Film Awards : 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಇಲ್ಲಿದೆ ಲಿಸ್ಟ್
Karnataka State Film Awards: Here Is The Full List Of Winners
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಗಿದ ಮೂರೇ ದಿನಗಳಲ್ಲಿ 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ ಜಂಟಲ್ ಮ್ಯಾನ್ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ ಹಾಗೂ ಪಿಂಕಿ ಎಲ್ಲಿ ಚಿತ್ರಕ್ಕೆ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಚಿತ್ರವಾಗಿ ಹೊರಹೊಮಿರುವ ಪಿಂಕಿ ಎಲ್ಲಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವಿವಿಧ ವಿಭಾಗಗಳಿಗೆ 71 ಚಲನಚಿತ್ರಗಳು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು. ನಿರ್ದೇಶಕ ಬಿ.ಎನ್. ಲಿಂಗದೇವರು ಅಧ್ಯಕ್ಷತೆಯ ಆಯ್ಕೆ ಸಮಿತಿಯು 66 ಸಿನಿಮಾಗಳನ್ನು ವೀಕ್ಷಿಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಮೊದಲನೇ ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ (ನಿರ್ಮಾಪಕ ಕೃಷ್ಣಗೌಡ ಮತ್ತು ನಿರ್ದೇಶಕ ಪೃಥ್ವಿ ಕೊಣನೂರು- ತಲಾ ಒಂದು ಲಕ್ಷ ರೂ. ನಗದು ಹಾಗೂ 50 ಗ್ರಾಂ ಚಿನ್ನದ ಪದಕ)
*ಎರಡನೇ ಅತ್ಯುತ್ತಮ ಚಿತ್ರ: ವರ್ಣಪಟಲ (75 ಸಾವಿರ ರೂ.ಹಾಗೂ 100 ಗ್ರಾಂ ಬೆಳ್ಳಿ ಪದಕ)
ಮೂರನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು (50 ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ ಪದಕ)
*ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ: 1. ಗಿಳಿಯು ಪಂಜರದೊಳಿಲ್ಲ (75 ಸಾವಿರ ರೂ. 100 ಗ್ರಾಂ ಬೆಳ್ಳಿ ಪದಕ) 2.ಈ-ಮಣ್ಣು (75 ಸಾವಿರ ರೂ. 100 ಗ್ರಾಂ ಬೆಳ್ಳಿ ಪದಕ)
*ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್ (50 ಸಾವಿರ ರೂ. ಹಾಗೂ 200 ಗ್ರಾಂ ಬೆಳ್ಳಿ ಪದಕ)
*ಅತ್ಯುತ್ತಮ ಮಕ್ಕಳ ಚಿತ್ರ: ಪದಕ
*ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿಹಕ್ಕಿ
*ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಚೀಟಿಗೆ (ತುಳು)
*ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಪ್ರಜ್ವಲ್ ದೇವರಾಜ್ (ಜೆಂಟಲ್‌ಮ್ಯಾನ್-20 ಸಾವಿರ ರೂ.ಹಾಗೂ 100 ಗ್ರಾಂ ಬೆಳ್ಳಿ ಪದಕ)
*ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
*ಅತ್ಯುತ್ತಮ ಪೋಷಕ ನಟ (ಕೆ.ಎಸ್.ಅಶ್ವತ್‌್ಥ ಪ್ರಶಸ್ತಿ): ರಮೇಶ್ ಪಂಡಿತ್ (ತಲೆದಂಡ)
*ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ ಶಾಸಿ
*ಅತ್ಯುತ್ತಮ ಪೋಷಕ ನಟಿ: ಕೆ.ಎಸ್. ಮಂಜುಳಮ್ಮ (ದಂತಪುರಾಣ)
*ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ (ರಾಂಚಿ)
*ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ಚಾಂದಿನಿ ಬಾರ್)
*ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಹೂವಿನ ಹಾರ)
*ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್ (ತಲೆದಂಡ)
*ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್ ಬಡೇರಿಯಾ (ಮಾಲ್ಗುಡಿ ಡೇಸ್)
*ಅತ್ಯುತ್ತಮ ಸಂಕಲನ ನಾಗೇಂದ್ರ ಕೆ.ಉಜ್ಜಿನಿ (ಆ್ಯಕ್ಟ್ 1978)
*ಅತ್ಯುತ್ತಮ ಬಾಲ ನಟ: ಮಾ.ಅಹಿಲ್‌ಅನ್ಸಾರಿ (ದಂತಪುರಾಣ)
*ಅತ್ಯುತ್ತಮ ಬಾಲ ನಟಿ: ಬೇಬಿ ಹಿತೈಷಿ ಪೂಜಾರ್ (ಪಾರು)
*ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್ (ಬಿಚ್ಚುಗತ್ತಿ)
*ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಣ್ಣು (ಪರ್ಜನ್ಯ-ಗೀತೆ: ಮೌನವು ಮಾತಾಗಿತೆ)
*ಸಚಿನ್ ಶೆಟ್ಟಿ ಕುಂಬ್ಳೆ (ಈ ಮಣ್ಣು- ದಾರಿಯೊಂದು ಹುಡುಕುತ್ತಿದೆ) (ಆಚಾರ್ಯ ಶ್ರೀ ಶಂಕರ)
*ಅತ್ಯುತ್ತಮ ಹಿನ್ನೆಲೆ ಗಾಯಕಿ: ಆರುಂಧತಿ ವಶಿಷ್ಠ (ದಂತಪುರಾಣ)
*ತೀರ್ಪುಗಾರರ ವಿಶೇಷ ಪ್ರಶಸ್ತಿ: ನಟನೆ: ದಿವಂಗತ ಬಿ.ವಿಜಯ್‌ಕುಮಾರ್ ವಿಜಯ್(ಸಂಚಾರಿ ವಿಜಯ್)
*ವಸ್ತ್ರ ವಿನ್ಯಾಸ: ಶ್ರೀ ವಲ್ಲಿ (ಸಾರಾವಜ್ರ)
*ಪ್ರಸಾದನ: ರಮೇಶ್ ಬಾಬು (ತಲೆದಂಡ)
*ಶಬ್ದ ಗ್ರಹಣ: ವಿ.ಜಿ.ರಾಜನ್ (ಅಮೃತ ಅಪಾರ್ಟ್‌ಮೆಂಟ್ಸ್)
*ವಿಶೇಷ ಚೇತನ ನಟ ಪ್ರಶಸ್ತಿ: ವಿಶ್ವಾಸ್ ಕೆ.ಎಸ್. (ಅರಬ್ಬಿ)
*ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಚಂಪಕದಾಮ ಬಾಬು (ಕನ್ನಡಿಗ)