Current AffairsSpardha Times

2024ರ ಜಾಗತಿಕ ಫೈರ್‌ಪವರ್ ಪಟ್ಟಿ ಬಿಡುಗಡೆ, 4ನೇ ಸ್ಥಾನದಲ್ಲಿ ಭಾರತದ ಮಿಲಿಟರಿ ಶಕ್ತಿ

Share With Friends

ಗ್ಲೋಬಲ್ ಫೈರ್‌ಪವರ್ ಶ್ರೇಯಾಂಕ(The Global Firepower’s Military Strength Rankings for 2024)ವನ್ನು ಬಿಡುಗಡೆ ಮಾಡಿದ್ದು, ಈ ಶ್ರೇಯಾಂಕದಲ್ಲಿ ಮಿಲಿಟರಿ ಶಕ್ತಿಯ ವಿಷಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಗಳ (Most powerful military) ಟಾಪ್ 10 ಪಟ್ಟಿಯಲ್ಲಿ (Top 10 List) ಭಾರತೀಯ ಸೇನೆಯು (Indian Military) ನಾಲ್ಕನೇ ಸ್ಥಾನದಲ್ಲಿದೆ. ರಷ್ಯಾ ಮತ್ತು ಚೀನಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಗ್ಲೋಬಲ್ ಫೈರ್ ಹವರ್ ಶ್ರೇಯಾಂಶದ ಪ್ರಕಾರ, ಭಾರತವು 0.1023 ಅಂಶಗಳನ್ನು ಗಳಿಸಿದೆ. ಯುಎಸ್ 0.0699 ಸ್ಕೋರ್ ಮಾಡಿದರೆ, ರಷ್ಯಾ 0.0702 ಮತ್ತು ಚೀನಾ 0.0706 ಗಳಿಸಿದೆ. ಈ ಶ್ರೇಯಾಂಶದ ಪ್ರಕಾರ, 0.000 ಸ್ಕೋರ್ ಅನ್ನು ಪರಿಪೂರ್ಣವೆಂದು ಪರಿಗಣಿಸಲಾಗುತ್ತದೆ. ಮಿಲಿಟರಿ ಶಕ್ತಿಯನ್ನು ಆಧರಿಸಿ ಜಾಗತಿಕ ಫೈರ್‌ಪವರ್ 2024 ರ ಈ ಪಟ್ಟಿಯಲ್ಲಿ ಒಟ್ಟು 145 ದೇಶಗಳನ್ನು ಸೇರಿಸಲಾಗಿದೆ. ಟಾಪ್ 10 ಪಟ್ಟಿಯಲ್ಲಿ ಭಾರತವನ್ನು ಹೊರತುಪಡಿಸಿ, ದಕ್ಷಿಣ ಕೊರಿಯಾ (5), ಯುನೈಟೆಡ್ ಕಿಂಗ್‌ಡಮ್ (6), ಜಪಾನ್ (7), ಟರ್ಕಿಯೆ (8), ಪಾಕಿಸ್ತಾನ (9) ಮತ್ತು ಇಟಲಿ (10) ನಂತಹ ರಾಷ್ಟ್ರಗಳು ಸೇರಿವೆ.

ಈ ಪಟ್ಟಿಯಲ್ಲಿ ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ಒಂಬತ್ತನೇ ಸ್ಥಾನದಲ್ಲಿದೆ. ಇಟಲಿ 10ನೇ ಸ್ಥಾನ ಗಳಿಸಿದೆ. ದಕ್ಷಿಣ ಕೊರಿಯಾ, ಯುಕೆ, ಜಪಾನ್ ಮತ್ತು ಟರ್ಕಿ ಕೂಡ ಟಾಪ್ 10 ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಸೇರಿವೆ. ಗ್ಲೋಬಲ್ ಫೈರ್ ಪವರ್ ಟೂಪ್ ಗಾತ್ರ, ಮಿಲಿಟರಿ ಉಪಕರಣಗಳು, ಆರ್ಥಿಕ ಸ್ಥಿರತೆ, ಮಿಲಿಟರಿ ಸಂಪನ್ಮೂಲಗಳು, ನೈಸರ್ಗಿಕ ಸಂಪನ್ಮೂಲಗಳು, ಉದ್ಯಮ ಮತ್ತು ಭೌಗೋಳಿಕತೆ ಸೇರಿದಂತೆ ಹಲವಾರು ನಿಯತಾಂಶಗಳನ್ನು ಆಧರಿಸಿ ಪಟ್ಟಿಯನ್ನು ಸಂಗ್ರಹಿಸಿದೆ. ಈ ಸೂಚ್ಯಂಕದಲ್ಲಿ ಫ್ರಾನ್ಸ್ 11 ನೇ ಸ್ಥಾನದಲ್ಲಿದೆ. ಫ್ರಾನ್ಸ್, ಬ್ರೆಜಿಲ್, ಇಂಡೋನೇಷ್ಯಾ, ಇರಾನ್, ಈಜಿಪ್ಟ್, ಆಸ್ಟ್ರೇಲಿಯಾ, ಇಸ್ರೇಲ್, ಉಕ್ರೇನ್, ಜರ್ಮನಿ ಮತ್ತು ಸ್ಪೇನ್ ಅಗ್ರ 20 ದೇಶಗಳಲ್ಲಿ ಸೇರಿವೆ.

✦ ಪವರ್‌ಇಂಡೆಕ್ಸ್
ವಾರ್ಷಿಕವಾಗಿ ನವೀಕರಿಸಿದ ಸಮಗ್ರ ಸೂಚ್ಯಂಕವು ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡುತ್ತದೆ. ಇದು ಸೈನ್ಯದ ಸಂಖ್ಯೆ, ಮಿಲಿಟರಿ ಉಪಕರಣಗಳು, ಆರ್ಥಿಕ ಸ್ಥಿರತೆ, ಭೌಗೋಳಿಕ ಸ್ಥಳ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಒಳಗೊಂಡಂತೆ ಸುಮಾರು 60 ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಅಂಶಗಳಿಂದ ಪಡೆದ ಪವರ್‌ಇಂಡೆಕ್ಸ್ ಸ್ಕೋರ್ ಮಿಲಿಟರಿ ಬಲವನ್ನು ಸೂಚಿಸುತ್ತದೆ. ಗ್ಲೋಬಲ್ ಫೈರ್‌ಪವರ್ ಮಿಲಿಟರಿ ಸ್ಟ್ರೆಂತ್ ರಿಪೋರ್ಟ್ ಪ್ರತಿ ದೇಶದ ಶ್ರೇಯಾಂಕವು ಒಂದು ವರ್ಷದಿಂದ ಮುಂದಿನ ವರ್ಷಕ್ಕೆ ಹೇಗೆ ಬದಲಾಗಿದೆ ಎಂಬುದನ್ನು ಪರಿಶೀಲಿಸುತ್ತದೆ.

✦ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಹೊಂದಿರುವ ಟಾಪ್ 10 ದೇಶಗಳು:
ಯುನೈಟೆಡ್ ಸ್ಟೇಟ್ಸ್- 0.0699
ರಷ್ಯಾ- 0.0702
ಚೀನಾ- 0.0706
ಭಾರತ- 0.1023
ದಕ್ಷಿಣ ಕೊರಿಯಾ- 0.1416
ಯುನೈಟೆಡ್ ಕಿಂಗ್‌ಡಮ್- 0.1443
ಜಪಾನ್- 0.1601
ಟರ್ಕಿ – 0.1697
ಪಾಕಿಸ್ತಾನ- 0.1711
ಇಟಲಿ- 0.1863

✦ ವಿಶ್ವದ ಅತ್ಯಂತ ಕಡಿಮೆ ಶಕ್ತಿಶಾಲಿ ಮಿಲಿಟರಿ ಹೊಂದಿರುವ 10 ದೇಶಗಳು :
ಭೂತಾನ್- 6.3704
ಮೊಲ್ಡೊವಾ- 4.2311
ಸುರಿನಾಮ್- 3.9038
ಸೊಮಾಲಿಯಾ- 3.9006
ಬೆನಿನ್- 3.8912
ಲೈಬೀರಿಯಾ- 3.7262
ಬೆಲೀಜ್- 3.6437
ಸಿಯೆರಾ ಲಿಯೋನ್- 3.5433
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್- 3.5316
ಐಸ್ಲ್ಯಾಂಡ್- 3.5038

ಭಾರತ -ಪಾಕ್ ಸೇನಾ ಬಲಾಬಲ :
ಸ್ವಾತಂತ್ರ್ಯ ನಂತರದ ಬಳಿಕ ಭಾರತ ಮತ್ತು ಪಾಕಿಸ್ತಾನಗಳು ಅನೇಕ ಬಾರಿ ಯುದ್ಧವನ್ನು ಕೈಗೊಂಡಿವೆ. ಸೇನಾ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ, ಉಭಯ ರಾಷ್ಟ್ರಗಳ ಸೇನಾ ಬಲಾಬಲ ಎಷ್ಟಿರಬಹುದು ಎಂಬುದು ಕೂತಹಲ ಸಹಜ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಸೇನಾ ಬಲದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

✦ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತವು 800,000 ಹೆಚ್ಚು ಸಕ್ರಿಯ ಮಿಲಿಟರಿ ಸಿಬ್ಬಂದಿಯನ್ನು ಹೊಂದಿದೆ. ವಿವಿಧ ಅಧಿಕಾರ ವರ್ಗದಲ್ಲಿ 1.4 ಮಿಲಿಯನ್ ಅಧಿಕಾರಿಗಳು ಮತ್ತು ಸೈನಿಕರನ್ನು ಕಾರ್ಯನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನವು 6.5 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿಯನ್ನು ಹೊಂದಿದೆ.

✦ ಭಾರತದ ಬಳಿ 2296 ವಿಮಾನಗಳಿದ್ದು, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಭಾರತ. ಅದೇ ವೇಳೆ, ಪಾಕಿಸ್ತಾನದ ಬಳಿ ಒಟ್ಟು 1,434 ವಿಮಾನಗಳಿವೆ. ವಾಯು ಪಡೆ, ನೌಕಾ ಪಡೆ ಬಳಸುವ ಎಲ್ಲ ರೀತಿಯ ವಿಮಾನಗಳು ಇದರಲ್ಲಿ ಸೇರಿವೆ. ಹೆಲಿಕಾಪ್ಟರ್ಸ್, ಸಾರಿಗೆ ವಿಮಾನಗಳು, ಫಿಕ್ಸೆಡ್ ವಿಂಗ್ ಮತ್ತು ರೂಟೂರ್ ವಿಂಗ್‌ ವಿಮಾನಗಳು ಕೂಡ ಇದರಲ್ಲೇ ಲೆಕ್ಕ ಹಾಕಲಾಗಿದೆ. ಪ್ರತ್ಯಕೇವಾಗಿ ಹೇಳಬೇಕು ಎಂದರೆ, ತೇಜಸ್, ಎಂಕೆ1, ಎಂಕೆ1ಎ ಸೇರಿದಂತೆ 606 ಫೈಟರ್ ಜೆಟ್‌ಗಳಿವೆ. ಮಿಗ್ 21ಬಿಷನ್, ಸ್ಪೇಸ್‌ಕ್ಯಾಟ್ ಜಾಗ್ವಾರ್ಸ್, ಮಿಗ್ 29ಎಸ್ ವಿಮಾನಗಳನ್ನು ಮುಂದಿನ 4ರಿಂದ 5 ವರ್ಷಗಳಲ್ಲಿ ಸೇನೆಯಿಂದ ಕೈಬಿಡಲಾಗುತ್ತದೆ. ಅದರಂತೆ, ಪಾಕಿಸ್ತಾನದ ಬಳಿ ಒಟ್ಟು 387 ಫೈಟರ್ಸ್ ಜೆಟ್ ಇದ್ದು, ಇದರಲ್ಲಿ ಚೀನಾ, ಫ್ರಾನ್ಸ್ ಮತ್ತು ಅಮೆರಿಕದಿಂದ ಖರೀದಿಸಿದ ವಿಮಾನಗಳಿವೆ. ಪಾಕ್ ಬಳಿಕ ಅಟ್ಯಾಕ್ ಹೆಲಿಕಾಪ್ಟರ್ಸ್ ಇದ್ದು, ಭಾರತವು ಅತ್ಯುತ್ತಮ ಸ್ಪೇಷನ್ ಮಿಷನ್, ಏರಿಯಲ್ ಟ್ಯಾಕರ್ಸ್ ಮತ್ತು ಸಾರಿಗೆ ವಿಮಾನಗಳಿವೆ.

✦ ಭಾರತದಲ್ಲಿ ಬಳಿ 4,614 ಟ್ಯಾಂಕ್ಸ್ ಇದ್ದು, ಜಾಗತಿಕ ಟಾಪ್ ಟೆನ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಬಳಿ 3,742 ಟ್ಯಾಂಕ್ಸ್ ಇವೆ. ಭಾರತದ ಬಳಿ, ‌1,51,248 ಶಸ್ತ್ರಸಜ್ಜಿತ ವಾಹನಗಳಿದ್ದು, ಇದು ಪಾಕಿಸ್ತಾನಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು. ವಿಶೇಷ ಎಂದರೆ, ಸ್ವಯಚಾಲಿತ ಫಿರಂಗಿಗಳ ವಿಷಯದಲ್ಲಿ ಪಾಕಿಸ್ತಾನವು ಭಾರತಕ್ಕಿಂತ ಮುಂದಿದೆ. ಎರಡು ರಾಷ್ಟ್ರಗಳ ನಡುವೆ 612ರಷ್ಟು ವ್ಯತ್ಯಾಸವಿದೆ. ಭಾರತದಲ್ಲಿ 140 ಸ್ವಯಂ ಚಾಲಿತ ಫಿರಂಗಿ ಬಂದೂಕುಗಳಿವೆ.

✦ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ನೌಕಾ ಪಡೆಯ ಬಲ ಹೆಚ್ಚಾಗಿದೆ. ಭಾರತದ ಒಟ್ಟು ನೌಕಾ ಬಲವು 242 ಇದ್ದರೆ, ಪಾಕಿಸ್ತಾನದ ಬಳಿ 114 ಹಡುಗಗಳಿವೆ. ಭಾರತದ ಬಳಿ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಎಂಬ ಎರಡು ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಹಡಗುಗಳಿವೆ. ಭಾರತದ ಬಳಿ ಇರುವ ಡಿಸ್ಟ್ರಾಯರ್ಸ್, ಕಾರ್ವೆಟ್‌ಗಳು, ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ವಿಶ್ವದಲ್ಲೇ ಬಲಿಷ್ಠ ನೌಕಾ ಪಡೆಯ ಎಂದು ಗುರುತಿಸಲು ನೆರವು ನೀಡಿವೆ. ಈ ವಿಷಯಲ್ಲಿ ಪಾಕಿಸ್ತಾನವು ಹಿಂದಿದೆ. ಆದರೂ, ಜಗತ್ತಿನ ಟಾಪ್ 10 ಶಕ್ತಿಶಾಲಿ ಸೇನೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಎರಡೂ ಇರುವುದರಿಂದ ಯಾವುದೇ ರಾಷ್ಟ್ರವನ್ನು ಕೆಳಮಟ್ಟದಲ್ಲಿ ಅಂದಾಜಿಸುವಂತಿಲ್ಲ ಎನ್ನುತ್ತಾರೆ ತಜ್ಞರು.

ವಿಜ್ಞಾನಕ್ಕೆ ಸಂಬಂಧಿಸಿದ 100 Interesting ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

Leave a Reply

Your email address will not be published. Required fields are marked *

error: Content Copyright protected !!