Current AffairsLatest Updates

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ‘ಫೀಲ್ಡ್ ಮಾರ್ಷಲ್ ‘(Field Marshal) ಹುದ್ದೆಗೆ ಬಡ್ತಿ

Share With Friends

Pakistan army chief Asim Munir promoted to Field Marshal, highest military rank in country Highest Military Rank

ಭಾರತದೊಂದಿಗೆ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ವೇಳೆಯಲ್ಲಿ ಸೋತರೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ಸೇನೆಯಲ್ಲಿನ ಅತ್ಯುನ್ನತ ಪದವಿ ‘ಫೀಲ್ಡ್ ಮಾರ್ಷಲ್ ‘ಆಗಿ ಬಡ್ತಿ ನೀಡಲಾಗಿದೆ.

ಸಾಮಾನ್ಯವಾಗಿ ಅಪರೂಪದ ಸಂದರ್ಭಗಳಲ್ಲಿ, ವೃತ್ತಿಜೀವನದಲ್ಲಿ ಅಗಾಧ ಸಾಧನೆಗಾಗಿ ಈ ಪದವಿ ನೀಡಲಾಗುತ್ತದೆ. ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಪದವಿಯಾದ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿದೆ. 1959ರಲ್ಲಿ ಮಾಜಿ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ನಂತರ ದೇಶದ ಇತಿಹಾಸದಲ್ಲಿ ಈ ಗೌರವವನ್ನು ಪಡೆದ ಎರಡನೇ ವ್ಯಕ್ತಿ ಅಸೀಮ್ ಮುನೀರ್.

ಮಾಜಿ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ನಂತರ ದೇಶದ ಇತಿಹಾಸದಲ್ಲಿ ಈ ಗೌರವವನ್ನು ಪಡೆದ ಎರಡನೇ ವ್ಯಕ್ತಿ ಅಸೀಮ್ ಮುನೀರ್. ಈ ಬಡ್ತಿಯೊಂದಿಗೆ ಜನರಲ್ ಮುನೀರ್ ಇಸ್ಲಾಮಾಬಾದ್‌ನ 5 ಸ್ಟಾರ್ (ನಕ್ಷತ್ರಗಳ) ಚಿಹ್ನೆಯನ್ನು ಧರಿಸಲಿದ್ದಾರೆ. ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಅನುಮೋದಿಸಿದ ಈ ಬಡ್ತಿಯನ್ನು ಸಾಂಕೇತಿಕ ಮತ್ತು ಕಾರ್ಯತಂತ್ರದ ಎರಡೂ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. ಇದು ನವೆಂಬರ್ 2022ರಲ್ಲಿ ಪಾಕಿಸ್ತಾನ ಸೇನೆಯ ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನದಲ್ಲಿ ಬೆಳೆಯುತ್ತಿರುವ ಅಸಿಮ್ ಮುನೀರ್ ಅವರ ಅಧಿಕಾರದ ಹಿಡಿತವನ್ನು ತೋರಿಸುತ್ತದೆ.

*ಇದಕ್ಕೂ ಮುಂಚೆ, ಅಯೂಬ್ ಖಾನ್ ಅವರು 1959ರಲ್ಲಿ ಫೀಲ್ಡ್ ಮಾರ್ಷಲ್ ಆಗಿದ್ದರು.
*1958ರಲ್ಲಿ ಸೇನಾ ಕಾಯ್ದೆ ಜಾರಿಗೊಳಿಸಿದ್ದಕ್ಕಾಗಿ ಮತ್ತು ದೇಶವನ್ನು ಮುನ್ನಡೆಸಿದ್ದಕ್ಕಾಗಿ ಈ ಗೌರವಕ್ಕೆ ಭಾಜನರಾಗಿದ್ದರು.
*ಅಯೂಬ್ ಖಾನ್ ನಂತರ ಯಾರಿಗೂ ಈ ಪದವಿ ನೀಡಿರಲಿಲ್ಲ.
*ಭಾರತದೊಂದಿಗಿನ ಸಂಘರ್ಷದಲ್ಲಿ ಮುಖಭಂಗ ಅನುಭವಿಸಿದ್ದರೂ ಬಡ್ತಿ, ಲೇವಡಿಗೆ ಗುರಿಯಾದ ಪಾಕ್‌ ನಿರ್ಧಾರ

ಫೀಲ್ಡ್ ಮಾರ್ಷಲ್ ಹುದ್ದೆಯ ಮಹತ್ವವೇನು?:
ಫೀಲ್ಡ್ ಮಾರ್ಷಲ್ ಎಂಬುದು ಪಾಕಿಸ್ತಾನ ಸೇನೆಯಲ್ಲಿ ಐದು ನಕ್ಷತ್ರಗಳ, ಅತ್ಯುನ್ನತ ಮಿಲಿಟರಿ ಶ್ರೇಣಿಯಾಗಿದೆ. ಇದು ಜನರಲ್ ಹುದ್ದೆಗಿಂತ ಮೇಲಿದ್ದು, ನೌಕಾಪಡೆಯಲ್ಲಿ ಅಡ್ಮಿರಲ್ ಆಫ್ ದಿ ಫ್ಲೀಟ್ ಮತ್ತು ವಾಯುಪಡೆಯಲ್ಲಿ ಮಾರ್ಷಲ್ ಆಫ್ ದಿ ಏರ್ ಫೋರ್ಸ್‌ಗೆ ಸಮನಾಗಿರುತ್ತದೆ. ಇದು ಪಾಕಿಸ್ತಾನ ಸಶಸ್ತ್ರ ಪಡೆಗಳಲ್ಲಿ ಅತ್ಯಂತ ಹಿರಿಯ ಶ್ರೇಣಿಯಾಗಿದ್ದು, ಯಾವುದೇ ಉನ್ನತ ಮಿಲಿಟರಿ ಬಿರುದನ್ನು ಹೊಂದಿಲ್ಲ. ಈ ಶ್ರೇಣಿಯು ಹೆಚ್ಚಿನ ಗೌರವದ್ದಾಗಿದೆ. ಇದು ಯಾವುದೇ ಹೆಚ್ಚುವರಿ ಶಾಸನಬದ್ಧ ಅಧಿಕಾರಗಳನ್ನು ಅಥವಾ ಅದರ ಸಾಂಕೇತಿಕ ಪ್ರತಿಷ್ಠೆಯನ್ನು ಮೀರಿದ ವೇತನವನ್ನು ಹೊಂದಿರುವುದಿಲ್ಲ. ಈ ಹುದ್ದೆ ಅಸಾಧಾರಣ ರಾಷ್ಟ್ರೀಯ ಪ್ರಾಮುಖ್ಯತೆಯ ಸಮಯದಲ್ಲಿ ಅಸಾಧಾರಣ ಸೇವೆಗಾಗಿ ಮೀಸಲಾಗಿದೆ. 1947ರಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ಪಡೆದ ನಂತರ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಒಮ್ಮೆ ಮಾತ್ರ ನೀಡಲಾಗಿದೆ. 1959ರಲ್ಲಿ ಸೇನಾ ಮುಖ್ಯಸ್ಥ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಈ ಸ್ಥಾನಕ್ಕೆ ಜನರಲ್ ಮುಹಮ್ಮದ್ ಅಯೂಬ್ ಖಾನ್ ಬಡ್ತಿ ಪಡೆದಿದ್ದರು. ಅವರ ನಂತರ ಇದೀಗ ಅಸಿಮ್ ಮುನಿರ್ ಈ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.

Read this also : ವಿವಿಧ ದೇಶಗಳ ನಡುವಿನ ಗಡಿರೇಖೆಗಳು | Boundary Lines between different countries

ಅಯೂಬ್ ಖಾನ್: ಪಾಕಿಸ್ತಾನದ ಮೊದಲ ಫೀಲ್ಡ್ ಮಾರ್ಷಲ್
ಇದಕ್ಕೂ ಮೊದಲು,1959ರಲ್ಲಿ ಜನರಲ್ ಅಯೂಬ್ ಖಾನ್ ಅವರಿಗೆ ಫೀಲ್ಡ್ ಮಾರ್ಷಲ್ ಪದವಿ ನೀಡಲಾಗಿತ್ತು. ಅಯೂಬ್ ಖಾನ್ 1958ರಿಂದ 1969ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1958ರಲ್ಲಿ ಮಾರ್ಷಲ್ ಲಾ ಜಾರಿಗೊಳಿಸಿದ್ದಕ್ಕಾಗಿ ಮತ್ತು ದೇಶವನ್ನು ಮುನ್ನಡೆಸಿದ್ದಕ್ಕಾಗಿ ಅವರಿಗೆ ಈ ರ್‍ಯಾಂಕ್ ನೀಡಲಾಗಿತ್ತು. ಅಯೂಬ್ ಖಾನ್ ನಂತರ ಯಾರಿಗೂ ಈ ಗೌರವ ನೀಡಿರಲಿಲ್ಲ. ಈ ನಿರ್ಧಾರವು ಪಾಕಿಸ್ತಾನದ ರಾಜಕೀಯ ಮತ್ತು ಸೈನಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಭಾರತದೊಂದಿಗಿನ ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಈ ರೀತಿಯ ಗೌರವ ನೀಡಿರುವುದು ವಿವಾದವನ್ನು ಹುಟ್ಟುಹಾಕಿದೆ.

ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ :
ಭಾರತದೊಂದಿಗಿನ ಇತ್ತೀಚಿನ ಸೇನಾ ಸಂಘರ್ಷದ ಸಂದರ್ಭದಲ್ಲಿ ಪಾಕ್ ಸಶಸ್ತ್ರ ಪಡೆಗಳನ್ನು ‘ಯಶಸ್ವಿಯಾಗಿ’ ಮುನ್ನಡೆಸಿದ್ದಕ್ಕಾಗಿ ಅಸಿಮ್ ಮುನೀರ್ ಗೆ ಬಡ್ತಿ ನೀಡಲಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರಲ್ ಅಸೀಮ್ ಮುನೀರ್ ಅವರನ್ನು ದೇಶದ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡುವ ಮಹತ್ವದ ನಿರ್ಧಾರವನ್ನು ಸಂಪುಟ ಕೈಗೊಂಡಿದೆ. ಭಾರತದೊಂದಿಗಿನ ಸಂಘರ್ಷದಲ್ಲಿ ಅವರ ಆದರ್ಶಪ್ರಾಯ ಪಾತ್ರಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪಿಟಿವಿ ವರದಿ ಮಾಡಿದೆ.

ಆಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಪದವಿ ನೀಡಿರುವುದೇಕೆ?
ಪಾಕಿಸ್ತಾನ ಸರ್ಕಾರದ ಪ್ರಕಾರ, ಆಸಿಮ್ ಮುನೀರ್ ಅವರಿಗೆ ಈ ಗೌರವವನ್ನು ‘ಆಪರೇಷನ್ ಬುನಿಯಾಲ್-ಅಲ್-ಮರ್ಸೂಸ್’ ಎಂಬ ಕಾರ್ಯಾಚರಣೆಯಲ್ಲಿ ಭಾರತದ ವಿರುದ್ಧ ರೂಪಿಸಿದ ಉತ್ತಮ ಕಾರ್ಯತಂತ್ರಕ್ಕಾಗಿ ನೀಡಲಾಗಿದೆ. ಆದರೆ, ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಟ್ಟು ಯಶಸ್ವಿ ದಾಳಿಗಳನ್ನು ನಡೆಸಿತ್ತು. ಪಾಕಿಸ್ತಾನವು ಭಾರತದ ಮೇಲೆ ಡ್ರೋನ್ ದಾಳಿಗಳನ್ನು ಪ್ರಯತ್ನಿಸಿತ್ತಾದರೂ, ಭಾರತವು ಎಲ್ಲವನ್ನೂ ವಿಫಲಗೊಳಿಸಿತು. ಇದರ ಜೊತೆಗೆ, ಭಾರತವು ಪಾಕಿಸ್ತಾನದ ಹಲವಾರು ವಾಯುನೆಲೆಗಳನ್ನು ಧ್ವಂಸಗೊಳಿಸಿತು. ಇಂತಹ ವಿನಾಶಕಾರಿ ಪರಿಣಾಮಗಳ ನಡುವೆಯೂ ಆಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಪದವಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಪೆಹಲ್ಗಾಮ್ ದಾಳಿ :
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಉಗ್ರರು 26 ಮಂದಿ ಪ್ರವಾಸಿಗರನ್ನು ಧರ್ಮಾಧಾರಿತವಾಗಿ ಅತ್ಯಂತ ಸಮೀಪದಿಂದ ಮನಬಂದಂತೆ ಗುಂಡು ಹಾರಿಸಿ ಕೊಂದಿದ್ದರು. ಈ ಕ್ರೌರ್ಯಕ್ಕೆ ಪ್ರತೀಕಾರವಾಗಿ ಭಾರತದ ಸೇನಾಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿದ್ದವು. ಪಾಕ್ ವಾಯುಸೇನೆಯ ಪ್ರಮುಖ ನೆಲೆಗಳ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದವು. ಇದಾದ ನಂತರದ ಬೆಳವಣಿಗೆಯಲ್ಲಿ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದು, ಇದೀಗ ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ನೆಲೆಸಿದೆ.

error: Content Copyright protected !!