ಇಂದು ವಿಶ್ವ ಆಹಾರ ದಿನ (World Food Day), ಇಲ್ಲಿದೆ ಕೆಲವು ಗಮನಿಸಬೇಕಾದ ಅಂಶಗಳು
World Food Day : ಇಂದು ವಿಶ್ವ ಆಹಾರ ದಿನ. ಜೊತೆಗೆ ಜಗತ್ತಿನಾದ್ಯಂತ ಅಚರಿಸಲಾಗುವ ಬಹುಮುಖ್ಯ ದಿನ ಇಂದು. ಅಕ್ಟೋಬರ್ 16ರ ವಿಶ್ವ ಆಹಾರ ದಿನದ ಮಹತ್ವದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಲೇಬೇಕು. 1945ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಓ) ಅಕ್ಟೋಬರ್ 16ನ್ನು ವಿಶ್ವ ಆಹಾರ ದಿನವನ್ನಾಗಿ ಘೋಷಿಸಿತು. ಅಂದಿನಿಂದ ಈವರೆಗೆ ಪ್ರತಿವರ್ಷ ಅಕ್ಟೋಬರ್ 16ನ್ನು ಅಂತರಾಷ್ಟ್ರೀಯ ಆಹಾರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರತೀ ವರ್ಷ ಇದೇ ದಿನದಂದು ಹೊಸ ಸಂಗತಿಯೊಂದಿಗೆ ಆಹಾರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಕ್ಯಾಲೆಂಡರ್ನಲ್ಲಿ ಅತೀ ಪ್ರಮುಖ ದಿನವೆನಿಸಿರುವುದು ಅಕ್ಟೋಬರ್ 16 ಅಂದರೆ ವಿಶ್ವ ಆಹಾರ ದಿನ. ಸರ್ಕಾರದ ಹೊಸ-ಹೊಸ ಕಾರ್ಯಕ್ರಮಗಳು, ವ್ಯವಹಾರಗಳು, ಎನ್ಜಿಓಗಳು, ಮಾಧ್ಯಮ, ಸಾರ್ವಜನಿಕರು ಹೀಗೆ ಎಲ್ಲರೂ ಒಟ್ಟುಗೂಡಿ ವಿಶ್ವ ಆಹಾರ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
# ಹಿನ್ನೆಲೆ :
ಯುನೈಟೆಡ್ ನೇಷನ್ನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 1979 ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವೆಂದು ಗುರುತಿಸಿತು. ಈ ದಿನವು ಅಕ್ಟೋಬರ್ 16, 1945 ರಂದು ಸಂಭವಿಸಿದ ವಿಶ್ವಸಂಸ್ಥೆಯ (UN) ಆಹಾರ ಮತ್ತು ಕೃಷಿ ಸಂಸ್ಥೆ (FAO) ಅಡಿಪಾಯವನ್ನು ಸೂಚಿಸುತ್ತದೆ. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತಿದೆ. ಆರಂಭದಲ್ಲಿ ಎಫ್‌ಎಒ ಸ್ಥಾಪನೆಯ ನೆನಪಿಗಾಗಿ ವಿಶ್ವ ಆಹಾರ ದಿನವನ್ನು ಪ್ರಾರಂಭಿಸಲಾಯಿತು. ಕ್ರಮೇಣ ಈ ಆಚರಣೆಯು ಜಾಗತಿಕ ಘಟನೆಯಾಗಿ ಬದಲಾಯಿತು, ಆಹಾರದ ಕೊರತೆಯ ಬಗ್ಗೆ ಜಾಗೃತಿ ಮೂಡಿಸಿತು ಮತ್ತು ಜಗತ್ತಿನಾದ್ಯಂತ ಆಹಾರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಿತು.