ISRO : ತಾಂತ್ರಿಕ ದೋಷದಿಂದ ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ
ISRO ’s PSLV-C61/EOS-09 mission fails due to tech glitch in 3rd stage
ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲವಾಗಿದ್ದು. ಇಂದು ಬೆಳಿಗ್ಗೆ 5:59ಕ್ಕೆ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.ಇಸ್ರೋದ 101ನೇ ರಾಕೆಟ್ ಉಡಾವಣೆ ಇದಾಗಿದ್ದು, ಇಂದು ಬೆಳಗ್ಗೆ 5:59ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ EOS-09 ರೆಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು.
1,696 ಕಿಲೋಗ್ರಾಂ ತೂಕದ EOS-09 ರೆಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋ ಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಬೇಕಿತ್ತು. ಆದರೆ 3ನೇ ಹಂತದಲ್ಲಿ ಸಂಪರ್ಕ ಕಳೆದುಕೊಂಡ ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.
ಇನ್ನೂ ಈ ಕುರಿತು ಇಸ್ರೋ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು.ಈ ಕುರಿತು ಇಸ್ರೋ ಅಧ್ಯಕ್ಷ ವಿ.ನಾರಾಯಣ ಮಾಹಿತಿ ನೀಡಿದ್ದಾರೆ, ರಾಕೆಟ್ ಉಡಾವಣೆಯ ನಾಲ್ಕು ಹಂತಗಳ ಪೈಕಿ, ಮೂರನೇ ಹಂತದಲ್ಲಿ ಒತ್ತಡ ಕುಸಿತಗೊಂಡಿದ್ದು, ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಇದು ಇಸ್ರೋ ಹಾರಿಬಿಟ್ಟ 101ನೇ ಉಪಗ್ರಹವಾಗಿತ್ತು. ಆದರೆ, ತಾಂತ್ರಿಕ ದೋಷದಿಂದ ವಿಫಲವಾಗಿದೆ. ಆರ್ಐಸ್ಯಾಟ್-1ಬಿ ಎಂದೂ ಪರಿಚಿತವಾದ ಇಒಎಸ್-09 ಉಪಗ್ರಹ ವನ್ನು ಬೆಂಗಳೂರಿನಲ್ಲಿರುವ ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರ ವಿನ್ಯಾಸಗೊಳಿಸಿತ್ತು. ಸಿ-ಬ್ಯಾಂಡ್ ಸಿಂಥೆಟಿಕ್ ಅಪಾರ್ಚರ್ ರೇಡಾರ್ನಿಂದ ಸುಸಜ್ಜಿತಗೊಂಡಿತ್ತು. ಯಾವುದೇ ರೀತಿಯ ವಾತಾವರಣವಿದ್ದರೂ ಹೈ- ರಿಸಲ್ಯೂಷನ್ ಚಿತ್ರಗಳನ್ನು ತೆಗೆಯಲು ಈ ರೇಡಾರ್ ನೆರವಾಗುತ್ತದೆ. ಆಪ್ಟಿಕಲ್ ಕ್ಯಾಮರಾಗಳಂತಲ್ಲದೆ, ಈ ರೇಡಾರ್ ಮೋಡ, ಮಳೆಯ ವಾತಾವರಣ ಮತ್ತು ರಾತ್ರಿ ವೇಳೆಯಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಉಪಗ್ರಹವು ಸೂರ್ಯ-ಸಮವ್ಯಾಪಕ ಕಕ್ಷೆಯನ್ನು (ಸನ್-ಸಿಂಕ್ರೋನಸ್ ಆರ್ಬಿಟ್) ಪ್ರವೇಶಿಸಬೇಕಿತ್ತು. ಆದರೆ, ವೈಫಲ್ಯ ಅನುಭವಿಸಿದೆ.