HistorySpardha Times

ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ

Share With Friends

1. ದೇಶಮುಖರ ಬಂಡಾಯ ಎಲ್ಲಿ ನಡೆಯಿತು?
• ದೇಶಮುಖರ ಬಂಡಾಯ ಬೀದರ್‍ನಲ್ಲಿ ನಡೆಯಿತು.

2. ದೇಶಮುಖರ ಬಂಡಾಯದ ನೇತೃತ್ವವನ್ನು ಯಾರು ವಹಿಸಿದರು?
• ದೇಶಮುಖರ ಬಂಡಾಯದ ನೇತೃತ್ವವನ್ನು ಶಿವಲಿಂಗಪ್ಪ, ತಿರುಮಲರಾವ್ ಮತ್ತು ಮೇಘಶ್ಯಾಮ್ ವಹಿಸಿದ್ದರು.

3. ಕಿತ್ತೂರಿನಲ್ಲಿ ನಡೆದ ಇಂಗ್ಲಿಷರ ವಿರುದ್ದದ ಬಂಡಾಯದ ಪ್ರಮುಖ ಘಟನೆಗಳು ಯಾವುವು?
• 1824 ರಲ್ಲಿ ಕಿತ್ತೂರಿನ ದೇಶಾಯಿ, ಶಿವಲಿಂಗರುದ್ರ ಸರ್ಜಾ ಒಂದು ಗಂಡು ಮಗುವನ್ನು ದತ್ತು ತೆಗೆದುಕೊಂಡು ಸ್ವಲ್ಪ ಸಮಯದ ನಂತರ ತೀರಿಕೊಂಡನು. ಬ್ರಿಟಿಷರು ಈ ಚಿಕ್ಕ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ದೇಸಾಯಿಯ ವಿಧವೆಯಾಗಿದ್ದ ರಾಣಿ ಚೆನ್ನಮ್ಮ ವ್ರಿಟಿಷರ ವಿರುದ್ಧ ಹೋರಾಟ ನಡೆಸಿದಳು. ಯುದ್ಧಭೂಮಿಯಲ್ಲಿ ಸೈನ್ಯದ ಮುಂದಾಳತ್ವ ವಹಿಸಿ ವಿರಾವೇಶದಿಂದ ಹೋರಾಡಿದಳು. ಆದರು ಬ್ರಿಟಿಷರು ಕಿತ್ತೂರಿನ ಸೈನ್ಯವನ್ನು ಸೋಲಿಸಿದರು. ರಾಣಿ ಚೆನ್ನಮ್ಮ ಸೆರೆಹಿಡಿಯಲ್ಪಟ್ಟಳು. ಈದು ವರ್ಷಗಳ ನಂತರ ಆಕೆ ಸೆರೆಯಲ್ಲಿ ಸತ್ತಳು.
1829 ರಲ್ಲಿ ಕಿತ್ತೂರು ಇನ್ನೊಮ್ಮೆ ದಂಗೆ ಎದ್ದಿತು. ಸಂಗೊಳ್ಳಿ ರಾಯಣ್ಣನೆಂಬಾತ ಸೈನ್ಯವನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದನು. ರಾಣಿ ಚೆನ್ನಮ್ಮನ ದತ್ತು ಮಗನನ್ನು ರಾಜನನ್ನಾಗಿಸುವುದು ಅವನ ಉದ್ದೇಶವಾಗಿತ್ತು. ಆದರೆ ಬ್ರಿಟಿಷರು ಆತನನ್ನು ಸೋಲಿಸಿ ಸೆರೆಹಿಡಿದರು.

4. ಹಲಗಲಿಯ ಬೇಡರು ಬ್ರಿಟಿಷರ ವಿರುದ್ದ ದಂಗೆ ಎಳಲು ಕಾರಣವೇನು?
• ಲೈಸೆನ್ಸ್ ಇಲ್ಲದ ಶಸ್ತ್ರಾಸ್ತ್ರಗಳನ್ನೆಲ್ಲಾ ಬ್ರಿಟಿಷ್ ಸರಕಾರಕ್ಕೆ ಮೆಳಿಸಬೇಕೆಂಬ ಕಾನೂನಿನಿಂದ ಹಲಗಲಿಯ ಬೆಡರು ಸಮಾಧಾನ ಹೊಂದಿದರು. ಇದನ್ನು ವಿರೋಧಿಸಿ ಹಲಗಲಿಯ ಬೇಡರು ದಂಗೆ ಎದ್ದರು. ಅನೆಕ ಬೇಡರು ಪ್ರಾಣಾರ್ಪಣೆ ಮಾಡಿದರು.

5. ಕರ್ನಾಟಕದಲ್ಲಿ ನಡೆದ ಸ್ವಾತಮತ್ರ್ಯ ಹೋರಾಟದಲ್ಲಿ ಸುರಪುರದ ವೆಂಕಟಪ್ಪನಾಯಕನು ವಹಿಸಿದ ಪಾತ್ರವೇನು?
• ಸುರಪುರವನ್ನು ಆಳುತ್ತಿದ್ದ ವೆಂಕಟಪ್ಪನಾಯಕನು ಬ್ರಿಟಿಷರ ಸಾರ್ವಭೌಮತ್ವವನ್ನು ಪ್ರಶ್ನಿಸಿ, ಕಪ್ಪ ಕಾಣಿಕೆಗಳನ್ನು ಕೊಡಲು ನಿರಾಕರಿಸಿದನು. ಈ ಕಾರಣದಿಂದಾಗಿ 1858 ರಲ್ಲಿ ಬ್ರಿಟಿಷರು ಸುರಪುರಕ್ಕೆ ಮುತ್ತಿಗೆ ಹಾಕಿದರು. ಹೋರಾಟದಲ್ಲಿ ಬಂಧಿತನಾದ ವೆಂಕಟಪ್ಪನಾಯಕ ಬ್ರಿಟಿಷರ ಗುಮಾಮಗಿರಿಯನ್ನು ಒಪ್ಪಲು ನಿರಾಕರಿಸಿ ಪ್ರಾಣತ್ಯಾಗ ಮಾಡಿದನು.

6. ನರಗುಂದದ ಬಂಡಾಯದ ನಾಯಕ ಯಾರು? ಅವನು ಬ್ರಿಟಿಷರ ವಿರುದ್ಧ ದಂಗೆ ಏಳಲು ಕಾರಣವೇನು?
• ನರಗುಂದದ ಸಂಸ್ಥಾನಿಕ ‘ಭಾಸ್ಕರ್ ರಾವ್’ ಅಲ್ಲಿ ನಡೆದ ಬಂಡಾಯದ ನಾಯಕನಾಗಿದ್ದನು.
ದತ್ತು ಮಕ್ಕಳನ್ನು ಪಡೆಯುವಂತಿಲ್ಲ ಎನ್ನುವ ಬ್ರಿಟಿಷ್ ಧೋರಣೆಯನ್ನು ವಿರೋಧಿಸಿ ನರಗುಂದದ ಸಂಸ್ಥಾನಿಕ ಭಾಸ್ಕರ್‍ರಾವ್ ಬ್ರಿಟಿಷರ ವಿರುದ್ಧ ಬಂಡೆದ್ದನು. ಅವರನ್ನು ಬಂಧಿಸಿ, ಬೆಲಗಾವಿಯಲ್ಲಿ ಗಲ್ಲಿಗೇರಿಸಿದನು.

7. ಮುಂಡರಗಿಯ ದಂಗೆಯನ್ನು ವಿವರಿಸಿರಿ.
• ಮುಂಡರಗಿಯ ಭೀಮರಾಯರು ಹರಪನಹಳ್ಳಿ ಮತ್ತು ಬಳ್ಳಾರಿಯಲ್ಲಿ ತಹಶೀಲ್ದಾರರಾಗಿ ಕೆಲಸ ಮಾಡಿದ್ದರು. ಈತ ಬ್ರಿಟಿಷರ ವಿರುದ್ಧ ಜಮೀನುದಾರರು ಬಂಡೇಳುವಂತೆ ಮಾಡಿದರು. ಬ್ರಿಟಿಷರು ಹಮ್ಮಿಗೆಯ ಕೆಂಚನಗೌಡರ ವಾಡೆಗೆ ಬೀಗಮುದ್ರೆ ಹಾಕಿದ್ದರು. ಭೀಮರಾಯರು ಕೆಂಚನಗೌಡರ ಜೊತೆ ಹಮ್ಮಿಗೆಯ ವಾಡೆಯ ಮೇಲೆ ದಾಳಿ ಮಾಡಿ ಸರಕಾರ ಹಾಕಿದ್ದ ಬೀಗಮುದ್ರೆ ಮುರಿದು ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು. ನಂತರ ಗದುಗಿಗೆ ಹೋಗಿ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿದರು. ಹಾಗೂ ಕೊಪ್ಪಳದ ಕೋಟೆಯನ್ನು ವಶಪಡಿಸಿಕೊಳಡರು. ಕೋಟೆಯನ್ನು ಮುತ್ತಿದ ಮತ್ತು ಬ್ರಿಟಿಷರರೊಡನೆ ಹೋರಾಡುತ್ತ ಭೀಮರಾಯರು ಅಸುನೀಗಿದರು.

 

8. ಕರ್ನಾಟಕದಲ್ಲಿ ಅಸಹಕಾರ ಚಳುವಳಿಯನ್ನು ಹೆಗೆ ನಡೆಸಲಾಯಿತು?
• ಕರ್ನಾಟಕದಲ್ಲಿ ಅಸಹಕಾರ ಚಳುವಳಿಯು ಸಕ್ರಿಯವಾಗಿ ನಡೆಯಿತು. ಸುಪ್ರಸಿದ್ಧ ವಕೀಲರುಗಳಾದ ಬಿಜಾಪುರದ ಶ್ರೀನಿವಾಸರಾವ್ ಕೌಜಲಗಿ, ಹನುಮಂತ ರಾವ್ ಕೌಜಲಗಿ , ಮಂಗಳೂರಿನ ಕಾರ್ನಾಡ್ ಸದಾಶಿವರಾವ್, ಬಳ್ಳಾರಿಯ ಕೋಲಾಚಲಂ ವೆಂಕಟರಾವ್ ಮುಂತಾದವರು ತಮ್ಮ ವಕೀಲಿ ವೃತ್ತಿ ತ್ಯಜಿಸಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಹಲವಾರು ರಾಷ್ಟ್ರೀಯ ಶಾಲೆಗಳನ್ನು ಆರಂಭಿಸಿದರು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ತ್ಯಜಿಸಿದರು,. ಅನೇಕ ಸರ್ಕಾರಿ ನೌಕರರು ನ್ಣಕರಿಗೆ ವಿದಾಯ ಹೇಳಿ ಚಳುವಳಿಯಲ್ಲಿ ಭಾಗವಹಿಸಿದರು. ಎಲ್ಲೆಡೆ ಸಭೆ, ಮೆರವಣಿಗೆ, ವಿದೇಶಿ ವಸ್ತುಗಳ ದಹನ ನಡೆಯಿತು. ಆನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಹನುಮಂತರಾವ್ ಮೊಹರೆ ‘ ಕರ್ನಾಟಕ ವೈಭವ’ ದಲ್ಲಿ ಬರೆದ ಬ್ರಿಟಿಷ್ ವಿರೋಧಿ ಲೇಖನಗಳಿಗಾಗಿ ಬಂಧಿತರಾದರು. ಎನ್.ಎಸ್. ಹರ್ಡೀಕರ್ ಹಿಂದೂಸ್ಥಾನ ಸೇವಾದಳವನ್ನು ಪ್ರಾರಂಭಿಸಿದರು.

9. 1924 ರ ಕಾಂಗ್ರೆಸ್ ಅಧಿವೇಶನ ಎಲ್ಲಿ ನಡೆಯಿತು? ಅದರ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?
• 1924 ರ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು. ಗಾಂಧೀಜಿ ಅದರ ಅಧ್ಯಕ್ಷತೆಯನ್ನು ವಹಿಸಿದ್ದರು.

10. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಎಲ್ಲಿ ಆಚರಿಸಲಾಯಿತು? ಯಾರು ಕಾನುನೂ ಮುರಿದು ಉಪ್ಪು ತಯಾರಿಸಿದರು?
• ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಅಂಕೋಲಾದಲ್ಲಿ ಆಚರಿಸಲಾಯಿತು.
‘ಎಂ.ಪಿ. ನಾಡಕರ್ಣಿಯವರು’ ಅಂಕೋಲದಲ್ಲಿ ಉಪ್ಪಿನ ಕಾನೂನುಗಳನ್ನು ಮುರಿದು ಉಪ್ಪು ತಯಾರಿಸಿದರು.

11. ಕರ್ನಾಟಕದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹವನ್ನು ವಿವರಿಸಿರಿ.
• ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಅಂಕೋಲದಲ್ಲಿ 1930 ರಲ್ಲಿ ಆಚರಿಸಲಾಯಿತು. ಬೃಹತ್ ಪ್ರಮಾಣದ ಜನರ ನಡುವೆ ಎಮ್. ಪಿ. ನಾಡಕರ್ಣಿಯವರು ಅಂಕೋಲದಲ್ಲಿ ಉಪ್ಪಿನ ಕಾನೂನುಗಳನ್ನು ಮುರಿದು ಉಪ್ಪು ತಯಾರಿಸಿದರು. ಉತ್ತರ ಕನ್ನಡದ ಸಾಣೆಕಟ್ಟಿ ಸರ್ಕಾರಿ ಉಪ್ಪಿನ ಮಾಳಗಳ ಮೇಲೆ ಧಾಳಿ ಮಾಡಿ ಜನಸಾಮಾನ್ಯರಿಗೆ ಉಪ್ಪನ್ನು ವಿತರಿಸಿದರಿ. ಆದುದರಿಂದ ಅಂಕೋಲವನ್ನು ಕರ್ನಾಟಕದ ‘ ದಂಡಿ’ ಎಂದು ಕರೆಯಲ್ಪಡುತ್ತದೆ.

12. ಅರಣ್ಯ ಸತ್ಯಾಗ್ರಹವನ್ನು ಯಾವಾಗ ಪ್ರಾರಂಭಿಸಲಾಯಿತು? ಅರಣ್ಯ ಸತ್ಯಾಗ್ರಹವನ್ನು ವಿವರಿಸಿರಿ.
• 1932 ರಲ್ಲಿ ಎರಡನೆಯ ಹಂತದ ಕಾನೂನು ಭಂಗ ಚಳುವಳಿಯ ಅಂಗವಾಗಿ ಅರಣ್ಯ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು. ಸಿರ್ಸಿಯಲ್ಲಿ ಕಾದಿಟ್ಟ ಸರಕಾರಿ ಅರಣ್ಯದ ಮರಗಳನ್ನು ಕಡಿದು ಸತ್ಯಾಗ್ರಹಿಗಳು ಕಾನೂನು ಉಲ್ಲಘಿಸಿದರು. ಸರ್ಕಾರಿ ಭೂಮಿಯಲ್ಲಿ ನಿಗದಿತ ಸುಂಕ ಕೊಡದೆ ದನಕರುಗಳನ್ನು ಮೇಯಿಸಿದರು. ಪುರುಷರ ಜೊತೆ ಸ್ತ್ರೀಯರೂ ಚಳುವಳಿಯಲ್ಲಿ ಭಾಗವಹಿಸಿದರು. ಈಚಲ ಮರಗಳನ್ನು ಕಡಿದು ಪಾನ ನಿರೋಧದ ಮಹತ್ವವನ್ನು ಸಾರಿದರು.

13. ಕರ್ನಾಟಕದಲ್ಲಿ ಕಾನೂನುಭಂಗ ಚಳುವಳಿಯ ಅಂಗವಾಗಿ ನಡೆದ ಸತ್ಯಾಗ್ರಹಗಳು ಯಾವುವು?
• ಎ. ಉಪ್ಪಿನ ಸತ್ಯಾಗ್ರಹ
ಬಿ. ಅರಣ್ಯ ಸತ್ಯಾಗ್ರಹ

14. ಕರ್ನಾಟಕದಲ್ಲಿ ಕರ ನಿರಾಕರಣೆ ಸತ್ಯಾಗ್ರಹವನ್ನು ಹೇಗೆ ಹಮ್ಮಿಕೊಳ್ಳಲಾಯಿತು?
• ಕರ ನಿರಾಕರಣೆ ಅಥವಾ ಕಂದಾಯ ನಿರಾಕರಣೆ ಸತ್ಯಾಗ್ರಹವನ್ನು ಉತ್ತರ ಕನ್ನಡದ ಸಿರ್ಸಿ, ಸಿದ್ದಾಪುರ, ಅಂಕೋಲ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ 1931 ರಲ್ಲಿ ಸಂಘಟಿಸಲಾಗಿತ್ತು. ಹಿರೇಕೆರೂರ್ ಕರ ನಿರಾಕರಣೆ ಸತ್ಯಾಗ್ರಹದ ನಾಯಕತ್ವವನ್ನು “ವೀರನಗೌಡ ಪಾಟೀಲ್” ವಹಿಸಿದ್ದರು. ಇದೇ ಚಳುವಳಿಯನ್ನು 1930 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕುಗಳಿಗೆ ವಿಸ್ತರಿಸಲಾಗಿತ್ತು. ಮನೆಯಲ್ಲಿನ ಸಾಮಾನು, ದನಕರುಗಳು ಜಪ್ತಿಯಾದರೂ ರೈತರು ಜಗ್ಗದೆ ಚಳುವಳಿ ನಡೆಸಿದರು. ಆಸ್ತಿ, ಮನೆಗಳನ್ನು ಕಳೆದುಕೊಂಡರು. ರೈತರಿಂದ ಜಪ್ತಿಯಾದ ವಸ್ತುಗಳನ್ನು ಸರಕಾರ ಹರಾಜಿಗೆ ಇಟ್ಟಾಗ ಸ್ಥಳೀಯ ಜನರು ಇಂತಹ ಸಾಮಾನುಗಳನ್ನು ಕೊಳ್ಳಲು ಮುಂದಾಗಲಿಲ್ಲ. ಬ್ರಿಟಿಷ್ ಪರ ವ್ಯಕ್ತಿಗಳು ಇಂತಹ ಜಪ್ತಿಯ ವಸ್ತುಗಳನ್ನು ಕೊಂಡಲ್ಲಿ ಅಂಥವರ ಮನೆಯ ಮುಂದೆ ಸ್ತ್ರೀ ಸತ್ಯಾಗ್ರಹಿಗಳು ಉಪವಾಸ ಸತ್ಯಾಗ್ರಹ ಕೈಗೊಂಡರು. ಕಂದಾಯ ನಿರಾಕರಣೆ ಚಳುವಳಿ ಯಶಸ್ವಿಯಾಗಿ ನಡೆಯಿತು.

15. ಮೈಸೂರು ರಾಜ್ಯ ಕಾಂಗ್ರೆಸ್‍ನ್ನು ಯಾರು ಪ್ರಾರಂಭಿಸಿದರು? 1938 ರಲ್ಲಿ ಮೈಸೂರು ರಾಜ್ಯ ಕಾಂಗ್ರೆಸ್‍ನ ಅಧಿವೇಶನ ಎಲ್ಲಿ ನಡೆಯಿತು?
• ಮೈಸೂರು ರಾಜ್ಯ ಕಾಂಗ್ರೆಸ್‍ನ್ನು ಟಿ. ಸಿದ್ದಲಿಂಗಯ್ಯನವರು’ ಪ್ರಾರಂಭಿಸಿದರು.
1938 ರಲ್ಲಿ ಮೈಸೂರು ರಾಜ್ಯ ಕಾಂಗ್ರೆಸ್‍ನ ಅಧಿವೇಶನ ‘ ಶಿವಪುರದಲ್ಲಿ’ ನಡೆಯಿತು.

16. ಶಿವಪುರದ ಧ್ವಜ ಸತ್ಯಾಗ್ರಹವನ್ನು ವಿವರಿಸಿ.
• 1938 ರಲ್ಲಿ ಮೈಸೂರು ರಾಜ್ಯ ಕಾಂಗ್ರೆಸ್ ಮದ್ದೂರಿನ ಸಮೀಪದ ಶಿವಪುರದಲ್ಲಿ ತನ್ನ ಅಧಿವೇಶನವನ್ನು ಹಮ್ಮಿಕೊಂಡಿತು. ಮೈಸೂರು ಋಆಜ್ಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ಆಗ ನಿಷೇಧಿಸಲಾಗಿತ್ತು. ಅಲ್ಲಿ ಃಆಜರಿದ್ದ ಸತ್ಯಾಗ್ರಹಿಗಳ ಮುಂದೆ ಪೋಲಿಸರ ಸರ್ಪಗಾವಲಿನ ಹೊರತಾಗಿಯೂ ಕಾಂಗ್ರೆಸ್ ಅಧ್ಯಕ್ಷ ‘ ಟಿ. ಸಿದ್ದಲಿಂಗಪ್ಪನವರು ತ್ರಿವರ್ಣ ಧ್ವಜವನ್ನು ಹಾರಿಸಿದರು. ಅವರನ್ನು ಬಂಧಿಸಲಾಯಿತು. ಇದೇ ಸ್ಥಳದಲ್ಲಿ ಪ್ರತಿದಿನ ಧ್ವಜ ಹಾರಿಸುವ ನಿರ್ಣಯ ಕೈಗೊಳ್ಳಲಾಯಿತು. ಮತ್ತು ರಾಜ್ಯದೆಲ್ಲೆಡೆ ಧ್ವಜ ಸತ್ಯಾಗ್ರಹವನ್ನು ನಡೆಸಲು ಕರೆ ನೀಡಳಾಯಿತು.

17. ವಿದುರಾಶ್ವತ್ಥದಲ್ಲಿ ನಡೆದ ಧ್ವಜ ಸತ್ಯಾಗ್ರಹವನ್ನು ವಿವರಿಸಿ.
• ಧ್ವಜ ಸತ್ಯಾಗ್ರಹದ ಅಂಗವಾಗಿ ಕೋಲಾರ ಜಿಲ್ಲೆಯ ವಿದುರಾಶ್ವತ್ಥ ಎಂಬ ಊರಲ್ಲಿ ಧ್ವಜ ಸತ್ಯಾಗ್ರಹವನ್ನು ನಡೆಸಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಆಗ ಪೋಲಿಸರು ಗೋಲಿಬಾರನಲ್ಲಿ ಮೂವತ್ತು ಜನರು ಕೊಲ್ಲಲ್ಪಟ್ಟರು. ಆದರೆ ಪತ್ರಿಕಾ ಪ್ರತಿಬಂಧಗಳಿಂದ ಸಾವಿನ ಸಂಖ್ಯೆ ಅತಿಶಯವಾಗಿತ್ತೆಂದು ಸುದ್ದಿ ಹರಡಿತು. ಈ ಘಟನೆ ರಾಜ್ಯ ಕಾಂಗ್ರೆಸ್ ಮತ್ತು ಸರಕಾರದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

18. ಈಸೂರಿನಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯನ್ನು ವಿವರಿಸಿರಿ.
• ಶಿಕಾರಿಪುರ ತಾಲೂಕಿನ ಈಸೂರು ಕೂಡಾ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿತು. ಅವರು ಶಾಂತಿಯುತವಾಗಿ ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಹೊತ್ತ ಮೆರವಣಿಗೆಯನ್ನು ಸಂಘಟಿಸಿದರು. ಸಂಸ್ಥಾನದ ಕಾನೂನುಗಳನ್ನು ಮುರಿದರು. ತಮ್ಮ ಗ್ರಾಮವನ್ನು ಸ್ವತಂತ್ರವೆಂದು ಸಾರಿ ಸರಕಾರಿ ಅಧಿಕಾರಿಗಳು ಈ ಗ್ರಾಮಕ್ಕೆ ಬಾರದಂತೆ ತಡೆದರು. ಗ್ರಾಮಕ್ಕೆ ಬಂದ ಇಬ್ಬರು ಸರಕಾರಿ ಅಧಿಕಾರಿಗಳನ್ನು ಗ್ರಾಮಸ್ಥರು ಕೊಂದರು. ಇದರಿಂದ ಐದು ಜನರಿಗೆ ಗಲ್ಲುಶಿಕ್ಷೆಯಾಯಿತು.

19. ಮೈಸೂರು ಚಲೋ ಚಳುವಳಿ ಯಾವಾಗ ನಡೆಯಿತು? ಆಗ ಮೈಸೂರಿನ ದಿವಾನರಾಗಿದ್ದರು?
• ಮೈಸೂರು ಚಲೋ ಚಳುವಳಿ 1947 ರಲ್ಲಿ ನಡೆಯಿತು. ‘ಆರ್ಕಾಟ್ ರಾಮಸ್ವಾಮಿ ಮುದಲಿಯಾರ್’ 1947 ರಲ್ಲಿ ಮೈಸೂರಿನ ದಿವಾನರಾಗಿದ್ದರು.

20. ಮೈಸೂರು ಚಲೋ ಚಳುವಳಿಯ ಉದ್ದೇಶಗಳೇನು?
• ಮೈಸೂರು ಚಲೋ ಚಳುವಳಿಯ ಉದ್ದೇಶ ಮೈಸೂರನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲು ಮತ್ತು ಜವಾಬ್ದಾರಿಯುತ ಸರಕಾರವನ್ನು ಸ್ಥಾಪಿಸಲು ಮಹಾರಾಜರನ್ನು ಒತ್ತಾಯಿಸುವುದಾಗಿತ್ತು.

error: Content Copyright protected !!