GKSpardha Times

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)

Share With Friends

1. ಭಾರತದ ಅತಿ ಎತ್ತರದ ಜಲಪಾತ ಕರ್ನಾಟಕದ ➤ ಜೋಗ ಜಲಪಾತ
2. ಭಾರತದ ಅತ್ಯಂತ ದೊಡ್ಡ ಗುಮ್ಮಟ ಕರ್ನಾಟಕದ  ➤  ಬಿಜಾಪುರದ ಗೋಲಗೊಮ್ಮಟ
3. ಭಾರತದ ಅತಿ ಎತ್ತರದ ವಿಗ್ರಹ   ➤  ಕರ್ನಾಟಕದ ಶ್ರವಣಬೆಳಗೊಳದಲ್ಲಿನ 57 ಅಡಿ ಎತ್ತರದ ಗೋಮಟೇಶ್ವರ ವಿಗ್ರಹ
4. ಕರ್ನಾಟಕದ ದೊಡ್ಡ ನಗರ  ➤  ಬೆಂಗಳೂರು
5. ಕರ್ನಾಟಕದ ದೊಡ್ಡ ದೇವಾಲಯ  ➤  ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ

6. ಕರ್ನಾಟಕದ ದೊಡ್ಡ ಮೃಗಾಲಯ  ➤  ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು
7. ಕರ್ನಾಟಕದ ಪ್ರಸಿದ್ಧ ಅರಮನೆ  ➤  ಮೈಸೂರು ಅರಮನೆ, ಮೈಸೂರು
8. ಕರ್ನಾಟಕದ ಪ್ರಸಿದ್ಧ ಉದ್ಯಾನವನ  ➤  ಬೃಂದಾವನ ಉದ್ಯಾನವನ (ಕೆ. ಆರ್. ಸಾಗರ), ಲಾಲ್‍ಬಾಗ್, ಬೆಂಗಳೂರು
9. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ  ➤  ವಿಧಾನಸೌಧ, ಬೆಂಗಳೂರು
10. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ  ➤  ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಜಿಲ್ಲೆ

11. ಕರ್ನಾಟಕದ ದೊಡ್ಡ ಬಂದರು  ➤  ನವಮಂಗಳೂರು ಬಂದರು, ಮಂಗಳೂರು
12. ಕರ್ನಾಟಕದ ದೊಡ್ಡ ಪಕ್ಷಿಧಾಮ  ➤  ರಂಗನತಿಟ್ಟು ಪಕ್ಷಿಧಾಮ
13. ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ  ➤  ಮೈಸೂರು
14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ  ➤  ಆಗುಂಬೆ
15. ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳು  ➤  ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿ

16. ಕರ್ನಾಟಕದ ಪ್ರಥಮ ಸಾಕ್ಷರ ಜಿಲ್ಲೆ  ➤  ದಕ್ಷಿಣ ಕನ್ನಡ
17. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ  ➤  ಶರಾವತಿ
18. ಕರ್ನಾಟಕದ ಉದ್ದವಾದ ನದಿ  ➤  ಕಾವೇರಿ
19. ಕರ್ನಾಟಕದಲ್ಲಿ ಹೆಚ್ಚು ನಿರಾವರಿ ಯೋಜನೆಗಳನ್ನು ಹೊಂದಿರುವ ನದಿ ಕಣಿವೆ  ➤  ಕಾವೇರಿ
20. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ  ➤  ಮೈಸೂರು( ರಿಸರ್ವ್ ಬ್ಯಾಂಕ್ ನೋಟುಮುದ್ರಣ)

21. ಕರ್ನಾಟಕದ ದೊಡ್ಡ ಕ್ರೀಡಾಂಗಣ  ➤  ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
22. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ  ➤  ಪಂಪ ಪ್ರಶಸ್ತಿ
23. ಕನಾಟಕದ ಆದಿ ಕವಿ  ➤  ಪಂಪ
24. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ  ➤  ಕರ್ನಾಟಕ ರತ್ನ
25. ಭಾರತದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಕನ್ನಡಿಗ  ➤  ಹೆಚ್.ಡಿ. ದೇವೆಗೌಡ

26. ಕರ್ನಾಟಕದ ಮೊದಲ ವಿಶ್ವ ವಿದ್ಯಾನಿಲಯ ➤  ಮೈಸೂರು ವಿಶ್ವವಿದ್ಯಾನಿಲಯ
27. ಕರ್ನಾಟಕದ ಪ್ರಥಮ ವೈದ್ಯಕೀಯ ಕಾಲೇಜು  ➤ ಮೈಸೂರು ವೈದ್ಯಕೀಯ ಕಾಲೆಜು, ಮೈಸೂರು
28. ಕನ್ನಡದ ಮೊದಲ ಮಹಾಕಾವ್ಯ  ➤  ಆದಿಪುರಾಣ
29. ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯವಿರುವ ಸ್ಥಳ  ➤  ಬೆಂಗಳೂರು
30. ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ  ➤  ಕುವೆಂಪು

31. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯುದಾಗಾರ  ➤  ವರಾಹಿ
32. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ  ➤ ಕೊಡಗು
33. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ನಿರ್ಮಾಪಕ ➤  ಕೇಂಪೇಗೌಡ
34. ಕರ್ನಾಟಕದಲ್ಲಿ ಹತ್ತಿ ಗಿರಣಿಗಳಿಗೆ ಹೆಸರಾದ ಊರು  ➤  ದಾವಣಗೆರೆ
35. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದ ವ್ಯಕ್ತಿ  ➤  ಹರ್ಡೇಕರ್ ಮಂಜಪ್ಪ

36. ಕರ್ನಾಟಕದಲ್ಲಿ ಆರಂಭವಾದ ಪ್ರಥಮ ಕಾಲೇಜು  ➤ ಸೆಂಟ್ರಲ್ ಕಾಲೇಜು , (1864)ಬೆಂಗಳೂರು
37. ಕರ್ನಾಟಕದಲ್ಲಿ ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ  ➤  ಬೆಂಗಳೂರು (1905)
38. ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ  ➤  ಜನರಲ್ ಕಾರಿಯಪ್ಪ
39. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು ➤  ಅಂಕೋಲ
40. ಕರ್ನಾಟಕದ ಹೈಕೋರ್ಟ್‍ನ ಪ್ರಥಮ ಮಹಿಳಾ ನ್ಯಾಯಾದೀಶರು  ➤  ಮಂಜುಳಾ ಚೆಲ್ಲೂರು

41. ಕರ್ನಾಟಕದಲ್ಲಿ ಜೈನರಕಾಶಿ ಎಂದು ಹೆಸರಾದ ಊರು  ➤  ಮೂಡಬಿದರೆ
42. ಕರ್ನಾಟಕದ ಅತಿ ದೊಡ್ಡ ವಿಗ್ರಹ  ➤  ನಂದಿ ವಿಗ್ರಹ (ಮೈಸೂರು)
43. ಕರ್ನಾಟಕದಲ್ಲಿ ಅತೀ ದೊಡ್ಡ ಆಲದಮರವಿರುವ ಊರು  ➤  ರಾಮೋಹಳ್ಳಿ (ಬೆಂಗಳೂರು)
44. ಕರ್ನಾಟಕದ ವಿಧಾನಸೌಧದ ನಿರ್ಮಾಣಕ್ಕೆ ಕಾರಣಕರ್ತ ➤  ಕೆಂಗಲ್ ಹನುಮಂತಯ್ಯ
45. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಸ್ಥಳ  ➤  ಕುದುರೆಮುಖ

46. ಕರ್ನಾಟಕದ ಸಂಗೀತ ಪಿತಾಮಹನೆಂದು ಹೆಸರು ಪಡೆದ ವ್ಯಕ್ತಿ  ➤  ಪುರಂದರದಾಸರು
47. ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಪುಸ್ತಕ ಮಳಿಗೆ  ➤ ಸಪ್ನ ಬುಕ್ ಹೌಸ್, ಬೆಂಗಳೂರು
48. ಕರ್ನಾಟಕದ ಮೊದಲ ಪ್ರಮುಖ ಜಲಾಶಯ  ➤  ಕೃಷ್ಣರಾಜಸಾಗರ
49. ಕರ್ನಾಟಕದ ಅತ್ಯಂತ ಎತ್ತರದ ಅಣೆಕಟ್ಟು  ➤ ಸೂಪ, (ಉತ್ತರಕನ್ನಡ)
50. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ  ➤  ಡಾ. ಎಂ.ಸಿ. ಮೋದಿ

Leave a Reply

Your email address will not be published. Required fields are marked *

error: Content Copyright protected !!