FDA ExamGKGK QuestionsModel Question PapersQuizSDA examSpardha Times

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5

Share With Friends

1. ಜೈವಿಕ ವಸ್ತುಗಳು ಕೊಳೆಯುವದರಿಂದ ನಿರ್ಮಾಣವಾಗುವ ಮಣ್ಣು
1. ಮರುಭೂಮಿ ಮಣ್ಣು
2. ಲ್ಯಾಟರೈಟ್ ಮಣ್ಣು
3. ಪರ್ವತ ಮಣ್ಣು
4. ಮೆಕ್ಕಲು ಮಣ್ಣು

2. ಬಂಗಾಳಕೊಲ್ಲಿಯ ಉಷ್ಣವಲಯದ ಆವರ್ತ ಮಾರುತಗಳಿಂದ ಅಪಾರ ಹಾನಿಗೊಳಗಾಗುವ ರಾಜ್ಯಗಳು
1. ತಮಿಳುನಾಡು, ಆಂಧ್ರಪ್ರದೇಶ , ಒಡಿಶಾ
2. ಕೇರಳ, ತಮಿಳುನಾಡು , ಆಂಧ್ರಪ್ರದೇಶ
3. ಕರ್ನಾಟಕ , ಕೇರಳ , ತಮಿಳುನಾಡು
4. ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮಬಂಗಾಳ

3. ಕೆಳಗಿನ ಸ್ಥಳಗಳನ್ನು ಅವುಗಳಿಗೆ ಸಂಬಂಧಿಸಿದ ಉಷ್ಣತೆ ಹಾಗೂ ಮಳೆ ಪ್ರಮಾಣಗಳಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
   ಸ್ಥಳಗಳು                                            ಉಷ್ಣತೆ/ ಮಳೆ ಪ್ರಮಾಣ
1. ಗಂಗಾನಗರ                                   ಎ. ಅತಿ ಹೆಚ್ಚು ಮಳೆ
2. ರೊಯ್ಲಿ                                         ಬಿ. ಅತಿ ಹೆಚ್ಚು ಉಷ್ಣಾಂಶ
3. ಮೌಸಿನ್‍ರಾಮ್                          ಸಿ. ಅತಿ ಕಡಿಮೆ ಉಷ್ಣಾಂಶ
4. ದ್ರಾಸ್                                              ಡಿ. ಅತಿ ಕಡಿಮೆ ಮಳೆ
1      2    3     4
1.   ಸಿ     ಡಿ    ಎ   ಬಿ
2.   ಬಿ    ಡಿ    ಸಿ    ಎ
3.   ಸಿ      ಎ  ಬಿ    ಡಿ
4.   ಬಿ     ಡಿ  ಎ     ಸಿ

4.ರಾಜ್ಯಗಳು ಮತ್ತು ವನ್ಯ ಜೀವಿಧಾಮಗಳನ್ನು ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
ಎ                                        ಬಿ
1. ಅಸ್ಸಾಂ                           ಎ.ರಾಥಂಬೋರ
2. ಕರ್ನಾಟಕ                     ಬಿ.ದಾಂಡೇಲಿ
3. ರಾಜಸ್ತಾನ                     ಸಿ.ಜಲ್ದಾಪಾರ
4. ಪಶ್ಚಿಮ ಬಂಗಾಳ      ಡಿ. ಮಾನಸ
1       2      3     4
1. ಬಿ       ಡಿ    ಎ     ಸಿ
2. ಡಿ       ಬಿ     ಎ     ಸಿ
3. ಎ        ಸಿ     ಬಿ     ಡಿ
4. ಸಿ        ಬಿ      ಡಿ     ಎ

5. ಭಾರತದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಸರಿಯಾದ ಗುಂಪನ್ನು ಆಯ್ಕೆ ಮಾಡಿ
1. ಗಂಗಾ, ಸಿಂಧೂ , ಸಟ್ಲೇಜ್ , ಬ್ರಹ್ಮಪುತ್ರ
2. ನರ್ಮದಾ, ಶರಾವತಿ, ಕಾಳಿ, ತಾಪಿ
3. ಶರಾವತಿ, ತಾಪಿ, ಸಿಂಧೂ, ಗಂಗಾ
4. ಬ್ರಹ್ಮಪುತ್ರ, ಮಹಾನದಿ, ಕೋಸಿ, ಭಧ್ರ

6.ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿ
1. ನೆಡುತೋಪು ಬೇಸಾಯ
2. ಸಾಂಧ್ರ ಬೇಸಾಯ
3. ಆದ್ರ್ರ ಬೇಸಾಯ
4. ಮಿಶ್ರಣ ಬೇಸಾ

7.ಈ ಕೆಳಗಿನ ಹೇಳಿಕೆಯನ್ನು ಓದಿರಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪ್ರತಿಪಾದನೆ- (ಎ) ಕಬ್ಬಿಣದ ಅದಿರು ಕಬ್ಬಿಣಾಂಶವುಳ್ಳ ಲೋಹ ಖನಿಜ
ಸಮರ್ಥನೆ – (ಆರ್) ಒಡಿಶಾ ಭಾರತದಲ್ಲಿ ಅತ್ಯಧಿಕ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯ
1. ‘ಎ’ ಮತ್ತು ‘   ಆರ್ ಎರಡೂ ಸರಿ ಹಾಗೂ ಆರ್, ‘ಎ’ ನ ಸರಿಯಾದ ವಿವರಣೆಯಾಗಿದೆ
2. ‘ಎ’ ಸರಿ ಆದರೆ ‘ಆರ್’ ತಪ್ಪು
3. ಎ ಮತ್ತು ಆರ್ ಎರಡೂ ಸರಿ ಆದರೆ ಆರ್ , ‘ಎ’ ನ ಸರಿಯಾದ ವಿವರಣೆಯಾಗಿಲ್ಲ.
4. ‘ಆರ್’ ಸರಿ ಆದರೆ ‘ಎ’ ತಪ್ಪು.

8. ಪರಮಾಣು ಶಕ್ತಿ ಉತ್ಪಾದನೆಗೆ ಅವಶ್ಯವಿರುವ ಖನಿಜಗಳ ಸರಿಯಾದ ಗುಂಪನ್ನು ಆಯ್ಕೆ ಮಾಡಿ.
1. ಯುರೇನಿಯಂ ಮತ್ತು ಥೋರಿಯಂ
2. ಗಂಧಕ ಮತ್ತು ಪೊಟಾಷಿಯಂ
3. ಥೋರಿಯಂ ಮತ್ತು ಪೊಟಾಷಿಯಂ
4. ಯುರೇನಿಯಂ ಮತ್ತು ಗಂಧಕ

9. ಭಾರತದಲ್ಲಿ ಶಕ್ತಿ ಬಿಕ್ಕಟ್ಟಿಗೆ ಕಾರಣವಾದ ಸರಿಯಾದ ಹೇಳಿಕೆಗಳ ಗುಂಪನ್ನು ಆಯ್ಕೆ ಮಾಡಿ.
ಎ. ಕಡಿಮೆ ದರ್ಜೆಯ ಕಲ್ಲಿದ್ದಲು
ಬಿ. ದೇಶದಲ್ಲಿ ಕಡಿಮೆ ಪೆಟ್ರೋಲಿಯಂ ಉತ್ಪಾದನೆಯನ್ನು ಹೆಚ್ಚಿಸುವುದು.
ಸಿ. ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪಾದನೆಯನ್ನು ಹೆಚ್ಚಿಸುವುದು.
ಡಿ. ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಕಡಿಮೆ ಬಳಕೆ
1. ಎ, ಡಿ, ಮತ್ತು ಸಿ
2. ಬಿ, ಸಿ ಮತ್ತು ಎ
3. ಎ, ಡಿ, ಮತ್ತು ಬಿ
4. ಎ, ಬಿ ಮತ್ತು ಡಿ

10. ಭಾರತದ ಅತ್ಯಂತ ಹಳೆಯದೂ ಮತ್ತು ಈಗಲೂ ಅಸ್ತಿತ್ವ ಕಾಯ್ದುಕೊಂಡಿರುವ ವೃತ್ತ ಪತ್ರಿಕೆ
1. ಇಂಡಿಯಾ ಕ್ರೋನಿಕಲ್
2. ದಿ ಬೆಂಗಾಲ್ ಗೆಜೆಟ್
3. ಡೆಕ್ಕನ್ ಹೆರಾಲ್ಡ್
4. ಬಾಂಬೆ ಸಮಾಚಾರ್

11. ಎರಡು ವಸ್ತುಗಳ ನಡುವಿನ ಅಂತರದ ಬಗ್ಗೆ ಸ್ಪರ್ಶಿಸದೆ ಮಾಹಿತಿಗಳನ್ನು ಸಂಗ್ರಹಿಸುವ ಮಾದ್ಯಮ
1. ಜಾಗತಿಕ ಸ್ಥಾನ ನಿರ್ಧಾರ ವ್ಯವಸ್ಥೆ
2. ಭೌಗೋಳಿಕ ಮಾಹಿತಿ ವ್ಯವಸ್ಥೆ
3. ದೂರ ಸಂವೇದಿ ತಂತ್ರಜ್ಞಾನ
4. ಮಾಹಿತಿ ತಂತ್ರಜ್ಞಾನ

12. ಪ್ರತಿಪಾದನೆ – (ಎ) ಮುಂಬಯಿಯನ್ನು ‘ ಭಾರತದ ಮ್ಯಾಂಚೆಸ್ಟ್‍ರ್’ ಎಂದು ಕರೆಯಲಾಗಿದೆ.
ಸಮರ್ಥನೆ – (ಆರ್) ಮುಂಬಯಿ ನಗರವು ಹತ್ತಿ ಜವಳಿ ಉತ್ಪಾದನಾ ಕೇಂದ್ರಕ್ಕೆ ಪ್ರಸಿದ್ದಿಯಾಗಿದೆ.
1. ‘ಎ’ ಮತ್ತು ‘ಆರ್’ ಎರಡೂ ಸರಿ ಮತ್ತು ‘ಆರ್’ ‘ಎ’ ನ ಸರಿಯಾದ ವಿವರಣೆಯಾಗಿದೆ.
2. ‘ಎ’ ಮತ್ತು ‘ಆರ್’ ಎರಡೂ ಸರಿ ಆದರೆ ‘ ಆರ್’ ‘ಎ’ ನ ಸರಿಯಾದ ವಿವರಣೆಯಾಗಿಲ್ಲ.
3. ‘ಎ’ ಸರಿ ಆದರೆ ‘ ಆರ್’ ತಪ್ಪು
4. ‘ಆರ್’ ಸರಿ ಆದರೆ ‘ ಎ’ ತಪ್ಪು

13.ಪ್ರವಾಹಗಳ ಕಾರಣಗಳಿಗೆ ಸಂಬಂಧಿಸಿದ ಅಂಶಗಳನ್ನು ಗುರ್ತಿಸಿ.
1. ಅತ್ಯಧಿಕ ಮಳೆ, ಪ್ರಶಾಂತ ವಾಯು, ಹೆಚ್ಚು ತೇವಾಂಶಭರಿತ ಗಾಲಿ
2. ಅತ್ಯಧಿಕ ಮಳೆ, ಹಿಮಕರಗುವಿಕೆ, ನದಿ ಪಾತ್ರದಲ್ಲಿ ಹೂಳು ತುಂಬುವಿಕೆ
3. ನದಿ ಪಾತ್ರದಲ್ಲಿ ರಸ್ತೆಗಳ ನಿರ್ಮಾಣ, ಗಣಿಗಾರಿಕೆ, ಭೂಕಂಪ
4. ಭೂ ಫಲಕಗಳ ಚಲನೆ, ಜ್ವಾಲಾಮುಖಿ, ಭೂಕುಸಿತ

14. ಜನಸಂಖ್ಯೆಯ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳ ಸರಿಯಾದ ಪಟ್ಟಿಯನ್ನು ಆಯ್ಕೆ ಮಾಡಿ.
1. ಭಾಷೆ, ಪ್ರಾತ್ಯ, ಧರ್ಮ
2. ಸಂಬಂಧಗಳು, ಸರ್ಕಾರ, ಸಂಸ್ಕøತಿ
3. ಜನರ ಆಸಕ್ತಿ, ಸಮಾಜ , ಸಂಪ್ರದಾಯ
4. ಮೇಲ್ಮೈಲಕ್ಷಣ, ವಾಯುಗುಣ , ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ

15. ‘ಎ’ ಪಟ್ಟಿ ಯನ್ನು ‘ಬಿ’ ಪಟ್ಟಿಯೊಂದಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
1.ಮಹಾನದಿ            ಎ. ತ್ರಯಂಬಕ
2. ತಾಪಿ                       ಬಿ. ಅಮರಕಂಟಕ
3. ನರ್ಮದಾ             ಸಿ. ಮಲ್ತಾಯಿ
4. ಗೋದಾವರಿ        ಡಿ. ಶಿವಾಹ
1    2     3  4
1. ಡಿ  ಸಿ  ಬಿ  ಎ
2. ಬಿ  ಎ  ಡಿ  ಸಿ
3. ಡಿ  ಬಿ  ಸಿ  ಎ
4. ಡಿ  ಸಿ   ಎ   ಬಿ

16. ಕೆಳಗಿನ ಬಂದರುಗಳನ್ನು ಅವುಗಳಿಗೆ ಸಂಬಂಧಿಸಿದ ಲಕ್ಷಣಗಳೊಂದಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
ಬಂದರುಗಳು                                                                  ಲಕ್ಷಣಗಳು
1. ಮುಂಬಯಿ                                                         ಎ. ಅಲೆಗಳಿಂದ ಕೂಡಿದೆ,
ಹೂಳೆತ್ತುವುದು ಅಗತ್ಯ
2. ವಿಶಾಖಪಟ್ಟಣ                                                  ಬಿ. ದೊಡ್ಡದು ಹಾಗೂ
ಸುರಕ್ಷಿತವಾದುದು
3. ಚೆನ್ನೈ                                                                    ಸಿ. ಆಳವಾದುದು ಹಾಗೂ ಭೂ
ಆವೃತವಾದುದು
4. ಕೊಲ್ಕತ್ತ                                                                  ಡಿ. ಅತ್ಯಂತ ಹಳೆಯದು ಹಾಗೂ
ಕೃತಕ
1   2    3   4
1. ಸಿ ಡಿ ಬಿ ಎ
2. ಬಿ ಸಿ ಡಿ ಎ
3. ಡಿ ಬಿ ಎ ಸಿ
4. ಎ ಬಿ ಡಿ ಸಿ

17. ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ” ಎಂಬುದನ್ನು ತಿಳಿಸುವ ಭಾರತ ಸಂವಿಧಾನದ ವಿಧಿ
1. ವಿಧಿ – 39
2. ವಿಧಿ – 45
3. ವಿಧಿ – 21 ಎ
4. ವಿಧಿ – 51 ಎ

18. ಸಾಮಾಜಿಕ ಸ್ತರವಿನ್ಯಾಸದ ಲಕ್ಷಣಗಳಿಗೆ ಸಂಬಂಧಿಸಿದಂತೆ ಹೇಳಿಕೆಗಳ ಗುಂಪನ್ನು ಆಯ್ಕೆ ಮಾಡಿ
ಎ. ಸಾಮಾಜಿಕ ಸ್ತರವಿನ್ಯಾಸ ಸರ್ವ ವ್ಯಾಪಕವಾದುದು
ಬಿ. ಸಾಮಾಜಿಕ ಸ್ತರವಿನ್ಯಾಸ ಜಾಗತಿಕವಾಗಿದೆ
ಸಿ. ಸಾಮಾಜಿಕ ಸ್ತರವಿನ್ಯಾಸ ವಿವಿಧ ರೂಪಗಳಲ್ಲಿದೆ.
ಡಿ. ಸಾಮಾಜಿಕ ಸ್ತರವಿನ್ಯಾಸ ಪುರಾತನವಾದುದು
1. ಎ ಸಿ ಮತ್ತು ಬಿ
2. ಎ, ಸಿ ಮತ್ತು ಡಿ
3. ಎ, ಬಿ ಮತ್ತು ಸಿ
4. ಬಿ, ಸಿ ಮತ್ತು ಡಿ

19. ಭಾರತದ ಅಸ್ಪಶ್ಯ ವರ್ಗ ಹಾಗೂ ಗುಡ್ಡಗಾಡು ವರ್ಗದ ಜನರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂಬುದಾಗಿ ಹೆಸರಿಸಿದ ಬ್ರಿಟಿಷ್ ಸರ್ಕಾರದ ಕಾಯಿದೆ
1. 1773 ರ ರೆಗ್ಯುಲೇಟಿಂಗ್ ಕಾಯಿದೆ
2. 1009 ರ ಭಾರತ ಪರಿಷತ್ ಕಾಯಿದೆ
3. 1947 ರ ಭಾರತ ಸ್ವಾತಂತ್ರ್ಯ ಕಾಯಿದೆ
4. 1935 ರ ಭಾರತ ಸರ್ಕಾರದ ಕಾಯಿದೆ

20. 1971 ರ ಪೇಮೆಂಟ್ ಆಪ್ ಗ್ರಾಚ್ಯುಯಿಟಿ ಆಕ್ಟ್ ಪ್ರಕಾರ ಕೂಲಿ ಪಡೆಯುವ ದುಡಿಮೆಗಾರರು
ಎ. ತರಕಾರಿ ಮಾರುವವರು
ಬಿ. ಕಟ್ಟಡ ಕಟ್ಟುವ ಕಾರ್ಮಿಕರು
ಸಿ. ಸಾಮಾನುಗಳನ್ನು ತುಂಬುವ ಮತ್ತು ಇಳಿಸುವ ಕಾರ್ಮಿಕರು
ಡಿ. ಬ್ಯಾಂಕ್ ಕಾರ್ಮಿಕರು
1. ಎ, ಸಿ ಮತ್ತು ಡಿ
2. ಎ, ಬಿ ಮತ್ತು ಸಿ
3. ಎ, ಬಿ ಮತ್ತು ಡಿ
4. ಬಿ, ಡಿ ಮತ್ತು ಎ

21. ಮಾನವ ಕಳ್ಳಸಾಗಣೆ ತಡೆಯಲು ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
ಎ. ಮಕ್ಕಳ ಹಕ್ಕುಗಳ ಕ್ಲಬ್ ರಚನೆ
ಬಿ. ಮಕ್ಕಳ ಗ್ರಾಮ ಸಭೆ ನಡೆಸುವುದು
ಸಿ. ಪಂಚಾಯತ್ ಮಂಡಳಿಯ ನೇಮಕ
ಡಿ. ಬಾಲಿಕಾ ಸಂಘಗಳ ರಚನೆ
1. ಎ ಮತ್ತು ಡಿ ಮಾತ್ರ
2. ಬಿ ಮತ್ತು ಡಿ ಮಾತ್ರ
3. ಎ, ಬಿ ಮತ್ತು ಸಿ
4. ಎ, ಬಿ ಮತ್ತು ಡಿ

22. ‘ಎ’ ಪಟ್ಟಿಯೊಂದಿಗೆ ‘ ಬಿ’ ಪಟ್ಟಿಯನ್ನು ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
ಎ                                                                            ಬಿ
1. ಅನೈತಿಕ ಮಾನವ ಕಳ್ಳ ಸಾಗಾಣಿಕೆ            ಎ. 1961
ತಡೆ ಕಾಯಿದೆ
2. ಬಾಲ್ಯ ವಿವಾಹ ನಿಷೇಧ ಕಾಯಿದೆ            ಬಿ. 1956
3. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ              ಸಿ. 2006
ಒಡಂಬಡಿಕೆಗೆ ಭಾರತದ ಸಹಿ
4. ವರದಕ್ಷಿಣೆ ನಿಷೇಧ ಕಾಯಿದೆ                       ಡಿ. 1992

1   2     3       4
1. ಸಿ  ಡಿ  ಬಿ    ಎ
2. ಡಿ  ಎ  ಬಿ    ಎ
3. ಬಿ  ಸಿ   ಡಿ   ಎ
4.  ಡಿ  ಬಿ ಎ ಸಿ

23. ಪೂರ್ವ ಕರಾವಳಿಯಲ್ಲಿ ರಚನೆಗೊಂಡಿರುವ ಲಗೂನ್ ಸರೋವರಗಳು
1. ನಾಲ್ ಸರೋವರ , ದಾಲ್ ಸರೋವರ, ಪುಲಿಕಾಟ್ ಸರೋವರ
2. ಚಿಲ್ಕ ಸರೋವರ, ಕೊಲ್ಲೇರು ಸರೋವರ , ನಾಲ್ ಸರೋವರ
3. ಕೊಲ್ಲೇರು ಸರೋವರ, ಚಿಲ್ಕ ಸರೋವರ , ನಾಲ್ ಸರೋವರ
4. ದಾಲ್ ಸರೋವರ, ಪುಲಿಕಾಟ್ ಸರೋವರ, ಸಾಂಬಾರ್ ಸರೋವರ

24. ಅಕ್ಟೋಬರ್ ತಿಂಗಳ ಆರಂಭದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಹಿಂದಿರುಗಲು ಆರಂಭಿಸುತ್ತವೆ ಕಾರಣ-
1. ಭೂಭಾಗದ ಮೇಲೆ ಅಧಿಕ ಒತ್ತಡ – ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡ
2. ಭೂಭಾಗದ ಮೇಲೆ ಅಧಿಕ ಉಷ್ಣತೆ ಮತ್ತು ಬಂಗಾಳಕೊಲ್ಲಿಯಲ್ಲಿನ ಅಧಿಕ ಒತ್ತಡ
3. ಭೂಭಾಗದ ಮೇಲೆ ಕಡಿಮೆ ಒತ್ತಡ ಮತ್ತು ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡ
4. ಭೂಭಾಗದ ಮೇಲೆ ಕಡಿಮೆ ಒತ್ತಡ ಮತ್ತು ಬಂಗಾಳಕೊಲ್ಲಿಯಲ್ಲಿನ ಅಧಿಕ ಒತ್ತಡ

25. ಉತ್ತರದ ಮೈದಾನದಲ್ಲಿ ಮೆಕ್ಕಲು ಮಣ್ಣನ್ನು ಸಂಚಯಿಸುವ ಹಿಮಾಲಯದ ನದಿಗಳು
1. ಸಿಂಧೂ, ಕೋಸಿ, ಬ್ರಹ್ಮಪುತ್ರ
2. ಗಂಗಾ, ಸಟ್ಲೇಜ್, ಸಿಂಧೂ
3. ಗಂಗಾ, ಸಿಂಧೂ, ಕೋಸಿ
4. ಸಿಂಧೂ, ಗಂಗಾ ಬ್ರಹ್ಮಪುತ್ರ

# ಉತ್ತರಗಳು :
1. 3. ಪರ್ವತ ಮಣ್ಣು
2. 1. ತಮಿಳುನಾಡು, ಆಂಧ್ರಪ್ರದೇಶ , ಒಡಿಶಾ
3. 4. ಬಿ ಡಿ ಎ ಸಿ
4. 2. ಡಿ ಬಿ ಎ ಸಿ
5. 2. ನರ್ಮದಾ, ಶರಾವತಿ, ಕಾಳಿ, ತಾಪಿ
6. 2. ಸಾಂಧ್ರ ಬೇಸಾಯ
7. 3. ಎ ಮತ್ತು ಆರ್ ಎರಡೂ ಸರಿ ಆದರೆ ಆರ್ , ‘ಎ’ ನ ಸರಿಯಾದ ವಿವರಣೆಯಾಗಿಲ್ಲ.
8. 1. ಯುರೇನಿಯಂ ಮತ್ತು ಥೋರಿಯಂ
9. 4. ಎ, ಬಿ ಮತ್ತು ಡಿ
10. 4. ಬಾಂಬೆ ಸಮಾಚಾರ್
11. 3. ದೂರ ಸಂವೇದಿ ತಂತ್ರಜ್ಞಾನ
12. 1. ‘ಎ’ ಮತ್ತು ‘ಆರ್’ ಎರಡೂ ಸರಿ ಮತ್ತು ‘ಆರ್’ ‘ಎ’ ನ ಸರಿಯಾದ ವಿವರಣೆಯಾಗಿದೆ.
13. 2. ಅತ್ಯಧಿಕ ಮಳೆ, ಹಿಮಕರಗುವಿಕೆ, ನದಿ ಪಾತ್ರದಲ್ಲಿ ಹೂಳು ತುಂಬುವಿಕೆ
14. 4. ಮೇಲ್ಮೈಲಕ್ಷಣ, ವಾಯುಗುಣ , ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ
15. 1. ಡಿ ಸಿ ಬಿ ಎ
16. 2. ಬಿ ಸಿ ಡಿ ಎ
17. 1. ವಿಧಿ – 39
18. 2. ಎ, ಸಿ ಮತ್ತು ಡಿ
19. 4. 1935 ರ ಭಾರತ ಸರ್ಕಾರದ ಕಾಯಿದೆ
20. 2. ಎ, ಬಿ ಮತ್ತು ಸಿ
21. 4. ಎ, ಬಿ ಮತ್ತು ಡಿ
22. 0
23. 2. ಚಿಲ್ಕ ಸರೋವರ, ಕೊಲ್ಲೇರು ಸರೋವರ , ನಾಲ್ ಸರೋವರ
24. 1. ಭೂಭಾಗದ ಮೇಲೆ ಅಧಿಕ ಒತ್ತಡ – ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡ
25. 4. ಸಿಂಧೂ, ಗಂಗಾ ಬ್ರಹ್ಮಪುತ್ರ

Leave a Reply

Your email address will not be published. Required fields are marked *

error: Content Copyright protected !!