Current AffairsSports

Shubman Gill : ಮೊದಲ ದ್ವಿಶತಕ ಸಿಡಿಸಿ 11 ದಾಖಲೆಗಳನ್ನ ಮುರಿದ ಶುಭಮನ್ ಗಿಲ್

Share With Friends

Shubman Gill Test Records: ಭಾರತ ಮತ್ತು ಇಂಗ್ಲೆಂಡ್​ ಟೆಸ್ಟ್​ ಸರಣಿಯ 2ನೇ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್​ ದ್ವಿಶತಕ ಸಿಡಿಸುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಭಾರತೀಯ ಟೆಸ್ಟ್ ನಾಯಕನಾಗಿ ಗಿಲ್ ಅತ್ಯಧಿಕ ರನ್ ಗಳಿಸಿದ್ದಾರೆ. 1990ರಲ್ಲಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಮೊಹಮ್ಮದ್ ಅಜರುದ್ದೀನ್ 179 ರನ್‌ಗಳನ್ನು ಸಿಡಿಸುವ ಮೂಲಕ ಬರೆದಿದ್ದ ದಾಖಲೆಯನ್ನು ಗಿಲ್​ ಅಳಿಸಿ ಹಾಕಿದ್ದಾರೆ. 2018 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ 149 ರನ್‌ಗಳಿಸಿದ್ದ ವಿರಾಟ್ ಕೊಹ್ಲಿ ಇದೀಗ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಇದರೊಂದಿಗೆ, ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.

ಶುಭಮನ್ ಗಿಲ್ – 200* ರನ್, ಬರ್ಮಿಂಗ್​ ಹ್ಯಾಮ್​ ​(2025)
ಮೊಹಮ್ಮದ್ ಅಜರುದ್ದೀನ್ – 179 ರನ್, ಮ್ಯಾಂಚೆಸ್ಟರ್‌ ​(1990)
ವಿರಾಟ್ ಕೊಹ್ಲಿ – 149 ರನ್, ಬರ್ಮಿಂಗ್ಹ್ಯಾಮ್‌ ​(2018)
MAK ಪಟೌಡಿ – 148 ರನ್, ಲೀಡ್ಸ್‌ (1967)
ಶುಭಮನ್ ಗಿಲ್ – 147 ರನ್​, ಲೀಡ್ಸ್‌ (2025)

ಇಂಗ್ಲೆಂಡ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್
ಶುಭಮನ್ ಗಿಲ್ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಸುನಿಲ್ ಗವಾಸ್ಕರ್ ದಾಖಲೆ ಮುರಿದಿದ್ದಾರೆ. ಗಾವಸ್ಕರ್ 1979 ರಲ್ಲಿ ಓವಲ್‌ನಲ್ಲಿ 221 ರನ್‌ ಗಳಿಸಿದ್ದರು. ಇದರ ಜೊತೆಗೆ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್‌ನಲ್ಲಿ ದ್ವಿಶತಕ ಗಳಿಸಿದ ಒಟ್ಟಾರೆ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಶುಭಮನ್ ಗಿಲ್ – ಬರ್ಮಿಂಗ್ಹ್ಯಾಮ್‌ನಲ್ಲಿ 222* (2025)
ಸುನಿಲ್ ಗವಾಸ್ಕರ್ – ದಿ ಓವಲ್‌ನಲ್ಲಿ 221 (1997)
ರಾಹುಲ್ ದ್ರಾವಿಡ್ – 217 ಅಟ್ ದಿ ಓವಲ್ (2002)
ಸಚಿನ್ ತೆಂಡೂಲ್ಕರ್ – ಲೀಡ್ಸ್‌ನಲ್ಲಿ 193 (2002)
ರವಿಶಾಸ್ತ್ರಿ – ದಿ ಓವಲ್‌ನಲ್ಲಿ 187 (1990)

ಹಲವು ದಾಖಲೆ ಮುರಿದ ಗಿಲ್​ :
ಗಿಲ್ ನಾಯಕನಾಗಿ ತಮ್ಮ ಮೂರನೇ ಇನ್ನಿಂಗ್ಸ್‌ನಲ್ಲಿ ವೇಗವಾಗಿ ದ್ವಿಶತಕ ಪೂರೈಸಿದರು. ಇದರೊಂದಿಗೆ ಸುನಿಲ್ ಗವಾಸ್ಕರ್ ದಾಖಲೆಯನ್ನು ಮುರಿದಿದ್ದಾರೆ. ಗಾವಸ್ಕರ್ 1978ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ 205 ರನ್​​ಗಳನ್ನು​ ಬಾರಿಸಿ ವೇಗದ ದ್ವಿಶತಕ ಸಿಡಿಸಿದ್ದ ದಾಖಲೆ ಹೊಂದಿದ್ದರು.

ಇದು ವಿದೇಶಿ ಟೆಸ್ಟ್‌ನಲ್ಲಿ ಭಾರತೀಯ ನಾಯಕನೊಬ್ಬ ಬಾರಿಸಿದ ಎರಡನೇ ದ್ವಿಶತಕ ಇದಾಗಿದೆ. ಈ ಹಿಂದೆ 2016ರಲ್ಲಿ ನಾರ್ತ್ ಸೌಂಡ್‌ನಲ್ಲಿ ವಿರಾಟ್ ಕೊಹ್ಲಿ 200ರನ್​ ಬಾರಿಸಿದ್ದರು.

ಗಿಲ್ SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್) ದೇಶಗಳಲ್ಲಿ ದ್ವಿಶತಕ ಗಳಿಸಿದ ಮೊದಲ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2011ರಲ್ಲಿ ಲಾರ್ಡ್ಸ್‌ನಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಅವರ 193ರನ್​ ಕಲೆ ಹಾಕಿದ್ದು, ಇದುವರೆಗಿನ ಹೈಸ್ಕೋರ್​ ಆಗಿತ್ತು.

ಶುಭಮನ್ ಗಿಲ್ SENA ದೇಶದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಹಿಂದೆ ಈ ದಾಖಲೆ ಸಚಿನ್ ತೆಂಡೂಲ್ಕರ್ (241 ರನ್) ಅವರ ಹೆಸರಲ್ಲಿತ್ತು.

ಗಿಲ್ ಈಗ ಭಾರತದ ಟೆಸ್ಟ್ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 2019 ರಲ್ಲಿ ಪುಣೆಯಲ್ಲಿ ವಿರಾಟ್ ಕೊಹ್ಲಿ 254 ರನ್‌ಗಳ ದಾಖಲೆಯನ್ನು ಅವರು ಮುರಿದಿದ್ದಾರೆ.

*ಭಾರತದ ನಾಯಕನಾಗಿ ಟೆಸ್ಟ್ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ
23 ವರ್ಷ 39 ದಿನಗಳು – ಎಮ್​ಎಕೆ ಪಟೌಡಿ vs ಇಂಗ್ಲೆಂಡ್, ದೆಹಲಿ, 1964
25 ವರ್ಷ 298 ದಿನಗಳು – ಶುಭಮನ್ ಗಿಲ್ vs ಇಂಗ್ಲೆಂಡ್, ಎಡ್ಜ್‌ಬಾಸ್ಟನ್, 2025
26 ವರ್ಷ 189 ದಿನಗಳು – ಸಚಿನ್ ತೆಂಡೂಲ್ಕರ್ vs ನ್ಯೂಜಿಲೆಂಡ್, ಅಹಮದಾಬಾದ್, 1999
27 ವರ್ಷ 260 ದಿನಗಳು – ವಿರಾಟ್ ಕೊಹ್ಲಿ vs ವೆಸ್ಟ್ ಇಂಡೀಸ್, ನಾರ್ತ್ ಸೌಂಡ್, 2016

*ಭಾರತದ ಟೆಸ್ಟ್ ನಾಯಕನಾಗಿ ದ್ವಿಶತಕ ಗಳಿಸಿದ ಆಟಗಾರು
ವಿರಾಟ್ ಕೊಹ್ಲಿ – 7 ದ್ವಿಶತಕ
1 ದ್ವಿಶತಕ – ಎಂಎಕೆ ಪಟೌಡಿ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಶುಭಮನ್ ಗಿಲ್

*ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್
ಶುಭಮನ್ ಗಿಲ್ ಭಾರತ ಪರ ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಗಳಲ್ಲಿ ದ್ವಿಶತಕ ಗಳಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ದಾಖಲೆ ಸರಿಗಟ್ಟಿದ್ದಾರೆ.

*ಟೆಸ್ಟ್ ಪಂದ್ಯಗಳಲ್ಲಿ ಭಾರತ ಪರ 250ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್
ವೀರೇಂದ್ರ ಸೆಹ್ವಾಗ್ – 4 ಬಾರಿ
ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಕರುಣ್ ನಾಯರ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಒಂದು ಬಾರಿ 250ಕ್ಕೂ ಹೆಚ್ಚು ರನ್​ ಬಾರಿಸಿದ್ದಾರೆ.

ಏಕದಿನದಲ್ಲೂ ದ್ವಿಶತಕ, ಟೆಸ್ಟ್​ನಲ್ಲೂ ದ್ವಿಶತಕ
ಎಡ್ಜ್​ಬಾಸ್ಟನ್​ನಲ್ಲಿ ಟೆಸ್ಟ್​ ಕ್ರಿಕೆಟ್​ನ ಚೊಚ್ಚಲ ದ್ವಿಶತಕ ಬಾರಿಸಿದ ಶುಭ್​ಮನ್​ ಗಿಲ್​, ಏಕದಿನ ಫಾರ್ಮೆಟ್​ನಲ್ಲೂ ಡಬಲ್​ ಸೆಂಚುರಿ ಬಾರಿಸಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ 145 ಎಸೆತಗಳಲ್ಲಿ ಶುಭ್​ಮನ್​ ಗಿಲ್​​ ಏಕದಿನ ಫಾರ್ಮೆಟ್​​​ನಲ್ಲಿ ದ್ವಿಶತಕ ಸಿಡಿಸಿದ್ದರು. ಟೆಸ್ಟ್​ ಹಾಗೂ ಏಕದಿನ ಫಾರ್ಮೆಟ್​ನಲ್ಲಿ ಡಬಲ್​ ಧಮಾಕಾ ಸಿಡಿಸಿದ 4ನೇ ಭಾರತೀಯ ಬ್ಯಾಟರ್​ ಅನ್ನೋ ಹೆಗ್ಗಳಿಕೆ ಈಗ ಶುಭ್​ಮನ್​ ಗಿಲ್​​ದ್ದು.

error: Content Copyright protected !!