್ಲಿ ಬಳಸುವ ದರ್ಪಣ – ನಿಮ್ನ ದರ್ಪಣ
✦ ವಾಹನಗಳಲ್ಲಿ ಹಿನ್ನೋಟ ದರ್ಪಣಗಳಾಗಿ ಬಳಸುವ ದರ್ಪಣಗಳು – ಪೀನ ದರ್ಪಣ
✦ ಬೀದಿದೀಪಗಳಲ್ಲಿ ಬಳಸುವ ದರ್ಪಣ – ಪೀನ ದರ್ಪಣ
✦ ಬೀದಿದೀಪಗಳಲ್ಲಿ ಪೀನ ದರ್ಪಣ ಬಳಸಲು ಕಾರಣ –ಬೆಳಕನ್ನು ವಿಶಾಲ ಪ್ರದೇಶಕ್ಕೆ ಚದುರುವಂತೆ ಮಾಡುತ್ತದೆ.
✦ ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಪ್ರಸರಿಸಿದಾಗ ಅದು ತನ್ನ ದಿಕ್ಕನ್ನು ಬದಲಾಯಿಸುವ ವಿದ್ಯಮಾನವೇ – ಬೆಳಕಿನ ವಕ್ರೀಭವನ
✦ ವಜ್ರವು ಹೊಳೆಯಲು ಕಾರಣ – ಸಂಪೂರ್ಣ ಆತಂರಿಕ ಪ್ರತಿಫಲನ
✦ ಬೈಸಿಕಲ್‍ನ ಹಿಂಬಾಗದಲ್ಲಿ ಪ್ರತಿಫಲಕಗಳನ್ನು ಅಳವಡಿಸಲು ಕಾರಣ – ರಾತ್ರಿ ವೇಳೆ ಹಿಂಬದಿಯಿಂದ ಬರುವ ವಾಹನ ಚಾಲಕರಿಗೆ ಬೈಸಿಕಲ್‍ನ ಇರುವಿಕೆಯನ್ನು ಸೂಚಿಸಲು
✦ ಆಕಾಶ ನೀಲಿಯಾಗಿ ಕಾಣಲು ಕಾರಣ – ಬೆಳಕಿನ ಚದುರುವಿಕೆ
✦ ಬೆಳಕಿನ ವಿಭಜನೆ- ಬಿಳಿಯ ಬೆಳಕನ್ನು ಅಶ್ರಗದ ಮೂಲಕ ಹಾಯಿಸಿದಾಗ ಅದು ತನ್ನ ಘಟಕ ಬಣ್ಣಗಳಾಗಿ ಬಿಭಜನೆ ಹೊಂದುವ ವಿದ್ಯಮಾನಕ್ಕೆ ವರ್ಣವಿಭಜನೆ ಎಂದು ಹೆಸರು. ವರ್ಣವಿಭಜನೆ ಉಂಟಾದಾಗ 7 ಬಣ್ಣಗಳ ಪಟ್ಟಿಯನ್ನು ನಾವು ಕಾಣುತ್ತೇವೆ. ಇದನ್ನು ರೋಹಿತವೆಂದು ಕರೆಯುತ್ತಾರೆ. ಸೂರ್ಯನ ಬೆಳಕಿನ 7 ಬಣ್ಣಗಳು ನೇರಳೆ, ಕಡುನೀಲಿ, ನೀಲಿ, ಹಳದಿ, ಹಸಿರು, ಆರೆಂಜ್, ಕೆಂಪು ಇದರಲ್ಲಿ ನೇರಳೆ ಬಣ್ಣ ಹೆಚ್ಚು ಬಾಗಿರುತ್ತದೆ. ಕೆಂಪು ಬಣ್ನ ಕಡಿಮೆ ಭಾಗಿರುತ್ತದೆ.